ನೆರವಿನ ಹಸ್ತ ಚಾಚಿದ "ಕರ್ನಾಟಕ ರಾಜ್ಯ ನಾಮಧಾರಿ ಯುವ ವೇದಿಕೆ ಬೆಂಗಳೂರು"

Source: so news | By MV Bhatkal | Published on 13th June 2021, 6:39 PM | Coastal News | Don't Miss |


ಭಟ್ಕಳ:ಬೆಂಗಳೂರಿಗೆ ಉದ್ಯೋಗಕ್ಕೆಂದು  ಹೋಗಿ  ಅಲ್ಲಿಯೇ  ಜಿಲ್ಲೆಯ  ಯುವಕರನ್ನು ಸಂಘಟಿಸಿ 
ಸಂಘ ಕಟ್ಟಿಕೊಂಡು  ಉತ್ತಮ ಕಾರ್ಯ ಮಾಡುತ್ತಿರುವ ಕರ್ನಾಟಕ ರಾಜ್ಯ ನಾಮಧಾರಿ  ಯುವ ವೇದಿಕೆ ಬೆಂಗಳೂರು ಕೋವಿಡ್ ನಿಂದ ಆರ್ಥಿಕವಾಗಿ   ಸಂಕಷ್ಟಕ್ಕೊಳಗಾದ ಜಿಲ್ಲೆಯ  ಸಂತ್ರಸ್ಥರಿಗೆ ಆಸರೆಯಾಗುತ್ತಿದ್ದಾರೆ.
ಸಿದ್ದಾಪುರ ಮೂಲದ ಸದ್ಯ ಬೆಂಗಳೂರಿನಲ್ಲಿ ನೆಲೆಸಿರುವ ಉದ್ಯಮಿ ಗಣಪತಿ ನಾಯ್ಕ ಇವರ ಅಧ್ಯಕ್ಷತೆಯಲ್ಲಿ  ಜಿಲ್ಲೆಯ ವಿವಿಧ ತಾಲೂಕಿನ ಸದಸ್ಯರನ್ನೊಳಗೊಂಡ ತಂಡ ಉತ್ತಮ ಉದ್ದೇಶದೊಂದಿಗೆ  ಪ್ರಾರಂಭಗೊಂಡು  ಜಿಲ್ಲೆಯ  ಅನೇಕ ಬಡ ಕುಟುಂಬದವರಿಗೆ ಶೈಕ್ಷಣಿಕವಾಗಿ ,ಆರ್ಥಿಕವಾಗಿ ಸಹಾಯ ಹಸ್ತ ನೀಡಿ ಎಲೆಮರೆಯ ಕಾಯಿಯಂತೆ ತಮ್ಮ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ   ಯುವಕರ ತಂಡವು ಉತ್ತರ ಕನ್ನಡ ಜಿಲ್ಲೆಯ  ಆಯ್ದ ಭಾಗದಲ್ಲಿ ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಎಲ್ಲಾ ವರ್ಗದ ಅರ್ಹ ಫಲಾನುಭವಿಗಳಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು  ದಿನಸಿ ಆಹಾರ ಪೊಟ್ಟಣವನ್ನು ವಿತರಿಸಿದೆ. 
ಈಗಾಗಲೇ ಜಿಲ್ಲೆಯ  ಕುಮಟಾ , ಭಟ್ಕಳ , ಅಂಕೋಲಾ, ಶಿರಸಿ ಹಾಗೂ ಸಿದ್ದಾಪುರದ ಕೆಲ ಭಾಗಗಳಲ್ಲಿ ಲಾಕ್ ಡೌನ್ ನಿಂದಾಗಿ ಉದ್ಯೋಗ ವಂಚಿತ ಕುಟುಂಬಕ್ಕೆ, ಹಾಗೂ ಅರೋಗ್ಯ ಸಮಸ್ಯೆ ಎದುರಿಸುತ್ತಿರುವ ನೂರಾರು  ಕುಟುಂಬಗಳಿಗೆ  2 ಲಕ್ಷಕ್ಕೂ ಅಧಿಕ ಮೌಲ್ಯದ  ಆಹಾರ ಸಾಮಗ್ರಿಗಳನ್ನು ನೀಡಿ ಆಸರೆಯಾಗಿದೆ. 
ಕೊರೋನಾ ರೋಗಕ್ಕೆ ತುತ್ತಾಗಿ ಜೀವ ಕೆಳೆದುಕೊಂಡ ಕೆಲ ಮನೆಗಳಲ್ಲಿ ದುಡಿಯುವ ಕೈಗಳಿಲ್ಲದೇ ಕಂಗಾಲಾಗಿದ್ದ ಕುಟುಂಬಗಳಿಗೆ ಅವಶ್ಯಕ  ವಸ್ತು
ನೀಡಿ ಸ್ವಾಂತನ ಹೇಳಿದೆ.    ಕರೋನಾ  ಇಲ್ಲದ ಸಂದರ್ಭದಲ್ಲಿಯೂ ಈ ವೇದಿಕೆಯಿಂದ  ಜಿಲ್ಲೆಯ ಬಡ ಪ್ರತಿಭಾವಂತ ಮಕ್ಕಳ ಶಿಕ್ಷಕಣಕ್ಕೆ ನೆರವು ನೀಡಿದೆ. 
ಜಿಲ್ಲೆಯಲ್ಲಿ ಹಲವು  ತಾಲೂಕಿನಲ್ಲಿ  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಉಚಿತ ತರಬೇತಿಯನ್ನೂ ಸಹ ನೀಡಿ  ಜಿಲ್ಲೆಯ ವಿದ್ಯಾರ್ಥಿಗಳಿಗೆ ನೆರವಾಗಿದೆ.  ಈ ಎಲ್ಲ ಸಮಾಜಮುಖಿ ಕಾರ್ಯವನ್ನು ವೇದಿಕೆಯ  ವಿವಿದ ತಾಲೂಕಿನ 24 ಸದಸ್ಯರು ಹಾಗೂ ದಾನಿಗಳ ಸಹಾಯದಿಂದ  ಮಾಡಿದ್ದು  ಅವರೆಲ್ಲರನ್ನು ಈ ಸಂದರ್ಭದಲ್ಲಿ ವೇದಿಕೆಯು ಸ್ಮರಿಸಿ ಕೃತಜ್ಞತೆ  ಸಲ್ಲಿಸಿದೆ. ದೂರದ ಬೆಂಗಳೂರಿನಲ್ಲಿದ್ದುಕೊಂಡು ನಮ್ಮೂರಿನ ಸಂಕಷ್ಟ ಕುಟುಂಬಗಳ ನೆರವಿಗೆ ದಾವಿಸುತ್ತಿರುವು  ಇವರ ಸೇವಾ ಕಾರ್ಯಕ್ಕೆ ಹಲವೆಡೆ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...