ಕಾಶ್ಮೀರ: ಮತ್ತೊಮ್ಮೆ ಉಗ್ರರ ಧಾಳಿ - ನಾಲ್ವರು ಭಯೋತ್ಪಾದಕರು, 17 ಯೋಧರ ಹತ್ಯೆ, 30 ಜನರಿಗೆ ಗಾಯ

Source: so english | By Arshad Koppa | Published on 19th September 2016, 8:18 AM | National News | Incidents |

ಕಾಶ್ಮೀರ, ಸೆ ೧೯: ಪಾಕಿಸ್ತಾನ ಪೋಷಿತ ಉಗ್ರರಿಂದ ಕಾಶ್ಮೀರದಲ್ಲಿ ಮತ್ತೊಮ್ಮೆ ವಿಧ್ವಂಸಕ ಕೃತ್ಯ ನಡೆದಿದೆ. ಪಠಾಣ್‌ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರ ದಾಳಿ ಘಟನೆ ನೆನಪು ಮಾಸುವ ಮೊದಲೇ ಜಮ್ಮು ಫಕಾಶ್ಮೀರದ ಬಾರಾಮುಲ್ಲಾದಲ್ಲಿರುವ ಉರಿ ಸೇನಾ ಮುಖ್ಯಕಛೇರಿ ಮೇಲೆ ಸೋಮವಾರ ಮುಂಜಾನೆ ನಾಲ್ವರು ಶಸಸಜ್ಜಿತ ಉಗ್ರರು ನಡೆಸಿದ ದಾಳಿಯಲ್ಲಿ 17 ಯೋಧರು ಹುತಾತ್ಮರಾಗಿದ್ದಾರೆ. ಘಟನೆಯಲ್ಲಿ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದು, ಸಾವು, ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಸೇನಾ ನೆಲೆ ಗುರಿಯಾಗಿಸಿಕೊಂಡು ಕಳೆದ ಎಂಟು ತಿಂಗಳ ಅವಧಿಯಲ್ಲಿ ಕಾಶ್ಮೀರದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ದಾಳಿ ಹಿಂದೆ ಪಾಕ್ ಕೈವಾಡ ಖಚಿತಪಟ್ಟಿದ್ದು, ಮೃತ ಉಗ್ರರು ಜೈಷ್ಫಇಫಮೊಹಮ್ಮದ್ ಸಂಘಟನೆ ಸದಸ್ಯರೆಂದು ಶಂಕಿಸಲಾಗಿದೆ.

ಕಾಶ್ಮೀರದ ಸೇನಾ ನೆಲೆಯ ಮೇಲೆ ದಶಕದಲ್ಲೇ ಭಯಾನಕ ದಾಳಿ

4 ಭಯೋತ್ಪಾದಕರ ಹತ್ಯೆ, 17 ಸೈನಿಕರು ಹುತಾತ್ಮ, 30 ಜನರಿಗೆ ಗಾಯ

 

ನಸುಕಿನಲ್ಲಿ ಒಳ ನುಗ್ಗಿದರು

ಭಾನುವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸೇನಾ ಶಿಬಿರಕ್ಕೆ ನುಗ್ಗಿದ ನಾಲ್ವರು ಉಗ್ರರು ಮೊದಲು ಗ್ರನೇಡ್ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಹುತೇಕ ಯೋಧರು ಟೆಂಟ್‌ಗಳಲ್ಲಿ ನಿದ್ರೆಗೆ ಶರಣಾಗಿದ್ದರಿಂದ ಬೆಂಕಿ ಹೊತ್ತಿ ಉರಿದು 12ಕ್ಕೂ ಹೆಚ್ಚು ಜನ ಜೀವಂತ ಸಮಾಧಿ ಯಾಗಿದ್ದಾರೆ. ಗ್ರನೇಡ್ ದಾಳಿ ನಂತರ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಕೆಲವರು ಮೃತಪಟ್ಟರೆ, 30ಕ್ಕೂ ಹೆಚ್ಚು ಯೋಧರು ಗಾಯಗೊಂಡರು. ತಕ್ಷಣ ಹೆಲಿಕಾಪ್ಟರ್ ಮೂಲಕ ಶಿಬಿರ ಪ್ರವೇಶಿಸಿದ ಕಮಾಂಡೋಗಳು ಗುಂಡಿನ ಚಕಮಕಿ ನಡೆಸಿ ನಾಲ್ವರೂ ಉಗ್ರರನ್ನು ಹತ್ಯೆಗೈಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.


 

15 ವರ್ಷದಲ್ಲೇ ದೊಡ್ಡ ದಾಳಿ

ಕಳೆದ 15 ವರ್ಷಗಳಲ್ಲಿ ಕಾಶ್ಮೀರದಲ್ಲಿ ನಡೆದ ಅತಿ ದೊಡ್ಡ ದಾಳಿ ಇದಾಗಿದೆ. 1990ರಲ್ಲಿ ಕಾಶ್ಮೀರದಲ್ಲಿ ಒಳನುಸುಳುವಿಕೆ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗಿತ್ತು. ಒಂದೇ ವರ್ಷ ವಿವಿಧ ಸೇನಾನೆಲೆ, ಭದ್ರತಾ ಕೇಂದ್ರದ ಮೇಲೆ 35ಕ್ಕೂ ಹೆಚ್ಚು ದಾಳಿಗಳು ನಡೆದಿದ್ದವು.  2001 ಅಕ್ಟೋಬರ್‌ನಲ್ಲಿ ಜೈಷ್ ಇ ಮೊಹಮ್ಮದ್ ಉಗ್ರರು ರಾಜ್ಯದ ವಿಧಾನಸಭಾ ಸಂಕೀರ್ಣದಲ್ಲಿ ಕಾರ್ ಬಾಂಬ್ ಸೋಟಿಸಿದ್ದರು. ಘಟನೆಯಲ್ಲಿ 38 ಜನರು ಮೃತಪಟ್ಟಿದ್ದರು.
ಸೇನಾನೆಲೆ ಮೇಲಿನ ದಾಳಿ ತುಚ್ಛ ಹಾಗೂ ಹೇಡಿತನದ್ದು. ತಪ್ಪಿತಸ್ಥರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ವಿಲ್ಲ. ದುಃಖದಲ್ಲಿರುವ ಮೃತ ಸೈನಿಕರ ಕುಟುಂಬದೊಂದಿಗೆ ಸರ್ಕಾರ ಇರಲಿದೆ.
| ನರೇಂದ್ರ ಮೋದಿ ಪ್ರಧಾನಿ
 
ಶಿಬಿರವೇ ಟಾರ್ಗೆಟ್ ಏಕೆ?

=       ಉರಿ ಶಿಬಿರದಲ್ಲೇ ಯೋಧರ ಸ್ಥಳ ನಿಯೋಜನೆ ಅಗುವುದರಿಂದ ಹೆಚ್ಚಿನ ಹಾನಿ ಎಸಗುವ ಲೆಕ್ಕಾಚಾರ
=       ಯೋಧರು ವಿಶ್ರಾಂತಿಯಲ್ಲಿರುವುದನ್ನೇ ಉಗ್ರರು ಬಂಡವಾಳವಾಗಿಸಿಕೊಂಡರು, ಉರಿ ಸೇನಾ ನೆಲೆ ಪಾಕ್ ಗಡಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ.
ಮೋದಿ ಅಧಿಕಾರಾವಧಿಯಲ್ಲಿ ನಡೆದ ಪ್ರಮುಖ ಉಗ್ರ ದಾಳಿ

ಡಿ.28, 2014ಫಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬಾಂಬ್ ಸೋಟ ಫ ಮಹಿಳೆ ಸಾವು , ಐವರಿಗೆ ಗಾಯ
ಜು.27,2015ಫಪಂಜಾಬ್‌ನ ಗುರುದಾಸ್‌ಪುರದಲ್ಲಿ ಉಗ್ರ ದಾಳಿಫ10 ಸಾವು, 15 ಜನರಿಗೆ ಗಾಯ
ಜ.2,2016ಫಪಠಾಣ್‌ಕೋಟ್‌ನ ವಾಯುನೆಲೆ ಮೇಲೆ ದಾಳಿ, ಫ ಏಳು ಸಾವು
ಜೂ.2016ಫಕಾಶ್ಮೀರದ ಪಾಂಪೋರ್‌ನಲ್ಲಿ ಉಗ್ರ ದಾಳಿಫ8 ಸಾವು, 22 ಜನರಿಗೆ ಗಾಯ
ಆ.5,2016ಫಅಸ್ಸಾಂನ ಕೋಕ್ರೋಜಾರ್‌ನಲ್ಲಿ ಉಗ್ರ ದಾಳಿಫ14 ಸಾವು, 15 ಜನರಿಗೆ ಗಾಯ
ಪಿಒಕೆ ಮೇಲೆ ಭಾರತ ದಾಳಿ?

ತಪ್ಪಿತಸ್ಥರಿಗೆ ಶಿಕ್ಷೆ ಖಚಿತ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಪಾಕಿಸ್ತಾನಕ್ಕೆ ಭಾರತ ನೀಡಿರುವ ಪರೋಕ್ಷ ಎಚ್ಚರಿಕೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಈ ಹಿಂದೆ ಈಶಾನ್ಯ ರಾಜ್ಯಗಳ ಉಗ್ರರ ಬೆನ್ನತ್ತಿದ್ದ ಸೇನಾಪಡೆ, ಮ್ಯಾನ್ಮಾರ್ ಗಡಿ ಪ್ರವೇಶಿಸಿ, ಉಗ್ರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲೂ ಉಗ್ರ ಶಿಬಿರಗಳನ್ನು ಧ್ವಂಸಗೊಳಿಸುವ  ಕಾರ‍್ಯತಂತ್ರವನ್ನು ಭಾರತ ರೂಪಿಸಿದೆ ಎನ್ನಲಾಗುತ್ತಿದೆ.

Read These Next

ಬಾಬರಿ ಮಸಿದಿ ಐತಿಹಾಸಿಕ ತೀರ್ಪಿಗೆ ಕ್ಷಣಗಣನೆ ಆರಂಭ; ಶನಿವಾರ ಬೆಳಿಗ್ಗೆ ೧೦:೩೦ಕ್ಕೆ ಮಹಾತೀರ್ಪು ಪ್ರಕಟ

ಹೊಸದಿಲ್ಲಿ: ದೇಶದಲ್ಲಿ ಅಸಹನೆ, ಕೋಮುಗಲಭೆ, ಅಶಾಂತಿಗೆ ಕಾರಣವಾಗಿದ್ದ ಭೂ ಒಡೆತನಕ್ಕೆ ಸೇರಿದ ೧೩೪ ವರ್ಷಗಳ ಅತ್ಯಂತ ಹಳೆಯ ಹಾಗೂ ...

`ಪಾಕಿಸ್ತಾನಕ್ಕೆ ಕರೆದೊಯ್ಯಲು ಬಂದಿದ್ದ ಆ ಗಾಡಿಯಲ್ಲಿ ನನ್ನ ದೇಹ ಇತ್ತು, ಆದರೆ ಅದಕ್ಕೆ ಜೀವ ಇದ್ದಿರಲಿಲ್ಲ...!'

ಭಾರತ ವಿದೇಶಾಂಗ ಇಲಾಖೆಯ ಆಜ್ಞಾನುಸಾರ ಹಡೆದ 3 ಮಕ್ಕಳನ್ನು ಭಾರತದಲ್ಲಿಯೇ ಬಿಟ್ಟು ಪಾಕಿಸ್ತಾನಕ್ಕೆ ಹೊರಟಿದ್ದ ಭಟ್ಕಳದ ಶಂಕಿತ ...

ಬ್ಯಾಂಕುಗಳ ವಿಲೀನ ಉನ್ಮಾದ

ವಾಸ್ತವಗಳು ಬ್ಯಾಂಕುಗಳ ಗಾತ್ರ ಮತ್ತು ದಕ್ಷತೆಯ ನಡುವಿನ ಸಂಬಂಧಗಳ ಒದಗಿಸುವ ತಿಳವಳಿಕೆಗಳಿಗೆ ಪೂರಕವಾಗಿಯೇನೂ ಇಲ್ಲ. ಉದಾಹರಣೆಗೆ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...