ಕಾರವಾರ: ಟೂಲ್ಸ್ ಅಂಡ್ ಡೈ ಟೆಕ್ನಿಷಿಯನ್ ತರಬೇತಿಗೆ ಅರ್ಜಿ ಆಹ್ವಾನ

Source: S O News Service | By I.G. Bhatkali | Published on 31st May 2019, 6:21 PM | Coastal News | Don't Miss |

ಕಾರವಾರ: ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ) ಯು ‘ಟೂಲ್ ಆ್ಯಂಡ್ ಡೈ ಟೆಕ್ನಿಷಿಯನ್’ ತಾಂತ್ರಿಕ ತರಬೇತಿಗೆ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. 

ತರಬೇತಿಯು ಎರಡು ವರ್ಷ ಅವಧಿಯದ್ದಾಗಿದೆ. ಮೊದಲನೆ ವರ್ಷದ ತರಬೇತಿಯಲ್ಲಿ ಟರ್ನರ್, ಮಿಲ್ಲರ್, ಗ್ರೈಂಡರ್, ಫಿಟ್ಟರ್,  ಸಿ.ಎನ್.ಸಿ. ಪೆÇ್ರೀಗ್ರಾಮಿಂಗ್ ಮತ್ತು ಆಪರೇಟರ್ ಟ್ರೇಡುಗಳಲ್ಲಿ ತರಬೇತಿ  ನೀಡಲಾಗುತ್ತದೆ. ಎರಡನೇ ವರ್ಷದ ತರಬೇತಿಯಲ್ಲಿ ಟೂಲ್ ಆ್ಯಂಡ್ ಡೈ ತಯಾರಿಕೆ ತಂತ್ರಜ್ಞಾನವನ್ನು ಕಲಿಸಲಾಗುವುದು. ಜೊತೆಗೆ ಕ್ಯಾಡ್ ಕ್ಯಾಮ್ ತರಬೇತಿ ನೀಡಲಾಗುವುದು.  

ತರಬೇತಿಯ ನಂತರ  ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಆಕರ್ಷಕ ಸಂಬಳದ ಉದ್ಯೋಗ ದೊರಕಿಸಿ ಕೊಡಲಾಗುವುದು. ಜಿಟಿಟಿಸಿಯಲ್ಲಿ ತರಬೇತಿ ಪಡೆದ ತಂತ್ರಜ್ಞರಿಗೆ ದೇಶ-ವಿದೇಶದ ಕೈಗಾರಿಕೆಗಳಲ್ಲಿ ಭಾರೀ ಬೇಡಿಕೆಯಿದ್ದು ಎಸ್.ಎಸ್.ಎಲ್.ಸಿ ಉತ್ತೀರ್ಣ / ಅನುತ್ತೀರ್ಣರಾದ ಅಭ್ಯರ್ಥಿಗಳು ಈ ತರಬೇತಿಗಳಿಗೆ ಪ್ರವೇಶ ಪಡೆಯಬಹುದಾಗಿದೆ. 

ಜಿಟಿಟಿಸಿಯು ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿಕೊಂಡಿದ್ದು, ಸ್ಥಳೀಯ ಕೈಗಾರಿಕೆಗಳಿಗೆ ತಾಂತ್ರಿಕ ಸೇವೆಯನ್ನು ಕೂಡ ಒದಗಿಸುತ್ತಿದೆ. ಈ ಕೋರ್ಸುಗಳಲ್ಲಿ ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ನೇರವಾಗಿ ಆನ್ ಜಾಬ್ ತರಬೇತಿ ನೀಡಲಾಗುವುದು. ಆಸಕ್ತ ವಿದ್ಯಾರ್ಥಿಗಳು ಮತ್ತು ಪಾಲಕರು ಅರ್ಜಿಗಳನ್ನು ಹುಬ್ಬಳ್ಳಿಯ ಗೋಕುಲ ರಸ್ತೆಯ ಕೈಗಾರಿಕಾ ವಸಾಹತುವಿನಲ್ಲಿರುವ ಜಿಟಿಟಿಸಿ ಕೇಂದ್ರದಿಂದ ಪಡೆದು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 10.06.2019 ಹೆಚ್ಚಿನ ಮಾಹಿತಿಗಾಗಿ ದೂರವಾಣಿ: 0836-2333159 ಮತ್ತು  ಮೊಬೈಲ್: 8183860552 ಸಂಪರ್ಕಿಸಲು ಕೋರಲಾಗಿದೆ.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...