ವಿಜೃಂಭಣೆಯಿಂದ ನಡೆದ ಗೊಂಡ ಸಮುದಾಯದ ಕೋಕ್ತಿ ಜಾತ್ರೆ

Source: S.O. News Service | By MV Bhatkal | Published on 17th January 2021, 8:10 PM | Coastal News | Don't Miss |


ಭಟ್ಕಳ:ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆಯು ಭಾನುವಾರ ದಂದು ಪ್ರಾರಂಭವಾಗಿದ್ದು, ಭಟ್ಕಳದ ಪ್ರಸಿದ್ಧ ಜಾತ್ರೆಗಳಲ್ಲಿ ಕೋಕ್ತಿ ಜಾತ್ರೆಯು ವಿಶೇಷವಾಗಿದೆ.
ಸಂಕ್ರಾತಿಯ ನಂತರ ಭಟ್ಕಳ ತಾಲೂಕಿನಲ್ಲಿ ನಡೆಯುವ ಎರಡನೇ ಜಾತ್ರೆ ಕೋಕ್ತಿ ಮಹಾಸತಿ ಜಾತ್ರೆ.  ಪಟ್ಟಣದ ಮಧ್ಯದಲ್ಲಿದ್ದರು ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಬ್ಬನ್ನು ಖರೀದಿಸುವುದೇ ಈ ಜಾತ್ರೆಯ ವಿಶೇಷವಾಗಿದೆ. ಗೊಂಡ ಸಮಾಜದ ಜಾನಪದ ಶೈಲಿಯಲ್ಲಿ ಜಾತ್ರಾ ವಿಶೇಷಗಳನ್ನು ಕಾಣಬಹುದು. ದೇವಸ್ಥಾನವೂ ಪ್ರಮುಖವಾಗಿ ಗೊಂಡ ಸಮಾಜದವರೇ ನಂಬಿಕೊಂಡು ಬಂದ ಸ್ಥಳವಾಗಿದೆ. ಇಲ್ಲಿಯ ವಿಶೇಷಗಳಲ್ಲಿ ಕಬ್ಬನ್ನು ಖರೀದಿಸುವುದು ಒಂದು. ಸುಗ್ಗಿಯ ಸಂಭ್ರಮದಲ್ಲಿರುವ ರೈತಾಪಿ ಜನರು ತಮ್ಮ ಬಿಡುವಿನ ವೇಳೆಯಲ್ಲಿ ಜಾತ್ರೆಯಲ್ಲಿ ಬಂದು ಮನೆ ಮನೆಗೆ ಕಬ್ಬಿನ ಕುಡಿ ಕೊಂಡೊಯ್ಯಲಿ, ಆ ಕುಡಿಯು ಸಹಸ್ರ ಕುಡಿಯಾಗಿ ಮನೆ ಯಜಮಾನನ ಸಂಪತ್ತು ವೃದ್ಧಿಯಾಗಲಿ ಎನ್ನುವ ವಾಡಿಕೆಯಿದೆ. ಇನ್ನೊಂದು ಪ್ರತೀತಿಯೆಂದರೆ ಜಾತ್ರೆಯ ನಂತರ ಮುಂದಿನ ಜಾತ್ರೆಯ ತನಕ ಮದುವೆಯಾಗಿರುವ ಗೊಂಡ ಸಮಾಜದ ನೂತನ ವಧು-ವರರು ಜಾತ್ರೆಗೆ ಬಮದು ಇಲ್ಲಿನ ಕೋಕ್ತಿಯ ಕೆರೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆದು ಮನೆಗೆ ಹೋಗುವಾಗ ಕಬ್ಬಿನ ಕುಡಿ ತೆಗೆದುಕೊಂಡು ಹೋದರೆ ಅವರ ಕುಟುಂಬದ ಕುಡಿ ಮುಂದುವರೆಯುವುದು ಎಂಬ ಅಗಾಧವಾದ ನಂಬಿಕೆ.ಇಲ್ಲಿ ಮಹಾಸತಿ ದೇವರ ಪೂಜೆ,ಹಾಗೂ ಆಸರಕೇರಿ ಕೊಲ್ಲಿ  ಮನೆ ಕುಟುಂಬದವರು ಅವರಿಂದ ಶೇಡಿ ಮರದ ಕ್ಕೆ  ಹೊ  ಕಟ್ಟಿ ಪೂಜಿಸಲಾಗುತ್ತಿತ್ತು
ಸಾವಿರಾರು ಭಕ್ತರು ಜಾತ್ರೆಯಂದು ಸೇರುವುದೇ ಒಂದು ವಿಶೇಷವಾಗಿದೆ.ಅದೇರೀತಿ ಹದಲ್ಲೂರ ಮೇತಿನ ಮನೆ ಕುಟುಂಬದ ಅವರಿಂದ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.ದಕ್ಕೆ ಕುಣಿತವನ್ನು ಬಿಳಲಖಂಡ ಚೀಪಾ ಗೊಂಡ ಕುಟುಂಬದವರ ಮುಂದಾಳತ್ವ ದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಕಮಿಟಿ ಅಧ್ಯಕ್ಷ ಬಸವಯ್ಯ ಮಾಸ್ತಿ ಗೊಂಡ,ಉಪಾಧ್ಯಕ್ಷ ಮಾದೇವ ಗೊಂಡ,ಕಾರ್ಯದರ್ಶಿ ಮಂಗಳ ಗೊಂಡ,ಉಪಸ್ಥಿತರಿದ್ದರು.

Read These Next