ಹರ್ಮನ್ ಮೋಂಗ್ಲಿಂಗ್ ಪ್ರಶಸ್ತಿಗೆ ಸುವರ್ಣ ನ್ಯೂಸ್ ನ ಜಯಪ್ರಕಾಶ್ ಶೆಟ್ಟಿ ಆಯ್ಕೆ

Source: sonews | By Staff Correspondent | Published on 26th June 2019, 11:04 PM | Coastal News | Don't Miss |

ಕಾರವಾರ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಉತ್ತರಕನ್ನಡ ಜಿಲ್ಲಾ ಘಟಕದಿಂದ ಪ್ರತಿವರ್ಷ ನೀಡಲಾಗುವ ರಾಜ್ಯ ಮಟ್ಟದ ಹರ್ಮನ್ ಮೋಂಗ್ಲಿಂಗ್ ಪ್ರಶಸ್ತಿ ಗೆ ಸುವರ್ಣ ನ್ಯೂಸ್ ನ ಕರೆಂಟ್ ಆಪೇರ್ಸ್ ಎಡಿಟರ್ ಜಯಪ್ರಕಾಶ ಶೆಟ್ಟಿ ಅವರನ್ನ ಆಯ್ಕೆ ಮಾಡಲಾಗಿದೆ.

ಜೂನ್ 1ರಂದು ಕಾರವಾರದ ಜಿಲ್ಲಾ ಪತ್ರಿಕಾಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.  

ಉತ್ತರಕನ್ನಡ ಜಿಲ್ಲಾಧಿಕಾರಿ ಡಾ ಹರೀಶಕುಮಾರ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರವಾರ ಶಾಸಕಿ ರೂಪಾಲಿ ನಾಯ್ಕ ಅಧ್ಯಕ್ಷತೆ ವಹಿಸಲಿದ್ದಾರೆ.

ಕುಮಟ ಶಾಸಕ ದಿನಕರ ಶೆಟ್ಟಿ, ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಹೀಮಂತರಾಜು, ಶಿವಾಜಿ ಕಾಲೇಜು ಬಾಡ ಕಾರವಾರ ಪ್ರಾಂಶುಪಾಲರಾದ ಶಿವಾನಂದ ನಾಯಕ, ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ

ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ನಾಗರಾಜ ಹರಪನಹಳ್ಳಿ ಪ್ರಸ್ತುತ ಸಂದರ್ಭದಲ್ಲಿ *ಪತ್ರಿಕೋದ್ಯಮ ಬಿಕ್ಕಟ್ಟುಗಳು: ಹೊಸ ಸಾಧ್ಯತೆಗಳ ಕುರಿತು ಉಪನ್ಯಾಸ ನೀಡಲಿದ್ದಾರೆ ಕರ್ನಾಟಕ ಜರ್ನಲಿಸ್ಟ್ ಜಿಲ್ಲಾಧ್ಯಕ್ಷ ಕಡತೋಕ ಮಂಜು ಪ್ರಾಸ್ತಾವಿಕ ಮಾತನಾಡಲಿದ್ದಾರೆ.

Read These Next