ಕ್ಯಾಲಿಫೋರ್ನಿಯಾ: ಅಪಹರಣಕ್ಕೊಳಗಾಗಿದ್ದ ಭಾರತಮೂಲದನಾಲ್ವರಮೃತದೇಹ ಪತ್ತೆ

Source: Vb | By I.G. Bhatkali | Published on 7th October 2022, 3:36 PM | National News | Global News |

ಹೊಸದಿಲ್ಲಿ: ಅಮೆರಿಕದಲ್ಲಿ ಕೆಲವು ದಿನಗಳ ಹಿಂದೆ ಅಪಹರಣಕ್ಕೆ ಒಳಗಾಗಿದ್ದ 8 ತಿಂಗಳ ಹೆಣ್ಣು ಶಿಶು ಸಹಿತ ಭಾರತೀಯ ಮೂಲದ ಕುಟುಂಬದ ನಾಲ್ಕು ಮಂದಿಯ ಮೃತದೇಹ ಕ್ಯಾಲಿಫೋರ್ನಿಯಾದ ಫಲೋದ್ಯಾನದಲ್ಲಿ ಗುರುವಾರ ಪತ್ತೆಯಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. 36 ವರ್ಷದ ಜಸ್ಟೀಪ್ ಸಿಂಗ್, ಅವರ ಪತ್ನಿ 27 ವರ್ಷದ ಜಸ್ಟೀನ್ ಕೌರ್, ಪುತ್ರಿ 8 ತಿಂಗಳ ಆರೂಹಿ ಧೇರಿ ಹಾಗೂ ಸಂಬಂಧಿ 39 ವರ್ಷದ ಅಮನ್‌ದೀಪ್ ಸಿಂಗ್ ಅನ್ನು ಉತ್ತರ ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯ ಉದ್ಯಮ ಸ್ಥಳದಿಂದ ಸೋಮವಾರ ಅಪಹರಿಸಲಾಗಿತ್ತು ಎಂದು ಮರ್ಸೆಡ್ ಕೌಂಟಿಯ ಪೊಲೀಸರು ತಿಳಿಸಿದ್ದಾರೆ.

ಇಂಡಿಯಾನಾ ರಸ್ತೆ ಹಾಗೂ ಹಚಿನ್ಸನ್ ರಸ್ತೆಯ ಸಮೀಪ ಇರುವ ಫಲೋದ್ಯಾನದಲ್ಲಿ ಬುಧವಾರ ಸಂಜೆ ಈ ನಾಲ್ವರ ಮೃತದೇಹ ಪತ್ತೆಯಾಗಿದೆ ಎಂದು ಮರ್ಸಿಡ್ ಕೌಂಟಿಯ ಶೆರಿಫ್ ವರ್ನ್ ವಾಂರ್ಕೆ ಅವರು ತಿಳಿಸಿದ್ದಾರೆ. ಫಲೋದ್ಯಾನದ ಸಮೀಪದ ಕೃಷಿ ಕಾರ್ಮಿಕರು ಮೃತದೇಹಗಳು ಪತ್ತೆಯಾದ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂದರ್ಭ ಶೆರಿಫ್ ವಾಂರ್ಕೆ, “ನನಗಾಗುತ್ತಿರುವ ಕೋಪವನ್ನು ವಿವರಿಸಲು ಪದಗಳೇ ಸಾಲುತ್ತಿಲ್ಲ' ಎಂದು ಹೇಳಿದ್ದಾರೆ.

ಈ ಕುಟುಂಬವನ್ನು ಅಪಹರಿಸುವ ಸಂದರ್ಭದ ವೀಡಿಯೊವನ್ನು ಪೊಲೀಸರು ಬುಧವಾರ ಬಿಡುಗಡೆ ಮಾಡಿದ್ದರು.

ವೀಡಿಯೊದಲ್ಲಿ ಜಸ್ಟೀಪ್ ಹಾಗೂ ಅಮನ್‌ ದೀಪ್‌ ರ ಕೈಗಳನ್ನು ಕಟ್ಟಲಾಗಿದ್ದು, ಅವರು ಉದ್ಯಮ ಸ್ಥಳದಿಂದ ಹೊರ ಬರುತ್ತಿರುವುದು ದಾಖಲಾಗಿದೆ. ಕೆಲವು ಸೆಕೆಂಡುಗಳ ಬಳಿಕ ಕಟ್ಟಡದಿಂದ ಅಪಹರಣಕಾರನೊಂದಿಗೆ ಜಸೀನ್ ಕೌರ್ ಹಾಗೂ ಮಗು ಹೊರ ಬರುತ್ತಿರುವುದು ಕಂಡು ಬಂದಿದೆ. ಆನಂತರ ಎಲ್ಲ ನಾಲ್ಕು ಮಂದಿಯನ್ನು ಟ್ರಕ್‌ ನತ್ತ ಕರೆದೊಯ್ದು ಹತ್ತಿಸುವುದು, ಟ್ರಕ್ ಅಲ್ಲಿಂದ ತೆರಳುವುದು ವೀಡಿಯೊದಲ್ಲಿ ದಾಖಲಾಗಿದೆ. ಈ ಕುಟುಂಬ ಪಂಜಾಬ್‌ನ ಹೋಶಿಯಾರ್‌ಪುರದ ಹರ್ಸಿ ಪಿಂಡ್ ಮೂಲದವರು.

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...