ಕಾರವಾರ: ವಿಶ್ವ ರಕ್ತದಾನಿಗಳ ದಿನ - ರಕ್ತದಾನದ ಕುರಿತಾದ ಪ್ರಮುಖ ವಿವರಗಳು

Source: karwar health authority | By Arshad Koppa | Published on 14th June 2017, 7:32 AM | National News | Special Report |

ಜೂನ್ 14 ಇದು ವಿಶ್ವ ರಕ್ತದಾನಿಗಳ ದಿನಾಚರಣೆ ಆಗಿ ಆಚರಿಸಲ್ಪಡುತ್ತದೆ. ಜನ ಸಾಮಾನ್ಯರಲ್ಲಿ ರಕ್ತದಾನದ ಬಗ್ಗೆ ಅರಿವು ಮೂಡಿಸಲು ಪ್ರತಿ ವರ್ಷ ರಕ್ತದಾನಿಗಳ ದಿನ ಆಚರಿಸಲಾಗುತ್ತದೆ. 2004 ರಲ್ಲಿ ಪ್ರಥಮ ಬಾರಿಗೆ ದಕ್ಷಿಣ ಆಪ್ರಿಕಾದ ಜೋಹಾನ್ಸ್ ಬರ್ಗನಲ್ಲಿ ಈ ಆಚರಣೆ ಪ್ರಾರಂಭವಾಯಿತು. ರಕ್ತವನ್ನು ಎ, ಬಿ, ಎಬಿ, ಒ ಎಂದು ಗುಂಪುಗಳಾಗಿ ವಿಂಗಡಿಸುವುದನ್ನು ಕಂಡು ಹಿಡಿದು ರಕ್ತ ವರ್ಗಾವಣಾ ವಿಜ್ಞಾನದಲ್ಲಿ ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಕಾರ್ಲ ಲ್ಯಾಂಡ್ ಸ್ಪೀನರ್ ನ ಜ್ಞಾಪನಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
 
              ಸ್ವಯಂ ಪ್ರೇರಿತ ರಕ್ತದಾನದ ಮಹತ್ವವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡುವುದು, ಸಾರ್ವಜನಿಕರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವಂತೆ ಪ್ರೋತ್ಸಾಹ ಮಾಡುವುದು  ರಕ್ತದಾನಿಗಳನ್ನು ಗುರುತಿಸಿ ಗೌರವಿಸುವುದು, ಹೆಚ್ಚು ಹೆಚ್ಚು ರಕ್ತದಾನಿಗಳನ್ನು ಪ್ರೇರೇಪಿಸಿ ಅವರು ಸ್ವಯಂ  ಪ್ರೇರಿತರಾಗಿ ರಕ್ತದಾನ ಮಾಡುವಂತೆ ಸಿದ್ಧಗೊಳಿಸುವುದು ಈ ದಿನ ಆಚರಣೆಯ ಮುಖ್ಯ ಉದ್ದೇಶ. ಈ ಮೂಲಕ ಶೇ 100 ರಷ್ಟು ರಕ್ತ ಸಂಗ್ರಹಣೆಯನ್ನು ಸ್ವಯಂ ಪ್ರೇರಿತ ರಕ್ತದಾನದಿಂದ ಸಂಗ್ರಹಿಸುವುದು ಅಲ್ಲದೇ ಎಲ್ಲರೂ ಸ್ವಯಂ ಪ್ರೇರಿತರಾಗಿ ಮುಂದೆ ಬಂದು ನಿಯಮಿತವಾಗಿ ರಕ್ತದಾನ ಮಾಡುವಂತೆ ಪ್ರೋತ್ಸಾಹಿಸುವುದು. 
     
            ವಿಜ್ಞಾನ ಎಷ್ಟೇ ಮುಂದುವರೆದರೂ ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಾಗಿಲ್ಲ. ಆದುದರಿಂದ ದಾನಿಗಳಿಂದ ಪಡೆದ ರಕ್ತವನ್ನೇ ಕೊಟ್ಟು ಜೀವ ಉಳಿಸಬೇಕಾಗಿರುವುದರಿಂದ ಸ್ವಯಂ ಪ್ರೇರಿತ ರಕ್ತದಾನ ಅತ್ಯಂತ ಹೆಚ್ಚು ಮಹತ್ವವುಳ್ಳದ್ದಾಗಿದೆ. ಒಬ್ಬ 18 ರಿಂದ 60 ರ ವಯೋಮಿತಿ ಒಳಗಿನ, ಕನಿಷ್ಟ 45 ಕೇಜಿ ತೂಕವಿರುವ, Hb 12.5 grm% ಕ್ಕಿಂತ ಜಾಸ್ತಿ ಇರುವ ಆರೋಗ್ಯವಂತ ಮನುಷ್ಯ, ಪ್ರತಿ 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ರೋಗಿಗೆ ಅವಶ್ಯಕತೆ ಇದ್ದ ಸಂದರ್ಭದಲ್ಲಿ ರಕ್ತವನ್ನು ಕೊಡಬೇಕಾದಾಗ ಅತ್ಯಂತ ಸುರಕ್ಷಿತ ರಕ್ತ ಎಂದರೇ ಸ್ವಯಂ ಪ್ರೇರಿತ ರಕ್ತದಾನಿಗಳಿಂದ ಪಡೆದ ರಕ್ತ ಆಗಿರುತ್ತದೆ. 
     
 
Tears of a mother cannot save her Child. But your Blood can. 

 
           
           ಬದಲಿ ಮೂಲದಲ್ಲಿ (Replacement Donors) ಅಂದರೆ ತಮ್ಮ ಸಂಬಂದಿಗಳು ಅಥವಾ ಸ್ನೇಹಿತರಿಗೆ ಅವಶ್ಯಕತೆ ಇದ್ದಾಗ ಆ ತಕ್ಷಣ ರಕ್ತವನ್ನು ಕೊಡುವುದು.  1 ಯುನಿಟ್ ರಕ್ತಕ್ಕೆ ಬದಲಾಗಿ ಕುಟುಂಬ ಸದಸ್ಯರಿಂದ ಅಥವಾ ಹಣ ಪಡೆದು ರಕ್ತದಾನ ಮಾಡುವ ದಾನಿಗಳಿಂದ ರಕ್ತ ಪಡೆಯುವುದು. ಇದು ಅಷ್ಟು ಸುರಕ್ಷಿತ ವಿಧಾನವಲ್ಲ. ಆದ್ದರಿಂದ  ಈ ಮೂಲಕ ರಕ್ತವನ್ನು ಪಡೆಯುವ ಬದಲು ಸುರಕ್ಷಿತ ರಕ್ತವಾದ ಸ್ವಯಂ ಪ್ರೇರಿತ ದಾನಿಗಳಿಂದ ಸಂಗ್ರಹಿಸಿದ ರಕ್ತವನ್ನು ಪಡೆಯುವುದು ನಮ್ಮ ಮನವಿ ಆಗಿದೆ. ಸ್ವಯಂ ಪ್ರೇರಿತ ರಕ್ತದಾನದಿಂದ ಹೆಚ್ಚು ಹೆಚ್ಚು ರಕ್ತ ಸಂಗ್ರಹಿಸಿ Replacement collectionಪದ್ದತಿಯನ್ನು ಆದಷ್ಟು ಕಡಿಮೆ ಅಂದರೆ 0% ತನಕ ನಿಲ್ಲಿಸುವುದು.
 
                ವಿಶ್ವ ಆರೋಗ್ಯ ಸಂಸ್ಥೆ ಪ್ರತಿ ವರ್ಷ ರಕ್ತದಾನದ ಕುರಿತು ಒಂದು ವಿಶೇಷ ಧ್ಯೇಯವಾಕ್ಯ ಘೋಷಣೆ    
      ಮಾಡುತ್ತದೆ. ಈ ವರ್ಷದ ಧ್ಯೇಯ ವಾಕ್ಯ- ನೀವೇನು ಮಾಡಬಲ್ಲಿರಿ? ‘ರಕ್ತದಾನ ಮಾಡಿ, ಈಗಲೇ ಮಾಡಿ,   
     ನಿಯಮಿತವಾಗಿ ಮಾಡುತ್ತಾ ಇರಿ’. ರಕ್ತದ ಅವಶ್ಯಕತೆ, ರಕ್ತದಾನದ ಮಹತ್ವ, ರಕ್ತದಾನಕ್ಕೆ ಪ್ರೋತ್ಸಾಹ ಈ 
     ಎಲ್ಲಾ ಅಂಶಗಳ ಮಹತ್ವವನ್ನು ಈ ಧ್ಯೇಯ ವಾಕ್ಯ ಸೂಚಿಸುತ್ತದೆ. ಸಂಗ್ರಹಿಸಿದ  ರಕ್ತ ಕೇವಲ 35 ದಿನಗಳ 
     ವರೆಗೆ ಮಾತ್ರ ಸಂಗ್ರಹಿಸಿ ಇಡಬಹುದಾದ್ದರಿಂದ ನಿಯಮಿತವಾಗಿ ರಕ್ತದಾನ ಮಾಡುವುದರ ಮೂಲಕವೇ 
     ರಕ್ತದ ಬೇಡಿಕೆಯನ್ನು ನಾವು ತಲುಪಬಹುದಾಗಿದೆ.
 
        
          ಒಬ್ಬ ಆರೋಗ್ಯವಂತ ಮನುಷ್ಯನ ದೇಹದಲ್ಲಿ 5-6 ಲೀಟರ್‍ನಷ್ಟು ರಕ್ತ ಇರುತ್ತದೆ. ರಕ್ತ ಸಂಗ್ರಹಣೆ   ಮಾಡುವಾಗ ಕೇವಲ 350 ಮಿ.ಲೀ ನಷ್ಟು ರಕ್ತ ಮಾತ್ರ ತೆಗೆಯಲಾಗುವುದು.
ರಕ್ತ ಸಂಗ್ರಹಣೆ ಮಾಡುವಾಗ ಕೇವಲ 4 ಹಂತದ ಸಿದ್ದತೆ ಇರುತ್ತದೆ.
1. ಹೆಸರು ನೊಂದಣ  (Registration)
2. ವೈದ್ಯಕೀಯ ವಿವರ  (Medical History)
3. ರಕ್ತ ಸಂಗ್ರಹಣೆ (Blood Collection)
4. ಲಘು ಉಪಹಾರ (Refreshment)

          ರಕ್ತ ಸಂಗ್ರಹಣೆಯ ಪೂರ್ಣ ಪ್ರಕ್ರಿಯೆಯು ಕೇವಲ 10 ರಿಂದ 15 ನಿಮಿಷದ್ದು ಮಾತ್ರ ಆಗಿರುತ್ತದೆ. ದಾನ ಮಾಡಿದ ರಕ್ತ 24 ರಿಂದ 48 ಘಂಟೆಗಳಲ್ಲಿ ಪುನಃ ಉತ್ಪತ್ತಿ ಆಗುತ್ತದೆ. ಆದರೂ ಸಹಿತ ಒಮ್ಮೆ ದಾನ ಮಾಡಿದ ನಂತರ 3 ತಿಂಗಳು ಅಥವಾ 3 ತಿಂಗಳ ಅಂತರದ ನಂತರ ದಾನ ಮಾಡಲು ಅರ್ಹನಾಗಿರುತ್ತಾನೆ.
          ಆಸ್ಪತ್ರೆಗೆ ದಾಖಲಾಗುವ ಪ್ರತಿ 10 ರೋಗಿಗಳಲ್ಲಿ 1 ರೋಗಿಗೆ ರಕ್ತದ ಅವಶ್ಯಕತೆ ಇರುತ್ತದೆ. ಪ್ರತಿ 2 ಸೆಕೆಂಡಿಗೆ ಒಬ್ಬರಿಗೆ ರಕ್ತದ ಅವಶ್ಯಕತೆ ಇರುತ್ತದೆ.
 
      
 
“Give the gift of life: Donate blood.”
 
 
 
 
            ರಕ್ತದ ಗುಂಪುಗಳಲ್ಲಿ O-ve ಗುಂಪು ಹೊಂದಿರುವವರನ್ನು Universal Donors ಎಂದು ಕರೆಯಿಸಿಕೊಳ್ಳಲ್ಪಡುತ್ತಾರೆ. ಯಾಕೆಂದರೆ ಈ ರಕ್ತದ ಗುಂಪಿನವರ Red Blood cell ನ್ನು ಇತರೆ ಯಾವುದೇ ಗುಂಪಿನವರಿಗೂ ಕೊಡಬಹುದು. AB+ve ಗುಂಪಿನವರನ್ನು Universal Recipient ಎಂದು ಕರೆಯಲಾಗುತ್ತದೆ. ಯಾಕೆಂದರೆ ಈ ಗುಂಪಿನವರು ಇತರೆ ಯಾವೂದೇ ಗುಂಪಿನವರ ರಕ್ತವನ್ನು ಬೇಕಾದರೂ ಪಡೆದುಕೊಳ್ಳಬಹುದು. AB-ve  ಗುಂಪಿನ ರಕ್ತವು ಅತಿ ವಿರಳವಾದ ರಕ್ತದ ಗುಂಪು ಆಗಿರುತ್ತದೆ.              
 
           ನಮ್ಮ ಜಿಲ್ಲೆಯಲ್ಲಿ ಒಟ್ಟೂ 5 ರಕ್ತನಿಧಿ ಕೇಂದ್ರಗಳಿದ್ದು 2 ಸರಕಾರಿ ಹಾಗೂ 3 ಖಾಸಗಿ ರಕ್ತನಿಧಿ ಕೇಂದ್ರಗಳಾಗಿವೆ. ಕಾರವಾರ ಜಿಲ್ಲಾ ಆಸ್ಪತ್ರೆ ಮತ್ತು ಪಂಡಿತ ಸಾರ್ವಜನಿಕ ಆಸ್ಪತ್ರೆ, ಶಿರಸಿಯಲ್ಲಿ ಸರಕಾರಿ ರಕ್ತನಿಧಿ ಕೇಂದ್ರಗಳಿದ್ದು, ಟಿ.ಎಸ್.ಎಸ್ ಶಿರಸಿ, ಉತ್ತರ ಕನ್ನಡ ಬ್ಲಡ್ ಬ್ಯಾಂಕ ಕುಮಟಾ ಮತ್ತು ಕೆ.ಎಲ್.ಇ ಅಂಕೋಲಾ ಇವು ಖಾಸಗಿ ರಕ್ತನಿಧಿ ಕೇಂದ್ರಗಳಾಗಿರುತ್ತವೆ.  ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರ  ರಕ್ತ ವಿಧಳನ ಘಟಕ (Blood separation Unit) ಪ್ರಾರಂಭಿಸಲು ಸರಕಾರದಿಂದ ಅನುಮೋದನೆ ಸಿಕ್ಕಿದ್ದು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಈಗಾಗಲೇ ಜಿಲ್ಲೆಯಲ್ಲಿ ಎಲ್ಲಾ ತಾಲೂಕಾ ಆಸ್ಪತ್ರೆ ( ಯಲ್ಲಾಪುರ ಮತ್ತು ಜೋಯಿಡಾ ಹೊರತುಪಡಿಸಿ)  ಮತ್ತು ಸಾರ್ವಜನಿಕ ಆಸ್ಪತ್ರೆ ದಾಂಡೇಲಿಗಳಲ್ಲಿ ರಕ್ತ ಸಂಗ್ರಹಣಾ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು ತಾಲೂಕಾ ಆಡಳಿತದ ಸಹಕಾರದೊಂದಿಗೆ ನಿಯಮಿತವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಾ ಬರಲಾಗಿದೆ.
           ನಮ್ಮ ಜಿಲ್ಲೆಯಲ್ಲಿ ಕಳೆದ ವರ್ಷದಲ್ಲಿ ಅಂದರೆ ಏಪ್ರಿಲ್ 2016 ರಿಂದ ಮಾರ್ಚ 2017 ರವರೆÉÀಗೆ  4731 ಯುನಿಟ್‍ನಷ್ಟು ರಕ್ತವನ್ನು ಸಂಗ್ರಹಿಸಲಾಗಿದೆ. 55 ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದ್ದು, 2990 ಯುನಿಟ್‍ನಷ್ಟು ರಕ್ತವನ್ನು ಸ್ವಯಂಪ್ರೇರಿತ ದಾನಿಗಳಿಂದ ಸಂಗ್ರಹಿಸಲಾಗಿದೆ.  ಆದರೆ ಅದರಲ್ಲಿ ಶೇ 37 ರಷ್ಟು ಅಂದರೆ 1741 ಯುನಿಟ್‍ನಷ್ಟು  ರಕ್ತವನ್ನು  ಬದಲಿ ಮೂಲಗಳ ಮುಖಾಂತರ (Replacement Donors) ಮೂಲಕ ಸಂಗ್ರಹಿಸಲಾಗಿದೆ. ಆದರೆ Replacement Donation ನ್ನು 0% ಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ..
          ಪ್ರತಿಯೊಬ್ಬ ಆರೋಗ್ಯವಂತನೂ ರಕ್ತದಾನ ಮಾಡುವ  ಕುರಿತು ಸಂಕಲ್ಪ ಮಾಡುವ ಮೂಲಕ ವರ್ಷಕ್ಕೆ ಒಮ್ಮೆಯಾದರೂ ರಕ್ತದಾನ ಮಾಡಲು ಮುಂದೆ ಬರಬೇಕು. ಇಂದಿನ ದಿನಗಳಲ್ಲಿ ಸುರಕ್ಷಿತ ರಕ್ತದ ಅವಶ್ಯಕತೆ ತುಂಬಾ ಇದ್ದು, ಜನರಲ್ಲಿ ಅದರಲ್ಲೂ ಪ್ರಮುಖವಾಗಿ ಯುವಕರಲ್ಲಿ ಸ್ವಂಯಂ ಪ್ರೇರಿತ ರಕ್ತದಾನದ ಬಗ್ಗೆ ಅರಿವು ಮೂಡಿಸಿ ಅವರನ್ನು ರಕ್ತದಾನ ಮಾಡುವಂತೆ ಪ್ರೆರೇಪಿಸಬೇಕಾಗಿದೆ. ಇಂದಿನ ಯುವಜನತೆ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಪೇಸ್ಬುಕ್ ಗಳಲ್ಲಿ ಅತ್ಯಂತ ಸಕ್ರೀಯವಾಗಿರುತ್ತಾರೆ. ಆದ್ದರಿಂದ ರಕ್ತದಾನಕ್ಕೆ ಮೂಲ ಸಂಪನ್ಮೂಲಗಳಾದ ಯುವಜನರು ಈ ಸಾಮಾಜಿಕ ಜಾಲತಾಣಗಳ ಮುಖಾಂತರ ತಮ್ಮ ಸಹ ಗುಂಪುಗಳಲ್ಲಿ ಜಾಗೃತಿ ಮೂಡಿಸುವ ಮೂಲಕ ರಕ್ತದಾನದಂತಹ ಸಾಮಾಜಿಕ ಕಳಕಳಿಯ ಕಾರ್ಯದಲ್ಲಿ ಕೈ ಜೋಡಿಸಬೇಕು.
                 
gift of blood is the gift of life
 
 ಈ ವರ್ಷ ನಮ್ಮ ಜಿಲ್ಲೆಯಲ್ಲಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಜೀವದಾನ ಮಾಡಿರುವ ಜಿಲ್ಲೆಯ ಎಲ್ಲಾ ರಕ್ತದಾನಿಗಳಿಗೆ ಇಲಾಖೆಯ ವತಿಯಿಂದ ಧನ್ಯವಾದಗಳನ್ನು ಸಲ್ಲಿಸುತ್ತಾ ತಮ್ಮ ಈ ಸಮಾಜಮುಖಿ ಕಾರ್ಯ ನಿರಂತರವಾಗಿ ಮುಂದುವರೆಯಲಿ ಹಾಗೂ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸುತ್ತೇವೆ.

 
Donation of Blood means a few minutes to you, but a lifetime for somebody else. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  
 ಕಾರವಾರ, ಉತ್ತರ ಕನ್ನಡ. 
ಡ್ಯಾಪ್ಕೊ ಘಟಕ. ಕಾರವಾರ, ಉತ್ತರ ಕನ್ನಡ. 

Read These Next

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...