ಕಾರವಾರ:ವೇತನ ನೀಡಿಲ್ಲವೆಂಬ ಆರೋಪ

Source: so news | By Manju Naik | Published on 12th June 2019, 8:22 PM | Coastal News | Don't Miss |

ಕಾರವಾರ: ಗ್ರಾಪಂನಲ್ಲಿ ನಾಲ್ಕು ತಿಂಗಳಿಂದ ವೇತನ ನೀಡದೇ ಕಿರುಕುಳ ನೀಡುತ್ತಿರುವ ಬಗ್ಗೆ ಬೇಸರಗೊಂಡ ನೀರು ಗಂಟಿ (ವಾಟರ್ ಮ್ಯಾನ್)ಯೊಬ್ಬ ಜಿಪಂ ಕಚೇರಿಗೆ ಕುಟುಂಬ ಸಮೇತ ಬಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆಯೊಡ್ಡಿದ ಘಟನೆ ನಡೆದಿದೆ.
ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಪಂನಲ್ಲಿ ಗುತ್ತಿಗೆ ಆಧಾರದಲ್ಲಿ ನೀರು ಗಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ದೇವರಾಯ ಗಣಪತಿ ನಾಯಕ ತನ್ನ ತಾಯಿ, ಪತ್ನಿ ಹಾಗೂ ನವಜಾತ ಶಿಶುವಿನ ಜತೆಗೆ ಜಿಪಂ ಕಚೇರಿಗೆ ಆಗಮಿಸಿ ಕುಳಿತಿದ್ದರು.
‘ನಾಲ್ಕು ವರ್ಷದಿಂದ ನೀರು ಗಂಟಿಯಾಗಿ ಕಾರ್ಯನಿರ್ವಹಿಸುತ್ತಿದ್ದ ನನಗೆ ಕೇವಲ 1.5 ಸಾವಿರ ರೂಪಾಯಿ ವೇತನ ನೀಡಲಾಗುತ್ತಿತ್ತು. ಆ ಕುರಿತು ದೂರು ನೀಡಿದಾಗ ವೇತನವನ್ನು ಹೆಚ್ಚಿಸಲಾಯಿತು. ಆದರೆ, ಅದೇ ಸಿಟ್ಟಿಗೆ ಕಳೆದ ನಾಲ್ಕು ತಿಂಗಳಿಂದ ವೇತನವನ್ನೇ ಪಾವತಿಸದೇ ಸತಾಯಿಸಲಾಗುತ್ತಿದೆ. ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದರೆ ಅದನ್ನೂ ಪರಿಗಣಿಸಿಲ್ಲ.
ಇದೇ ವೃತ್ತಿಯಿಂದ ಜೀವನ ನಡೆಸುತ್ತಿರುವ ನನಗೆ ಕುಟುಂಬ ನಿರ್ವಹಣೆ ಕಷ್ಟವಾಗಿದೆ.’ ಎಂದು ಜಿಪಂ ಸಿಇಒ ಎಂ.ರೋಶನ್ ಎದುರು ಅಳಲು ತೋಡಿಕೊಂಡರು. ‘ನೀವು ನ್ಯಾಯ ಕೊಡಿಸದಿದ್ದರೆ ಆತ್ಮಹತ್ಯೆಯೇ ಗತಿ’ಎಂದು ಬೆದರಿಕೆಯೊಡ್ಡಿದರು. ಸಮಸ್ಯೆಯನ್ನು ಶೀಘ್ರ ಬಗೆಹರಿಸುವುದಾಗಿ ರೋಶನ್ ಭರವಸೆ ನೀಡಿದರು. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯ್ಕ ಇದ್ದರು

Read These Next

ತರಕಾರಿ ಮಾರುಕಟ್ಟೆ ಹಾಗೂ ಅವರೆಕಾಯಿ ಮಂಡಿಗಳನ್ನು ಎ.ಪಿ.ಎಂ.ಸಿ. ಯಾರ್ಡಿಗೆ ಸ್ಥಳಾಂತರಿಸುವಂತೆ ರೈತಸಂಘದಿಂದ ಪ್ರತಿಭಟನೆ

ಶ್ರೀನಿವಾಸಪುರ: ಪಟ್ಟಣದ ಮದ್ಯಭಾಗದಲ್ಲಿರುವ ತರಕಾರಿ ಮಾರುಕಟ್ಟೆ ಹಾಗೂ ಎಂ.ಜಿ.ರಸ್ತೆಯಲ್ಲಿರುವ ಅವರೆಕಾಯಿ ಮಂಡಿಗಳನ್ನು ಎ.ಪಿ.ಎಂ.ಸಿ. ...