ಕೋಲಾರ: ಎಸ್ಸೆಸ್ಸೆಲ್ಸಿ ಶೇ.100 ಸಾಧಕ ಶಾಲೆಗಳ ಮುಖ್ಯ ಶಿಕ್ಷಕರಿಗೆ ಪುರಸ್ಕಾರ

Source: shabbir | By Arshad Koppa | Published on 31st August 2017, 8:16 AM | State News | Guest Editorial |

ಕೋಲಾರ:- ನಿಮ್ಮ ಛಲ,ಪರಿಶ್ರಮದಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆ ಮೊದಲ ಮೂರು ಸ್ಥಾನದಲ್ಲೊಂದು ಸ್ಥಾನ ಗಳಿಸಿದ್ದೇ ಆದರೆ ಮುಖ್ಯ ಶಿಕ್ಷಕರ ಸಂಘಕ್ಕೆ ಒಂದು ಲಕ್ಷ ರೂ ಕೊಡುಗೆ ನೀಡುವುದಾಗಿ ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು ಘೋಷಿಸಿದರು.


ಬುಧವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಕಳೆದ ಮಾರ್ಚ್‍ನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶೇ.100 ಸಾಧನೆ ತೋರಿದ 41 ಶಾಲೆಗಳ ಮುಖ್ಯ ಶಿಕ್ಷಕರನ್ನು ಸನ್ಮಾನಿಸಿ ಅವರು ಮಾತನಾಡುತ್ತಿದ್ದರು.
21 ರಿಂದ 7ನೇ ಸ್ಥಾನಕ್ಕೇರುವುದು ಸುಲಭದ ಮಾತಲ್ಲ, ಆದರೆ ಶಿಕ್ಷಕರು ಮನಸ್ಸು ಮಾಡಿ ಶ್ರಮಿಸಿದರೆ ಸಾಧನೆ ಸಾಧ್ಯ ಎಂಬುದನ್ನು ತೋರಿಸಿದ್ದೀರಿ, ವಿಶೇಷ ತರಗತಿ ನಡೆಸಿ ಕಷ್ಟಪಟ್ಟಿದ್ದೀರಿ, ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್ ರಂತಹ ಅಧಿಕಾರಿ ನಿಮಗೆ ಮಾರ್ಗದರ್ಶಕರಾಗಿದ್ದಾರೆ ಎಂದರು.
ಮುರಾರ್ಜಿ ಹಾಗೂ ಕಿತ್ತೂರು ಚೆನ್ನಮ್ಮ ಶಾಲೆಗಳಿಗೆ ಸರ್ಕಾರ ಎಲ್ಲಾ ಸೌಲಭ್ಯ ನೀಡಿದೆ ನೀವು ಶೇ.100 ಸಾಧನೆ ಮಾಡಲೇಬೇಕು, ಜಿಲ್ಲೆಯ ಶಿಕ್ಷಕರ ಮುತುವರ್ಜಿ ಸ್ವತಃ ಕಂಡಿದ್ದೇನೆ, ಶಾಲೆಗೆ ಮುನ್ನಾ,ನಂತರ ವಿಶೇಷ ತರಗತಿ ನಡೆಸುವ ಮೂಲಕ ಜಿಲ್ಲೆಯ ಗೌರವಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ಒಟ್ಟಾರೆ ಫಲಿತಾಂಶದಲ್ಲಿ ಇಡೀ ಜಿಲ್ಲೆಯಲ್ಲಿ ಇಬ್ಬರು ಮಕ್ಕಳು ಕನ್ನಡದಲ್ಲಿ ಶೂನ್ಯ ಅಂಕ ಗಳಿಸಿರುವುದು ಆತಂಕಕಾಗಿ ಬೆಳೆವಣಿಗೆ, ಇಂತಹ ಅಚಾತುರ್ಯ ತಡೆಯಿರಿ ಎಂದರು.
ಉರ್ದು ಶಾಲೆಗಳಿಗೆ ಇತರೆ ಶಾಲೆಗಳಿಗಿಂತ ಹೆಚ್ಚಿನ ಸವಲತ್ತು ನೀಡಲಾಗುತ್ತಿದೆ, ಇಲ್ಲಿ ಫಲಿತಾಂಶ ಹೆಚ್ಚಲು ಶಿಕ್ಷಕರ ಬದ್ದತೆ ಅಗತ್ಯವಾಗಿದೆ, ಹಾಜರಾತಿಹೆಚ್ಚಲು ಆರಂಭದಿಂದಲೇ ಕ್ರಮವಹಿಸಿ ಎಂದರು.
ಜಿಲ್ಲಾಡಳಿತದ ಆಶಯಕ್ಕೆ
ವಚನ ನೀಡೋಣ-ಸ್ವಾಮಿ
ಡಿಡಿಪಿಐ ಸ್ವಾಮಿ ಮಾತನಾಡಿ, ಡಿಸಿ,ಸಿಇಒ,ಜನಪ್ರತಿನಿಧಿಗಳು ಜಿಲ್ಲೆಯ ಫಲಿತಾಂಶ ಅಗ್ರಸ್ಥಾನದಲ್ಲಿರಬೇಕೆಂಬ ಆಶಯ ಹೊಂದಿದ್ದಾರೆ ಅವರ ಆಶಯಗಳಿಗೆ ಚ್ಯುತಿ ತರಲ್ಲ ಎಂದು ವಚನ ನೀಡೋಣ ಎಂದರು.
ರಜಾದಿನಗಳಂದೂ ಕೆಲಸ ಮಾಡೋಣ, ಮಕ್ಕಳ ಕಲಿಕಾ ವಿಕಸನಕ್ಕೆ ಶಕ್ತಿಮೀರಿ ಬದ್ದತೆಯಿಂದ ಶ್ರಮೀಸೋಣ, ಶಿಕ್ಷಣ ಇಲಾಖೆಯ ಪ್ರಗತಿ ಕುರಿತು ಹೆಜ್ಜೆಹೆಜ್ಜೆಗೂ ಗಮನ ಹರಿಸುತ್ತಿರುವ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ ಅವರ ಅಗ್ರಸ್ಥಾನದ ಗುರಿಯ ಆಶಯವನ್ನು ಸವಾಲಾಗಿ ಸ್ವೀಕರಿಸೋಣ, ಇಂದಿನಿಂದಲೇ ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪಟ್ಟಿ ತಯಾರಿಸಿಕೊಳ್ಳಿ, ಆ ಮಕ್ಕಳಿಗೆ ಚಿಕಿತ್ಸೆ ರೂಪದಲ್ಲಿ ಬೋಧನೆ ನೀಡಿ ಎಂದು ಮುಖ್ಯ ಶಿಕ್ಷಕರಿಗೆ ಕರೆ ನೀಡಿದರು.
ಎಫ್‍ಎ-ಎಸ್‍ಎ ಗಮನಿಸಲು
18 ತಂಡ ರಚನೆ
ಜಿಲ್ಲಾ ಪರೀಕ್ಷಾ ನೋಡೆಲ್ ಅಧಿಕಾರಿ ನಾಗೇಂದ್ರಪ್ರಸಾದ್ ಪವರ್ ಪಾಯಿಂಟ್ ಪ್ರಸೇಂಟೇಷನ್ ಮೂಲಕ ಫಲಿತಾಂಶ ವಿಶ್ಲೇಷಣೆ ನಡೆಸಿ, ಇರುವ ವೈಪಲ್ಯಗಳನ್ನು ಗಮನಕ್ಕೆ ತಂದು ಇದನ್ನು ಸರಿಪಡಿಸಿಕೊಂಡು ಮುನ್ನಡೆಯಲು ಕರೆ ನೀಡಿದರು.
ರೂಪಣಾತ್ಮಕ ಮತ್ತು ಸಾಧನಾ ಪರೀಕ್ಷಾ ಫಲಿತಾಂಶ ಪರಿಶೀಲನೆಗೆ 18 ತಂಡ ರಚಿಸಲಾಗಿದೆ, ಈ ತಂಡದಲ್ಲಿ 3 ಸದಸ್ಯರಿದ್ದು, ಅವರು ಶಾಲೆಗಳಿಗೆ ಬಂದಾಗ ಅಗತ್ಯ ಮಾಹಿತಿ ನೀಡಿ,ನೆಪಗಳನ್ನು ಹೇಳಬೇಡಿ ಎಂದು ತಾಕೀತು ಮಾಡಿದರು.
ಮುಖ್ಯಶಿಕ್ಷಕರ ಮೇಲ್ವಿಚಾರಣೆ ಪರಿಣಾಮಕಾರಿಯಾಗಿರಲು ಕನಿಷ್ಟ ವಾರಕ್ಕೊಂದಾದರೂ ಶಿಕ್ಷಕರ ಪಾಠ ಆಲಿಸಿ ಎಂದರು.
ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಎಸ್.ಮುನಿಯಪ್ಪ, ಫಲಿತಾಂಶ ಉತ್ತಮ ಪರಿಸುವ ನಿಟ್ಟಿನಲ್ಲಿ ಇಲಾಖೆಯೊಂದಿಗೆ ನಾವು ಕೈಜೋಡಿಸಿದ್ದೇವೆ, ಮಕ್ಕಳ ಕಲಿಕೆ ದೃಢೀಕರಿಸಿಕೊಳ್ಳಲು ಇಲಾಖೆ ನೀಡಿದ ಕ್ರಿಯಾ ಯೋಜನೆ ಅನುಷ್ಟಾನ ಮಾಡಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಶೇ.100 ಸಾಧನೆ ಮಾಡಿದ 41 ಶಾಲೆಗಳ ಮುಖ್ಯ ಶಿಕ್ಷಕರನ್ನು, ಇಡೀ ತಂಡದ ನೇತೃತ್ವ ವಹಿಸಿದ್ದ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್, ವಿಜ್ಞಾನ ವಿಷಯ ಪರಿವೀಕ್ಷಕ ವೆಂಕಟಸ್ವಾಮಿ, ನಿಕಟಪೂರ್ವ ಶ್ರೀನಿವಾಸಪುರ ಬಿಇಒ ರಾಘವೇಂದ್ರ ಅವರನ್ನು ಫಲಿತಾಂಶ ಹೆಚ್ಚಲು ಶ್ರಮಿಸಿದ್ದಕ್ಕಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ, ಜಿಪಂ ಸಿಇಒ ಬಿ.ಬಿ.ಕಾವೇರಿ, ಡಿವೈಪಿಸಿ ಜಯರಾಜ್,ಶಿಕ್ಷಣಾಧಿಕಾರಿ ಸುಬ್ರಹ್ಮಣ್ಯಂ, ಬಿಇಒಗಳಾದ ರಘುನಾಥರೆಡ್ಡಿ, ಮಾಧವರೆಡ್ಡಿ, ಡಾ.ವೀರಭದ್ರಪ್ಪ,ಕೆಂಪರಾಮು, ಕೆಂಪಯ್ಯ,ಶಂಕರ್ ಕವ್ವಾಲಿ,ವಿಷಯ ಪರಿವೀಕ್ಷಕರಾದ ರಾಜಣ್ಣ, ಬಾಬು ಜನಾರ್ಧನನಾಯ್ಡು, ಮಲ್ಲಿಕಾರ್ಜುನಾಚಾರಿ, ನರಸಿಂಹರೆಡ್ಡಿ, ಡಯಟ್ ಉಪನ್ಯಾಸಕಿ ಉಮಾದೇವಿ,ಬಿಆರ್‍ಸಿ ರಾಮಕೃಷ್ಣಪ್ಪ, ವಿಜಯಕುಮಾರ್, ಮುಖ್ಯಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರುದ್ರಪ್ಪ ಮತ್ತಿತರರಿದ್ದು, ವಿಷಯ ಪರಿವೀಕ್ಷ ಸಿ.ಆರ್.ಅಶೋಕ್ ಸ್ವಾಗತಿಸಿ, ನಿರೂಪಿಸಿ, ಶಿಕ್ಷಕಿ ರಾಧಾಮಣಿ ಪ್ರಾರ್ಥಿಸಿದರು.

ಕೋಲಾರದ ರಂಗಮಂದಿರದಲ್ಲಿ ಜಿಲ್ಲಾಡಳಿತ,ಜಿಪಂ,ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಶೇ.೧00 ಸಾಧನೆ ತೋರಿದ ಶಾಲೆಗಳ ಮುಖ್ಯಶಿಕ್ಷಕರನ್ನು ಎಂಎಲ್‍ಸಿ ರಮೇಶ್‍ಬಾಬು ಮತ್ತಿತರರು ಪುರಸ್ಕರಿಸಿದರು.

ಕೋಲಾರದ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೇ.100 ಸಾಧಕ ಶಾಲೆಗಳ ಮುಖ್ಯ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಷ್ಟ್ರಪ್ರಶಸ್ತಿಗೆ ಭಾಜನರಾಗಿರುವ ಶ್ರೀನಿವಾಸಪುರ ತಾಲ್ಲೂಕು ಗೌನಪಲ್ಲಿ ಸರ್ಕಾರಿ ಪಿಯುಕಾಲೇಜು ಪ್ರೌಢಶಾಲೆ ವಿಭಾಗದ ಪ್ರಭಾರಿ ಪ್ರಾಂಶುಪಾಲ ಜಿ.ಎನ್.ಮಂಜುನಾಥ್‍ರನ್ನು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಸನ್ಮಾನಿಸಿದರು.

ಕೋಲಾರದ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೇ.100 ಸಾಧಕ ಶಾಲೆಗಳ ಮುಖ್ಯ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ಜಿಲ್ಲೆ 21ನೇ ಸ್ಥಾನದಿಂದ 7ನೇ ಸ್ಥಾನಕ್ಕೇರಲು ಕ್ರಿಯಾ ಯೋಜನೆ ರೂಪಿಸಿ, ವಿಷಯವಾರು,ಅಧ್ಯಾಯವಾರು ಪ್ರಶ್ನೆಪತ್ರಿಕೆ, `ನನ್ನನ್ನೊಮ್ಮೆ ಗಮನಿಸಿ'ಪ್ರಶ್ನೆಕೋಠಿ, ವರ್ಕ್ ಬುಕ್ ಮತ್ತಿತರ ಮಾಹಿತಿ ಒದಗಿಸಿ ಮಾರ್ಗದರ್ಶನ ನೀಡಿದ ಪರೀಕ್ಷಾ ನೋಡೆಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್‍ರನ್ನು ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಜಿಪಂ ಸಿಇಒ ಕಾವೇರಿ ಸನ್ಮಾನಿಸಿದರು.
 

ಕೋಲಾರದ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಎಸ್ಸೆಸ್ಸೆಲ್ಸಿ ಫಲಿತಾಂಶ ವಿಶ್ಲೇಷಣೆ ಹಾಗೂ ಶೇ.100 ಸಾಧಕ ಶಾಲೆಗಳ ಮುಖ್ಯ ಶಿಕ್ಷಕರ ಸನ್ಮಾನ ಕಾರ್ಯಕ್ರಮದಲ್ಲಿ ವಿಜ್ಞಾನ ವಿಷಯದಲ್ಲಿನ ಸಾಧನೆಗಾಗಿ ವಿಷಯ ಪರೀಕ್ಷಕ ವೆಂಕಟಸ್ವಾಮಿ, ಶ್ರೀನಿವಾಸಪುರ ತಾಲ್ಲೂಕು ರಾಜ್ಯದಲ್ಲೇ 4ನೇ ಸ್ಥಾನ ಗಳಿಸಲು ಶ್ರಮಿಸಿದ ಅಲ್ಲಿನ ನಿಕಟಪೂರ್ವ ಬಿಇಒ ರಾಘವೇಂದ್ರರನ್ನು ವಿಧಾನಪರಿಷತ್ ಸದಸ್ಯ ರಮೇಶ್‍ಬಾಬು, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಜಿಪಂ ಸಿಇಒ ಕಾವೇರಿ ಸನ್ಮಾನಿಸಿದರು.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...