ಕಾರವಾರ: ಫೇಬ್ರವರಿ 22 ರಂದು ಗಾಳಿಪಟ ಉತ್ಸವ

Source: S O News Service | By Office Staff | Published on 17th February 2020, 7:43 PM | Coastal News |

ಕಾರವಾರ: ಜಿಲ್ಲಾಡಳಿತದ ವತಿಯಿಂದ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಫೇಬ್ರವರಿ 22 ರಂದು ಮಧ್ಯಾಹ್ನ 2 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ಗಾಳಿಪಟ ಉತ್ಸವವನ್ನು ಆಯೋಜಿಸಲಾಗಿದೆ. 
    ಉತ್ಸವದ ಅಂಗವಾಗಿ ಸಾರ್ವಜನಿಕರಿಗೆ ಪ್ರತ್ಯೇಕವಾಗಿ ಸ್ವಚ್ಛತೆಯ ಸಂದೇಶ ವಿಷಯಾಧರಿತ ಗಾಳಿಪಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನವಾಗಿ 5000 ರೂ, ದ್ವಿತೀಯ 3000 ರೂ, ತೃತೀಯ 1000ರೂ. ಬಹುಮಾನ ನೀಡಲಾಗುತ್ತದೆ. 
    ಆಸಕ್ತರು ಫೇಬ್ರವರಿ 21 ರಂದು ಸಂಜೆ 5:30 ರೊಳಗಾಗಿ ಕುಮಟಾ ಸಹಾಯಕ ಕಮಿಷನರ್ ಕಛೇರಿಯಲ್ಲಿ ಹೆಸರು ನೋಂದಾಯಿಸಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9008118096 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ. 

Read These Next