ಕಾರವಾರ:ಉತ್ತರ ಕನ್ನಡ ವಿಷನ್ 2025 ಕಾರ್ಯಗಾರ ಯಶಸ್ವಿ 

Source: varthabhavan | By Arshad Koppa | Published on 18th October 2017, 8:01 AM | Coastal News | Special Report |

ಕಾರವಾರ ಅಕ್ಟೋಬರ 17 : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಏಳು ವರ್ಷಗಳಲ್ಲಿ ಅನುಷ್ಠಾನಗೊಳಿಸಬೇಕಾದ ಅಭಿವೃದ್ಧಿ ಮಾರ್ಗಸೂಚಿ ವಿಷನ್ 2025 ಡಾಕ್ಯುಮೆಂಟ್ ಸಿದ್ದಪಡಿಸುವದಕ್ಕಾಗಿ ಇಲ್ಲಿನ ಜಿಲ್ಲಾ ರಂಗಮಂದಿರಲ್ಲಿ ಜಿಲ್ಲಾ ಮಟ್ಟದ ಕಾರ್ಯಗಾರ ನಡೆಯಿತು. 


ಸಾರ್ವಜನಿಕರ ಪಾಲುದಾರಿಕೆಯಲ್ಲಿಯೇ ವಿಷನ್-2025 ಡಾಕ್ಯುಮೆಂಟ್  ತಯಾರಿಸಬೇಕೆಂಬ ಸರಕಾರದ ಆಶಯದಂತೆ ಪ್ರಮುಖ ಇಲಾಖೆಗಳನ್ನೊಳಗೊಂಡ ಒಟ್ಟು 13 ವಲಯಗಳನ್ನು ಐದು ಗುಂಪುಗಳಾಗಿ ವಿಂಗಡಿಸಿ ಅಭಿಪ್ರಾಯ ಸಂಗ್ರಹಣೆಗೆ ವೇಧಿಕೆ ಒದಗಿಸಿಕೊಡಲಾಯಿತು. 
ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ, (ರಸ್ತೆ, ವಿದ್ಯುಚ್ಛಕ್ತಿ, ನೀರಿನ ಸೌಲಭ್ಯ ಹಾಗೂ ನೈರ್ಮಲಿಕರಣ) ಉದ್ಯೋಗ-ಕೌಶಲ್ಯ, ಕೈಗಾರಿಕೆ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಬಲಿಕರಣ ಹಾಗೂ ಆರೋಗ್ಯ ಮತ್ತು ಶಿಕ್ಷಣ, ನಗರಾಭಿವೃದ್ಧಿ ಮೂಲ ಸೌಕರ್ಯ, ಆಡಳಿತ ಕಾನೂನು ಮತ್ತು ನ್ಯಾಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ 2025 ರ ವೇಳೆಗೆ ಆಗಬೇಕಾದ ಕೆಲಸಗಳ ಬಗ್ಗೆ ಸಲಹೆ ಸೂಚನೆಗಳು ಜನಪ್ರತಿನಿದಿಗಳು, ಶಿಕ್ಷಣ ತಜ್ಞರು, ರೈತರು ಸಾರ್ವಜನಿಕರಿಂದ ಕೇಳಿ ಬಂದವು. 
ಒಟ್ಟಾರೆಯಾಗಿ ಸಮಾಜದ ಎಲ್ಲ ಪ್ರಮುಖ ವಲಯಗಳನ್ನು ಪ್ರತಿನಿಧಿಸುವ ನಾಗರಿಕರು ಕಾರ್ಯಗಾರದಲ್ಲಿ ಪಾಲ್ಗೋಂಡು ನವಕರ್ನಾಟಕ ನಿರ್ಮಾಣಕ್ಕೆ ಮುನ್ನೋಟ ಒದಗಿಸಿದರು. 
 ಶಿಕ್ಷಣ ಕ್ಷೇತ್ರದ ಬಲವರ್ದನೆಗೆ ಹಾಗೂ ಶೌಕ್ಷಣಿಕ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಮುಂದಿನ ಏಳು ವರ್ಷಗಳಲ್ಲಿ ಅಳವಡಿಸಬೇಕಾದ ಯೋಜನೆಗಳ ಬಗ್ಗೆ ಚರ್ಚೆ ನಡೆದು ಪ್ರಮುಖ ಅಂಶಗಳನ್ನು ವಿಷನ್-2025 ಡಾಕ್ಯುಮೆಂಟನಲ್ಲಿ ಸೆರ್ಪಡಿಸಿಕೊಳ್ಳಲು ನಿರ್ಧರತಿಸಲಾಯಿತು. 2025 ರೊಳಗೆ ನಗರ ಮತ್ತು ಗ್ರಾಮೀಣ ಶಾಲೆಗಳು ಡಿಜೀಲಿಕರಣಗೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ಸ್ಮಾರ್ಟ ತರಗತಿಗಳು ನಡೆಯುವಂತಾಗಬೇಕು. ಜಿಲ್ಲೆಯಲ್ಲಿ ಪ್ರತಿವರ್ಷ ಕನಿಷ್ಠ 50 ರಿಂದ 100 ವಿದ್ಯಾರ್ಥಿಗಳು ಐ.ಐ.ಟಿ ಪ್ರವೇಶ ಪಡೆಯಬೇಕು. .ಜಿಲ್ಲೆಯ ಪ್ರತಿಭೆಗಳು ಜಿಲ್ಲೆಯಲ್ಲೆ ಅರಳಲು ಉನ್ನತ ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಬೇಕು ಎಂಬ ಸಲಹೆಗಳು ಜನರಿಂದ ಕೇಳಿ ಬಂದವು. 
ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ಪೂರಕ ಚಟುವಟಿಕೆಗಳಿಗೆ ಸಂ¨ಂಧಿಸಿದಂತೆ  2025 ರೊಳಗೆ ಪ್ರತಿ ಗ್ರಾಮಕ್ಕೆ ವೈ.ಫೈ ಅಳವಡಿಸಿರಬೇಕು. ಅನುಧಾನವನ್ನು ಹಂಚಿಕೆ ಮಾಡುವಾಗ ಜನ ಸಂಖ್ಯೆ ಆಧಾರದಲ್ಲಿ ಮಾಡದೇ ಭೌಗೋಳಿಕ ಆಧಾರದಲ್ಲಿ ಮಾಡಬೇಕು. ಗ್ರಾಮ ಪಂಚಾಯತ್ ಮಟ್ಟದಲ್ಲಿ ಬ್ಯಾಂಕ, ಆಸ್ಪತ್ರೆ, ಪಶು ಆಸ್ಪತ್ರೆ, ಗ್ರಂಥಾಲಯ ರೈತ ಸಂಪರ್ಕ ಕೇಂದ್ರ ಮತ್ತು ಭೂಮಿ ಕೇಂದ್ರ ಸ್ಥಾಪಿಸಬೇಕು. ಗ್ರಾಮೀಣ ಭಾಗದಲ್ಲಿ ಸಣ್ಣ ಸಣ್ಣ ಹಳ್ಳ ಝರಿ ನೀರನ್ನು ತಡೆಯಲು ತಡೆಗೋಡೆ ನಿರ್ಮಾಣವಾಗಬೇಕು. ಜಿಲ್ಲೆಯಲ್ಲಿ ಕೃಷಿ ವಿಶ್ವವಿದ್ಯಾಲಯ ಮತ್ತು ಪಶು ವಿದ್ಯಾಲಯ ಸ್ಥಾಪಿಸಬೇಕು ಎಂದು ನಾಗರಿಕರು ಸಲಹೆ ನೀಡಿದರು.
ಆಡಳಿತ ಕಾನೂನು ಮತ್ತು ನ್ಯಾಯ ಕುರಿತ ಚರ್ಚೆಯಲ್ಲಿ ಎಲ್ಲ ಸಮಸ್ಯೆಗಳಿಗೂ ಪೊಲೀಸ್ ಇಲಾಖೆ ಸಂಪರ್ಕಿಸುವಂತೆ ಮಾಡದೇ ಇತರೇ ಇಲಾಖೆಗಳಿಗೂ ಜವಾಭ್ದಾರಿ ಹೊರಿಸಬೇಕು. ನಾಗರಿಕರ ಕೂಡಾ ಕಾನೂನು ಪಾಲಿಸು ಪರಿಪಾಠ ಬೆಳಸಿಕೊಳ್ಳಬೇಕು. ಯುವ ಜನತೆಯಲ್ಲಿ ಕಾನೂನು ಬಗ್ಗೆ ಜಾಗೃತಿ  ಮೂಡಿಸಬೇಕು. ಎಲ್ಲಾ ಪೊಲೀಸ ಸಿಬ್ಬಂದಿಗಳಿಗೆ ತರಬೇತಿ ನೀಡಿ ಸಮಾಜವನ್ನು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಮಾಡಿಕೊಳ್ಳಬೇಕೆಂದು ಪ್ರಜ್ಞಾವಂತ ನಾಗರಿಕರು ಸೂಚಿಸಿದರು. 
ನಗರ ಮೂಲ ಸೌಕರ್ಯಕ್ಕೆ ಸಂಬಂಧಿಸಿದಂತೆ ಪಾರ್ಕಿಂಗ್ ವ್ಯವಸ್ಥೆ ಸರಿಯಾಗಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಿಸವೇಕು. ಕಾರವಾರ ಗಡಿನಾಡು ನಗರವಾಗಿದ್ದರಿಂದ ಸ್ಮಾರ್ಟಸೀಟಿ ಮಾಡಲು ಆಧ್ಯತೆ ನೀಡಬೇಕು ಎಂಬ ಸಲಹೆಗಳನ್ನು ಸೂಚಿಸಲಾಯಿತು.  ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಣಾಧಿಕಾರಿ ಎಲ್ ಚಂದ್ರಶೇಖರ ನಾಯಕ, ಸಾರ್ವಜನಿಕ ಉದ್ದಿಮೆಗಳ ಇಲಾಖೆ ಸರಕಾರದ ಪ್ರಧಾನ ಕಾರ್ಯದರ್ಶಿ ರೇಣುಕಾ ಚೌದರಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...