ಬೆಂಗಳೂರು: 2021ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರಕಟ - ಸಚಿವ ಬಿ. ಶ್ರೀರಾಮುಲು

Source: S O News service | By I.G. Bhatkali | Published on 19th October 2021, 9:51 PM | State News |

ಬೆಂಗಳೂರು: 2021ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆರು ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ. ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ಪ್ರಶಸ್ತಿ ಫಲಕ, 20 ಗ್ರಾಂ ಚಿನ್ನದ ಪದಕ ಹಾಗೂ 5 ಲಕ್ಷ ನಗದು ಮೊತ್ತವನ್ನು ನೀಡಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಬಿ. ಶ್ರೀರಾಮುಲು ಅವರು ತಿಳಿಸಿದರು.

ಇಂದು ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಬೆಂಗಳೂರಿನ ಮಹಾರಾಣಿ  ಕ್ಲಸ್ಟರ್  ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಲ್. ಗೋಮತಿದೇವಿ ಅವರ ನ್ಭೆತೃತ್ವದ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಆಯ್ಕೆ ಸಮಿತಿಯು 2021 ನೇ ಸಾಲಿನ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಹ ಆರು ಜನ ಸಾಧಕರನ್ನು ಆಯ್ಕೆ ಮಾಡಿದೆ.  
  
2021ನೇ ಸಾಲಿನ ಶ್ರೀ ವಾಲ್ಮೀಕಿ ಪ್ರಶಸ್ತಿಗೆ ಬೆಂಗಳೂರು ವಿಭಾಗದಿಂದ  ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ಕಸಾಪುರ ವಾಸಿಯಾದ ಕೆ.ಸಿ. ನಾಗರಾಜು ಅವರು ಸಾಮಾಜಿಕ ಕ್ಷೇತ್ರದಲ್ಲಿ ಅಯ್ಕೆಯಾಗಿದ್ದು, ಸದರಿ ಸಾಧಕರು ಸುಮಾರು 30-40 ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿದ್ದು ಹಲವಾರು ಸಂಘ ಸಂಸ್ಥೆಗಳ ಮುಖೇನ ಜನಪರ ಕಾರ್ಯಕ್ರಮಗಳಲ್ಲಿ ಹಾಗೂ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.

ಬೆಳಗಾವಿ ವಿಭಾಗದಿಂದ  ಲಕ್ಷ್ಮಿಗಣಪತಿ ಸಿದ್ದಿ ಅವರು ಇತರೆ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿನ ಬಹುತೇಕ ಸಿದ್ದಿ ಜನರು ಅರಣ್ಯ ಪ್ರದೇಶದಲ್ಲಿ ವಾಸಿಸ್ಮತ್ತಿರುವುದರಿಂದ ಪಟ್ಟಣದ ಸಂಪರ್ಕ ಸೌಲಭ್ಯಗಳ ಕೊರತೆ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಿದ್ದಿ ಜನಾಂಗದವರು ವಾಸಿಸುವ ಪ್ರದೇಶಗಳಿಗೆ ವಾಹನ ಹೋಗುವುದು ಅಸಾಧ್ಯವಾಗಿತ್ತು. ಸದರಿ ಸಾಧಕರು ಕಳೆದ 35 ವರ್ಷಗಳಿಂದ ನಾಟಿ ವ್ಶೆದ್ಯೆಯಾಗಿ ಯಾವುದೇ ಫಲಾಪೇಕ್ಷೆ ಇಲ್ಲದೆ ಯಶಸ್ವಿಯಾಗಿ 300 ಕ್ಕಿಂತ ಹೆಚ್ಚು ಹೆರಿಗೆಯನ್ನು ಮಾಡಿದ್ದಾರೆ ಎಂದು ಸಚಿವರು ಹೇಳಿದರು.

ಮೈಸೂರು ವಿಭಾಗದಿಂದ ಮೈಸೂರು ಜಿಲ್ಲೆಯ ವಿಜಯನಗರ 3ನೇ ಹಂತದಲ್ಲಿ ವಾಸವಾಗಿರುವ ಪ್ರೋ. ಎಸ್. ಆರ್. ನಿರಂಜನ ಅವರು ಶಿಕ್ಷಣ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸದರಿ ಸಾಧಕರು ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಂಶೋಧನೆಗಳನ್ನು ನಡೆಸಿ, ಹೆಚ್ಚಿನ ಸಂಶೋಧನಾ ಹಕ್ಕುಸ್ವಾಮ್ಯತೆಗಳನ್ಮ್ನ ಹೊಂದಿದ್ದು, ಸದರಿಯವರಿಗೆ ಈಗಾಗಲೇ ಸರ್.ಸಿ.ವಿ.ರಾಮನ್ ರಾಜ್ಯ ಯುವ ವಿಜ್ಞಾನಿ ಪ್ರಶಸ್ತಿ, ಡಾ. ರಾಜಾರಾಮಣ್ಣ ಪ್ರಶಸ್ತಿ ಹಾಗೂ ಇನ್ನಿತರೆ ಅತ್ಯುತ್ತಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ ಎಂದು ನುಡಿದರು.
 
ಕಲಬುರ್ಗಿ ವಿಭಾಗದಿಂದ ಬಳ್ಳಾರಿ ಜಿಲ್ಲೆ ಕೂಡ್ಲಗಿ ತಾಲೂಕಿನ ಗುಡೆಕೋಟೆ ಹಾಲಸಾಗರ ಗ್ರಾಮದವರಾದ ಭಟ್ರಹಳ್ಳಿ ಗೂಳಪ್ಪ ಅವರು ಇತರೆ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರು ಸಾಲು ಮರದ ತಿಮ್ಮಕ್ಕನಂತೆ ಸುಮಾರು 25 ವರ್ಷಗಳಿಂದ ಸುಮಾರು 75 ಎಕರೆ ಅರಣ್ಯ ಬೆಳೆಸಿದ್ದು, ಯಾವುದೇ ಫಲಾಪೇಕ್ಷೆ ಇಲ್ಲದೆ ಪರಿಸರ ಸಂರಕ್ಷಣೆ ಮಾಡಿ, ಅರಣ್ಯ ಇಲಾಖೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಸಚಿವರು ತಿಳಿಸಿದರು.

ಬೆಂಗಳೂರು ಕೇಂದ್ರ ಸ್ಥಾನದಿಂದ ವೈ. ಅಶ್ವತ್ಥರಾಮಯ್ಯ ಸಮಾಜ ಸೇವೆ ಕ್ಷೇತ್ರದಲ್ಲಿ  ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇವರು ಶ್ರೀ ವಾಲ್ಮೀಕಿ ಮಹರ್ಷಿ ಆಶ್ರಮ ಆದಿಗುರು ಪೀಠ ಹಾಗೂ ಬಸವನಗುಡಿಯ ಶ್ರೀ ಬೇಡರಕಣ್ಣಪ್ಪ ದೇವಸ್ಥಾನವನ್ನು 1979ರಲ್ಲಿ ಸ್ಥಾಪಿಸಿ ಅಭಿವೃದ್ದಿಗೊಳಿಸಿರುತ್ತಾರೆ. ವಾಲ್ಮೀಕಿ ಸಮಾಜದ ಬಡವಿದ್ಯಾರ್ಧಿಗಳ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಸಚಿವರು ನುಡಿದರು.

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ಜಂಬಯ್ಯ ನಾಯಕ ಅವರು ಸಮಾಜ ಸೇವೆ ಕ್ಷೇತ್ರದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸದರಿ ಸಾಧಕರು ಶ್ರೀ ಮಹಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ ಇದರ ಧರ್ಮದರ್ಶಿಗಳಾಗಿದ್ದು, ಪರಿಶಿಷ್ಟ ಪಂಗಡಗಳ ಜನಾಂಗದವರ ಶ್ರೇಯೋಭಿವೃದ್ಧಿಗಾಗಿ ಅಪಾರ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಸಚಿವರು ತಿಳಿಸಿದರು.
 

Read These Next

ವಿಶ್ವ ವಿಕಲಚೇತನರ ದಿನಾಚರಣೆ ಕಾನೂನು ಸೇವಾ ಪ್ರಾಧಿಕಾರದಿಂದ ಸಹಕಾರ, ನ್ಯಾಯಾಧೀಶೆ ಪುಪ್ಷಲತಾ.

ಧಾರವಾಡ : ವಿಕಲಚೇತನರಿಗೆ ಅನುಕಂಪದ ಕಾರಣದಿಂದ ಅವಕಾಶ ವಂಚಿತರಾಗಬಾರದು, ಇಂತಹ ಮಕ್ಕಳಿಗೆ ಅಸಡ್ಯೆ ತೋರದೆ ಕಾಳಜಿ ಪೂರ್ವಕವಾಗಿ ...

ಎಸ್ ಡಿ ಎಂ ಹೊರ ಮತ್ತು ಒಳ ರೋಗಿಗಳ ವಿಭಾಗ ಸೇವೆಗಳ ಪುನರಾರಂಭಕ್ಕೆ ಷರತ್ತುಬದ್ಧ ಅನುಮತಿ : ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ.

ಧಾರವಾಡ : ಸತ್ತೂರಿನ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ(ಎಸ್‌ಡಿಎಂಸಿಹೆಚ್)ಯ ಆವರಣದಲ್ಲಿ ಕಳೆದ ...

ಗೃಹರಕ್ಷಕರ ಈಶಾನ್ಯ ವಲಯಮಟ್ಟದ ವೃತ್ತಿಪರ ಹಾಗೂ ಕ್ರೀಡಾಕೂಟ ದೈಹಿಕ, ಮಾನಸಿಕವಾಗಿ ಸದೃಢರಾಗಿರಲು ಕ್ರೀಡೆಯಲ್ಲಿ ಪಾಲ್ಗೊಳ್ಳಿ: ವಿಮ್ಸ್ ನಿರ್ದೇಶಕ ಗಂಗಾಧರ್

ಬಳ್ಳಾರಿ : ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಯಾವುದಾದರೂ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ವಿಮ್ಸ್ ನಿರ್ದೇಶಕ ...