ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರ ಚುನಾವಣೆ ಮತ ಏಣಿಕೆ ಬೆಳಿಗ್ಗೆ 8 ಗಂಟೆಯಿಂದ ಆರಂಭ.

Source: SO News | By Laxmi Tanaya | Published on 10th November 2020, 6:48 AM | State News |

ಧಾರವಾಡ :  ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೆತ್ರಕ್ಕೆ ಅಕ್ಟೋಬರ್ 28 ರಂದು ಚುನಾವಣೆ ಜರುಗಿದ್ದು, ಒಟ್ಟು 52,067 ಜನ ಮತಚಲಾಯಿಸಿದ್ದು ಒಂದು ಅಂಚೆ ಮತಪತ್ರವಿದ್ದು ಒಟ್ಟು 52,068 ಮತಗಳ ಏಣಿಕೆ ನಾಳೆ (ನವೆಂಬರ್ 10 ರಂದು) ಬೆಳಿಗ್ಗೆ  8 ಗಂಟೆಯಿಂದ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ  ಜರುಗಲಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರು ಆಗಿರುವ ಚುನಾವಣಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಹೇಳಿದರು.

  ಮತ ಏಣಿಕೆ ಕೇಂದ್ರವಾಗಿರುವ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಿರುವ ಮಾದ್ಯಮ ಕೇಂದ್ರದಲ್ಲಿ ಮಾದ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

 ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೆತ್ರವೂ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದ್ದು, ಒಟ್ಟು 74,268 ನೋಂದಾಯಿತ ಮತದಾರರನ್ನು ಹೊಂದಿದೆ. ಈ ಪೈಕಿ ಅಕ್ಟೋಬರ್ 28 ರಂದು ಜರುಗಿದ ಚುನಾವಣೆಯಲ್ಲಿ  35,660 ಪುರುಷ, 16,406 ಮಹಿಳೆಯರು ಮತ್ತು ಇತರೆ ಒಂದು  ಹಾಗೂ ಒಂದು ಅಂಚೆ ಮತಪತ್ರ ಸೇರಿದಂತೆ ಒಟ್ಟು 52,068 ಜನ ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ. ಒಟ್ಟು ಶೇ. 70.11 ಪ್ರಮಾಣದಲ್ಲಿ ಮತದಾನವಾಗಿದೆ ಎಂದು ಹೇಳಿದರು.

 ಮಂಗಳವಾರ ಬೆಳಿಗ್ಗೆ 8 ಗಂಟೆಯಿಂದ ಮತ ಏಣಿಕೆ ಕಾರ್ಯ ಪ್ರಾರಂಭವಾಗುತ್ತದೆ. ಪ್ರಸ್ತುತ ಮತ ಏಣಿಕೆ ಎರಡು ಕೊಠಡಿಗಳನ್ನು ನಿಗದಿಗೊಳಿಸಿದ್ದು, 14 ಟೇಬಲ್‍ಗಳಲ್ಲಿ ಮತ ಏಣಿಕೆ ಕೈಗೊಳ್ಳಲಾಗುತ್ತಿದೆ. ಮತ ಏಣಿಕೆ ಕಾರ್ಯಕ್ಕಾಗಿ ಓರ್ವ ಚುನಾವಣಾಧಿಕಾರಿ, 4 ಜನ ಸಹಾಯಕ ಚುನಾವಣಾಧಿಕಾರಿ ಮತ್ತು ಹೆಚ್ಚುವರಿಯಾಗಿ 4 ಜನ ಮತ ಏಣಿಕೆ ಚುನಾವಣಾಧಿಕಾರಿಗಳು ಸೇರಿದಂತೆ  ವಿವಿಧ ಕಾರ್ಯಗಳಿಗಾಗಿ ಒಟ್ಟು 64 ಸಿಬ್ಬಂದಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

 ಕೋವಿಡ್ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದ್ದು, ಮತ ಏಣಿಕೆ ಕೇಂದ್ರಕ್ಕೆ ಬರುವ ಪ್ರತಿಯೋಬ್ಬರು ಕಡ್ಡಾಯಾಗಿ ಮಾಸ್ಕ್ ಧರಿಸಿರಬೇಕು. ಮತ್ತು ಸಾಮಾಜಿಕ ಅಂತರ ಪಾಲನೆಯೊಂದಿಗೆ ಮತ ಏಣಿಕಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿರುವ ಸ್ಯಾನಿಟೈಸರ್ ಪ್ರತಿ ಗಂಟೆಗೊಮ್ಮೆ ಬಳಸಬೇಕು ಎಂದು ಹೇಳಿದರು.

ಮತ ಎಣಿಕೆ ಕೇಂದ್ರದಲ್ಲಿ ಭದ್ರತೆ ವ್ಯವಸ್ಥೆ: ಕೃಷಿ ವಿಶ್ವವಿದ್ಯಾಲಯದ ಮತ ಕೇಂದ್ರದಲ್ಲಿ ಮತ ಪೆಟ್ಟಿಗೆಗಳನ್ನು ಭದ್ರತಾ ಕೊಠಡಿಯಲ್ಲಿ ಇರಿಸಲಾಗಿದ್ದು ಎಸಿ ಹಾಗೂ ಎಸಿಪಿ ನೇತೃತ್ವದಲ್ಲಿ  ಭದ್ರತೆಯನ್ನು ಒದಗಿಸಲಾಗಿದೆ. ಮತಏಣಿಕೆ ಕೇಂದ್ರಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು ದಿನದ 24 ಗಂಟೆ ಪೊಲೀಸ್ ತಂಡ ಇದರ ನಿಗಾವಹಿಸಿದೆ. ಭದ್ರತಾ ಕೊಠಡಿಗೆ ಒಂದೆ ಪ್ರವೇಶ ದ್ವಾರವಿದ್ದು, ಅಭ್ಯರ್ಥಿಗಳು ಭದ್ರತಾ ಕೊಠಡಿಯನ್ನು ಹೊರಗಿನಿಂದ ತಪಾಸಣೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಶುಷ್ಕ ದಿನ: ಮತ ಏಣಿಕೆಗೆ ಸಂಬಂದಿಸಿದಂತೆ ಧಾರವಾಡ ಜಿಲ್ಲಾಧಿಕಾರಿಗಳು ನವೆಂಬರ್ 10, 2020ರ ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭಿಸಿ ನವೆಂಬರ್ 11 ಬೆಳಿಗ್ಗೆ 8 ಗಂಟೆಯವರೆಗೆ ಮಧ್ಯಪಾನ, ಮಧ್ಯಮಾರಾಟ, ಮಧ್ಯಸಾಗಾಣಿಕೆ ಮತ್ತು ಮಧ್ಯ ಸಂಗ್ರಹಣೆಯನ್ನು  ನಿಷೇಧಿಸಿ ಸದರಿ ದಿನಗಳಂದು ಶುಷ್ಕ ದಿವಸಗಳೆಂದು ಘೋಷಿಸಿ, ಆದೇಶಿಸಿದ್ದಾರೆ.

ಮತ ಏಣಿಕಾ ಕಾರ್ಯಕ್ಕೆ 274 ಪೊಲೀಸ್ ಅಧಿಕಾರಿಗಳ, ಸಿಬ್ಬಂದಿಗಳ ನಿಯೋಜನೆ: ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿರುವ ಹುಬ್ಬಳ್ಳಿ-ಧಾರವಾಡ ಮಹಾನಗರ ಉಪ ಪೊಲೀಸ್ ಆಯುಕ್ತ ಪಿ.ಕೃಷ್ಣಕಾಂತ ಅವರು ಮಾತನಾಡಿ, ಮತ ಏಣಿಕಾ ಕಾರ್ಯದ ಸಂದರ್ಭದಲ್ಲಿ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ನೇಮಿಸಲಾಗಿದೆ. 4 ಸಹಾಯಕ ಪೊಲೀಸ್ ಆಯುಕ್ತರು, 12 ಪೊಲೀಸ್ ಇನ್ಸಪೆಕ್ಟರ್, 16 ಪೊಲೀಸ್ ಸಬ್ ಇನ್ಸಪೇಕ್ಟರ್, 31 ಸಹಾಯಕ ಸಬ್ ಇನ್ಸಪೇಕ್ಟರ್, 71 ಹೆಡ್ ಕಾನ್ಸಟೆಬಲ್, 126 ಪೊಲೀಸ್ ಪೇದೆ, 14 ಜನ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿ ಒಟ್ಟು 274 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನೇಮಿಸಲಾಗಿದ್ದು ಮೂರು ಹಂತದ ಭದ್ರತಾ ವ್ಯವಸ್ತೆಯನ್ನು ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

 ಮತಪೆಟ್ಟಿಗೆಗಳನ್ನು ಇಟ್ಟಿರುವ ಭದ್ರತಾ ಕೊಠಡಿಗೆ ನಿರಂತರವಾದ ಪೊಲೀಸ್ ಭದ್ರತೆ ನೀಡಲಾಗಿದ್ದು ಸಿಸಿಟಿವಿ ಮೂಲಕ ನಿರಂತರ ನಿಗಾ ಇಡಲಾಗಿದೆ. ನಾಳೆ ಜರುಗುವ ಮತ ಏಣಿಕೆ ಕಾರ್ಯಕ್ಕೆ ಆಗಮಿಸುವ ಸಿಬ್ಬಂದಿ, ರಾಜಕೀಯ ಪಕ್ಷಗಳ ಮತ ಏಣಿಕೆ ಏಜೆಂಟರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಆಗಮಿಸುವ ಎಲ್ಲರೂ ಚುನಾವಣಾಧಿಕಾರಿಗಳು ನೀಡಿರುವ ಚುನಾವಣಾ ಕಾರ್ಯದ ಗುರುತಿನ ಪತ್ರ (ಪಾಸ್)ವನ್ನು  ಕಡ್ಡಾಯವಾಗಿ ಧರಿಸಿರಬೇಕು ಎಂದು ಅವರು ತಿಳಿಸಿದರು.

 ಸುದ್ಧಿಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿಗಳಾಗಿರುವ ಧಾರವಾಡ ಜಿಲ್ಲಾಧಿಕಾರಿ ನಿತೇಶ.ಕೆ.ಪಾಟೀಲ, ಉತ್ತರಕನ್ನಡ ಜಿಲ್ಲಾಧಿಕಾರಿ ಹರಿಶಕುಮಾರ, ಮತ ಏಣಿಕೆ ಸಹಾಯಕ ಚುನಾವಾಧಿಕಾರಿಯಾಗಿರುವ  ಉಪವಿಭಾಗಾಧಿಕಾರಿ ಡಾ.ಗೋಪಾಲಕೃಷ್ಣ ಬಿ. ಮತ್ತು ಧಾರವಾಡ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಹಾವೇರಿ ಅಪರ ಜಿಲ್ಲಾಧಿಕಾರಿ ಪಿ.ಯೋಗೇಶ್ವರ, ಹಾವೇರಿ ಉಪವಿಭಾಗಾಧಿಕಾರಿ ಡಾ. ದಿಲೀಪ ಸಶಿ, ಧಾರವಾಡ ತಹಶಿಲ್ದಾರ ಡಾ.ಸಂತೋಷ ಬಿರಾದಾರ, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಯಶವಂತ ಮದೀನಕರ, ಆರ್‍ಸಿಎಚ್‍ಓ ಅಧಿಕಾರಿ ಡಾ. ಎಸ್ ಎಮ್ ಹೊನಕೇರಿ, ತಾಲೂಕಾ ಆರೋಗ್ಯ ಅಧಿಕಾರಿ ಡಾ. ಅಯ್ಯನಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.

 ಸುದ್ಧಿಗೋಷ್ಠಿ ನಂತರ ಚುನಾವಣಾಧಿಕಾರಿಗಳು ವಿವಿಧ ಅಧಿಕಾರಿಗಳೊಂದಿಗೆ ಮತ ಏಣಿಕಾ ಕೇಂದ್ರದ ವಿವಿಧ ಕೊಠಡಿಗಳಿಗೆ ಭೇಟಿ ನೀಡಿ, ಸಿದ್ಧತೆಯನ್ನು ಪರಿಶೀಲಿಸಿದರು.

****
 ಕರ್ನಾಟಕ ವಿಧಾನ ಪರಿಷತ್ತಿನ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣಾ ವೀಕ್ಷಕರಾಗಿರುವ, ಸರ್ಕಾರದ ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಇಂದು ಕೃಷಿ ವಿಶ್ವವಿದ್ಯಾಲಯದ ಮತ ಏಣಿಕೆ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಗಳನ್ನು ಪರಿಶೀಲಿಸಿದರು.

****

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!