ಕಾಬೂಲ್ ನಿಂದ ಸುರಕ್ಷಿತವಾಗಿ ವಾಪಸ್ ಬಂದ ಕಾರವಾರದ ರಾಜೇಶ. ಕುಟುಂಬದವರಲ್ಲಿ ಸಂತಸ.

Source: SO News | By Laxmi Tanaya | Published on 24th August 2021, 10:25 PM | Coastal News | Don't Miss |

ಕಾರವಾರ :  ಆಪ್ಘಾನಿಸ್ಥಾನದ ಕಾಬೂಲ್ ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಮಂದಿ ಒಬ್ನೊಬ್ಬರೇ ತಾಯ್ನಾಡು ಸೇರುತ್ತಿದ್ದಾರೆ. ಕಾರವಾರ ತಾಲೂಕಿನ ಸದಾಶಿವಗಢದ ತಾರೀವಾಡದ ನಿವಾಸಿ ರಾಜೇಶ ಪಡುವಳಕರ ಎಂಬುವವರು ಸುರಕ್ಷಿತವಾಗಿ ಮನೆ ತಲುಪಿದ್ದಾರೆ.

ಅಗಸ್ಟ್ 15ರ ಸಂದರ್ಭದಲ್ಲಿ ತಾಲಿಬಾನಿಯನ್ನರು ಆಪ್ಘಾನ್ ನ ಕಾಬೂಲ್ ಅಕ್ರಮ ಪ್ರವೇಶ ಮಾಡಿದಾಗ ಭೀಕರ ಪರಿಸ್ಥಿತಿ ನಿರ್ಮಾಣವಾಗಿತ್ತು. 
ತಾಲಿಬಾನಿಯನ್ನರ ಅಟ್ಟಹಾಸಕ್ಕೆ  ಅಲ್ಲಿ ಕೆಲಸ ಮಾಡುತ್ತಿದ್ದ  ಉದ್ಯೋಗಿಗಳು ನಲುಗಿದ್ದರು.

ಅಮೇರಿಕಾ ಮೂಲದ ಎಕ್ಲಾಬ್ ಕಂಪನಿಯಲ್ಲಿ  ರಾಜೇಶ ಕೆಲಸದಲ್ಲಿದ್ದರು. ಯುಎಸ್ ಆರ್ಮಿಯವರು ಕೂಡಲೇ ಕಂಪನಿ ಬಂದ್ ಮಾಡಿ ತೆರಳಿ ಎಂದಾಗ ಎಲ್ಲರಲ್ಲೂ ಆತಂಕ ಉಂಟಾಗಿತ್ತು. ಎಕ್ಲಬ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು  800 ಉದ್ಯೋಗಿಗಳಲ್ಲಿ ಬಹುತೇಕ ಭಾರತೀಯರಿದ್ದರು. 

ಅತ್ತ ವಿಮಾನ ನಿಲ್ದಾಣಕ್ಕೆ ಹೋದಾಗ ಸ್ಥಳೀಯರೇ ತುಂಬಿ ಹೋಗಿದ್ದರು. ಆದ್ರೆ ಅಮೇರಿಕಾ ಕಂಪನಿಯಾಗಿದ್ದರಿಂದ ಎಲ್ಲರಿಗೂ ಯುಎಸ್ ಆರ್ಮಿ ಭದ್ರತೆ ನೀಡಿತ್ತು. 

ಅಗಸ್ಟ್  17ರಂದು ಕಾಬೂಲ್‌‌ನಿಂದ ಏರ್‌ಲಿಫ್ಟ್ ಮೂಲಕ ರಾಜೇಶ ಸೇರಿದಂತೆ ಹಲವಾರು ಭಾರತೀಯರನ್ನ ಕತಾರಗೆ  ಕಳಿಸಲಾಯಿತು. ನೇಪಾಳ, ಸಿಂಗಾಪುರ,  ಸೇರಿದಂತೆ ನಮ್ಮ ಭಾರತದ ಹರ್ಯಾಣ, ಕೇರಳ, ಕರ್ನಾಟಕ ಸೇರಿದಂತೆ ಹಲವು ಉದ್ಯೋಗಿಗಳಿದ್ದರು.  ರಾಜೇಶ ಕತಾರಗೆ ಬಂದಿಳಿದಾಗ   ಇವರ ಜೊತೆ ಇರುವ ಎಲ್ಲರೂ ಕೂಡ ನಿಟ್ಟುಸಿರು ಬಿಟ್ಟರು. ಅಲ್ಲಿಂದ ದೆಹಲಿ, ಮುಂಬೈ ಮೂಲಕ ಗೋವಾಕ್ಕೆ ಬಂದು ಈಗ ರಾಜೇಶ ಕಾರವಾರದಲ್ಲಿರುವ ಮನೆವತಲುಪಿದ್ದಾರೆ

  ತಮ್ಮನ್ನ ಕರೆತರಲು ಶತಪ್ರಯತ್ನ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ರಾಜೇಶ ಧನ್ಯವಾದಗಳನ್ನ ಸಲ್ಲಿಸಿದ್ದಾರೆ. ರಾಜೇಶ ಆಗಮನದಿಂದಾಗಿ ಕುಟುಂಬದವರು ಸಂತಸಗೊಂಡಿದ್ದಾರೆ

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...