ಗೋಯರ್ ಸೇತುವೆಯ ಕಾಮಗಾರಿಯ ವಿಳಂಬಕ್ಕೆ ಸ್ಥಳೀಯರ ಆಕ್ರೋಶ

Source: S O News service | By Staff Correspondent | Published on 22nd February 2017, 12:09 AM | Public Voice | Don't Miss |

ಕಾರವಾರ ತಾಲೂಕಿನಿಂದ ೪೦ ಕಿ.ಮೀ. ದೂರದ ಗೊಟೆಗಾಳಿ ಗ್ರಾಮ ಪಂಚಾಯತ ಅಡಿಯಲ್ಲಿ ಬರುವ ಕೊಂಡಾರಣ್ಯ ಪ್ರದೇಶವಾದ ಗೋಯರ್ ಗ್ರಾಮಕ್ಕೆ ಸರ್ಕಾರದಿಂದ ಮಂಜೂರಾದ ಗೋಯರ್ ಸೇತುವೆ ಕಾಮಗಾರಿ ೨೦೧೪ರಲ್ಲಿ ಅರಣ್ಯ ಇಲಾಖೆಯವರು ಈ ಸೇತುವೆ ವಲಯ ಹುಲಿ ಸುರಕ್ಷಣಾ ಯೋಜನೆಯಡಿಯಲ್ಲಿ ಇರುವ ಕಾರಣ ಒಡ್ಡಿ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದರು. ಮುಂದಿನ ಕ್ರಮ ಕೈಗೊಳ್ಳುವವರೆಗೂ ಕಾಮಗಾರಿಯನ್ನು ಮುಂದುವರಿಸಲು ಅಡ್ಡಿಮಾಡಲಾಗಿತ್ತು.  ಈಗಾಗಲೇ ಮೂರು ವರ್ಷಗಳು ಕಳೆದರೂ ಈ ಸೇತುವೆ ಕಾಮಗಾರಿಯ ಬಗ್ಗೆ ಯಾವ ಅಧಿಕಾರಿಗಳಾಗಲಿ ಕ್ಷೇತ್ರದ ಮುಖಂಡರಾಗಲಿ ಇತ್ತಕಡೆಗೆ ಲಕ್ಷವನ್ನು ಕೊಡದೇ ಇಲ್ಲಿಯ ಸ್ಥಳೀಯರನ್ನು ಸಂಕಟಕ್ಕೆ ಎಡೆಮಾಡಿಕೊಟ್ಟಿದ್ದಾರೆ.  ಇನ್ನೂ ಮಳೆಗಾಲಕ್ಕೆ ಮೂರು ತಿಂಗಳುಗಳಿವೆ.  ತದನಂತರ ೪-೫ ತಿಂಗಳು ಮಳೆಗಾಲದಲ್ಲಿ ಕಾಮಗಾರಿ ಮಾಡಲು ಸಾಧ್ಯವಿಲ್ಲ.  ಈಗಾಗಲೇ ಸ್ಥಳೀಯ ಜನರು ಸಂಬಂಧಪಟ್ಟ ದಾಂಡೇಲಿ ಅರಣ್ಯ ಸುರಕ್ಷಣಾಧಿಕಾರಿಯವರನ್ನು, ಕಾರವಾರ ಜಿಲ್ಲಾಧಿಕಾರಿಗಳನ್ನು ಮತ್ತು ಚುನಾಯಿತ ಮುಖಂಡರನ್ನು ಕಳೆದ ಎರಡು ವರ್ಷಗಳಿಂದ ಸತತವಾಗಿ ಭೇಟಿಯಾಗಿ ಸೇತುವೆ ಕಾಮಗಾರಿಯನ್ನು ಶುರುಮಾಡಿಕೊಡಲು ಮನವಿ ಮಾಡಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಬೇಸತ್ತ ಸ್ಥಳೀಯರು ಇನ್ನೂ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಮಾಡುವುದಾಗಿ ನಿರ್ಧರಿಸಿ ಸ್ಥಳಕ್ಕೆ ಜೆ.ಡಿ.ಎಸ್. ಮುಖಂಡರಾದ ಪರುಷೋತ್ತಮ ಸಾವಂತರನ್ನು ಕರೆದು ತಮ್ಮ ಕಷ್ಟಕ್ಕೆ ಸ್ಪಂದಿಸಲು ಮನವಿಮಾಡಿದಾಗ ಸ್ವತಃ ಸ್ಥಳಕ್ಕೆ ಭೇಟಿಕೊಟ್ಟ ಪುರುಷೋತ್ತಮ ಸಾವಂತರವರು ಅಲ್ಲಿ ನೆರೆದ ಸ್ಥಳೀಯರನ್ನು ಭೇಟಿಯಾಗಿ ಮಾತುಕತೆ ನಡೆಸಿ ಅವರ ಅಹವಾಲನ್ನು ಆಲಿಸಿದರು.  

ಅದೇ ಸಮಯದಲ್ಲಿ ಅಲ್ಲಿ ಭೇಟಿಕೊಟ್ಟ ಅಣಶಿ ವಲಯ ಅಣ್ಯಾಧಿಕಾರಿ ಶ್ರೀಮತಿ ಆಫ್ರಿನ್ ಮತ್ತು ಉಪ ಅರಣ್ಯಾಧಿಕಾರಿಗಳೊಡನೆ ಈ ಸೇತುವೆ ಕಾಮಗಾರಿಯ ಬಗ್ಗೆ ಸಮಾಲೋಚನೆ ನಡೆಸಿದ ಸಾವಂತರವರು ಈಗಾಗಲೇ ಈ ಸೇತುವೆ ಅರಣ್ಯ ಇಲಾಖೆಯ ಪ್ರಕಾರ ಸ.ನಂ. ೬ರಲ್ಲಿ ಬರುತ್ತಿದೆ ಎಂದು ಉಲ್ಲೇಖವಾಗಿರುತ್ತದೆ.  ಅದು ಹುಲಿ ಸಂರಕ್ಷಣಾ ಪ್ರದೇಶ ಎಂದು ಘೋಷಣೆಯಾಗಿತ್ತು ಎಂದು ಹಿಂದಿನ ವರದಿಯಲ್ಲಿ ತಪ್ಪಾಗಿ ವರದಿಮಾಡಲಾಗಿತ್ತು.  ವಾಸ್ತವ್ಯಕ್ಕೆ ಈ ಸೇತುವೆ ಪ್ರದೇಶ ಸ.ನಂ. ೧೪೩ರಲ್ಲಿ ಬರುವ ಕಾರಣ ಅದು ಹುಲಿ ಸಂರಕ್ಷಣಾ ವಲಯದಲ್ಲಿ ಬರುವುದಿಲ್ಲ.  ಕಾರಣ ಈ ಪ್ರದೇಶದಲ್ಲಿ ಸೇತುವೆ ಕಟ್ಟಲು ನಿರ್ಬಂದವಿಲ್ಲ.  ಈ ಬದಲಾವಣೆಯ ಕುರಿತು ಈಗಾಗಲೇ ಸರಕಾರಕ್ಕೆ ವರದಿಯನ್ನು ಮಾಡಲಾಗಿದೆ.  ಎಂದು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಸಾವಂತರವರು ಈ ವಿಷಯವನ್ನು ಸ್ಥಳೀಯರಿಗೆ ತಿಳಿಹೇಳಿದರು.  ಅಲ್ಲದೇ ಅಧಿಕಾರಿಗಳ ಪ್ರಕಾರ ಇನ್ನೂ ೧೫ ದಿವಸಗಳೊಳಗೆ ಸೇತುವೆ ಕಾಮಗಾರಿ ಪ್ರಾರಂಭವಾಗುವುದಲ್ಲಿ ಸಂಶಯವಿಲ್ಲ, ದಯವಿಟ್ಟು ಇನ್ನೂ ಸ್ವಲ್ಪ ದಿನ ತಾಳ್ಮೆಯಿಂದ ಇರಲು ಸ್ಥಳೀಯರಿಗೆ ಮನವಿ ಮಾಡಿದರು.  ಈ ಸಂದರ್ಭದಲ್ಲಿ ಅಜೀತ ಪೋಕಳೆ, ಮತ್ತು ಗೋಯರ ಗ್ರಾಮದ ಸುತ್ತಮುತ್ತಲಿನ ಸ್ಥಳೀಯರು ಹಾಜರಿದ್ದರು.  
 

Read These Next

“ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ, ಸಮಾಜಿಕ ಬದಲಾವಣೆ”-ಐಟಾ ದಿಂದ ರಾಷ್ಟ್ರೀಯ ಶೈಕ್ಷಣಿಕ ಅಭಿಯಾನ

ಬೋಧನಾ ಪ್ರಬುದ್ಧತೆ, ಪ್ರತಿಭಾ ಪೋಷಣೆ ಮತ್ತು ಸಮಾಜಿಕ ಬದಲಾವಣೆ ಈ ಮೂರು ಅಂಶಗಳು ಪರಸ್ಪರ ಸಂಬಂಧ ಹೊಂದಿವೆ. ಬೋಧನಾ ಪ್ರಬುದ್ಧತೆಯು ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...