ಕಾರವಾರ: ವಿಷನ್ 2025 ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿ :  ಸತೀಶ ಸೈಲ್ 

Source: varthabhavan | By Arshad Koppa | Published on 18th October 2017, 7:53 AM | State News | Special Report |

ಕಾರವಾರ ಅಕ್ಟೋಬರ 17: ನವಕರ್ನಾಟಕ ವಿಷನ್ 2025 ಯೋಜನೆಯು ಮುಖ್ಯಮಂತ್ರಿಗಳ ವಿಶೇಷ ಆಸಕ್ತಿಯ ಕನಸಾಗಿದ್ದು   ವಿಷನ್ 2025 ಜಿಲ್ಲೆಯ ಅಭಿವೃಧ್ಧಿಗೆ ಸಹಕಾರಿಯಾಗಿದೆ ಎಂದು  ಶಾಸಕ ಸತೀಶ ಸೈಲ್   ಹೇಳಿದರು. 

ಜಿಲ್ಲಾ ರಂಗಮಂದಿರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ವಿಷನ್-2025 ಕಾರ್ಯಾಗಾರದಲ್ಲಿ ಅವರು ಪ್ರಾಸ್ತಾವಿಕವಾಗಿ  ಮಾತನಾಡಿ ಜಿಲ್ಲೆಯ ಕಡಲತೀರಗಳನ್ನು ಕೇರಳ ಹಾಗೂ ಗೋವ ರಾಜ್ಯಗಳ ಮಾದರಿಯಂತೆ  ಪ್ರವಾಸಿ ಯಾತ್ರಿಕ ತಾಣಗಳಾಗಿ ಅಭಿವೃದ್ಧಿಗೋಳಿಸುವಲ್ಲಿ ವಿಷನ್- 2025 ಡಾಕ್ಯುಮೆಂಟ್ ಯೋಜನೆಯು ಮಹತ್ವದ ಪಾತ್ರವ ವಹಿಸುತ್ತದೆ. ಸಾರ್ವಜನಿಕ ಉದ್ಯಮಿದಾರರಿಗೆ ಅನುಕೂಲಕರವಾಗುವಂತೆ ಔದ್ಯಮಿ ಇಂಡಸ್ಟ್ರೀಯನ್ನು ತೆರೆಯುವಲ್ಲಿ ಕೈಗಾರಿಕೋದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕು. ವಿಷನ್ 2025 ಮೂಲಕ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು ಎಂದು  ಅವರು ಹೇಳಿದರು. 


ನವಕರ್ನಾಟಕ ವಿಷನ್ 2025 ಯೋಜನಾ ನಿರ್ದೇಶಕಿ ರೇಣುಕಾ ಚಿದಂಬರಂ ಕಾರ್ಯಗಾರ ಉದ್ಘಾಟಿಸಿ ಮಾತನಾಡಿ   ಕರ್ನಾಟಕ ರಾಜ್ಯದ ಸಮಗ್ರ ಅಭಿವೃದ್ಧಿ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಮಹತ್ವದ ಯೋಜನೆ ಇದಾಗಿದ್ದು ರಾಜ್ಯಾದ ಪ್ರತಿಯೊಂದು ಜಿಲ್ಲೆಯಲ್ಲಿ ಕಾರ್ಯಗಾರ ಕಾರ್ಯಕ್ರಮವನ್ನು ಡಿಸೆಂಬರ 31 ರವರೆಗೆ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಮತ್ತು ಅಂತರಾಷ್ರ್ಟೀಯ ಮಟ್ಟದಲ್ಲಿ ಮಾನವ ಅಭಿವೃದ್ಧಿಗಾಗಿ ಗುರುತಿಸಲಾಗಿರುವ ಗುರಿಗಳನ್ನು ಸಾಧಿಸುವ ಮೂಲಕನ ಅಭಿವೃದ್ಧಿಯುತ ಕರ್ನಾಟಕವನ್ನು ಕಟ್ಟಬೇಕೆಂದು ಉದ್ದೇಶದಿಂದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು.
 ವಿಷನ್ 2025 ಡಾಕ್ಯಮೆಂಟನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿಯ ಪಕ್ಷಿನೋಟವನ್ನು ಕಾಣಬಹುದಾಗಿದೆ. ಈ ಯೋಜನೆಯ ಕೇವಲ ಒಂದು ವರ್ಷಕ್ಕೆ ಮಾತ್ರ ತಯಾರಿಸಿರುವದಿಲ್ಲ ಬದಲಾಗಿ ಏಳು ವರ್ಷಗಳಿಗೆ ಮಾಡಲಾಗಿದೆ. ಇದಕ್ಕೆ ವಿಷಯ ತಜ್ಞರು, ಜನಪ್ರತಿನಿದಿಗಳು ಸಾರ್ವಜನಿಕರು ಉದ್ಯಮಿಗಳು ಸಲಹೆ ಸೂಚನೆಗಳನ್ನು ನೀಡಿ ತಮ್ಮ ಜಿಲ್ಲೆಯನ್ನು ಅಭಿವೃಧಿಯತ್ತ ಕೊಂಡೊಯ್ಯಿರಿ ಎಂದು ಹೇಳಿದರು. 
    
 ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲೆಯು ಬೇರೆ ಜಿಲ್ಲೆಗಳಿಗಿಂತ ಭೌಗೋಳಿಕವಾಗಿ ಮತ್ತು ಸಾಮಾಜಿಕವಾಗಿ ಭಿನ್ನವಾಗಿದೆ. ಜಿಲ್ಲೆಯ ಪ್ರದೇಶವು ಹೆಚ್ಚಿನ ಮಟ್ಟದಲ್ಲಿ ಅರಣ್ಯದಿಂದ ಕೂಡಿದ್ದು ಅಧಿಕ ಮಟ್ಟದಲ್ಲಿ ಅಭಿವೃದ್ದಿ ಹೊಂದಿರುವದಿಲ್ಲ. ವಿಷನ್ 2025 ಮೂಲಕ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಗೃಹ ಉತ್ಪನ್ನಗಳಿಗೆ ಉತ್ತೇಜನ ನೀಡುವದರಿಂದ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕರೆದೊಯ್ಯಬಹುದೆಂದು ಅಭಿಪ್ರಾಯ ಪಟ್ಟರು. 
ಜಿಲ್ಲೆಯಲ್ಲಿ ವಿಬಿನ್ನವಾದ ಜೋನಿಬೆಲ್ಲಾ, ಸಿಹಿ ಈರುಳ್ಳಿ ಸೇರಿದಂತೆ ವಿವಿಧ ಆಹಾರ ಪದಾರ್ಥಗಳು ಲಭ್ಯವಿದ್ದು ಅವು ಪ್ರವಾಸೋದ್ಯಮಕ್ಕೂ ಪ್ರೋತ್ಸಾಹವನ್ನು ನೀಡುವಂತಹವಾಗಿದ್ದು ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡುತ್ತವೆ. ವಿಷನ್ 2025 ದಲ್ಲಿ ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕೆಂದು ಅವರು ಹೇಳಿದರು. 
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಎಲ್.ಚಂದ್ರಶೇಖರ ನಾಯಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜಯಶ್ರೀ ಮೋಗೇರ, ಜಿ.ಪಂ. ಉಪಾಧ್ಯಕ್ಷ ಸಂತೋಷ ರೇಣಕೆ, ಪೊಲೀಸವರಿಷ್ಠಾಧಿಕಾರಿ ವಿ.ವಿ.ಪಾಟೀಲ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...