ಕಾರವಾರ: ರಕ್ತದಾನ ಮಾಡಿ, ಜೀವ ಉಳಿಸಿ

Source: jagadish | By Arshad Koppa | Published on 29th July 2017, 1:25 PM | Coastal News | Guest Editorial | Technology |

ರಕ್ತ ಪರಿಚಲನ ನಮ್ಮ ಧಮನಿಗಳಲ್ಲಿ ಹರಿಯುವ ಜೀವನದಿಯಂತೆ, ಧಮನಿ, ಸಿರೆ ಮತ್ತು ಲೋಮನಾಳಗಳು ದೇಹದಲ್ಲೆಲ್ಲ ಬಲೆಯಂತೆ ಹಬ್ಬಿಕೊಂಡಿದೆ. ಇವುಗಳಲ್ಲಿ ಹರಿಯುವ ರಕ್ತ ನಮ್ಮ ದೇಹದಲ್ಲಿರುವ ಅಸಂಖ್ಯ ಕೋಶಿಕೆಗಳಿಗೆ ಆಹಾರ, ಆಮ್ಲಜನಕ (ಕೆಂಪು ರಕ್ತಕಣ), ಹಾರ್ಮೋನುಗಳನ್ನು, ಎನ್‍ಜೈಯು ಕೊಂಡೋಯ್ಯುತ್ತವೆ. ಬೇಡವಾದ ಕಲ್ಮಷಗಳನ್ನೂ ಇಂಗಾಲದ ಡೈ ಆಕ್ಸೈಡನ್ನು ಹೊರಹಾಕುತ್ತದೆ. ದೇಹದ ಉಷ್ಣತೆಯನ್ನು ಸ್ಥಿರವಾಗಿಡುತ್ತದೆ. ನೀರನ್ನು ದೇಹದ ವಿವಿಧ ಭಾಗಗಳಿಗೆ ಕೊಂಡೊಯ್ಯುತ್ತದೆ; ಸೂಕ್ಷ್ಮ ಜೀವಿಗಳೊಡನೆ (ಬಿಳಿರಕ್ತಕಣ) ಹೋರಾಡಿ ದೇಹವನ್ನು ರೋಗರುಜಿನಗಳಿಂದ ಕಾಪಾಡುತ್ತದೆ.
    ರಕ್ತವನ್ನು ಕೃತಕವಾಗಿ ಸೃಷ್ಠಿಸಲು ಸಾಧ್ಯವಿಲ್ಲ. ರಕ್ತವೇ ದೇಹದ ಜೀವನಾಡಿ! ನೀವು ನೀಡುವ ಒಂದು ರಕ್ತದಾನ ಒಂದು ಜೀವಿಯ ವರದಾನ. “Blood Donation will cost you nothing but it will Save a life!” ಒಬ್ಬ ಮನುಷ್ಯನ ರಕ್ತವನ್ನು ಇನ್ನೊಬ್ಬನ ಜೀವ ಉಳಿಸಲು ಉಪಯೋಗಿಸುವುದು. ಇದರಿಂದ ಹಲವಾರು ಜನರು ಸಾವಿನಿಂದ ಪಾರಾಗುತ್ತಾರೆ. ಯಾವುದೇ ಒಬ್ಬ ವ್ಯಕ್ತಿ ಇನ್ನೊಬ್ಬರ ಜೀವ ಉಳಿಸಲು ತನ್ನ ರಕ್ತವನ್ನು ಸ್ವಯಂ ಪ್ರೇರಿತನಾಗಿ ಯಾವುದೇ ಫಲ ಫಲಾಪೇಕ್ಷೆಯಿಲ್ಲದೇ ಕೋಡುವುದಕ್ಕೆ “ರಕ್ತದಾನ” ಎನ್ನುವರು. “The Blood Donor of today may be recipient of Tomorrow”.

    ರಕ್ತದ ಗುಂಪುಗಳು (Blood Groups) A, B, AB, O  ಎಂಬ ನಾಲ್ಕು ಗುಂಪುಗಳಿವೆ. RH+, RH- ಎಂಬ ಪಂಗಡಗಳಿವೆ. A+, A-, B+, B-, AB+, AB-, O+, O- ಎಂಬ 8 ರಕ್ತದ ಪಂಗಡಗಳಿವೆ. ರಕ್ತಗುಂಪುಗಳನ್ನು ಗುರುತಿಸಲು ಮುಖ್ಯ ಕಾರಣ ಕಾರ್ಲ್ ಲ್ಯಾಂಡ್‍ಸ್ಟಿನರ್. ಹಾಗಾದರೆ ರಕ್ತವನ್ನು ದಾನವಾಗಿ ಪಡೆಯಬೇಕಾದರೆ ಯಾವ ಯಾವ ರಕ್ತದ ಗುಂಪಿನವರು, ಯಾವ ಯಾವ ರಕ್ತದ ಗುಂಪಿನಿಂದ ರಕ್ತವನ್ನು ಪಡೆಯಬಹುದು.
O- ರಕ್ತದ ಗುಂಪಿನವರು                      O- ರಕ್ತದ ಗುಂಪಿನಿಂದ ಪಡೆಯಬಹುದು.
O+ ರಕ್ತದ ಗುಂಪಿನವರು                     O-,O+, ರಕ್ತದ ಗುಂಪಿನಿಂದ ಪಡೆಯಬಹುದು.
A-  ರಕ್ತದ ಗುಂಪಿನವರು                     A-, O- ರಕ್ತದ ಗುಂಪಿನಿಂದ ಪಡೆಯಬಹುದು.
A+ ರಕ್ತದ ಗುಂಪಿನವರು                     A+, A-,O+,O- ರಕ್ತದ ಗುಂಪಿನಿಂದ ಪಡೆಯಬಹುದು.
B- ರಕ್ತದ ಗುಂಪಿನವರು                       B-,O- ರಕ್ತದ ಗುಂಪಿನಿಂದ ಪಡೆಯಬಹುದು.
B+ ರಕ್ತದ ಗುಂಪಿನವರು                      B+,B-,O+,O- ರಕ್ತದ ಗುಂಪಿನಿಂದ ಪಡೆಯಬಹುದು.
AB- ರಕ್ತದ ಗುಂಪಿನವರು                    AB-, B-,A-,O-ರಕ್ತದ ಗುಂಪಿನಿಂದ ಪಡೆಯಬಹುದು.
AB+ ರಕ್ತದ ಗುಂಪಿನವರು                   AB+,AB-,B+,B-,A+,A-,O+,O-ರಕ್ತದ ಗುಂಪಿನಿಂದ ಪಡೆಯಬಹುದು.
ರಕ್ತದಾನ ಮಾಡಲು ಬಯಸಿದವರು ತಿಳಿಯಬೇಕಾದ ವಿಚಾರಗಳು :
“If you’re a blood donor, you’re a hero to someone, somewhere, who received your gracious gift of life” 
 ರಕ್ತಕ್ಕೆ ಬದಲಿಯಾದ ವಸ್ತುವಿಲ್ಲ.
ರಕ್ತವನ್ನು ಮನುಷ್ಯರ ದಾನದಿಂದ ಮಾತ್ರ ಪಡೆಯಬಹುದು.
ರಕ್ತದಾನ ಮಾಡುವುದು ಪ್ರತೀ ಆರೋಗ್ಯವಂತ ವ್ಯಕ್ತಿಯ ಕರ್ತವ್ಯ.
ರಕ್ತದಾನ ಮಾಡಿದ ಕೆಲವೇ ಕ್ಷಣಗಳಲ್ಲಿ ದಾನಿಯ ದೇಹದಲ್ಲಿ ರಕ್ತದ ಉತ್ಪತ್ತಿ ಪ್ರಾರಂಭವಾಗಿ 24 ಗಂಟೆಯ ಒಳಗಾಗಿ ದಾನ ಮಾಡಿದ ಪ್ರಮಾಣದ ರಕ್ತ ದೇಹದಲ್ಲಿ ಪುನರುತ್ಪತ್ತಿಯಾಗುತ್ತದೆ.
ರಕ್ತದಾನ ಮಾಡುವಾಗ, ಒಂದು ಚುಚ್ಚುಮದ್ದು ತೆಗೆದುಕೊಳ್ಳುವಾಗ ಆಗುವುದಕ್ಕಿಂತ ಕಡಿಮೆ ನೋವು ಆಗುತ್ತದೆ. 
ರಕ್ತದಾನ ಮಾಡಲು ಮತ್ತು ಸುಧಾರಿಸಿಕೊಳ್ಳಲು ಒಟ್ಟು ಬೇಕಾದ ಸಮಯ 30 ನಿಮಿಷಗಳು.
“The finest gesture one can make is to save life by donating Blood”.
ಯಾರು ರಕ್ತದಾನ ಮಾಡಬಹುದು :
    ಹೆಣ್ಣು ಗಂಡೆಂಬ ಭೇದವಿಲ್ಲದೇ 18 ರಿಂದ 60 ವರ್ಷದ ಒಳಗಿರುವ ಎಲ್ಲ ಆರೋಗ್ಯವಂತ ವ್ಯಕ್ತಿಗಳು ರಕ್ತದಾನ ಮಾಡಬಹುದು.
ಗಂಡಸರು ಮೂರು ತಿಂಗಳಿಗೆ ಒಮ್ಮೆ ಮತ್ತು ಹೆಂಗಸರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು.
ದಾನಿಯ ದೇಹದ ತೂಕ 45 ಕೆ.ಜಿ. ಗಿಂತ ಹೆಚ್ಚಿರಬೇಕು.
ರಕ್ತದಲ್ಲಿ ಹಿಮೋಗ್ಲೋಬಿನ್ ಅಂಶ 12.5 ಗ್ರಾಂ ಗಿಂತ ಕಡಿಮೆ ಇರಬಾರದು.
ಸಿಸ್ಟೋಲಿಕ್ ರಕ್ತದೊತ್ತಡವು 100 ರಿಂದ 140 ಇದ್ದು, ಡಮಸ್ಟೋಲಿಕ್ ಒತ್ತಡವು 70 ರಿಂದ 100 ಇರುವವರು ರಕ್ತದಾನ ಮಾಡಬಹುದು.
“The blood you donate gives someone another chance at life. One day that someone may be a close relative, a friend, a loved one – or even you”.
ಯಾರು ರಕ್ತದಾನ ಮಾಡಬಾರದು :
ಯಾವುದಾದರೂ ಖಾಯಿಲೇಯಿಂದ ನರಳುತ್ತಿದ್ದರೆ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ ರಕ್ತದಾನ ಮಾಡಬಾರದು.
ಮದ್ಯಪಾನ ಹಾಗೂ ಮಾದಕ ದ್ರವ್ಯ ಸೇವನೆ ಮಾಡಿದಾಗ ರಕ್ತದಾನ ಮಾಡಬಾರದು.
ಮಹಿಳೆಯರು ತಿಂಗಳ ಮುಟ್ಟಿನ ಸಮಯದಲ್ಲಿ, ಗರ್ಭಿಣ ಯರಾಗಿದ್ದರೆ, ಎದೆ ಹಾಲುಣ ಸುತ್ತಿರುವಾಗ ಮತ್ತು ಹೆರಿಗೆಯ ನಂತರ ಆರು ತಿಂಗಳು ರಕ್ತದಾನ ಮಾಡಬಾರದು.
ಯಾವುದೇ ವ್ಯಕ್ತಿ ಖಾಯಿಲೆ ವಿರುದ್ದ ಲಸಿಕೆ ಪಡೆದಿದ್ದರೆ ಅಂತಹವರು ಲಸಿಕೆ ಪಡೆದ 4 ವಾರಗಳವರೆಗೆ ರಕ್ತದಾನ ಮಾಡಬಾರದು.
ಮಲೇರಿಯಾ ರೋಗಕ್ಕೆ ಚಿಕಿತ್ಸೆ ಪಡೆದಿದ್ದರೆ, ಚಿಕಿತ್ಸೆ ಪಡೆದ ನಂತರ 3 ತಿಂಗಳು ರಕ್ತದಾನ ಮಾಡಬಾರದು.
ಅಸ್ಪಿರಿನ್ ಮಾತ್ರೆ ಸೇವಿಸಿದ್ದರೆ, ಅಂತಹ ವ್ಯಕ್ತಿ ಮಾತ್ರೆ ಸೇವಿಸಿದ ನಂತರ 3 ದಿನ ರಕ್ತದಾನ ಮಾಡಬಾರದು.
ಹಿಂದಿನ 3 ತಿಂಗಳಲ್ಲಿ ತಾವೇ ಯಾವುದೇ ರಕ್ತ ಅಥವಾ ರಕ್ತದ ಅಂಶ ಪಡೆದಿದ್ದರೆ, ಅಂತಹವರು ರಕ್ತದಾನ ಮಾಡಬಾರದು.
ಯಾವುದೇ ದೊಡ್ಡ ಪ್ರಮಾಣದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 6 ತಿಂಗಳವರೆಗೆ ಮತ್ತು ಚಿಕ್ಕ ಪ್ರಮಾಣದ ಚಿಕಿತ್ಸೆಗೆ ಒಳಗಾಗಿದ್ದರೆ ಅಂತಹವರು ಮುಂದಿನ 3 ತಿಂಗಳವರೆಗೆ ರಕ್ತದಾನ ಮಾಡಬಾರದು. 
ಕಾಮಾಲೆ, ಎಚ್‍ಐವಿ, ಲೈಂಗಿಕ ರೊಗವಿರುವವರು ರಕ್ತದಾನ ಮಾಡಬಾರದು. 
ಕ್ಯಾನ್ಸರ್, ಹೃದಯದ ಖಾಯಿಲೆ, ಅಸಹಜ ರಕ್ತ ಸ್ರಾವ, ಕಾರಣವಿಲ್ಲದೇ ತೂಕ ಕಡಿಮೆಯಾಗುವುದು, ಮಧುಮೇಹ, ಹೆಪಟೈಟಿಸ್ ಬಿ ಮತ್ತು ಸಿ, ಮೂತ್ರ ಪಿಂಡ ಸಂಬಂಧ ಹಾಗೂ ಲಿವರ್ ಸಂಬಂಧಿಸಿದ ಖಾಯಿಲೆ, ಅಸ್ತಮಾ, ಮಾನಸಿಕ ರೋಗದ ವ್ಯಕ್ತಿ ರಕ್ತದಾನ ಮಾಡಬಾರದು. 
ರಕ್ತದ ಮೂಲಕ ಹರಡುವ ರೋಗಗಳು :
ಮಲೇರಿಯಾ
ಲೈಂಗಿಕ ಸಂಪರ್ಕದ ರೋಗಗಳು - ಸಿಫಿಲಿಸ್, ಇತ್ಯಾದಿ.
ಹೆಪಟೈಟಿಸ್ ಬಿ ಮತ್ತು ಸಿ ಸೋಂಕಿನಿಂದುಂಟಾಗುವ ಕಾಮಾಲೆ.
ಎಚ್‍ಐವಿ ಸೋಂಕು ಮತ್ತು ಏಡ್ಸ್.
ರಕ್ತದಾನ ಮಾಡುವ ಮೊದಲು ಮೇಲ್ಕಂಡ ರೋಗಗಳಿಂದ ಮುಕ್ತವಾಗಿದವರು ಮಾತ್ರ ರಕ್ತದಾನ ಮಾಡಬೇಕು.
ರಕ್ತದಾನ ಮಾಡುವುದರಿಂದ ಆಗುವ ಪ್ರಯೋಜನಗಳು :
    “To give blood you need neither extra strength nor extra food, and you will save a life”.
ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಪ್ರಚೋದನೆಯಾಗುತ್ತದೆ.
ದೇಹದಲ್ಲಿ ಹೊಸ ರಕ್ತ ಚಲನೆಯಿಂದ ಕಾರ್ಯತತ್ಪರತೆ, ಜ್ಞಾಪಕ ಶಕ್ತಿ ವೃದ್ಧಿಯಾಗುತ್ತದೆ.
 ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.
ಹೃದಯಾಘಾತವನ್ನು ಶೇ. 80 ಕ್ಕಿಂತಲೂ ಜಾಸ್ತಿ ತಡೆಯಲು ಸಹಾಯವಾಗುತ್ತದೆ.
ರಕ್ತದ ಒತ್ತದ, ಇತರೆ ಕೆಲವು ರೊಗಗಳನ್ನು ತಡೆಗಟ್ಟಲು ಸಹಾಯವಾಗುತ್ತದೆ.
     ಎಲ್ಲ ದಾನಗಳಲ್ಲಿ, ರಕ್ತದಾನ ಶ್ರೇಷ್ಠ. “Tears of a mother cannot save her child. But your Blood can”.  ರಕ್ತದಾನ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ರಕ್ತದಾನ ಮಾಡಿ ಜೀವ ಉಳಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

ಜಗದೀಶ ವಡ್ಡಿನ
                                    ಗ್ರಂಥಪಾಲಕರು
                                      ಶಿವಾಜಿ ಶಿಕ್ಷಣ ಮಹಾವಿದ್ಯಾಲಯ
                                    ಬಾಡ, ಕಾರವಾರ
                                    ಮೊ: 9632332185

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...

ಹೊಸದಿಲ್ಲಿ: ಧೂಳು ತಿನ್ನುತ್ತಿರುವ5,500ಕ್ಕೂ ಅಧಿಕ ವೆಂಟಿಲೇಟರ್‌ಗಳು ಉ.ಪ್ರ., ಗುಜರಾತ್, ಕರ್ನಾಟಕ ಮುಂಚೂಣಿಯಲ್ಲಿ

ಕೊರೋನ ಎರಡನೇ ಅಲೆಯಲ್ಲಿ ವೆಂಟಿಲೇಟರ್‌ಗಳ ಕೊರತೆಯಿಂದಾಗಿ ಹಲವಾರು ರೋಗಿಗಳು ಸಾವನ್ನಪ್ಪಿದ್ದರೆ, ವಿವಿಧ ರಾಜ್ಯಗಳಲ್ಲಿ ಈ ಜೀವರಕ್ಷಕ ...

ಎ.ಜೆ.ಅಕಾಡೆಮಿ ಹಾಗೂ ನ್ಯೂಶಮ್ಸ್ ಸ್ಕೂಲ್ ವತಿಯಿಂದ ಭಟ್ಕಳ ತಾಲೂಕು ಮಟ್ಟದ ವಿಜ್ಞಾನ ಮತ್ತು ಸಂಶೋಧನೆ ಕುರಿತ ಸ್ಪರ್ಧೆ

ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ಹಾಗೂ ಪರಿಸರ ...