ಕಾರವಾರ: ವಸತಿ ಶಾಲೆಗಳ 8 ಮತ್ತು 9ನೇ ತರಗತಿಗಳಿಗೆ ಅರ್ಜಿ ಆಹ್ವಾನ

Source: S O News service | By I.G. Bhatkali | Published on 7th September 2021, 6:43 PM | Coastal News | Don't Miss |

ಕಾರವಾರ: ಕರ್ನಾಟಕ ವಸತಿ ಸಂಸ್ಥೆಗಳ ಸಂಘದ ಅಧೀನದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ 2021-22 ನೇ ಶೈಕ್ಷಣಿಕ ಸಾಲಿನ 8 ಮತ್ತು 9ನೇ ತರಗತಿಗಳಲ್ಲಿ ಖಾಲಿ ಉಳಿದ ಸೀಟ್‍ಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

2020-21 ರ ಸಾಲಿನಲ್ಲಿ 7 ಮತ್ತು 8 ನೇ ತರಗತಿಯಲ್ಲಿ ವ್ಯಾಸಂಗ ಮಾಡಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಸಮುದಾಯದ ಮತ್ತು ವಿಶೇಷ ವರ್ಗದ ಆಸಕ್ತರು ಜಿಲ್ಲಾ ಸಮಸ್ವಯಾಧಿಕಾಗಳ  [email protected]  ಇ-ಮೇಲ್ ಐಡಿಗೆ ಪಿಡಿಎಸ್‍ನಲ್ಲಿ ವಿವರಗಳು ಹಾಗೂ ಪಾಸ್ ಪೋರ್ಟ್ ಸೈಜ್ ಪೋಟೋ ಅನ್ನು JPEG format  ನಲ್ಲಿ ಸ್ಕಾನ್ ಮಾಡಿ ಸಲ್ಲಿಸಬೇಕು ಅಥವಾ ವಸತಿ ಶಾಲೆಯ ಪ್ರಾಂಶುಪಾಲಯಿಂದ ಅರ್ಜಿ ನಮೂನೆಯನ್ನು ಪಡೆದು ಅಭ್ಯರ್ಥಿಗಳು ಸೆ.14 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8277340393 ನ್ನು ಸಂಪರ್ಕಿಸಬಹುದಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...