ಕಾರವಾರ: ಸೆಪ್ಟೆಂಬರ್ 21ರಿಂದ 10ದಿನಗಳ ಆಧಾರ್ ಅದಾಲತ್ ನಡೆಯಲಿದೆ:ಜಿಲ್ಲಾಧಿಕಾರಿ ನಕುಲ್

Source: so english | By Arshad Koppa | Published on 22nd September 2017, 3:38 PM | Coastal News | Special Report |

ಕಾರವಾರ ಸೆ.22 : ಆಧಾರ್ ನೋಂದಣ  ಅದಾಲತ್ ನಗರಸಭೆ ಸಭಾಂಗಣದಲ್ಲಿ ಸೆಪ್ಟೆಂಬರ್ 21ರಿಂದ ಅಕ್ಟೋಬರ್ 1ರವರೆಗೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
    ಇ-ಆಡಳಿತ ಬೆಂಗಳೂರು ಹಾಗೂ ಜಿಲ್ಲಾಡಳಿತ ಕಾರವಾರ ಸಹಯೋಗದೊಂದಿಗೆ ಆಧಾರ್ ನೋಂದಣ  ಅದಾಲತ್ ನಡೆಯುತ್ತಿದ್ದು ಈ ಹಿಂದೆ ಆಧಾರ್ ವಿಷಯದಲ್ಲಿ ಆಗಿರುವ ದೋಷಗಳನ್ನು ಸರಿಪಡಿಸುವುದು ಹಾಗೂ ವಿವಿಧ ಕಾರಣಗಳಿಂದ ಈವರೆಗೆ ಆಧಾರ್ ನೋಂದಣ  ಮಾಡಿಸದಿದ್ದವರು ಈ ಆದಾಲತ್‍ನಲ್ಲಿ ನೋಂದಣ  ಮಾಡಿಸಲು ಸುವರ್ಣಾವಕಾಶ ಎಂದರು.
    ಈ ಹಿಂದೆ ಆಧಾರ್ ನೋಂದಣ  ಮಾಡಿಸಿ ತಾಂತ್ರಿಕ ಕಾರಣಗಳಿಂದ ಆಧಾರ್ ಸಿಗದಿದ್ದವರೂ ಮತ್ತೊಮ್ಮೆ ಆಧಾರ್ ನೋಂದಣ  ಮಾಡಿಸಬೇಕು ಅಲ್ಲದೆ,  ಮೊಬೈಲ್ ಲಿಂಕ್, ವಿಳಾಸ ಬದಲಾವಣೆ, ಹೆಸರಿನಲ್ಲಿನ ದೋಷಗಳ ತಿದ್ದುಪಡಿ, ವಯಸ್ಸು ಮತ್ತು ಹುಟ್ಟಿದ ದಿನಾಂಕದ ತಿದ್ದುಪಡಿಗಳ ಅವಶ್ಯವಿದ್ದಲ್ಲೂ ಅದಾಲತ್ ಕೇಂದ್ರದಲ್ಲಿ ನೋಂದಣಿ  ಮಾಡಿಸಬೇಕಿದೆ ಎಂದರು.
    ಜಿಲ್ಲಾದ್ಯಂತ ಪ್ರತಿ ತಾಲೂಕಿನಲ್ಲೂ ಆಧಾರ್ ನೋಂದಣ  ಅದಾಲತ್ ನಡೆಯಲಿದ್ದು ಪ್ರತಿ ತಾಲೂಕಿನಲ್ಲಿ 10 ದಿನಗಳ ಕಾಲ ನಾಲ್ಕು ಕಿಟ್‍ಗಳ ಮೂಲಕ ನಿರಂತರ ಪ್ರಕ್ರಿಯೆ ನಡೆಯಲಿದೆ. ಜಿಲ್ಲೆಯ ಎಲ್ಲರಿಗೂ ಆಧಾರ್ ಸೌಲಭ್ಯ ಒದಗಿಸುವುದು ಇದರ ಮುಖ್ಯ ಉದ್ದೇಶ ಎಂದರು.
    ವಿಶೇಷವಾಗಿ ಕಾರವಾರ ನಗರ ವ್ಯಾಪ್ತಿಯಲ್ಲಿ ವಯೋವೃದ್ಧರು, ವಿಕಲಾಂಗತೆಯಿಂದ ಆಧಾರ್ ನೋಂದಣಿಗೆ ಆಗಮಿಸದೆ ಬಿಟ್ಟು ಹೋಗಿರುವವರು ಹಾಗೂ ಹಾಸಿಗೆ ಹಿಡಿದಿರುವವರಿಗಾಗಿ ಸಹಾಯವಾಣಿ ಸೌಲಭ್ಯವನ್ನು ಕಲ್ಪಿಸಲಾಗಿದ್ದು ಕರೆ ಬಂದಲ್ಲಿ ಅವರ ಮನೆಗೇ ತೆರಳಿ ಆಧಾರ್ ನೋಂದಣ  ಮಾಡಿಸಲಾಗುವುದು. ಕಂಟ್ರೋಲ್ ರೂಂ ಸಹಾಯವಾಣ  ಸಂಖ್ಯೆ 08382 229857 ಹಾಗೂ 1077 ನಂಬರಿಗೆ ಕರೆ ಮಾಡಿ ಸೌಲಭ್ಯವನ್ನು ಪಡೆಯಬಹುದಾಗಿದೆ ಎಂದು ಅವರು ತಿಳಿಸಿದರು.

Read These Next

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...