ಗ್ರಾಹಕರ ಸೋಗಿನಲ್ಲಿ ಬಂದು ಕೈಚಳಕ ತೋರಿಸಿದ ಖದೀಮ. ಅಟ್ಟಿಸಿಕೊಂಡು ಹೋಗಿ ಹಿಡಿದ ಜ್ಯುವೆಲ್ಲರಿ ಶಾಪ್ ಮಾಲೀಕ.

Source: SO News | By Laxmi Tanaya | Published on 5th March 2021, 6:38 PM | Coastal News | Don't Miss |

ಮಂಗಳೂರು: ನಗರದ ಜ್ಯುವೆಲ್ಲರಿ ಶಾಪ್ ಒಂದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದ ಖದೀಮನೋರ್ವ ಹಾಡಹಗಲಿನಲ್ಲಿಯೇ ಆಭರಣದೊಂದಿಗೆ ಪರಾರಿಯಾಗಲೆತ್ನಿಸಿದಾಗ ಜ್ಯುವೆಲ್ಲರಿ ಶಾಪ್ ಮಾಲಕರೇ ಆತನನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಅರುಣ್ ಜಿ. ಶೇಟ್ ಅವರ ಒಡೆತನದ ನಗರದ ರಥಬೀದಿಯಲ್ಲಿರುವ ಅರುಣ್ ಜಿ. ಶೇಟ್ ಜ್ಯುವೆಲ್ಲರಿ ಆ್ಯಂಡ್ ಡೈಮಂಡ್ ವರ್ಕ್ಸ್ ಶಾಪ್ ಗೆ ಗುರುವಾರ ಮಧ್ಯಾಹ 2 ಗಂಟೆ ಸುಮಾರಿಗೆ ಗ್ರಾಹಕರ ಸೋಗಿನಲ್ಲಿ ಬಂದ ಈ ಖದೀಮ, ಆಭರಣವನ್ನು ಕೊಳ್ಳಲು ನೋಡುವವನಂತೆ ನಟಿಸಿದ್ದಾನೆ. ಮಾಲಕ ಅರುಣ್ ಜಿ.ಶೇಟ್ ಅವರೇ ಆತನಿಗೆ ಆಭರಣ ತೋರಿಸುತ್ತಿರುವಾಗಲೇ ಆತ ಏಕಾಏಕಿ ಆಭರಣದೊಂದಿಗೆ ಓಟಕ್ಕಿತ್ತಿದ್ದಾನೆ.

ಆತ ಓಡುತ್ತಿರುವುದನ್ನು ಗಮನಿಸಿದ  ಜ್ಯುವೆಲ್ಲರಿ ಶಾಪ್ ಅರುಣ್ ಜಿ ಶೇಟ್ ಅವರು ಅವನನ್ನು ಬೆನ್ನಟ್ಟಿದ್ದಾರೆ‌. ಸ್ವಲ್ಪ ದೂರ ಹೋಗುತ್ತಲೇ ಆತ ಅವರ ಕೈಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟರಲ್ಲಾಗಲೇ ಸ್ಥಳದಲ್ಲಿದ್ದವರಿಗೆ ವಿಷಯ ತಿಳಿದಿದ್ದು, ಈ ಸಂದರ್ಭ ಅಲ್ಲಿ ಸಾಕಷ್ಟು ಜನರು ಜಮಾಯಿಸಿದ್ದಾರೆ. ಈ ಎಲ್ಲಾ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಳಿಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿಯನ್ನು ಬಂಧಿಸಿದ್ದಾರೆ‌. ಈ ಬಗ್ಗೆ  ಬಂದರು ಠಾಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಇದೇ ಮಾದರಿಯಲ್ಲಿ ಅನೇಕ ಕಡೆಗಳಲ್ಲಿ ಕಳ್ಳತನ ನಡೆದಿದ್ದು, ಅದರಲ್ಲೂ ಇವನದೇ ಕೈಚಳಕ ಇರಬಹುದು ಎಂದು ಅರುಣ್ ಜಿ.ಶೇಟ್ ಅವರು ಶಂಕೆ ವ್ಯಕ್ತಪಡಿಸಿದ್ದಾರೆ.
 

Read These Next

ಕೋವಿಡ್ ಸೋಂಕಿತರು ಮೃತಪಟ್ಟರೇ ಮನಾಪಾಲಿಕೆಯಿಂದ ಅಂತ್ಯಸಂಸ್ಕಾರದ ವೆಚ್ಚ: ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಹಾನಗರ ಪಾಲಿಕೆ ವ್ಯಾಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವೆಚ್ಚವನ್ನು ಮಂಗಳೂರು ...

ಮದುವೆಗೆ 50 ಜ‌ನರಿಗಷ್ಟೆ ಅನುಮತಿ. ನಿಯಮ ಮೀರಿದರೇ ಕ್ರಮ. ಮಂಗಳೂರು ಡಿಸಿ ಮತ್ತು ಪೊಲೀಸ್ ಕಮಿಷನರ್ ಮಾಹಿತಿ.

ಮಂಗಳೂರು : ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ...

ಕಾರವಾರ : ವ್ಯಕ್ತಿ ನಾಪತ್ತೆ

ಬಡಕಲು ದೇಹ, ಗೋದಿ ಮೈ ಬಣ್ಣ, 5.4 ಎತ್ತರÀ, ಇಂಗ್ಲೀಷ ಮತ್ತು ಕನ್ನಡ ಮಾತನಾಡುವ 59 ವರ್ಷ ಪ್ರಾಯದ ಕುಮಟಾದ ಸಾಣಕಲ ಕೇರಿ ನಿವಾಸಿ ಮಹಾಬಲೇಶ್ವರ ...

ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳ ಹೊಸ ಮಾರ್ಗಸೂಚಿ ಜಿಲ್ಲೆಯಲ್ಲಿ ಯಥಾವತ್ ಅನುಷ್ಠಾನ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ದೇಶದಲ್ಲಿ ಕೋವಿಡ್ 2ನೇ ಅಲೆ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ...

ಕೋವಿಡ್ ಸೋಂಕಿತರು ಮೃತಪಟ್ಟರೇ ಮನಾಪಾಲಿಕೆಯಿಂದ ಅಂತ್ಯಸಂಸ್ಕಾರದ ವೆಚ್ಚ: ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಹಾನಗರ ಪಾಲಿಕೆ ವ್ಯಾಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವೆಚ್ಚವನ್ನು ಮಂಗಳೂರು ...