ಕಾರವಾರ:ಸೆಕೆಂಡರಿ ಹೈಸ್ಕೂಲ್‍ನಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆ

Source: varthabhavan | By Arshad Koppa | Published on 11th August 2017, 8:55 AM | Coastal News | Special Report | Guest Editorial |

ಕಾರವಾರ, ಆ ೧೧:ದಿನಾಂಕ 10.08.2017ರಂದು ಕರ್ನಾಟಕ ರಾಜ್ಯ ಅರಣ್ಯ ವಿಭಾಗ ಹೊನ್ನಾವರ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಬೆಂಗಳೂರು, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ ಬೆಂಗಳೂರು, ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ಕುಮಟಾ, ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರ ಕಾರವಾರ ಹಾಗೂ ಸ್ಪಂದನಾ ಫೌಂಡೇಶನ್ ಇವರ ಸಹಯೋಗದಲ್ಲಿ ಅಂತರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆಯನ್ನು ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ, ಕುಮಟಾದಲ್ಲಿ ಬೆಳಿಗ್ಗೆ 10.30ಕ್ಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಶ್ರೀ. ಕೆ. ವಿ. ವಸಂತ ರೆಡ್ಡಿಭಾ.ಅ.ಸೇ. ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಹೊನ್ನಾವರ ವಿಭಾಗ, ಉತ್ತರ ಕನ್ನಡ ಇವರು ಉದ್ಘಾಟಕರಾಗಿ ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿದ್ಯಾರ್ಥಿಗಳು ಗಿಡ ನೆಟ್ಟರು. ತದ ನಂತರ ವಲಯ ಅರಣ್ಯಾಧಿಕಾರಿಯಾದ ಶ್ರೀ. ಮೋಹನ ಬಿದ್ರೆಯವರು ಬೀಜದ ಉಂಡೆ ಮಾಡುವುದನ್ನು ವಿದ್ಯಾಥಿಗಳಿಗೆ ಹೇಳಿಕೊಟ್ಟರು. ಅದರಂತೆಯೇ ವಿದ್ಯಾರ್ಥಿಗಳು ಬೀಜದ ಉಂಡೆಯನ್ನು ಮಾಡಿದರು. 
ವೃಕ್ಷೋ ರಕ್ಷತಿ ರಕ್ಷಿತಃ. ಮಾನವ ಪ್ರಕೃತಿಯ ಕೂಸು ಅನುಭವದ ಮಾತಿದು. ಈ ಸ್ಥಾನ ಪ್ರಾಪ್ತವಾಗುವುದು ಅವನ ಮಾನವತೆಯಿಂದಲ್ಲ ಬದಲಾಗಿ ಪರಿಸರದ ಕೊಡುಗೆಯಿಂದ. ನಾವೆಲ್ಲ ಪರಿಸರದ ಮಕ್ಕಳು ಎಂಬುದು ನಿಜವಾದರೆ ಬೇರೆಯವರನ್ನು ಬಯುವ ಪ್ರಶ್ನೆಯೇ ಇಲ್ಲ. ಮಾತಿಗಿಂತ ಕೃತಿ ಮೇಲು. ಅದಕ್ಕಾಗಿ ಕಾಡು ಬೆಳೆಸುವುದು ನೈರ್ಮಲ್ಯ ಕಾಪಾಡುವುದು ಹೀಗೆ ಯಾವೆಲ್ಲ ಕ್ರಮ ಅಗತ್ಯವಿದೆಯೋ ಅವೆಲ್ಲವನ್ನು ವಿದ್ಯಾರ್ಥಿಗಳು , ಯುವಕರು, ಹಿರಿಯರ ಮಾರ್ಗದರ್ಶನದಲ್ಲಿ ಕೈಗೊಳ್ಳಬೇಕಾಗಿದೆ ಅಂದಾಗ ವನಮಹೋತ್ಸವ, ಜೈವಿಕ ಇಂಧನ ದಿನಾಚರಣೆ ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗುವುದು ಎಂದು ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ. ಕೆ. ವಿ. ವಸಂತರೆಡ್ಡಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೈಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷರಾದ ಹೊನ್ನಪ್ಪ ನಾಯಕ ಮಾತನಾಡಿ ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಜೈವಿಕ ಇಂಧನ ರಾಷ್ಟ್ರದ ಇಂಧನ ಸಮಸ್ಯೆ ಬಗೆಹರಿಸಬಲ್ಲ ಏಕೈಕ ಆಶಾಕಿರಣವಾಗಿದೆ. ಈ ಪರಿಸರ ಕಾಪಾಡುವ ಗುರುತುವ ಜವಾಬ್ದಾರಿ ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳ ಮೇಲಿದೆ ಎಂದರು.
 ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಈ ಕಾರ್ಯಕ್ರಮದ ಸಂಘಟಕರೂ ಆದ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಮತ್ತು ಪ್ರಾತ್ಯಕ್ಷಿಕಾ ಕೇಂದ್ರದ ಸಂಯೋೀಜಕರಾದ ಡಾ. ವಿ. ಎನ್. ನಾಯಕ ಜೈವಿಕ ಇಂಧನದ ಅಗತ್ಯತೆ ಕುರಿತು ಮಾತನಾಡಿ ಈ ಲೋಕ ನಾಶವಾಗಬೇಕೇ ಹೊರತು ನರಕವಾಗಬಾರದು ಎಂದಾದರೆ ಬನ್ನಿ ಎಲ್ಲರೂ ಪರಿಸರ ರಕ್ಷಿಸೋಣ ಎಂದರು.
ಆಶ್ರಯ ಫೌಂಡೇಶನ್ ಅಧ್ಯಕ್ಷರಾದ ರಾಜೀವ ಗಾಂವಕರ ಮಾತನಾಡಿ ಈ ಪರಿಸರದಲ್ಲಿ ಅಂದ ಉಂಟು, ಚಂದ ಉಂಟು, ಅಮರತ್ವವೂ ಉಂಟು. ಸಸ್ಯಗಳು ದ್ಯುತಿ ಸಂಶ್ಲೇಶಣೆಯ ಮೂಲಕ ಮಾನವನಿಗೆ ಹೇರಳವಾಗಿ ಆಮ್ಲಜನಕ ನೀಡಿದೆ ಅದಕ್ಕಗಿ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದರು.
ಹಿರೇಗುತ್ತಿ ವಲಯ ಅರಣ್ಯಾಧಿಕಾರಿ ಮೋಹನ ಬಿದರಿ ಮತನಾಡಿ ಕಾಲಕಾಲಕ್ಕೆ ಮಳೆಯಾಗಲಿ, ಪ್ರಥ್ವಿಯಲ್ಲಿ ಸಸ್ಯಗಳು ಕಂಗೊಳಿಸಲು ಮಳೆ  ಅತೀ ಅವಶ್ಯವಾಗಿರುತ್ತದೆ ಹಾಗಾಗಿ ನಾವು ಪರಿಸರದಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡಬೇಕೆಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ ಬಿ. ಕೆರೆಮನೆ ಮಾತನಾಡಿ ಜೈವಿಕ ಇಂಧನ ಚಿರಂತನ, ಜೈವಿಕ ಇಂಧನ ಭವಿಷ್ಯತ್ತಿನ ಇಂಧನ. ಡಿಸೇಲ್ ಪೆಟ್ರೋಲ್ ಎಷ್ಟು ದಿನ? ಎಂಬಂತೆ ಇಂಧನಗಳು ಬರಿದಾಗುತ್ತಿರುವ ಸಮಯದಲ್ಲಿ ಪರ್ಯಾಯ ಇಂಧನವಾದ ಜೈವಿಕ ಇಂಧನ ಬಳಸಲು ಹೆಚ್ಚು ಉಸ್ತುಕರಾಗಬೇಕೆಂದರು.


ನನೀಲೆಶ್ವರ ಗಾರ್ಮೆಂಟ್ ಎಂ.ಡಿ ಚಂದ್ರಶೇಖರ ಮಾತನಾಡಿ ಶಾಲಾ ಕಾಲೇಜಿನಲ್ಲಿ ಪರಿಸರದ ಅಗತ್ಯತೆ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಜೈವಿಕ ಇಂಧನ ಕಾರ್ಯಕ್ರಮ ಹಮ್ಮಿಕೋಳ್ಳಲಾಗುತ್ತದೆ. ಮನುಷ್ಯನ ಸ್ವಯಂಕೃತ ಅಪರಾಧದಿಂದ ಮನುಷ್ಯನು ನಾಶವಾಗುತ್ತದೆ ಎಂದರು.
ಮುಖ್ಯಾಧ್ಯಾಪಕರಾದ ರೋಹಿದಾಸ ಎಸ್. ಗಾಂವಕಾರ ಮಾತನಾಡಿ ಕಾಲೇ ವರ್ಷತು ಪರಜನ್ಯ-ಪ್ರಥಿವಿ. ಸಸ್ಯಶಾಲಿನಿ ದೇಶೋಯಂ ಕ್ಷೋಬರಹಿತ ಸಜ್ಜನಾತಂತು ನಿರ್ಭಯ ಎಂದರು.
ಆರೋಗ್ಯ ಸಹಾಯಕ ಅಧಿಕಾರಿ ವಿ.ಪಿ. ಪಟಗಾರ ಮಾತನಾಡಿ 1ರಿಂದ 19 ವರ್ಷದ ಎಲ್ಲಾ ಮಕ್ಕಳಿಗೆ ಜಂತು ಹುಳು ನಿವಾರಣಾ ಮಾತ್ರೆ ನೀಡಿ ಮಕ್ಕಳಲ್ಲಿ ಅರೋಗ್ಯ ಪೌಷ್ಟಿಕತೆ ಹೆಚ್ಚಿಸಿ ಶಿಕ್ಷಣ ಮತ್ತು ಜೀವನದಲ್ಲಿ ಗುಣಮಟ್ಟ ಹೆಚ್ಚಿಸಲು ಈ ಮಾತ್ರೆ ಅವಶ್ಯಕ ಎಂದರು.
ಎನ್. ರಾಮು . ಹಿರೇಗುತ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರದ ವೇದಿಕೆಯಲ್ಲಿ ನಾಗರಾಜ ಹಿತ್ತಲಮಕ್ಕಿ, ಪ್ರೇಮಾನಂದ ಗಾಂವಕರ ಪ. ಪೂ. ಪಾಂ್ರಶುಪಾಲರು, ಪ್ರದೀಪ ನಾಯ್ಕ ಅರಣ್ಯ ಇಲಾಖೆ ಸಿಬ್ಬಂದಿ, ವಿಜ್ಞಾನ ಕೇಂದ್ರದ ಸಿಬ್ಬಂದಿ, ಶಿಕ್ಷಕವೃಂದ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸ್ನೇಹ ಕಾಮತ ಸರ್ವರನ್ನಯ ಸ್ವಾಗತಿಸಿದಳು. ಅರ್ಪಿತಾ ಕಾರ್ಯಕ್ರಮ ನಿರೂಪಣೆ ಮಾಡಿದಳು. ವಿದ್ಯಾರ್ಥಿ ಪ್ರತಿನಿಧಿ ಸೌರಭ ನಾಯಕ ವಂದಿಸಿದನು.   

Read These Next

ಭಟ್ಕಳ ಸೆಂಟ್ರಲ್ ಫತ್ರ್ ಕಮಿಟಿ ವತಿಯಿಂದ ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...