ವಿಶೇಷ ಲೇಖನ:ಹಿರೋಷಿಮಾ ದಿನಾಚರಣೆ- ಜಗತ್ತಿನಲ್ಲಿ ಚಿರಶಾಂತಿ ನೆಲೆಸಲಿ

Source: jagadish | By Arshad Koppa | Published on 5th August 2017, 1:46 PM | Global News | Special Report | Guest Editorial |

ಪ್ರಪಂಚದಲ್ಲಿ ಹಲವಾರು ಧರ್ಮಗಳಿವೆ, ಹಲವಾರು ಧರ್ಮಗಳಿಗೆ ಹಲವಾರು ದೇವರುಗಳಿವೆ, ಹಲವಾರು ದೇವರಿಗೆ ಹಲವಾರು ದೇವಸ್ಥಾನಗಳಿವೆ! ಆದರೆ ಪ್ರಪಂಚದ ಶಾಂತಿಗೆ ಮುಡಿಪಾದ ದೇವಸ್ಥಾನ ಒಂದಿದೆ. ಅದು ಜಪಾನಿನ ಹಿರೋಷಿಮಾದಲ್ಲಿ. ಪ್ರತಿ ವರ್ಷ ಅಗಸ್ಟ್ 6 ರಂದು ಅಲ್ಲಿ ಸಾವಿರಾರು ಜನ ಸೇರಿ ಪ್ರಾರ್ಥನೆ ನಡೆಸುತ್ತಾರೆ. ಜಗತ್ತಿನಲ್ಲಿ ಚಿರಶಾಂತಿ ನೆಲೆಸಲಿ ಎಂದು ಹಿರೋಷಿಮಾ ಪಟ್ಟಪಾಡು ಮತ್ತೇ ಯಾವ ಪಟ್ಟಣವೂ ಪಡುವಂತಾಗದಿರಲಿ ಎಂದು.
    ಎರಡನೆಯ ಮಹಾಯುದ್ಧದ ಶತ್ರು ಪಕ್ಷದವರಾದ ಜರ್ಮನಿ, ಇಟಲಿ, ಟರ್ಕಿ, ಜಪಾನ್ ಮತ್ತು ಮಿತ್ರ ಪಕ್ಷದವರಾದ ಇಂಗ್ಲೇಂಡ್, ಪ್ರಾನ್ಸ್, ರಷ್ಯಾ ಮತ್ತು ಅಮೇರಿಕಗಳ ನಡುವೆ ಸಂಭವಿಸಿತು. ಯುದ್ಧ ಜರುಗಿದ್ದು ಯುರೋಪ್ ಅಂಟ್ಲಾಂಟಿಕ್ ಮತ್ತು ಪೆಸಿಫಿಕ್ ಸಾಗರ ಪ್ರದೇಶಗಳಲ್ಲಾದರೂ ಇಡಿ ಪ್ರಪಂಚವೇ ಇದರಲ್ಲಿ ಭಾಗವಹಿಸಿತ್ತು. 1939ರಲ್ಲಿ ಹಿಟ್ಲರನ ಸೈನ್ಯ ಪೋಲೆಂಡಿಗೆ ನುಗ್ಗಿದಂದು ಆರಂಭವಾದ ಈ ಯುದ್ಧ 1945ರಲ್ಲಿ ಅಮೇರಿಕ ಜಪಾನಿನ ಹಿರೋಷಿಮಾ ಮತ್ತು ನಾಗಾಸಕಿಯ ಮೇಲೆ ಬಾಂಬ್ ದಾಳಿ ಮಾಡಿದಂದು ಮುಕ್ತಾಯಗೊಂಡಿತು.
    ಎರಡನೇ ಮಹಾಯುದ್ಧಕ್ಕೆ ಕಾರಣಗಳು :- ಮೊದಲನೇಯ ಮಹಾಯುದ್ಧದ ನಂತರ ಜರುಗಿದ ವರ್ಸೆಲ್ಸ್ ಒಪ್ಪಂದದಲ್ಲಿ ಉಳಿದ ತಪ್ಪುಗಳೇ ಎರಡನೆಯ ಮಹಾಯುದ್ಧಕ್ಕೆ ಬೀಜೋತ್ಪತ್ತಿ ಯಾದವು. ಜರ್ಮನಿಯಲ್ಲಿ ವರ್ಸೆಲ್ ಒಪ್ಪಂದದಲ್ಲಿ ಬಹು ನಿಕೃಷ್ಟವಾಗಿ ನೋಡಿದ ಮಿತ್ರ ರಾಷ್ಟ್ರಗಳು ಅದರ ಮಿಲಟರಿ ಬಲವನ್ನು ಕುಂಠಿತಗೊಳಿಸಲು ಬೇಕಾದ ಎಲ್ಲ ಕ್ರಮಗಳನ್ನೂ ಕೈಗೊಂಡವು. ಜರ್ಮನಿಯ ಅಂದಿನ ಶೋಚನೀಯ ಪರಿಸ್ಥಿತಿಯ ಲಾಭ ಪಡೆದ ಹಿಟ್ಲರ್ ನಾಜೀವಾದಲ್ಲಿ ಅವರಿಗೆ ನಂಬಿಕೆ ಹುಟ್ಟಿಸುವಲ್ಲಿ ಯಶಸ್ವಿಯಾದನು, ವರ್ಸೆಲ್ಸ್ ಒಪ್ಪಂದ ಜರ್ಮನಿಯಂತೆ ಇಟಲಿಯನ್ನು ಬಡತನಕ್ಕಿಡು ಮಾಡಿದ್ದಿತು, ಜಪಾನ ತಾನು ಬಯಸಿದ ಪ್ರದೇಶವನ್ನು ಪಡೆಯದೆ ಇರುವುದರಿಂದ ಅತೃಪ್ತಿಗೊಂಡಿತು. ಮೊದಲನೇಯ ಮಹಾಯುದ್ಧಾನಂತರ ವಿಶ್ವದಲ್ಲಿ ಶಾಂತಿ ಸ್ಥಾಪನೆಯ ಹೊಣೆ ಹೊತ್ತ ನಿಂತ ಲೀಗ್ ಆಫ್ ನೇಷನ್ಸನ್ ವೈಫಲ್ಯ ಎರಡನೇಯ ಮಹಾಯುದ್ಧಕ್ಕೆ ಕಾರಣವಾಯಿತು.
    ಜಪಾನಿನ ಹಾನ್ ಷು ದ್ವೀಪದ ದಕ್ಷಿಣ ತೀರದಲ್ಲಿ ಹಿರೋಷಿಮಾ ಕೊಲ್ಲಿಯ ಬಳಿ ಓಟಾ ನದಿಯ ಮುಖಜ ಭೂಮಿಯಲ್ಲಿರುವ ಒಳನಾಡಿನ ಬಂದರು ಹಿರೋಷಿಮಾ ಮೈಜಿ ಕಾಲದಿಂದ (1968-1912) ಎರಡನೇಯ ಮಹಾಯುದ್ಧದ ಪರ್ಯಂತ ಹಿರೋಷಿಮಾ ಸೈನಿಕ ಕೇಂದ್ರವಾಗಿತ್ತು. ಹಿರೋಷಿಮಾ ನಗರ ಬೆಳೆದಂತೆ ಓಟಾ ನದಿಯ ಮುಖಜ ಭೂಮಿಯಲ್ಲಿದ್ದ ಆರು ದ್ವೀಪಗಳನ್ನು ಒಂದಕ್ಕೊಂದು ಜೋಡಿಸಲು ಎಂಬತ್ತೊಂದು ಸೇತುವೆಗಳನ್ನು ಕಟ್ಟಿದರು. ಹಿತ್ತಾಳೆ ಮತ್ತು ಮೆರಗು ಕೊಟ್ಟು ಸಾಮಾನುಗಳು, ಕಲಾ ವಸ್ತುಗಳು ಇವುಗಳಿಗೆ ಹಿರೋಷಿಮಾ ಪ್ರಸಿದ್ಧವಾಗಿದೆ. ಪವಿತ್ರವಾದ ದೇವಸ್ಥಾನ ಇಟ್ಸುಕುಷಿಮಾ (ಬೆಳಕಿನ ದ್ವೀಪ) ಹೀರೋಷಿಮಾ ಸಮೀಪದಲ್ಲಿದೆ.
    ಎರಡನೇಯ ಮಹಾಯುದ್ಧ ನಡೆಯುತ್ತಿದ್ದ ಕಾಲ 1945 ಅಗಸ್ಟ 6ರ ಬೆಳಿಗ್ಗೆ 8.15 ಗಂಟೆಗೆ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರಥಮ ಪರಮಾಣು ಬಾಂಬನ್ನು ಹಿರೋಷಿಮಾ ನಗರದ ಮೇಲೆ ಹಾಕಿತು. ನಗರದ ಬಹುಭಾಗ ನಾಶವಾಯಿತು. ಸುಮಾರು 60,000 ಜನ ಮಡಿದರು. ಒಂದು ಲಕ್ಷ ಜನ ಗಾಯಗೊಂಡರು, ಎರಡು ಲಕ್ಷ ಜನ ಮನೆಯಿಲ್ಲದೆ ನಿರ್ಗತಿಕರಾದರು. ಬದುಕಿ ಉಳಿದವರಲ್ಲೂ ಅನೇಕರು ವಿಕಿರಣ ಕಾಯಿಲೆಗೆ ಗುರಿಯಾದರು. ಆಮೇಲೆ ಮರಣ ಹೊಂದಿದರು. ಎಷ್ಟೋ ವರ್ಷಗಳ ಕಾಲ ಅಲ್ಲಿ ಹುಟ್ಟಿದ ಮಕ್ಕಳೆಲ್ಲ ಅನೇಕರು ಅಂಗವಿಕಲರಾಗಿ ಹುಟ್ಟಿದರು.
    ಬಾಂಬ್ ಬಿದ್ದ ಸ್ಥಳದಲ್ಲಿ, ದಾಳಿಯಲ್ಲಿ ಮೃತರಾದವರ ಸ್ಮರಣಾರ್ಥ ಸ್ಮಾರಕ ಸಮಾಧಿಯೊಂದನ್ನು ನಿರ್ಮಿಸಿದ್ದಾರೆ. ಕಮಾನಿನ ಕೆಳಗಿರುವ ಕಲ್ಲಿನ ಮೇಲೆ ಸುತ್ತು 60,000 ಜನರ ಹೆಸರುಗಳನ್ನು ಕೆತ್ತಿದ್ದಾರೆ. 1949ರಲ್ಲಿ ಅಂತರಾಷ್ಟ್ರೀಯ ಶಾಂತಿ ದೇವಸ್ಥಾನವನ್ನು ಹಿರೋಷಿಮಾದಲ್ಲಿ ಕಟ್ಟಬೇಕೆಂಬ ಜನತೆಯ ಅಪೇಕ್ಷೆಗೆ ಜಪಾನಿನ ಸರಕಾರವು ಸಮ್ಮತಿಸಿ ನಾಶವಾಗಿದ್ದ ಇಗರ್ಜಿಯೊಂದರ ಸ್ಥಳದಲ್ಲಿ ಹೊಸ ದೇವಸ್ಥಾನ ನಿರ್ಮಾಣವಾಯಿತು.
    ಪರಮಾಣು ಬಾಂಬಿನಿಂದಲೇ ಹಾಳಾಗಿದ್ದ ನಗರ 1945ರ ಸಪ್ಟೆಂಬರದಲ್ಲಿ ಪ್ರವಾಹದಿಂದ ಅಪಾರ ನಷ್ಟಕ್ಕೆ ಈಡಾಯಿತು. ಹೊಸನಗರವನ್ನು ಕಟ್ಟುವ ಕೆಲಸ 1946ರಿಂದ ಪ್ರಾರಂಭವಾಯಿತು. ಸೇತುವೆಯ ಕೆಲಸವನ್ನು ಮೊದಲು ತೆಗೆದುಕೊಂಡರು.
    ಈಗ ಹಿರೋಷಿಮಾದಲ್ಲಿ ಅನೇಕ ಆಧುನಿಕ ಕೈಗಾರಿಗಳು ಬೆಳೆಯುತ್ತಿವೆ. ಅವುಗಳಲ್ಲಿ ಮುಖ್ಯವಾದವು ಮುಟ್ಸಡಾ ಟ್ರಕ್ ಕಾರ್ಖಾನೆ, ಮಿಟ್ಟಬಿಯಾ ಹಡಗು ನಿರ್ಮಾಣ ಕಾರ್ಖಾನೆಗಳು, ಕಿರಿನ್‍ನ ಮಧ್ಯ ತಯಾರಿಕಾ ಕೇಂದ್ರ ಮುಖ್ಯವಾದಂಥವು. 2015 ರಲ್ಲಿ ಈ ನಗರದ ಜನಸಂಖ್ಯೆ 1,185,656.
    ಹಿರೋಷಿಮಾದಂತೆಯೇ ಪರಮಾಣು ಬಾಂಬಿನ ಭೀಕರತೆಯನ್ನು ಅನುಭವಿಸಿದ ಇನ್ನೊಂದು ನಗರ ನಾಗಾಸಕಿ. ಜಪಾನಿನ ಕೈಫು ದ್ವೀಪದ ವಾಯುವ್ಯ ಭಾಗದಲ್ಲಿ ಸುತ್ತಲೂ ಬೆಟ್ಟಗಳಿಂದ ಆವೃತ್ತವಾದ ನಾಗಾಸಕಿ ಪ್ರಪಂಚದ ಸುಂದರತೆಯ ಬಂದರುಗಳಲ್ಲಿ ಒಂದಾಗಿದೆ. ಬಂದರಿನ ಸುತ್ತ ಮುತ್ತ ಇರುವ ಬೆಟ್ಟಗಳ ಕಣ ವೆಗಳಲ್ಲಿ ನಗರ ಬೆಡ್ತಿತ್ತು. ಉರಗಾಮಿ ಎಂಬ ಕಣ ವೆಯಲ್ಲಿ ದೊಡ್ಡ ಉಕ್ಕಿನ ಕಾರ್ಖಾನೆ, ಇಂಜನಿಯರಿಂಗ್ ಉದ್ಯಮಗಳು, ಯುದ್ಧ ಸಾಧನ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆ ಇದ್ದವು. ಎರಡನೇಯ ಮಹಾಯುದ್ಧ ಈ ಹಡಗು ನಿರ್ಮಾಣ ಉದ್ಯಮ ಬೆಳೆಯಲು ಮುಖ್ಯ ಕಾರಣವಾಯಿತು. 1945ರಲ್ಲಿ ಈ ನಗರದ ಜನಸಂಖ್ಯೆ 3,43,000.
    1945 ಅಗಸ್ಟ್ 9 ಬೆಳಿಗ್ಗೆ 11 ಗಂಟೆ ಎರಡನೇಯ ಮಹಾಯುದ್ಧ ನಡೆಯುತ್ತಿದ್ದ ಕಾಲ, ಅಮೇರಿಕ ವಿಮಾನಗಳ ಬಾಂಬ್ ದಾಳಿ ಜಪಾನಿನ ನಗರವಾಸಿಗಳ ಅನುಭವವಾಗಿ ಹೋಗಿತ್ತು. ಆದರೆ ಅಂದು ನಾಗಾಸಕಿಯ ಮೇಲೆ ವಿಮಾಣ ದಾಳಿಯಾದಾಗ ಬಿದ್ದುದು ಒಂದೇ ಬಾಂಬು ಕಣ್ಣು ಮುಚ್ಚಿ ಕಣ್ಣು ತೆರೆಯುವುದರಲ್ಲಿಯೇ 37,501 ಜನ ಸತ್ತಿದ್ದರು. 51,580 ಜನ ಗಾಯಗೊಂಡಿದ್ದರು. ನಾಗಾಸಕಿಯ ಮೇಲೆ ಬಿದ್ದುದು ಜಗತ್ತಿನ ಎರಡನೇಯ ಪರಮಾಣು ಬಾಂಬ್.
    ಪರಮಾಣು ಬಾಂಬಿನ ಪ್ರಯೋಗ ಎರಡನೇಯ ಮಹಾಯುದ್ಧದ ಮುಕ್ತಾಯವನ್ನು ತೀವ್ರಗೊಳಿಸಿತು. ನಾಗಾಸಕಿಯ ಮೇಲೆ ಬಾಂಬ್ ಬಿದ್ದ ಐದು ದಿನಗಳ ನಂತರ ಜಪಾನ್ ಶರಣಾಗತವಾಯಿತು. ಈ ಬಾಂಬ್‍ಗಳಿಂದ ಶಾಂತಸಾಗರ ಪ್ರದೇಶದ ಯುದ್ಧ ಒಂದು ವರ್ಷಕ್ಕೆ ಮುಂಚಿತವಾಗಿ ಮುಗಿಯಿತು. ಹತ್ತು ಲಕ್ಷ ಅಮೇರಿಕನ್ ಸೈನಿಕರನ್ನೂ ಎರಡೂವರೆ ಲಕ್ಷ ಬ್ರಿಟಿಷ್ ಸೈನಿಕರನ್ನೂ ಉಳಿಸಿತು ಎಂದು ವಾದಿಸಿ ಪರಮಾಣು ಬಾಂಬಿನ ಪ್ರಯೋಗವನ್ನು ಸಮರ್ಥಿಸುವವರು ಇದ್ದಾರೆ. ಜಪಾನಿನ ಜನರು ನಾಗಾಸಕಿ ನಗರವನ್ನು ಮತ್ತೆ ಹೊಸದಾಗಿ ನಿರ್ಮಿಸಿದರು. 2015ರಲ್ಲಿ ನಾಗಾಸಕಿ ನಗರದ ಜನಸಂಖ್ಯೆ 4,33,514.
    ಅಮೇರಿಕನ್ನರು ನಾಗಾಸಕಿ ಮೇಲೆ 9 ಅಗಸ್ಟ್ 1945 ರಂದು ಪರಮಾಣು ಬಾಂಬ್ ಹಾಕಿನ ದಿನ ಆದರಿಂದ ಪ್ರತಿ ವರ್ಷ ಅಗಸ್ಟ್ 9 ರಂದು ನಾಗಾಸಕಿ ದಿನಾಚರಣೆ ಎಂದು ವಿಶ್ವದ್ಯಾದಂತ ಆಚರಿಸಲಾಗುತ್ತದೆ. ಇದರ ಉದ್ದೇಶ ಎರಡನೇಯ ಮಹಾಯುದ್ಧದಲ್ಲಿ ಹುತಾತ್ಮರಾದ ಸೈನಿಕರಿಗೆ ಹಾಗೂ ನಾಗರಿಕರ ಆತ್ಮಕ್ಕೆ ಶಾಂತಿ ಕೋರುವುದು. ಜಗತ್ತಿನಲ್ಲಿ ಚಿರ ಶಾಂತಿ ನೆಲೆಸಲಿ ಎಂದು ಹಿರೋಷಿಮಾ, ನಾಗಾಸಕಿ ಪಟ್ಟ ಪಾಡು ಮತ್ತೆ ಯಾವ ಪಟ್ಟಣವೂ ಪಡುವಂತಾಗದಿರಲಿ ಎಂದು ಹಾಗೂ ಮೂರನೇ ಮಹಾಯುದ್ಧ, ಆಗದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುವುದು.

ಜಗದೀಶ ವಡ್ಡಿನ
ಗ್ರಂಥಪಾಲಕರು
ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
ಬಾಡ, ಕಾರವಾರ
ಮೊ: 9632332185
 

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...