ಕಾರವಾರ: ಅಂತರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

Source: S O News service | By I.G. Bhatkali | Published on 7th September 2021, 7:18 PM | Coastal News |

ಕಾರವಾರ: ಮನಸ್ಸು ಸರಿಯಾಗಿದ್ದರೆ ಆಲೋಚನೆಗಳು  ಸರಿಯಾಗಿರುತ್ತವೆ, ವೈದ್ಯ ವೃತ್ತಿಯು ನಿರಂತರ ಅಧ್ಯಯನವಾಗಿದ್ದು, ಆತ್ಮಹತ್ಯೆ ತಡೆಗಟ್ಟುವಲ್ಲಿ ಹೊಸ ರೂಪುರೇಶೆಗಳನ್ನು ರೂಪಿಸಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಸಿ. ರಾಜಶೇಖರ ಹೇಳಿದರು.

ಜಿಲ್ಲಾ ಆಡಳಿತ, ಜಿಲ್ಲಾಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರಕ್ಷಕ,  ಶಿಕ್ಷಣ, ಕಾರಾಗ್ರಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಕಾರವಾರ ಇವರ ಆಶ್ರ್ರಯದಲ್ಲಿ ಅಂತರಾಷ್ಟ್ರೀಯ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆಯ ಅಂಗವಾಗಿ ಕಿಮ್ಸ್‍ನ ಸಭಾಂಗಣದಲ್ಲಿ ಸೆ. 10ರ ಬದಲಾಗಿ ಮುಂಚಿತವಾಗಿ ಮಂಗಳವಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಆತ್ಮಹತ್ಯೆ ಪ್ರಕರಣಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇದರ ಕುರಿತು ವೈದ್ಯರು ಮತ್ತು ಮನೋತಜ್ಞರು ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಆತ್ಯಹತ್ಯೆ ಪ್ರಕರಣಗಳನ್ನು ತಡೆÀಗಟ್ಟುವಲ್ಲಿ ನಿಮ್ಮ ಪಾತ್ರ ಮಹತ್ವದ್ದು ಎಂದರು. 

ಮನುಷ್ಯ ಜೀವನ ಎನ್ನುವುದು ಸುಲಭವಾಗಿ ದೊರೆತಿರುವುದಿಲ್ಲ, ದೊರೆದ ಜೀವನವನ್ನು ನಮ್ಮ ಕೈಯಿಂದ ನಾವು ಹಾಳು ಮಾಡಿಕೊಳ್ಳಬಾರದು, ಇತ್ತೀಚಿನ ದಿನಗಳಲ್ಲಿ ಸಮಸ್ಯೆ ಎದುರಿಸುವ ಸಾಮಥ್ರ್ಯ ಇಲ್ಲದೇ ಆತ್ಮಹತ್ಯೆ ಮಾಡಿಕೊಳ್ಳವವರ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯಕೀಯ ವಿದ್ಯಾರ್ಥಿಗಳು  ಈ ನಿಟ್ಟಿನಲ್ಲಿ ಸಮಾಜ ಮುಖಿಗಳಾಗಿ ಕಾರ್ಯನಿರ್ವಹಿಸಬೇಕಾಗಿದೆ. ಯೋಗ, ಧ್ಯಾನ ಮತ್ತು ಒಳ್ಳೆಯ ಸಂಸ್ಕತಿಯನ್ನು ರೂಡಿಸಿಕೊಳ್ಳುವ ಮೂಲಕ ಆತ್ಮಹತ್ಯೆ ಆಲೋಚನೆಗಳಿಂದ ದೂರವಾಗಿರಬಹುದು ಎಂದು ಹಿರಿಯ ಸಿವಿಲ್ ನ್ಯಾಯ್ಯಾಧೀಶ ಮತ್ತು ಜಿಲ್ಲಾ ಕಾನೂನುಗಳ ಸದಸ್ಯ ಕಾರ್ಯದರ್ಶಿ ಎಸ್.ಸಂತೋಷ್ ಕುಮಾರ ಶೆಟ್ಟಿ ಮಾತನಾಡಿದರು.

ಜೀವನದಲ್ಲಿ ಎಲ್ಲಾ ವಿಷಯಕ್ಕು ವಿಚಾರಕ್ಕೂ ಎರಡನೇ ಆಯ್ಕೆ ಮತ್ತು ಅವಕಾಶ ಇರುತ್ತದೆ ಆದರೆ ಎರಡನೇ ಸಲ ಜೀವ ಪಡೆಯಲು ಸಾಧ್ಯವಿಲ್ಲ, ಆತ್ಮಹತ್ಯೆ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ ಎಂದು ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಧೀಕ್ಷಕ ಡಾ.ಶಿವಾನಂದ ಪಿ. ಅಭಿಪ್ರಾಯಪಟ್ಟರು.

ಪ್ರತಿ ವರ್ಷ ಜಗತ್ತಿನಲ್ಲಿ 7 ಲಕ್ಷದಷ್ಟು ಆತ್ಮಹತ್ಯೆ ಪ್ರಕರಣಗಳು ಕಂಡುಬರುತ್ತವೆ, ಆತ್ಮಹತ್ಯೆಗೆ ನಿಖರ ಕಾರಣ ಗುರುತಿಸಲಾಗುವುದಿಲ್ಲಾ. 15 ರಿಂದ 29 ವಯಸ್ಸಿನವರಲ್ಲಿ ಹೆಚ್ಚಾಗಿ ಪ್ರಕಣಗಳು ದಾಖಲಾಗುತ್ತವೆ. ಮಾನಸಿಕ ತೊಂದರೆಗಳ ಆದರೆ ಮಾತಾಡಿ, ಮನೋವೈದ್ಯನ್ನು ಬೇಟಿಮಾಡುವುದು ಬಹುಮುಖ್ಯ. ಆತ್ಮಹತ್ಯೆ ವಂಶ ಪಾರಂಪರಿಕಾಗುವ ಸಾಧ್ಯತೆಗಳು ಇವೇ, ಇದನ್ನು ತಡೆಗಟ್ಟುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ ಎಂದರು. 

ಕಾರ್ಯಕ್ರಮದಲ್ಲಿ ಆತ್ಮಹತ್ಯೆ ತಡೆಗುಟ್ಟುವ ಕುರಿತಾದ ಹಸ್ತಪ್ರತಿಗಳನ್ನು ಬಿಡುಗಡೆ ಮಾಡಲಾಯಿತು. ವೈದ್ಯಕೀಯ ವಿದ್ಯಾರ್ಥಿಗಳು ಕಿರು ನಾಟಕವನ್ನು ಪ್ರದರ್ಶಿಸಿದರು ಹಾಗೂ ಆತ್ಮಹತ್ಯೆ ತಡೆಗಟ್ಟುವ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಫರ್ಧೆಯ ವಿಜೇತÀ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ ಶರದ್ ನಾಯ್ಕ್, ಕಾರವಾರ ಕಿಮ್ಸ್ ಸಿ.ಇ.ಓ ಅಪೇಕ್ಷಾ ಪವರ್, ಕಾರವಾರ ವೈದ್ಯಕೀಯ ಸಂಸ್ಥೆಯ ನಿರ್ದೇಶಕ ಡಾ. ಗಜಾನನ್ ನಾಯ್ಕ್, ಡಿವೈಎಸ್‍ಪಿ ಅರವಿಂದ್ ಕಲಬುಜ್ಜಿ,  ಆರ್‍ಎಮ್‍ಓ ಡಾ.ವೆಂಕಟೆಶ್ ಆಡಳಿತ ಸಿಬಂದ್ದಿ, ಮೆಡಿಕಲ್ ವಿದ್ಯಾರ್ಥಿಗಳು, ಪೋಲಿಸ್ ಸಿಬಂದ್ದಿಗಳು ಉಪಸ್ಥಿತರಿದ್ದರು. 

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...