ಕಾರವಾರ: ಸ್ಥಳಿಯ ಸಂಸ್ಥೆಗಳು ತಾಜ್ಯ ನಿರ್ವಹಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು : ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಸೂಚನೆ 

Source: varthabhavan | By Arshad Koppa | Published on 27th July 2017, 8:12 AM | Coastal News | Guest Editorial |

ಕಾರವಾರ ಜುಲೈ 26 :  ಸ್ಥಳಿಯ ಸಂಸ್ಥೆಗಳ ಆಯುಕ್ತರು ಮತ್ತು ಮುಖ್ಯಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಯಲ್ಲಿ ಯಾವುದೇ ಕಾರಣಕ್ಕೂ ಪಿ.ಒ.ಪಿ ಅಥವಾ ಕೃತಕ ಬಣ್ಣಗಳಿಂದ ವಿಗ್ರಹಗಳನ್ನು ತಯಾರಿಸಿದಂತೆ ಹಾಗೂ ಜಲಮೂಲಗಳಿಗೆ ವಿಸರ್ಜಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧೀಕಾರಿ ಎಸ್.ಎಸ್.ನಕುಲ ಸೂಚಿಸಿದರು. 

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉತ್ತರ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇನ್ನು ಮುಂದೆ ಸ್ಥಳಿಯ ಸಂಸ್ಥೆಗಳು ಕಡ್ಡಾಯವಾಗಿ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕಾಗಿ ಸಂಗ್ರಹಿಸಬೇಕು ಮತ್ತು ನಾಗರಿಕರಲ್ಲಿ ಒಣ ಕಸ ಮತ್ತು ಹಸಿ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಿ ಕೊಡಬೇಕೆಂಬ ಅರಿವು ಮೂಡಿಸಿ, ಕಸವನ್ನು ವಿಂಗಡಿಸದೇ ಕೊಡುವ ಮನೆಯ ಕಸ ಸಂಗ್ರಹಣೆ ನಿಲ್ಲಿಸಿ, ಮತ್ತು ಖಾಲಿ ನಿವೇಶನಗಳಲ್ಲಿ ಕಸವನ್ನು ಎಸೆಯುವರಿಂದ ದಂಡ ವಸೂಲಿ ಮಾಡಿ ಎಂದು ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಹೇಳಿದರು. 
  ಕಸ ಸಂಗ್ರಹಣೆ ಮಾಡುವ ವಾಹನಗಳ ಮೇಲೆ ದೂರವಾಣ  ಸಂಖ್ಯೆ ಮತ್ತು ಡ್ರೈವರ್ ಹೆಸರನ್ನು ಬರೆದು ನಾಗರಿಕರಿಗೆ ಕಾಣುವಂತೆ ಮಾಡಬೇಕು, ಗಾಡಿಗಳಲ್ಲಿ ಒಣ ಕಸ ಹಾಕಲು ಬ್ಯಾಗಗಳನ್ನು ಹಾಕಿ, ಕಸ ಸಂಗ್ರಹಣೆ ವಾಹನಗಳಿಗೆ ಟಾರ್ಪೇಟ್ ಹಾಕಿ ಕಸ ರಸ್ತೆಗಳಲ್ಲಿ ಚೆಲ್ಲದಂತೆ ಮಾಡತಕ್ಕದ್ದು, ಪೌರ ಕಾರ್ಮಿಕರಿಗೆ ಗ್ಲೌಸ್ ಮತ್ತು ಬೂಟುಗಳನ್ನು ಕಡ್ಡಾಯವಾಗಿ ಕೊಟ್ಟು ಅವರು ಹಾಕಿಕೊಳ್ಳುವಂತೆ ನೋಡಿಕೊಳ್ಳಿ  ಎಂದು ಅವರು ಅಧಿಕಾರಿಗಳಿಗೆ ಸೂಚಿದರು. 
 ಪ್ರತಿದಿನ ಶೇಖರಿಸಲಾದ ಹಸಿ ಕಸವನ್ನು ಗೊಬ್ಬರಕ್ಕಾಗಿ ಶೇಖರಿಸಿ ಇಡಲಾಗಿದೆ. 45 ದಿನಗಳ ನಂತರ ಗೊಬ್ಬರವನ್ನು ಪರೀಕ್ಷಿಸಲಾಗುವದು. ಘನ ತಾಜ್ಯ ಸಂಗ್ರಹಣೆ ಕೇಂದ್ರದಲ್ಲಿ(ಡಂಪಿಂಗ್ ಯಾರ್ಡ) 8 ಜನ ಕಾರ್ಮಿಕರನ್ನು ಈಗಾಗಲೇ ನೇಮಿಸಿದ್ದು ತಾಜ್ಯ ಬೇರ್ಪಡಿಸಿ ಗೊಬ್ಬರ ತಯಾರಿಸುವ ಕಾರ್ಯ ಆರಂಭಿಸಲಾಗಿದೆ ಮತ್ತು ಮಳೆಗಾಲ ಇರುವದರಿಂದ ಹಸಿ ತಾಜ್ಯ ಸಂಗ್ರಹಣೆ ಬಗ್ಗೆ ವಿಮಡ್ರೋ ಪ್ಲಾಟಫಾರ್ಮ ಮೇಲ್ಗಡೆಯಲ್ಲಿ ಕಟ್ಟೆಯನ್ನು ಕಟ್ಟಿ ಕಟ್ಟಿ ಹಸಿ ಕಸವನ್ನು ಸಂಗ್ರಹಿಸಿ ಗೊಬ್ಬರ ತಯಾರಿಕೆ ಪ್ರಾರಂಭಿಸಲಾಗಿದೆ ಎಂದು ಕಾರವಾರ ನಗರಸಭೆ ಎನ್ವೈರಮೆಂಟ್ ಇಂಜನೀಯರ ವಿವರಿಸಿದರು. 
ವಾರ್ಡ ಕಮಿಟಿಗಳನ್ನು ಮಾಡುವಾಗ ಶೇ. 50 ಕಿಂತ ಹೆಚ್ಚು ಮಹಿಳಾ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬೇಕು ಮತ್ತು ಪ್ರತಿ ವಾರ ಸಭೆ ಕರೆಯಬೇಕು ಜನರನ್ನು ವಿಶ್ವಾಸಕ್ಕೆ ತೆಗೆದುಕೊಮಡು ಅವರೂ ಸ್ವಚ್ಚತೆಲ್ಲಿ ಬಾಗವಹಿಸುವಂತೆ ಮಾಡಬೇಕು ಮತ್ತು ಎಲ್ಲರೂ ಒಟ್ಟಾಗಿ ಕೇಲಸ ಮಾಡಿದಾಗ ಮಾತ್ರ ನಗರ ನೈರ್ಮಲ್ಯ ಮಾಉವ ಕೆಲಸ ಯಶಶ್ವಿಯಾಗುತ್ತದೆ ಎಂದು ಡಿ.ಯು.ಡಿ.ಸಿ ಅಸಿಸ್ಟಂಟ್ ಎಕ್ಸಿಕ್ಯೂಟಿವ ಇಂಜನೀಯರ ಆರ್. ಪಿ.ನಾಯ್ಕ್ ಅಭಿಪ್ರಾಯ ವ್ಯಕ್ತಪಡಿಸಿದರು. 
 ಡಿ.ಯು.ಡಿ.ಸಿ ಎಕ್ಸಿಕ್ಯೂಟಿವ ಇಂಜನೀಯರ್ ಎಸ್. ವಿರಕ್ತಮಠ ಮತ್ತು ಜಿಲ್ಲೆಯ ಎಲ್ಲಾ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...