ಕೋಲಾರ: ಅರಾಭಿಕೊತ್ತನೂರು ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮ-ಶೇ.100 ಸಾಧನೆಗೆ ಕಾರಣರಾದ ಶಿಕ್ಷಕರಿಗೆ ಎಸ್‍ಡಿಎಂಸಿ ಸನ್ಮಾನ

Source: shabbir | By Arshad Koppa | Published on 17th August 2017, 8:45 AM | State News | Guest Editorial |

ಕೋಲಾರ:- ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 70ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣವನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಮುನಿರಾಜು ನೆರವೇರಿಸಿ, ಎಸ್ಸೆಸ್ಸೆಲ್ಸಿಯಲ್ಲಿ ಶೇ.100 ಸಾಧನೆಗೆ ಶ್ರಮಿಸಿದ ಶಿಕ್ಷಕರನ್ನು ಸನ್ಮಾನಿಸಿವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ನಂಜುಂಡಪ್ಪ, ದೇಶ ನಮಗೇನು ನೀಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ನೀಡಬಹುದು ಎಂದು ಅರಿತು ದೇಶಕ್ಕಾಗಿ ಸಂಕಲ್ಪ ಮಾಡಬೇಕೆಂದರು.
ನಮಗಿನ್ನೂ ಪೂರ್ಣ ಸ್ವಾತಂತ್ರ್ಯ ಸಿಕ್ಕಿಲ್ಲ ಎಂದ ಅವರು, ಸಮಾನತೆಯ ಸಮಾಜ ನಿರ್ಮಾಣ, ಪ್ರತಿಯೊಬ್ಬರಿಗೂ ಶಿಕ್ಷಣ ಸಿಕ್ಕಾಗಲೇ ಪೂರ್ಣ ಸ್ವಾತಂತ್ರ್ಯ ಸಿಕ್ಕಂತೆ ಎಂದು ಅಭಿಪ್ರಾಯಪಟ್ಟರು.
ಗಾಂಧೀಜಿ,ನೆಹರು,ಸುಭಾಷ್ ಮತ್ತಿತರ ಮಹನೀಯರು ದೇಶಕ್ಕಾಗಿ ಹೋರಾಡಿ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ, ಇದನ್ನು ಉಳಿಸಿಕೊಳ್ಳುವ ಹೊಣೆ ವಿದ್ಯಾರ್ಥಿ ಸಮುದಾಯದ ಮೇಲಿದೆ ಎಂದರು.
ಭ್ರಷ್ಟತೆಯಿಂದಾಗಿ ನಾವಿಂದು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂದ ಅವರು, ವಿದ್ಯಾರ್ಥಿ ಸಮುದಾಯ ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಪಾಲಿಸಿ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕು ಎಂದು ಕೋರಿದರು.
ಗ್ರಾಮದ ಹಿರಿಯ ಮುಖಂಡ ಸೊಣ್ಣೇಗೌಡ, ಮಹಾತ್ಮಾಗಾಂಧಿಯವರು ಕನಸು ಕಂಡ ರಾಮರಾಜ್ಯ ನಿರ್ಮಾಣಕ್ಕೆ ಪ್ರತಿಯೊಬ್ಬರು ಕಂಕಣ ತೊಡಬೇಕು, ಅನ್ಯಾಯವನ್ನು ಧೈರ್ಯದಿಂದ ಎದುರಿಸಬೇಕು, ಆ ಮಹನೀಯರ ಹಾದಿಯಲ್ಲಿ ಸಾಗಿ ಅಹಿಂಸೆಯಿಂದ ಪರರಿಗೆ ನೋವಾಗದಂತೆ ಉತ್ತಮ ಜೀವನ ನಡೆಸಬೇಕೆಂದರು.
ಮುಖಂಡ ಕೆ.ಬಿ.ಮುನಿವೆಂಕಟಪ್ಪ, ವಿದ್ಯಾರ್ಥಿಗಳು ಸ್ವಾತಂತ್ರ್ಯದ ಮಹತ್ವ ಅರಿಯಬೇಕು, ಕಲಿಕೆಯಲ್ಲಿ ಪ್ರಗತಿ ಸಾಧಿಸಿ ಅಸಮಾನತೆ ಹೋಗಲಾಡಿಸಲು ಮುಂದಾಗಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಶಿಕ್ಷಕ ಸಿ.ಎನ್.ಪ್ರದೀಪ್ ಕುಮಾರ್, ನಾವು ಸ್ವಾತಂತ್ರ್ಯೋತ್ಸವ ಸಂಭ್ರಮ ಅನುಭವಿಸಲು ಅದರ ಹಿಂದೆ ಲಕ್ಷಾಂತರ ಮಂದಿಯ ಹೋರಾಟ,ಪ್ರಾಣಾರ್ಪಣೆ ನಡೆದಿದೆ ಎಂದರು.
ಗ್ರಾಮದ ಮುಖಂಡರು ಶಾಲೆಯ ಅಭಿವೃದ್ದಿಗೆ ಮತ್ತಷ್ಟು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಎಸ್‍ಡಿಎಂಸಿ ಅಧ್ಯಕ್ಷ ಮುನಿರಾಜು ಧ್ವಜಾರೋಹಣ  ನೆರವೇರಿಸಿ, ಪಥಸಂಚಲನದಲ್ಲಿ ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಗ್ರಾ.ಪಂ ಸದಸ್ಯ ಎ.ಶ್ರೀಧರ್ ಸಹೋದರರು ತಮ್ಮ ತಂದೆ ಸ್ವಾತಂತ್ರ್ಯಹೋರಾಟಗಾರರಾದ ದಿವಂಗತ ಅಪ್ಪಯ್ಯಗೌಡರ ನೆನಪಿನಲ್ಲಿ ಮಕ್ಕಳಿಗೆ ಸಿಹಿ ಹಂಚಿದರು.
ದೈಹಿಕ ಶಿಕ್ಷಕಿ ಲೀಲಾ ನೇತೃತ್ವದಲ್ಲಿ ಮಕ್ಕಳ ಪಥಸಂಚಲನ, ಧ್ವಜಾರೋಹಣ, ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳ ಜನಮನಸೂರೆಗೊಂಡವು. 
ಎಸ್ಸೆಸ್ಸೆಲ್ಸಿಯಲ್ಲಿ ತಾವು ಬೋಧಿಸುವ ವಿಷಯಗಳಲ್ಲಿ ಶೇ.100 ಫಲಿತಾಂಶ ತಂದುಕೊಟ್ಟ ಶಾಲೆಯ ಹಿಂದಿ ಶಿಕ್ಷಕ ಎಸ್.ಅನಂತಪದ್ಮನಾಭ್, ವಿಜ್ಞಾನ ಶಿಕ್ಷಕಿ ಎಸ್.ಶ್ವೇತಾರನ್ನು ಎಸ್‍ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.
ಕ್ರೀಡೆಗಳಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಅಂಬೇಡ್ಕರ್ ಸೇವಾ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಿರಾಜು, ಜಿಲ್ಲಾ ಆಟೋ ಘಟಕದ ಅಧ್ಯಕ್ಷ ಇ.ಮುನಿಯಪ್ಪ, ಕಾರ್ಮಿಕ ಘಟಕದ ಸತೀಶ್, ಮಲ್ಲಾಚಾರಿ ಸಮಿತಿ ವತಿಯಿಂದ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ಸವಿತಾಕೆಂಚೇಗೌಡ, ಸದಸ್ಯೆ ಸುಜಾತಾ ನಂಜೇಗೌಡ, ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ,  ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಮಂಜುಳಮ್ಮ, ಮಾಜಿ ಅಧ್ಯಕ್ಷ ಮುಳ್ಳಹಳ್ಳಿ ಮಂಜುನಾಥ್, ಸದಸ್ಯರಾದ ನಾರಾಯಣಸ್ವಾಮಿ, ಮಂಜುನಾಥ್, ಹಿರಿಯ ಮುಖಂಡರಾದ ನಾಗಪ್ಪ, ನಾರಾಯಣಶೆಟ್ಟಿ, ಜಯರಾಮೇಗೌಡ,ಹೆಚ್.ನಾರಾಯಣಪ್ಪ, ಗಜೇಂದ್ರ, ಅಪ್ಪಿಗೌಡ, ಗಂಗಣ್ಣ,ಪ್ರೇರಕರಾದ ರಾಮಚಂದ್ರಪ್ಪ, ಅನಿತಾ, ನಿವೃತ್ತ ಶಿಕ್ಷಕ ಶ್ರೀನಿವಾಸ್,ಶಿಕ್ಷಕರಾದ ಸಿ.ಎಂ.ವೆಂಕಟರಮಣಪ್ಪ, ಸತೀಶ್ ಎಸ್.ನ್ಯಾಮತಿ,ಸಿ.ಎಲ್.ಶ್ರೀನಿವಾಸಲು,ಸುಗುಣಾ,ಭವಾನಿ, ನಾರಾಯಣಸ್ವಾಮಿ,ವಸಂತಮ್ಮ ಮತ್ತಿತರರಿದ್ದರು.
ಕೋಲಾರ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ 69ನೇ
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...