ಕಾರವಾರ: ಜ.25 ರಂದು ಪಿಂಚಣಿ ಅದಾಲತ್

Source: S O News | By I.G. Bhatkali | Published on 20th January 2022, 7:42 PM | Coastal News |

ಕಾರವಾರ: ಕಾರವಾರ ವಿಭಾಗೀಯ ಅಂಚೆ ಪಿಂಚಣಿ ಅದಾಲತ್ ಜ.25ರ ಬೆಳಿಗ್ಗೆ 11ಗಂಟೆಗೆ ಕಾರವಾರ ವಿಭಾಗದ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಲಿದೆ. 

ಕಾರವಾರ ವಿಭಾಗದಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿರುವ ಪಿಂಚಣಿದಾರರು ಮಾತ್ರ ಅದಾಲತ್‍ನಲ್ಲಿ ಪಾಲ್ಗೊಳ್ಳಬಹುದು. ಗ್ರಾಮೀಣ ಅಂಚೆ ಸೇವಕರಿಗಾಗಲಿ ಅಥವಾ ಅಂಚೆ ಇಲಾಖೆಯ ಮೂಲಕ ಪಿಂಚಣಿ, ಪಡೆಯುತ್ತಿರುವ ಇತರೆ ನೌಕರರಿಗೆ ಅವಕಾಶವಿರುವುದಿಲ್ಲ. ಪಾಲ್ಗೊಳ್ಳುವ ಅಂಚೆ ಪಿಂಚಣಿದಾರರಿಗೆ ಯಾವುದೇ ಭತ್ಯೆ ಕೊಡಲಾಗುವುದಿಲ್ಲ.

ಅಂಚೆ ಪಿಂಚಣಿದಾರರು ತಮ್ಮ ಸಮಸ್ಯೆಗಳನ್ನು ಲಿಖಿತವಾಗಿ ತಮ್ಮ ಎಲ್ಲಾ ವಿವರ, ವಿಳಾಸ, ಪಿಪಿಒ ನಂಬರ್ ಮತ್ತು ಪಿಂಚಣಿ ಪಡೆದುಕೊಳ್ಳುತ್ತಿರುವ ಅಂಚೆ ಕಚೇರಿ ಇತ್ಯಾದಿ ವಿವರಗಳೊಂದಿಗೆ ಜ.24ರೊಳಗೆ ಕಚೇರಿಗೆ ತಲುಪುವ ಹಾಗೆ ಕಳುಹಿಸುವುದು.

ಕುಂದು ಕೊರತೆಗಳನ್ನು ಪೂರ್ತಿ ವಿವರಗಳ ಸಹಿತ ಈ ಮೇಲ್: [email protected] ಗೆ ಸಲ್ಲಿಸಬಹುದು. ಮೋಬೈಲ್ ನಂಬರ್ ಬರೆದರೆ ಉತ್ತಮವೆಂದು ಕಾರವಾರ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಹಿಂದೂ ರಾಷ್ಟ್ರ ಮಾಡುತ್ತೇವೆ ಎನ್ನುವವರು ಮೊದಲು ಹಿಂದೂರಾಷ್ಟ್ರದ ಪರಿಕಲ್ಪನೆ ಪ್ರಸ್ತುತಪಡಿಸಲಿ: ಡಾ.ಖಾಸೀಂ

ಭಾರತವನ್ನು ಹಿಂದೂ ರಾಷ್ಟ್ರ ಮಾಡುವುದಾಗಿ ಹೇಳಿಕೊಳ್ಳುತ್ತಿರುವವರು ಮೊದಲು ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಜನರ ಮುಂದಿಡಲಿ. ...

ಮಳೆಗಾಲದಲ್ಲಿ ರಸ್ತೆಗಳಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಿ : ಉಸ್ತುವಾರಿ ಸಚಿವ ಎಸ್.ಅಂಗಾರ

ಉಡುಪಿ : ಮಳೆಗಾಲದ ಸಂದರ್ಭದಲ್ಲಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಲೋಕೋಪಯೋಗಿ ರಸ್ತೆ, ಜಿಲ್ಲಾ ಪಂಚಾಯತ್ ರಸ್ತೆ, ...