ಶಾಸಕರುಗಳ ಮನೆಗೆ ಟ್ಯಾಂಕರ್ ಮೂಲಕ ಕೆ.ಸಿ.ವ್ಯಾಲಿ ಕೊಳಚೆ ನೀರು

Source: sonews | By Staff Correspondent | Published on 20th July 2018, 12:31 AM | State News | Public Voice |

ಕೋಲಾರ : 1280 ಕೋಟಿ ರೂಗಳ ಅಂದಾಜು ವೆಚ್ಚದ ಕೆ.ಸಿ.ವ್ಯಾಲಿ ಯೋಜನೆಯ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದು, ಜೂನ್ 2ರಿಂದ ಜಿಲ್ಲೆಗೆ ಪ್ರತಿನಿತ್ಯ ಸುಮಾರು 100 ಎಂ.ಎಲ್.ಡಿ. ಹರಿದು ಬರುತ್ತಿದ್ದು, ಈ ನೀರು ಲಕ್ಷ್ಮೀಸಾಗರ ಕೆರೆ ತುಂಬಿ ಉದುಪನಹಳ್ಳಿ, ಜೋಡಿಕೃಷ್ಣಾಪುರ ಹಾಗೂ ದೊಡ್ಡವಲ್ಲಬ್ಬಿ ಕೆರೆಗೆ ಹರಿಯುತ್ತಿರುವ ನೀರು ಕೇವಲ ಒಂದು ಬಾರಿಯೂ ಸಹ ಶುದ್ದೀಕರಿಸದೆ ಹರಿಸುತ್ತಿರುವ ನೀರಿನಲ್ಲಿ ಬುರುಗು ನೊರೆ ಕಾಣಿಸಕೊಂಡಿದೆ. ಈ ರಾಜ್ಯ ಸರ್ಕಾರ ಬೆಳಂದೂರು ಕೆರೆಯ ಮಾದರಿಯಲ್ಲಿ ಈ ಜಿಲ್ಲೆಯನ್ನು ಹಾಳು ಮಾಡಲು ಹೊರಟಿದೆ. ಇದನ್ನು ನೀರಾವರಿ ಹೋರಾಟ ಸಮಿತಿಯು ಖಂಡಿಸುತ್ತಿದೆ.
ಈ ವಿಚಾರವಾಗಿ ನೀರಾವರಿ ಹೋರಾಟ ಸಮಿತಿಯು ಮೂರು ಬಾರಿ ಶುದ್ದೀಕರಿಸಿ ಕೊಸಲು ಕೋರ್ಟ್‍ನಲ್ಲಿ ಸರ್ಕಾರದ ವಿರುದ್ಧ ದಾವೆ ಹೂಡಿದ್ದು ಹಾಗೂ ಹಲವಾರು ಬಾರಿ ಮನವಿ ಹಾಗೂ ಹೋರಾಟಗಳನ್ನು ಮಾಡಿದರೂ ಸಹ ಸರ್ಕಾರವು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಜೊತೆಗೆ ನಮ್ಮ ಜಿಲ್ಲೆಯವರೇ ಆದ ರಮೇಶ್ ಕುಮಾರ್ ಗಂಗಾನದಿ ನೀರನ್ನು ಈ ಜಿಲ್ಲೆಗೆ ತಂದಂತೆ ಸ್ವಾಗತಿಸಿ ತಮ್ಮ ಅತಿದೊಡ್ಡ ಸಾಧನೆ ಎಂಬಂತೆ ಕಣ್ಣೀರಿಟ್ಟು ಹೈಡ್ರಾಮ ಮಾಡಿದರು. ಜೊತೆಗೆ ತಾಲ್ಲೂಕಿನ ಶಾಸಕ ಶ್ರೀನಿವಾಸಗೌಡರು  ಇದು ಕುಡಿಯಲು ಯೋಗ್ಯವಾಗಿದೆ ಎಂದು ಜನರನ್ನು ದಿಕ್ಕು ತಪ್ಪಿಸಿದ್ದಾದರು. ಹಾಗೂ ನೀರನ್ನು  ಇವರು ಅತಿ ತುಂಬು ಹೃದಯದಿಂದ ಸ್ವಾಗತಿಸಿ ಹೋರಾಟಗಾರರನ್ನು ನಿಂದಿಸಿದರು. ಆದರೆ ನೊರೆ ಕಾಣಿಸಿಕೊಂಡ ತಕ್ಷಣ ಜಿಲ್ಲೆಯ ಜನರಿಗೆ ಉತ್ತರಿಸಲಾಗದೆ ಇವರಿಬ್ಬರು ಒಂದೇ ಒಂದು ಹೇಳಿಕೆಯನ್ನು ಪತ್ರಿಕೆಗಳಿಗೆ ನೀಡದಿರುವುದು ಇವರುಗಳ ಪ್ರಾಮಾಣಿಕತೆ ಎದ್ದು ಕಾಣುತ್ತಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮೂರು ದಿನಗಳಲ್ಲಿ ಜಿಲ್ಲೆಯ ಶಾಸಕರುಗಳಾದ ಕೆ.ಆರ್ ರಮೇಶ್ ಕುಮಾರ್, ಕೆ.ಶ್ರೀನಿವಾಸಗೌಡ, ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಶಶಿಧರ್, ನಾಗೇಶ್ ಸೇರಿದಂತೆ ಸಂಸದರಾದ ಕೆ.ಹೆಚ್.ಮುನಿಯಪ್ಪರವರು ಪತ್ರಿಕಾ ಹೇಳಿಕೆ ನೀಡಿ ಮೂರು ಬಾರಿ ಶುದ್ಧೀಕರಿಸಿ ನೀರನ್ನು ನೀಡುವಂತೆ ಧ್ವನಿ ಎತ್ತದಿದ್ದರೆ, ನೀರಾವರಿ ಹೋರಾಟ ಸಮಿತಿಯು ಸೇರಿದಂತೆ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿ ಕೆ.ಸಿ.ವ್ಯಾಲಿನ ನೋರೆ ಮಿಶ್ರಿತ ತ್ಯಾಜ್ಯ ನೀರನ್ನು ಒಂದು ವಾರದಲ್ಲಿ ಟ್ಯಾಂಕರ್‍ಗಳ ಮೂಲಕ ಎಲ್ಲಾ ಶಾಸಕರುಗಳ ಮನೆಗಳಿಗೆ ಕಳುಹಿಸಿಕೊಡಲಾಗುವುದೆಂದು ಸಮಿತಿಯ ಸಂಚಾಲಕ ಕುರುಬರಪೇಟೆ ವೆಂಕಟೇಶ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 

Read These Next

ಈ ಬಾರಿ ಅರ್ಥಪೂರ್ಣ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ನಿರ್ಧಾರ: ಡಾ. ಕೆ.ಸಿ ನಾರಾಯಣಗೌಡ

ಮಂಡ್ಯ : ಅಕ್ಟೋಬರ್ 9, 10 ಮತ್ತು 11 ರಂದು ಶ್ರೀರಂಗಪಟ್ಟಣ ದಸರಾ ಮಹೋತ್ಸವವನ್ನು ನಡೆಸಲು ನಿರ್ಧರಿಸಲಾಗಿದ್ದು, ಅರ್ಥಪೂರ್ಣ ದಸರಾ ಆಚರಣೆಗೆ ...

ಮಂಗಳೂರು: ಮುಖ್ಯಮಂತ್ರಿಗೆ ಕೊಲೆ ಬೆದರಿಕೆ; ಹಿಂದೂ ಮಹಾಸಭಾ ರಾಜ್ಯ ಪ್ರ.ಕಾರ್ಯದರ್ಶಿ ಬಂಧನ

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಬಹಿರಂಗವಾಗಿ ಕೊಲೆ ಬೆದರಿಕೆಯೊಡ್ಡಿದ ಪ್ರಕರಣದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ...