ಭಟ್ಕಳದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಫಲಾನುಭವಿಗಳಾಗಲು; ತಡಮಾಡದೇ ಹೆಸರು ನೋಂದಾವಣಿ ಮಾಡಿಕೊಳುವಂತೆ ಸೂಚನೆ

Source: S O News Service | By I.G. Bhatkali | Published on 19th June 2019, 10:17 PM | Coastal News |

ಭಟ್ಕಳ:  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪಿಎಮ್ ಕಿಸಾನ್ ಯೋಜನೆಯ ಲಾಭ ಪಡೆದುಕೊಳ್ಳಲು ತಾಲೂಕಿನ ರೈತರು ತಡಮಾಡದೇ ಹೆಸರನ್ನು ನೋಂದಾವಣಿ ಮಾಡಿಕೊಳ್ಳುವಂತೆ ತಹಸೀಲ್ದಾರ ವಿ.ಎನ್.ಬಾಡ್ಕರ್ ತಿಳಿಸಿದ್ದಾರೆ.

 ಅವರು ಮಂಗಳವಾರ ಬೆಳಿಗ್ಗೆ ತಹಸೀಲ್ದಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈ ಯೋಜನೆಯಡಿ ಎಲ್ಲ ರೈತರಿಗೂ ಪ್ರತಿ ಕುಟುಂಬಕ್ಕೆ ಒಂದು ವರ್ಷಕ್ಕೆ ರು.6000ಗಳನ್ನು ಪ್ರತಿ 4 ತಿಂಗಳಿಗೊಮ್ಮೆ ಒಟ್ಟೂ 3 ಕಂತುಗಳಲ್ಲಿ ನೀಡಲಾಗುತ್ತದೆ. ಈ ಯೋಜನೆಯ ಲಾಭ ಪಡೆಯಲು ರೈತರು ಭರ್ತಿ ಮಾಡಿದ ಅರ್ಜಿ ಅಜಿ ಫಾರ್ಮ, ತಮ್ಮ ಕೃಷಿ ಭೂಮಿಯ ಪಹಣಿ ಪತ್ರಿಕೆ, ಬ್ಯಾಂಕ್ ಪಾಸ್‍ಬುಕ್ (ಬ್ಯಾಂಕ್ ಐಎಫ್‍ಎಸ್‍ಸಿ ಕೋಡ್ ಕಡ್ಡಾಯ) ಆಧಾರ್ ಕಾರ್ಡ ಮತ್ತು ತಮ್ಮ ಭಾವಚಿತ್ರದ ಪ್ರತಿಗಳೊಂದಿಗೆ ಸಮೀಪದ ಬಾಪೂಜಿ ಸೇವಾ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾವಣಿ ಮಾಡಿಕೊಳ್ಳಬೇಕು. ಆದಾಯ ತೆರಿಗೆ ಪಾವತಿದಾರರು ಮತ್ತು ಜಿಲ್ಲಾ ಪಂಚಾಯತ ಅಧ್ಯಕ್ಷರಿಗಿಂತ ಮೇಲ್ಪಟ್ಟ ಜನಪ್ರತಿನಿಧಿಗಳಿಗೆ ಈ ಯೋಜನೆಯ ಫಲಾನುಭವಿಯಾಗಲು ಅವಕಾಶ ಇಲ್ಲ. ಪಹಣಿ ಪತ್ರಿಕೆಯಲ್ಲಿ ಇರುವ ಜಮೀನಿನ ಹಕ್ಕು ಹೊಂದಿರುವ ಎಲ್ಲ ರೈತರೂ ಫಲಾನುಭವಿಗಳಾಗಿರುತ್ತಾರೆ. ಯೋಜನೆಯ ಬಗ್ಗೆ ಈಗಾಗಲೇ ರೈತ ಸಂಘಗಳು ಹಾಗೂ ಮಾಧ್ಯಮ ಪ್ರಕಟಣೆಯ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿದೆ. ಜೂನ್ 30ರ ನಂತರ ಹೆಸರು ನೋಂದಾವಣಿಗೆ ಅವಕಾಶ ಇಲ್ಲ. ಇದನ್ನು ರೈತರು ಗಮನದಲ್ಲಿಟ್ಟುಕೊಳ್ಳಬೇಕು ಎಂದರು. ತಾಲೂಕು ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ, ಸಹಾಯಕ ಕೃಷಿ ಅಧಿಕಾರಿ ಜಿ.ಎನ್.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು. 

Read These Next

ಲಾಕ್ ಡೌನ್ ಎಫೆಕ್ಟ್ ಕಂಪು ಕಳೆದುಕೊಳ್ಳುತ್ತಿರುವ ಭಟ್ಕಳ ಮಲ್ಲಿಗೆ; ಕಂಗಲಾದ ರೈತ ಕುಟುಂಬ

ಭಟ್ಕಳ ಮಲ್ಲಿಗೆ ದೇಶ ದಲ್ಲಷ್ಟೆ ಅಲ್ಲದೇ ವಿದೇಶಗಳಲ್ಲೂ ಭಾರಿ ಬೇಡಿಕೆ. ಇಲ್ಲಿನ ನವಾಯತ್ ಮುಸ್ಲಿಮರು ಭಟ್ಕಳ ಮಲ್ಲಿಗೆಯ ಕಂಪನ್ನು ...

ಅಗತ್ಯ ವಸ್ತುಗಳ ಕಿಟ್ ನೀಡಲು ಸ್ವಾಮಿಲ್ ಮಾಲಿಕರಿಗೆ ಗುತ್ತಿಗೆದಾರರಿಗೆ ಸಚಿವ ಶಿವರಾಮ ಹೆಬ್ಬಾರ ಸೂಚನೆ

ಮುಂಡಗೋಡ : ಅಟೋ ಚಾಲಕರು ಗೂಡ್ಸ್ ಚಾಲಕರು ಮತ್ತು ಹಮಾಲರು ಸೇರಿದಂತೆ ನಿರ್ಗತಿಕರಿಗೆ ವೈಯಕ್ತಿಕ 1 ಸಾವಿರ ರೂ ಸಹಾಯ ಧನ ನೀಡುವುದಾಗಿ ...

ಶುಭ ಸಮಾಚಾರ; ಕೊರೋನ ಜಯಿಸಿದ ಇಬ್ಬರು ಸೋಂಕಿನಿಂದ ಮುಕ್ತಿ; ಜಿಲ್ಲೆಯ ಕೊರೋನ ಪೀಡಿತರ ಸಂಖ್ಯೆಯಲ್ಲಿ ಇಳಿಮುಖ

ಭಟ್ಕಳ: ಉ.ಕ ಜಿಲ್ಲೆಯಲ್ಲಿ ಗಲ್ಫ್ ರಾಷ್ಟ್ರಗಳಿಂದ ಭಟ್ಕಳಕ್ಕೆ ಬಂದ ವ್ಯಕ್ತಿಗಳಲ್ಲಿ ಕಾಣಿಸಿಕೊಂಡಿದ್ದ ಕೊರೋನ ಸೋಂಕು ೮ ಜನರಲ್ಲಿ ...