ಬೆಂಗಳೂರು: ಸಚಿವ ಸ್ಥಾನಕ್ಕೆ ಜಾರಕಿಹೊಳಿ ರಾಜೀನಾಮೆ, ರಾಜ್ಯಪಾಲರಿಂದ ಅಂಗೀಕಾರ, ವರಿಷ್ಠರ ಸೂಚನೆಯಂತೆ ಪದತ್ಯಾಗ?

Source: VB | By S O News | Published on 4th March 2021, 2:34 PM | State News |

ಬೆಂಗಳೂರು: ಯುವತಿಗೆ ಉದ್ಯೋಗದ ನೆಪವೊಡ್ಡಿ ತನ್ನ ಲೈಂಗಿಕ ತೃಷೆಗೆ ಬಳಸಿಕೊಂಡ ಆರೋಪದಸಿಡಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ಸಲ್ಲಿಸಿದ್ದು, ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.

'ನನ್ನ ಮೇಲೆ ಬಂದಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ಶೀಘ್ರದಲ್ಲೇ ತನಿಖೆ ಆಗಬೇಕು. ನಿರ್ದೋಷಿಯಾಗುವ ವಿಶ್ವಾಸವಿದ್ದರೂ ನೈತಿಕ ಹೊಣೆಯನ್ನು ಹೊತ್ತು ನಾನು ನನ್ನ ಸಚಿವ ಸಂಪುಟ ಸ್ಥಾನಕ್ಕೆ

ರಮೇಶ್ ಜಾರಕಿಹೊಳಿ ಪ್ರಕರಣಕ್ಕೆ 'ಸಂಬಂಧಿದಂತೆ ಈಗಾಗಲೇ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ. ಸಿಐಡಿ, ಸಿಬಿಐ ಅಥವಾ ಬೇರೆ ರೀತಿಯ ತನಿಖೆ ನಡೆಸುವ ಕುರಿತು ಸರಕಾರದ ಮಟ್ಟದಲ್ಲಿ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಸಚಿವ ಸ್ಥಾನಕ್ಕೆ ರಮೇಶ್ ಈಗಾಗಲೇ ರಾಜೀನಾಮೆ ಸಲ್ಲಿಸಿದ್ದಾರೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ.

ಬಸವರಾಜ ಬೊಮ್ಮಾಯಿ, ಕಾನೂನು ಮತ್ತು ಗೃಹ ಸಚಿವ

ಅನೈತಿಕ ರಾಜಕೀಯದ ಶಿಶುವಾಗಿರುವ 'ರಾಜ್ಯದ ಬಿಜೆಪಿ ಸರಕಾರ ಸಚಿವ ರಮೇಶ್ ಜಾರಕಿಹೊಳಿಯ ಅನೈತಿಕ ಕೃತ್ಯವನ್ನು ಸಮರ್ಥಿಸುತ್ತ ತನ್ನ
ಮಾನ, ಮರ್ಯಾದೆಯನ್ನು ತಾನೇಹರಾಜುಹಾಕಿಕೊಳ್ಳುತ್ತಿದೆ.
ಬಿಜೆಪಿಯ ನೈತಿಕಭ್ರಷ್ಟ ನಾಯಕರು ಒಬ್ಬೊಬ್ಬರಾಗಿ
ದೇಶದ ಮುಂದೆ ಬೆತ್ತಲಾಗುತ್ತಿದ್ದಾರೆ.ಅನೈತಿಕ ಚಟುವಟಿಕೆಯಲ್ಲಿ ತೊಡಗಿ ತನ್ನ ಮತ್ತು ಪಕ್ಷದ ಮಾತ್ರವಲ್ಲ, ಕರ್ನಾಟಕ ರಾಜ್ಯದ ಮಾನಹಾನಿ ಮಾಡಿರುವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ದಾಖಲಿಸಿ ನಿಷ್ಪಕ್ಷ ತನಿಖೆ ನಡೆಸಬೇಕು.

ಸಿದ್ದರಾಮಯ್ಯ, ಪ್ರತಿಪಕ್ಷ ನಾಯಕ, ಮಾಜಿ ಸಿಎಂ

ಸಿಡಿ ವಿಚಾರವನ್ನಿಟ್ಟುಕೊಂಡು ರಾಜಕೀಯ ಮಾಡಲು ನನಗೆ ಇಷ್ಟವಿಲ್ಲ. ರಾಜಕೀಯ ಮಾಡಲು ಬೇರೆ ವಿಚಾರಗಳಿವೆ. ಇಂತಹ ವಿಷಯಗಳ ಬಗ್ಗೆ ಚರ್ಚೆ ಮಾಡುವುದು ಶೋಭೆ ತರುವುದಿಲ್ಲ. ನನ್ನ ಸರಕಾರ ಉರುಳಿಸಿದ್ದರೂ ನನಗೇನು ಬೇಸರವಿಲ್ಲ. 'ರಾಕ್ಷಸ ಸರಕಾರ ತೆಗೆದು ರಾಮರಾಜ್ಯ ತಂದಿದ್ದೇವೆ' ಎಂದಿದ್ದಾರೆ ಅಲ್ಲವೇ? ಈಗ ಯಾವ ಸರಕಾರ ಇದೆ ಎನ್ನುವುದನ್ನು ಕುಳಿತು ಆತ್ಮಾವಲೋಕನ ಮಾಡಿಕೊಳ್ಳಲಿ.

ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

ರಾಜೀನಾಮೆಯನ್ನು ನೀಡಿರುತ್ತೇನೆ. ದಯವಿಟ್ಟು ಇದನ್ನು ಅಂಗೀಕರಿಸಬೇಕು ಎಂದು ತಮ್ಮನ್ನು ವಿನಂತಿಸುತ್ತೇನೆ' ಎಂದು ಜಾರಕಿಹೊಳಿ, ಐದುಸಾಲಿನರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸಲ್ಲಿಸಿದ್ದಾರೆ.

ಅಶ್ಲೀಲ ಸಿಡಿ ಬಹಿರಂಗಗೊಂಡ ಬೆನ್ನಲ್ಲೇ ನಾನು ಯಾವುದೇ ತಪ್ಪು ಮಾಡಿಲ್ಲ. ಸಿಡಿಯಲ್ಲಿರುವ ವ್ಯಕ್ತಿ ನಾನಲ್ಲ. ನನ್ನ ವಿರುದ್ಧ ಆರೋಪ ಮಾಡಿದ್ದು, ಸಮಗ್ರ ತನಿಖೆ ಆಗಬೇಕು' ಎಂದು ಹೇಳಿಕೆ ನೀಡಿದ್ದ ರಮೇಶ್ ಜಾರಕಿಹೊಳಿ, ಬಿಜೆಪಿ ವರಿಷ್ಠರ ಸೂಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

ತನಿಖೆಗೆ ಒತ್ತಾಯ: 'ನನ್ನ ಅಣ್ಣ ರಮೇಶ್  ಜಾರಕಿಹೊಳಿ ಅವರ
ವಿರುದ್ಧದ ಸಿಡಿ ಕುರಿತು ಸಿಐಡಿ ಅಥವಾ ಸಿಬಿಐ ತನಿಖೆಯಾಗಬೇಕು. ಇದರಲ್ಲಿ ರಾಜ ಕೀಯ ಷಡ್ಯಂತ್ರ ಅಡಗಿದೆ. ಇದೊಂದು ನಕಲಿ ಆಡಿಯೊ-ವೀಡಿಯೊ ಆಗಿದ್ದು, ಈ ಕುರಿತು ಸಿಐಡಿ ಅಥವಾ ಸಿಬಿಐ ತನಿಖೆ ನಡೆಸಿದರೆ ಮಾತ್ರ ಸತ್ಯ ಗೊತ್ತಾಗಲಿದೆ' ಎಂದು ಶಾಸಕ, ಕೆಎಂಎಫ್ ಅಧ್ಯಕ್ಷರೂ ಆಗಿರುವ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಸಿಎಂ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ.

ರಾಜೀನಾಮೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಖುದ್ದು ಭೇಟಿ ಮಾಡಿ ಸಮಾಲೋಚನೆ ನಡೆಸಿದ ಬಾಲಚಂದ್ರ ಜಾರಕಿಹೊಳಿ, 'ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಅಪ್‌ಲೋಡ್ ಮಾಡಿದ್ದು, ಇದು ದುಬೈ, ರಶ್ಯ, ಸಿಂಗಾಪುರದಿಂದ ಅಪ್‌ಲೋಡ್ ಆಗಿದೆ. ಹೀಗಾಗಿ ಉನ್ನತ ತನಿಖೆ ನಡೆಸಬೇಕು. ಈ ರೀತಿಯ ಕೃತ್ಯ ನಡೆಸಿರುವವರ ವಿರುದ್ದ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡುತ್ತೇವೆ' ಎಂದು ಹೇಳಿದರು.

'ಬಿಜೆಪಿ ಹೈಕಮಾಂಡ್ ಭೇಟಿಗಾಗಿ ರಮೇಶ್ ಜಾರಕಿಹೊಳಿ ಅವರು ಹೊಸದಿಲ್ಲಿಗೆ ತೆರಳಲಿಲ್ಲ. ಬದಲಿಗೆ ಅವರು ಬೆಂಗಳೂರಿನಲ್ಲೇ ಇದ್ದಾರೆ. ಅವರು ಏನಾದರೂ ಇದೀಗ ಬಿಡುಗಡೆ ಆಗಿರುವ ಸಿಡಿಯನ್ನು ಆಧರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಸಚಿವ ಸಂಪುಟವೇ ಇರುವುದಿಲ್ಲ' ಎಂದು ಬಾಲಚಂದ್ರ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದರು.

ರಾಜ್ಯ ರಾಜಕೀಯದಲ್ಲಿ ಜಾರಕಿಹೊಳಿ ಕುಟುಂಬಕ್ಕೆ ಕೆಟ್ಟ ಹೆಸರು ತರಲು ಕೆಲವರು ಷಡ್ಯಂತ್ರ ನಡೆಸಿದ್ದು, ನನ್ನ ಸಹೋದರನನ್ನು ರಾಜಕೀಯವಾಗಿ ಕುಗ್ಗಿಸಲು ಈ ರೀತಿಯ ಬಲೆ ಹೆಣೆಯಲಾಗಿದೆ. ಇದೊಂದು ನಕಲಿ ವೀಡಿಯೊ ಆಗಿದ್ದು, ಒಂದು ವೇಳೆ ಸಿಡಿ ನಿಜವಾಗಿ ದ್ದರೆ ನಾನೇ ಖುದ್ದಾಗಿ ಅವರಿಗೆ ರಾಜೀನಾಮೆ ನೀಡಲು ಹೇಳುತ್ತಿದ್ದೆ' ಎಂದು ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಸಚಿವ ಸಂಪುಟದಲ್ಲಿ ಚರ್ಚೆ: ಮಾ.4ರಿಂದ ಬಜೆಟ್ ಅಧಿವೇಶನ

ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಹಿಂದೆ ಷಡ್ಯಂತ್ರ: ಡಿಸಿಎಂ

ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಹಿಂದೆ ಷಡ್ಯಂತ್ರವಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದುರುದ್ದೇಶ ಪೂರ್ವಕವಾಗಿ ಸಚಿವ ರಮೇಶ್ ಜಾರಕಿಹೊಳಿಯವರನ್ನು ಸಿಲುಕಿಸುವ ಪ್ರಯತ್ನ ನಡೆದಿದೆ. ಮೇಲ್ನೋಟಕ್ಕೆ ಇದು ಸತ್ಯಕ್ಕೆ ದೂರವಾದ ಘಟನೆ ಎಂದು ಅನಿಸುತ್ತಿದೆ. ಘಟನೆ ಕುರಿತು ತನಿಖೆ ನಡೆದ ನಂತರವಷ್ಟೇ ನಿಜ ಹೊರಬರಲು ಸಾಧ್ಯ. ಪ್ರಕರಣದ ಕುರಿತು ಪಕ್ಷದ ವರಿಷ್ಠರು ಗಮನ ಹರಿಸಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಆರಂಭಗೊಳ್ಳಲಿರುವುದರಿಂದ ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅಶ್ಲೀಲ ವೀಡಿಯೊ ಪ್ರಕರಣ ಸಂಬಂಧ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ. ಈ ಮಧ್ಯೆ ರಮೇಶ್ ಜಾರಕಿಹೊಳಿ ರಾಜೀನಾಮೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಗೋಕಾಕ್ ಕ್ಷೇತ್ರದಲ್ಲಿ ಬೆಂಬಲಿಗರು ಒತ್ತಾಯಪೂರ್ವಕವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಆರೋಪ ಕೇಳಿಬಂದಿದೆ. ಈ ನಡುವೆ ಅವರ ಬೆಂಬಲಿಗನೋರ್ವ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ವಿಫಲಯತ ನಡೆಸಿದ ಘಟನೆಯೂ ನಡೆದಿದೆ.

ಸಹೋದರನಿಗೆ ಸ್ಥಾನ: ರಮೇಶ್ ರಾಜೀನಾಮೆಯಿಂದ ತೆರವಾದ ಸಚಿವ ಸ್ಥಾನವನ್ನು ಅವರ ಸಹೋದರ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ನೀಡುವ ಸಂಬಂಧ ಚರ್ಚೆ ನಡೆಸಲಾಗುತ್ತಿದೆ ಎಂದು ಗೊತ್ತಾಗಿದೆ. ಆದರೆ, ನನಗೆ ಸಚಿವ ಸ್ಥಾನ ನೀಡುವ ಸಂಬಂಧ ಯಾವುದೇ ಚರ್ಚೆ ನಡೆಸಿಲ್ಲ' ಎಂದು ಬಾಲಚಂದ್ರ ಜಾರಕಿಹೊಳಿ ಸ್ಪಷ್ಟಣೆ ನೀಡಿದ್ದಾರೆ.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!