ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

Source: sonews | By Staff Correspondent | Published on 22nd January 2019, 11:52 PM | Coastal News | State News | Incidents | Don't Miss |

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ಬಲಿಪಡೆದುಕೊಂಡಿದೆ.

ವರ್ಷಕ್ಕೊಮ್ಮೆ ಜರಗುವ ಕೂರ್ಮಗಡ ಜಾತ್ರೆಗೆಂದು ಉತ್ತರಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಭಕ್ತಾದಿಗಳು ದೋಣಿ ಮೂಲಕ ಜಾತ್ರೆಗೆ ತೆರಳಿ ಅಲ್ಲಿ ಪೂಜೆ ಪುರಸ್ಕಾರಗಳನ್ನು ನೆರವೇರಿಸಿ ಮರಳುತ್ತಾರೆ. 

ಹೀಗೆ ಮರಳುವಾಗ ಜ.೨೧ರಂದು ೩೫ ಜನರಿದ್ದ ದೋಣಿಯೊಂದು ಸಮುದ್ರದಲ್ಲಿ ಮುಗಿಚಿ ಬಿದ್ದ ಪರಿಣಾಮ ದೋಣಿಯಲ್ಲಿದ್ದ  ೩೫ ಜನರು ಸಮುದ್ರಪಾಲಾಗಿದ್ದು ಅದರಲ್ಲಿ ಇದುವರೆಗೆ ೧೯ ಜನರನ್ನು ರಕ್ಷಿಸಲಾಗಿದ್ದು ೧೪ಮೃತದೇಹಗಳನ್ನು ಸಮುದ್ರದಿಂದ ಹೊರ ತೆಗೆಯಲಾಗಿದೆ. ಇಬ್ಬರು  ಸಮುದ್ರದಲ್ಲಿ ಕಾಣೆಯಾಗಿದ್ದು ಅವರ ಶೋಧಕಾರ್ಯ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದಾರೆ. 

ಕೂರ್ಮಗಡ ದೋಣಿ ದುರಂತದಲ್ಲಿ ಸಾವನ್ನಪ್ಪಿದವರಲ್ಲಿ ಒಂದೇ ಕುಟುಂಬದ ೧೦ಮಂದಿ ಇದ್ದಾರೆಂಬ ಮಾಹಿತಿ ಲಭ್ಯವಾಗಿದೆ.

ಮೃತರಲ್ಲಿ, ಹಾವೇರಿ ಜಿಲ್ಲೆಯ ಶಿಗ್ಗಾಂವ್ ತಾಲೂಕಿನ ಪರಸಪ್ಪ ಬಸವಪ್ಪ(೩೮) ಇವರ ಪತ್ನಿ ಭಾರತಿ(೩೫), ಪುತ್ರಿಯರಾದ ಸೌಜನ್ಯ(೧೫), ಸಂಜೀವಿನಿ(೧೨). ಸಂದೀಪ್(೧೦ವ. ಮಗ),  ಮಂಜವ್ವ ಸೋಮಪ್ಪ(೨೫ವ. ಅತ್ತಿಗೆ), ಮಂವಜ್ವರ ಇಬ್ಬರು ಮಕ್ಕಳಾದ  ಕಿರಣ(೪), ಅರುಣ(೨.೫ವರ್ಷ), ಕೀರ್ತಿ(೬ವ. ಮಗಳು)ಇವರೆಲ್ಲರೂ ದುರಂತದಲ್ಲಿ ಸಾವನ್ನಪ್ಪಿದ್ದು, ಪರಸಪ್ಪನವರ ಮಗ ಗಣೇಶ(೧೩) ಬದುಕುಳಿದಿದ್ದಾರೆ ಎಂದು ತಿಳಿದುಬಂದಿದೆ. ಸಂದೀಪ್ ಹಾಗೂ ಕೀರ್ತಿ ಎಂಬುವವರು ಕಾಣೆಯಾಗಿದ್ದು ಶೋಧ ಜಿಲ್ಲಾಡಳಿತ ಶೋಧ ಕಾರ್ಯ ಮುಂದುವರೆಸಿದೆ.

ಇವರಲ್ಲದೆ ಮೃತರಾದವರಲ್ಲಿ, ಗಣಪತಿ ಕೋಟಕಾರ್(೬೭), ಮೀನಾಕ್ಷಿ ಕೋಟ್ಕಾರ್(೫೫), ಕಾರವಾರ ಸುಂಕೇರಿಯ ನಿವಾಸಿಗಳಾದ ಶ್ರೇಯಸ್ ರಾಜು ಪಾವಸ್ಕರ್(೨೫), ಗೀತಾ ಹೋಲ್ಸಾವರ್(೨೩), ರಜನಿ ತೆಲ್ಕರ್, ಕಾಜುಬಾಗ ನಿವಾಸಿ ನಿಲೇಶ್ ಆರ್. ಪೆಡ್ನೆಕರ್(೩೮) ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಅಂಕಾ ಯಮುನೂರಪ್ಪ(೫೪) ಸೇರಿದ್ದಾರೆ. 

ಜಿಲ್ಲಾಧಿಕಾರಿ  ಎಸ್.ಎಸ್.ನಕುಲ್  ರವರು ಮಂಗಳವಾರ ನಡೆಸಿದ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು;

-ದೋಣಿ ಅವಘಡ ಕುರಿತು ಸರ್ಕಾರಕ್ಕೆ ಜಿಲ್ಲಾಡಳಿತದಿಂದ ವಿಶೇಷ ವರದಿ ಸಲ್ಲಿಸಲಾಗಿದೆ.

-ಈವರೆಗೆ ಒಟ್ಟು 35ಜನರಿದ್ದ ದೋಣಿಯ ಅವಘಡದಲ್ಲಿ 19ಜನರನ್ನು ರಕ್ಷಿಸಲಾಗಿದೆ. 14 ಮಂದಿ ಮೃತದೇಹಗಳು ಈವರೆಗೆ ಸಿಕ್ಕಿದ್ದು ಮರಣೋತ್ತರ ಪರೀಕ್ಷೆ ಮಾಡಿ ವಾರಸುದಾರರಿಗೆ ನೀಡಲಾಗಿದೆ.

-ಇನ್ನು 2ಮೃತದೇಹಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

-ಅವಘಡಕ್ಕೆ ಕಾರಣವಾದ ದೋಣಿಯ ಚಾಲಕ ಮತ್ತು ಮಾಲಿಕರ ಇಬ್ಬರನ್ನು ದಯಾನಂದ ಜಾದವ್ ಮತ್ತು ರಂಗನಾಥ್ ಜೋಪಡೆ ಬಂದಿತರಾಗಿದ್ದಾರೆ.

-ಘಟನೆ ಕಾರಣ ಕುರಿತ ತನಿಖೆ ನಡೆಯುತ್ತಿದೆ. ಅದರ ಆಧಾರದ ಮೇಲೆ ಭವಿಷ್ಯದಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು.

-ಘಟನೆ ಸಂಬಂಧ ಸಾರ್ವಜನಿಕರು, ಮೀನುಗಾರರು ಜಿಲ್ಲಾಡಳಿತದೊಂದಿಗೆ ಸಹಕಾರ ನೀಡಿದ್ದಾರೆ. ಶೋಧಕಾರ್ಯದಲ್ಲಿ  ನೌಕಾಸೇನೆ, ತಟರಕ್ಷಣಾ ಪಡೆ ಹಾಗೂ ಕರಾವಳಿ ಕಾವಲು ಪೊಲೀಸರು ಹಗಲು ರಾತ್ರಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.

-ಹಾವೇರಿ ಜಿಲ್ಲೆ ಶಿಗ್ಗಾವಿ ತಾ. ಹೊಸೂರಿನ ಒಂದೇ ಕುಟುಂಬದ 13ಜನರು ಈ ಅವಘಡದಲ್ಲಿದ್ದರು. ಈ ಪೈಕಿ ನಾಲ್ವರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಏಳು ಮೃತ ದೇಹಗಳು ಸಿಕ್ಕಿವೆ ಇನ್ನೆರಡು ಸಿಗಬೇಕಿದೆ. ಇದು ಅತ್ಯಂತ ದುರದೃಷ್ಟದ ಸಂಗತಿ.

-ಇಂದು ಬೆಳಗಿನಿಂದ ಪೊಲೀಸರೊಂದಿಗೆ ಟ್ಯಾಗೋರ್  ಕಡಲು ತೀರ ಅಭಿವೃದ್ಧಿ ಸಮಿತಿಯ ಸಿಬ್ಬಂದಿ ಹಾಗೂ ಲೈಫ್ ಗಾರ್ಡ್ ನ ಐದು ತಂಡಗಳು ಶೋಧ ಕಾರ್ಯ ನಡೆಸಿವೆ ಅದು ಮುಂದುವರಿದಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿನಾಯಕ್ ಪಾಟೀಲ್, ತಟರಕ್ಷಣಾ ಪಡೆ ಕಮಾಂಡರ್ ಅವನೀಂದರ್ ನಂದಾ, ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಪ್ರಮೋದ್ ರಾವ್ ಇದ್ದರು.

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...