ಕಾರವಾರ: ಮೇರಾ ಭಾರತ ದೇಶ್ ಮಹಾನ್-ವಿಶೇಷ ಲೇಖನ

Source: jagadish | By Arshad Koppa | Published on 12th August 2017, 8:36 AM | Guest Editorial | Coastal News |


71ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು. ನಾವೀಗ 71ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಬ್ರಿಟಿಷರ ಕಪಿ ಮುಷ್ಠಿಯಿಂದ ಭಾರತ ಬಿಟುಗಡೆ ಪಡೆದಿದ್ದರೂ, ಎಲ್ಲೆಲ್ಲೂ ನಡೆಯುತ್ತಿರುವ ಭ್ರಷ್ಟಾಚಾರ, ಭಯೋತ್ಪಾದನೆ, ಚಿಕ್ಕಮಕ್ಕಳು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ ವಂಚನೆ, ನಮ್ಮ ದೇಶದ ಬೆನ್ನಲಬು ಆದ ರೈತರ ಸಮೂಹಿಕ ಆತ್ಮಹತ್ಯೆಗಳು, ಬಡವರಿಗೆ ಹೊಟ್ಟೆಗೆ ಆಹಾರವಿಲ್ಲ, ವಾಸಿಸಲು ಮನೆಗಳಿಲ್ಲಾ ಆದ್ದರಿಂದ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಭ್ರಷ್ಟಾಚಾರವನ್ನು ನಿಗ್ರಹಿಸುವ ಸಂಸ್ಥೆ ಲೋಕಾಯುಕ್ತರಿಂದಲೇ ಭ್ರಷ್ಟಾಚಾರ, ಪ್ರಜೆಗಳಿಗೆ ರಕ್ಷಣೆ ನಿಡುವ ಆರಕ್ಷಕರಿಗೆ ರಕ್ಷಣೆ ಇಲ್ಲ, ಜೀವಿಸಲು ಮುಖ್ಯವಾಗಿ ಬೇಕಾದ್ದದು ನೀರು, ನೀರು ಕೇಳಿದರೆ ಲಾಠಿ ಏಟು.


    ದೇಶಕ್ಕಾಗಿ ತಮ್ಮ ಪ್ರಾಣವನ್ನೆ ಮುಡಿಪಾದ ಸೈನಿಕರ ಶವಪೆಟ್ಟಿಗೆಯಲ್ಲಿಯು ಭ್ರಷ್ಟಾಚಾರ, ಸೈನಿಕರಿಗೆ ನೀಡುವ ಆಹರದಲ್ಲಿಯು ಭ್ರಷ್ಟಾಚಾರ. “ಆಡು ಮುಟ್ಟದ ಗಿಡವಿಲ್ಲ” ಹಾಗೆ ನಮ್ಮ ದೇಶದಲ್ಲಿ ಲಂಚ ಸ್ವಿಕರಿಸದೆ ಇರುವ ಇಲಾಖೆಗಳಿಲ್ಲ. ಇಂತಹ ಮಹಾನ ಭಾರತ ದೇಶದ ಪ್ರಜೆಗಳು ನಾವು. ಮೇಲಿನ ವಿಷಯವನ್ನು ನಾವು ಗಮನಿಸಿದರೆ ಸ್ವಾತಂತ್ರ್ಯ ಎಲ್ಲಿದೆ, ಯಾರಿಗೆ ಬಂತು ಎಂಬ ಪ್ರಶ್ನೆ ಏಳುವುದು ಸಹಜ.
    ಬ್ರಿಟಿಷರ ಕಪಿ ಮುಷ್ಠಿಯಿಂದ ಭಾರತದ ಪ್ರಜೆಗಳು ಬಿಡುಗಡೆ ಪಡೆದರೂ ಸಹ ಕಳೆದ 71 ವರ್ಷಗಳಲ್ಲಿ ಭ್ರಷ್ಟರು, ಭ್ರಷ್ಟ ಗುಂಡಾ ರಾಜಕಾರಣ ಗಳು ಭಾರತದ ಪ್ರಜೆಗಳನ್ನು ತಮ್ಮ ಕಪಿ ಮುಷ್ಠಿಯಲ್ಲಿ ಹಿಡಿದಿಟ್ಟಿದ್ದಾರೆ. ಇವರ ನಮ್ಮ ಭಾರತಿಯ ಬ್ರಿಟಿಷರು. ಇಗ ನಾವು ಮತ್ತೆ ಭಾರತಿಯ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯ ಬೇಕಾಗಿದೆ. ಆದ್ದರಿಂದ ಆದಷ್ಟು ಬೇಗನೆ “ಭಾರತೀಯ ಬ್ರಿಟಿಷರೆ ಭಾರತವನ್ನು ಬಿಟ್ಟು ತೊಲಗಿ” ಎಂದು ಸತ್ಯಾಗ್ರಹ ಮಾಡುವ ಸಮಯ ದೂರವಿಲ್ಲ.
    ಪ್ರಜಾಪ್ರಭುತ್ವದಲ್ಲಿ ಜನಸೇವೆ ಮಾಡಲು ಜನಪ್ರತಿನಿಧಿಗಳಿರಬೇಕೆಂದು ಮೂಲ ಕಳಕಳಿ. ಆದರೆ ಇಂದು ಈ ವ್ಯವಸ್ಥೆಯನ್ನು ಸ್ವಾರ್ಥಿಗಳು ಹೇಗೆ ಹೈಜಾಕ್ ಮಾಡಿದ್ದಾರೆ ಮತ್ತು ಆ ಮೂಲಕ ಜನರ ಸ್ವಾತಂತ್ರ್ಯ ಹೇಗೆ ಹರಣವಾಗಿದೆ ಎಂಬುದನ್ನು ವಿವರಿಸಿ ಹೇಳಬೇಕಾಗಿಲ್ಲ. ಧರ್ಮವಿರುವುದು ಜನರನ್ನು  ಸನ್ಮಾರ್ಗದಲ್ಲಿ ನಡೆಸುವುದಕ್ಕೆ ಆದರೆ ಧಾರ್ಮಿಕ ನಾಯಕರೆನಿಸಿಕೊಂಡವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಅನುಯಾಯಿಗಳ ಸ್ವಾತಂತ್ರ್ಯ ಹರಣ ಮಾಡುತ್ತಾರೆ. ಇಂದಿನ ವ್ಯವಸ್ಥೆಯಲ್ಲಿ ನಾನು ಪ್ರಾಮಾಣ ಕನಾಗಿರುತ್ತೆನೆ, ಸರಿಯಾದ ನ್ಯಾಯಯುತ ಮಾರ್ಗದಲ್ಲಿ ನಡೆಯುತ್ತೇನೆ, ಬದುಕುತ್ತೇನೆ ಎಂಬುದು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗಿದೆ. ಇವನ್ನೆಲ್ಲ ನೋಡಿದ ಬಳಿಕ ನಾವು ಸ್ವತಂತ್ರವಾಗಿದ್ದೇವೆ ಎಂದು ಅನಿಸುತ್ತದೆಯೇ? ಸತ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ಸಿಗದ ಹೊರತು ಸ್ವಾತಂತ್ರ್ಯ ಸಂಪೂರ್ಣವಲ್ಲ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ನಾವು ಸ್ವತಂತ್ರ ಭಾರತದ ಪ್ರಜೆಗಳು ಎಂದು ಸಂಶಯ ಬರುತ್ತದೆ.
    ಅದೇನೇ ಇರಲಿ “ಮೇರಾ ಭಾರತ ದೇಶ ಮಹಾನ” ಭಾರತ ಸ್ವಾತಂತ್ರ್ಯ ಪಡೆಯುವಲ್ಲಿ ನಮ್ಮ ಹಿರಿಯರ ಹೋರಾಟ ಅನನ್ಯ. ಭಾರತದ 71ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಭಾರತ ಸ್ವಾತಂತ್ರ್ಯ ಸಂಗ್ರಾಮದ ಕಿರು ಪರಿಚರ ಇಲ್ಲಿದೆ.
    ಭಾರತದ ಸ್ವಾತಂತ್ರ್ಯ ಚಳುವಳಿ ಎಂದರೆ ಬ್ರಿಟಿಷ್ ಸಾಮ್ರಾಜ್ಯದಿಂದ ಸ್ವಾತಂತ್ರ್ಯವನ್ನು ಪಡೆಯಲು ಭಾರತೀಯರು ನಡೆಸಿದ ಹೋರಾಟ. ಇದನ್ನು 1857 ರಿಂದ 1947ರ ಅಗಷ್ಟ 15 ವರೆಗೆ ನಡೆದ ಭಾರತದ ವಿವಿಧ ಸಂಘ ಸಂಸ್ಥೆಗಳ ತತ್ವಗಳು, ದಂಗೆಗಳು, ಹೋರಾಟಗಳು ಮತ್ತು ಪ್ರಾಣ ಆಹುತಿಗಳ ಸಂಗಮ ಎನ್ನಬಹುದು. ಪ್ಲಾಸಿ ಕದನದಿಂದ ಸರಿಯಾಗಿ ನೂರು ವರ್ಷಗಳ ನಂತರ ಅಂದರೆ 1857ರಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ  (ಅಥವಾ 1857ರ ಸಿಪಾಯಿ ದಂಗೆ) ಕಿಡಿಕಾರಿತು, ಆಂಗ್ಲರ ದಬ್ಬಾಳಿಕೆಯ ವಿರುದ್ಧ ಸಿಪಾಯಿಗಳೂ, ರಾಜ್ಯಗಳು ತಿರುಗಿ ಬಿದ್ದು ಪ್ರತಿಭಟಿಸಿದವಾದರೂ, ವ್ಯವಸ್ಥಿತವಾದ ಯೋಜನೆಯಿಲ್ಲದ್ದರಿಂದ ದಂಗೆ ಹತ್ತಿಕ್ಕಲ್ಪಟ್ಟಿತ್ತು. ಸಿಪಾಯಿ ದಂಗೆ ವಿಫಲವಾಯಿತು. ನಂತರ 1985ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿತವಾಯಿತು.
    20ನೆ ಶತಮಾನದ ಪ್ರಾರಂಭದ ವೇಳೆ ನಾಗರಿಕ ಸ್ವಾತಂತ್ರ್ಯ, ರಾಜಕೀಯ ಹಕ್ಕು ಸಂಸ್ಕøತಿ ಹಾಗೂ ದಿನನಿತ್ಯದ ಜೀವನದ ಮೇಲೆ ಬ್ರಿಟಿಷ್ ದಬ್ಬಾಳಿಕೆಯ ಆಡಳಿತ ವಿರುದ್ಧ ಜನರ ಧ್ವನಿ ಜೋರಾಗತೊಡಗಿ, ಬಾಲ ಗಂಗಾಧರ ತಿಲಕ ಮೊದಲಾದ ಕ್ರಾಂತಿಕಾರಿ ನೇತಾರರು ಸ್ವರಾಜ್ಯಕ್ಕೆ ಆಗ್ರಹಿಸತೊಡಗಿದರು. 1918 ಹಾಗೂ 1922ರ ನಡುವಿನ ಅವಧಿಯಲ್ಲಿ ಮೋಹನದಾಸ ಗಾಂಧಿಯವರ ನೇತೃತ್ವದಲ್ಲಿ ಅಹಿಂಸಾತ್ಮಕವಾದ ಅಸಹಕಾರ ಚಳುವಳಿಯು ಮೊದಲ ಸರಣ ಯನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಾರಂಭಿಸಿದೊಡನೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮಹತ್ವದ ದಿಕ್ಕು ದೊರೆಯಿತು. ಭಾರತದ ಎಲ್ಲೆಡೆಯಿಂದ ಅನೇಕ ಜನ ಈ ಆಂದೋಲನದಲ್ಲಿ ಭಾಗಿಗಳಾದರು.
    1930ರಲ್ಲಿ ಪೂರ್ಣ ಸ್ವರಾಜ್ಯಕ್ಕೆ ಬದ್ಧವಾದ ಕಾಂಗ್ರೆಸ್ 1942ರಲ್ಲಿ ಸುಭಾಷಚಂದ್ರ ಬೋಸರು ಭಾರತಿಯ ರಾಷ್ಟ್ರೀಯ ಸೈನ್ಯವನ್ನು ಸಂಘಟಿಸಿದರೂ, ಅವರ ಅಕಾಲ ಮರಣದಿಂದ ಈ ಪ್ರಯತ್ನ ವಿಫಲವಾಯಿತು. ಎರಡನೇ ಮಹಾಯುದ್ಧದ ನಂತರ ಈ ಎಲ್ಲಾ ಪ್ರಯತ್ನಗಳ ಪರಿಣಾಮವಾಗಿ ಭಾರತ ಹಾಗೂ ಪಾಕಿಸ್ಥಾನವೆಂದು ಇಬ್ಬಾಗಿಸುವ ದೇಶವಿಭಜನೆಯ ಬೆಲೆ ತೆತ್ತ ಬಳಿಕ ಭಾರತವು 15 ಅಗಸ್ಟ್ 1947ರಂದು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯವನ್ನು ಪಡೆಯಿತು. ನಮ್ಮ ಹಿರಿಯರ ಹೋರಾಟದ ಫಲವಾಗಿ ದೊರಕಿದ ಸ್ವಾತಂತ್ರ್ಯವನ್ನು ಉಳಿಸಿಕೊಂಡು ಹೋಗುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯೋತ್ಸವದ ದಿನ ನಾವೆಲ್ಲ ಒಂದಾಗಿ ದುಡಿಯುವ ಪ್ರತಿಜ್ಞೆಗೈಯೋಣ.
                                    

ಜಗದೀಶ ವಡ್ಡಿನ
ಗ್ರಂಥಪಾಲಕರು
  

ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೋ: 9632332185

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...