ಆಕ್ಸಿಜನ್ ಸಿಗದೆ 24 ಸೋಂಕಿತರ ಸಾವು, ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ಘೋರ ದುರಂತ, ಮುಗಿಲುಮುಟ್ಟಿದ ಸಂಬಂಧಿಕರ ರೋದನ, ಸರಕಾರ, ಜಿಲ್ಲಾಡಳಿತದ ವಿರುದ್ಧ ವ್ಯಾಪಕ ಆಕ್ರೋಶ

Source: VB | Published on 4th May 2021, 3:59 PM | State News | National News |

ಚಾಮರಾಜನಗರ: ಕೊರೋನ ಮಹಾಮಾರಿಗೆ ತುತ್ತಾಗಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಯಾಗದೆ 24 ಮಂದಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ವರದಿಯಾಗಿದೆ.

23 ಮಂದಿ ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಇನ್ನೋರ್ವ ಹನೂರು ತಾಲೂಕಿನ ಕಾಮಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಕೆಲವರಿಗೆ ಐಸಿಯುನಲ್ಲಿ ಆಕ್ಸಿಜನ್ ನೀಡಿ ಚಿಕಿತ್ಸೆ ನೀಡಲಾಗುತ್ತಿತ್ತು. ರವಿವಾರ ರಾತ್ರಿ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿತು. ಈ ಬಗ್ಗೆ ಆಸ್ಪತ್ರೆಯ ವೈದ್ಯರು ಮತ್ತು ಜಿಲ್ಲಾಡಳಿತ ಕೊರೋನ ಸೋಂಕಿತರಿಗೆ ಆಕ್ಸಿ ಜನ್ ಸರಬರಾಜು ಮಾಡಲು ಯತ್ನಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

ಮೈಸೂರಿನ ಸದರ್ನ್ ಗ್ಯಾಸ್ ಏಜೆನ್ಸಿ ಮೂಲಕ ಚಾಮರಾಜನಗರ

ಪ್ರತಿಭಟನೆ, ಬಂಧನ

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರ ಸರಣಿ ಸಾವಿನ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಜರು ಗಿಸುವಂತೆ ಆಗ್ರಹಿಸಿ ಸಾರ್ವಜನಿಕರು ಕೋವಿಡ್ ಆಸ್ಪತ್ರೆಯ ಮುಂದೆ ಪ್ರತಿಭಟನೆ ನಡೆಸಿದಾಗ ಪೊಲೀಸರು ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿದರು. ಪ್ರತಿಭಟನಾಕಾರರು ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಪ್ರತಿಭಟನೆ ನಡೆಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಆಗಮಿಸುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

ಕೋವಿಡ್ ಆಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿತ್ತು. ಇದಕ್ಕೆ ರಾಜ್ಯ ಸರಕಾರದ ಅನುಮತಿಯೂ ಇತ್ತು. ಆದರೆ, ದಿಢೀರ್ ಬೆಳವಣಿಗೆಯಲ್ಲಿ ಮೈಸೂರಿನ ಸದರ್ನ್ ಗ್ಯಾಸ್ ಏಜೆನ್ಸಿ ಮಾಲಕರು “ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಸರಬರಾಜು ಮಾಡಿದರೆ ಕೇಸು ಹಾಕುವುದಾಗಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಮೌಖಿಕವಾಗಿ ಹೇಳಿದ್ದಾರೆ' ಎಂದು ಸರಬರಾಜು ನಿಲ್ಲಿಸಿದ್ದರು. ಇದರಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡು ಕೋವಿಡ್ ಸೋಂಕಿತರು ಸಾವನ್ನಪ್ಪಿದರು ಎನ್ನಲಾಗಿದೆ.

ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದ ಖಾಲಿ ಸಿಲಿಂಡರ್ ಗಳ ಮುಂದೆ ನಿಂತಿರುವ ಸೋಂಕಿತರು ಪೇಪರ್, ಬಟ್ಟೆಗಳಿಂದ ಗಾಳಿ ಬೀಸಿಕೊಳ್ಳುವ ಪರಿಸ್ಥಿತಿ ಇತ್ತು.

ಇಷ್ಟೆಲ್ಲಾ ಅದ್ವಾನ ಆದರೂ ಸಹ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ

ಮಾತ್ರ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನರಿತ ಕೆಲವರು ಮೈಸೂರು ಕೊಡಗು ಸಂಸದ ಪ್ರತಾಪ ಸಿಂಹಗೆ ಕರೆ ಮಾಡಿ ಪರಿಸ್ಥಿತಿಯನ್ನು ವಿವರಿಸಿದಾಗ ರಾತ್ರೋ ರಾತ್ರಿ ಮೈಸೂರಿನಿಂದ ಅರವತ್ತು ಜಂಬೋ ಸಿಲಿಂಡರ್ ಚಾಮರಾಜನಗರಕ್ಕೆ ಬಂತು. ಆಕ್ಸಿಜನ್ ಸಿಲಿಂಡರ್ ಬರುವಷ್ಟರಲ್ಲಿ ಸೋಂಕಿತರ ಪ್ರಾಣಪಕ್ಷಿ ಹಾರಿಹೋಗಿತ್ತು.

ಸೋಮವಾರ ಬೆಳಗ್ಗೆ ಕೋವಿಡ್ ಆಸ್ಪತ್ರೆಯ ಮುಂದೆ ಸಾರ್ವಜನಿಕರು ಜಮಾಯಿಸಿ

ನನಗೆ ಮದುವೆಯಾಗಿ ಎರಡು ತಿಂಗಳಾಗಿದೆ ನನ್ನ ಗಂಡನಿಗೆ ಕೊರೋನ ಸೋಂಕು ದೃಢಪಟ್ಟಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ್ದೆವು. ಆದರೆ, ಇಲ್ಲಿ ಅವರಿಗೆ ಆಕ್ಸಿಜನ್ ಕೊಡದೇ ಸಾಯಿಸಿ ಬಿಟ್ಟರು. ನನಗೆ ಎರಡೇ ತಿಂಗಳಲ್ಲಿ ಮಾಂಗಲ್ಯ ಭಾಗ್ಯ ಇಲ್ಲದೇ ಹೋಯಿತು. ನನಗೆ ಇನ್ನು ಯಾರು ದಿಕ್ಕು?

ಆಕ್ಸಿಜನ್ ಸಿಗದೆ ಮೃತಪಟ್ಟ ದೊಡ್ಡಹೊಮ್ಮ ಗ್ರಾಮದ ಸುರೇಂದ್ರ ಅವರ ಪತ್ನಿ

ನನ್ನ ಮಗನಿಗೆ ಇನ್ನು ಓಂದು ವಾರದಲ್ಲಿ ಮದುವೆ ಇತ್ತು. ಅವನಿಗೆ ಕೊರೋನ ಎಂದು ಹೇಳಿದ್ದರಿಂದ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಇಲ್ಲಿ ಸರಿಯಾಗಿ ನೋಡಿಕೊಳ್ಳದೆ ಅವನನ್ನು ಸಾಯಿಸಿದ್ದಾರೆ. ಒಬ್ಬನೇ ಮಗ ಇದ್ದು ಇನ್ನು ನಾನೇನು ಮಾಡಲಿ?

ಆಕ್ಸಿಜನ್ ಸಿಗದೆ ಮೃತಪಟ್ಟ ನಾಗವಳ್ಳಿ ಗ್ರಾಮದ ಯುವಕನ ತಾಯಿ

ನನ್ನ ಭಾವನಿಗೆ ಕೋವಿಡ್' ಪಾಸಿಟಿವ್ ಆಗಿ ಆಸ್ಪತ್ರೆಗೆ ಕರೆತಂದರೆ ಬೆಡ್ ಇಲ್ಲ ಎಂದು ಹೇಳಿದ್ದರು. ನಾನು ಪ್ರೆಸ್‌ನವನು ಎಂದ ಮೇಲೆ ಆಸ್ಪತ್ರೆ ಯಲ್ಲಿ ಬೆಡ್ ಕೊಟ್ಟರು. ನನ್ನ ಭಾವನನ್ನು ತಳ್ಳುವಗಾಡಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಒಂದು ಸಾವಿರ ರೂ. ಕೊಟ್ಟ ಮೇಲೆ ಚಿಕಿತ್ಸೆ ಶುರು ಮಾಡಿದರು. ಒಳಗೆ ಏನು ನಡೆಯುತ್ತಿದೆ ಎಂದು ಯಾರೂ ಹೋಗಿ ನೋಡುವಂತಿಲ್ಲ.

ಚಂದ್ರಶೇಖರ್, ಮೃತನ ಸಂಬಂಧಿ

ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪ್ರಚಾರಕ್ಕೆ ಸೀಮಿತರಾಗಿರುವ ಚಾಮರಾಜನಗರ ಜಿಲ್ಲಾಧಿಕಾರಿಗಳು ಕೋವಿಡ್ ಆಸ್ಪತ್ರೆಯಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವಿದ್ದರೂ ಸ್ಥಳಕ್ಕೆ ಆಗಮಿಸದೇ ಇರುವುದು ಅವರ ಕರ್ತವ್ಯ ಎಷ್ಟರ ಮಟ್ಟಿಗೆ ಇದೆ ಎಂದು ತೋರುತ್ತದೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದರು.

ಬೆಳಗ್ಗೆ 10 ಗಂಟೆಯ ವೇಳೆಗೆ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾಧಿಕಾರಿ ಕೋವಿಡ್ ಸೋಂಕಿತರ ಸಾವಿನ ಬಗ್ಗೆ ವಾಸ್ತವ ಸಂಗತಿ ಅರಿಯಲು ತೆರಳಿದರು. ಈ ನಡುವೆ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಆಗಮಿಸಿದಾಗ ನೊಂದಿರುವ ಕುಟುಂಬಸ್ಥರು ಮುತ್ತಿಗೆ ಹಾಕಿ ಜನಪ್ರತಿನಿಧಿಗಳ ನಿರ್ಲಕ್ಯತನದಿಂದಾಗಿ ಈ ದುರಂತ ಘಟನೆ ನಡೆದಿದೆ ಎಂದು ಆರೋಪಿಸಿದರು.

ಜಿಲ್ಲಾಸ್ಪತ್ರೆಯ ಡೀನ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್‌. ರವಿ ಮಾಧ್ಯಮದವರೊಂದಿಗೆ ಮಾತನಾಡಿ, ಚಾಮರಾಜನಗರ ಜಿಲ್ಲೆಯಲ್ಲಿ ರವಿವಾರ ಸಂಜೆಯಿಂದ ಸೋಮವಾರ ಬೆಳಗ್ಗೆ ತನಕ ಕೋವಿಡ್ ಆಸ್ಪತ್ರೆಯಲ್ಲಿ 23 ಮಂದಿ ಹಾಗೂ ಹನೂರು ತಾಲೂಕಿನ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಲ್ಲಿ ಒಬ್ಬರು ಮೃತ ಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಕೆಲವರು ಆಕ್ಸಿಜನ್ ಕೊರತೆಯಿಂದಾಗಿ ಸಾವನ್ನಪ್ಪಿದ್ದಾರೆ. ಮತ್ತೆ ಕೆಲವರು ವಿವಿಧ ಕಾರಣಗಳಿಂದ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಕೋವಿಡ್ ಸೋಂಕಿತರ ಸಾವಿನ ಸುರಿಮಳೆ ಪ್ರಕರಣಕ್ಕೆ ತೆರೆ ಎಳೆಯಲು ಯತ್ನಿಸಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇರುವುದಾಗಿ

ಪರೋಕ್ಷವಾಗಿ ಒಪ್ಪಿಕೊಂಡ ಜಿಲ್ಲಾಧಿಕಾರಿ, ಪರಿಸ್ಥಿತಿ ನಿಯಂತ್ರಣ ಮಾಡಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುತ್ತಿದೆ, ರವಿವಾರ ರಾತ್ರಿಯೇ ಮೈಸೂರಿನಿಂದ ಹೆಚ್ಚುವರಿ ಸಿಲಿಂಡರ್‌ಗಳನ್ನು ತರಿಸಲಾಗಿದೆ ಎಂದು ಹೇಳಿದರು. ಸೋಮವಾರ ಮಧ್ಯಾಹ್ನದ ವೇಳೆಗೆ ಬಳ್ಳಾರಿಯಿಂದ ಆಕ್ಸಿಜನ್ ಹೊತ್ತ ಟ್ಯಾಂಕರ್ ತಲುಪಲಿದ್ದು ಪರಿಸ್ಥಿತಿ ಹತೋಟಿಗೆ ಬರಲಿದೆ ಎಂದು ಹೇಳಿದರು. ಚಾಮರಾಜನಗರದಲ್ಲಿ ನಡೆದಿರುವ ಕೋವಿಡ್ ಆಸ್ಪತ್ರೆಯ ಸಾವಿನ ಬಗ್ಗೆ ಮುಖ್ಯಮಂತ್ರಿ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವರಿಗೆ ವಿವರಿಸಿದ್ದಾಗಿ ಹೇಳಿದರು.

ಸ್ಥಳದಲ್ಲೇ ಹಾಜರಿದ್ದ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ರವಿವಾರ ನಡೆದಿರುವ ಕೋವಿಡ್ ಸೋಂಕಿತರ ಮರಣ ಮೃದಂಗಕ್ಕೆ ರಾಜ್ಯ ಸರಕಾರ ಮತ್ತು ಜಿಲ್ಲಾಡಳಿತವೇ ಹೊಣೆ ಎಂದು ಹೇಳಿ, ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಇದ್ದರೂ ಸರಕಾರದ ಗಮನಕ್ಕೆ ಏಕೆ ತಂದಿಲ್ಲ, ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳಿವೆ, ಆ ಹಾಸಿಗಳಿಗೆ ಆಕ್ಸಿಜನ್ ಸರಬರಾಜು ಮಾಡಲು ಸಾಧ್ಯವೇ ಎನ್ನುವ ಅಂಕಿ ಅಂಶವನ್ನಾದರೂ ಸರಕಾರಕ್ಕೆ ಕೊಟ್ಟಿದ್ದರೆ ಸರಕಾರವು ಹೆಚ್ಚುವರಿಯಾಗಿ ಆಕ್ಸಿಜನ್ ಸರಬರಾಜು ಮಾಡಲು ಸೂಚನೆ ನೀಡುತ್ತಿತ್ತು. ನಾನೇನು ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಲ್ಲ ಏಕೆಂದರೆ ಅವರು ಮೈಸೂರು ಜಿಲ್ಲೆಗೆ ಸೀಮಿತ ನಾನು ಕೇಳೋದು ಚಾಮರಾಜನಗರ ಜಿಲ್ಲಾಧಿಕಾರಿಗಳನ್ನು ಎಂದು ಖಾರವಾಗಿ ಪ್ರಶ್ನಿಸಿದರು.

ಆಸ್ಪತ್ರೆಗೆ ಸಚಿವ ಸುಧಾಕರ್ ಭೇಟಿ

ಚಾಮರಾಜನಗರ ಜಿಲ್ಲೆಯ 2 ಆಸ್ಪತ್ರೆಗಳಲ್ಲಿ ಆಮ್ಲಜನಕ ಸಿಗದೆ 24

ಆಸ್ಪತ್ರೆಯ ಹೊರಗೂ ಅನಾಥ ಶವ!

ಚಾಮರಾಜನಗರ ಜಿಲ್ಲಾ  ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನ ಕೊರೋನ ಸೋಂಕಿತರು ಪ್ರಾಣ ಬಿಟ್ಟಿದ್ದರೆ ಇನ್ನೊಂದೆಡೆ ಅದೇ ಆಸ್ಪತ್ರೆಯ ಶವಾಗಾರದ ಸಮೀಪ ಸುಮಾರು 40ರಿಂದ 50 ವರ್ಷ ವಯಸ್ಸಿನ ಪುರುಷನ ಶವ ಅನಾಥವಾಗಿ ಬಿದ್ದಿರುವುದು ಕಂಡುಬಂದಿದೆ. ಈತನಿಗೆ ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಮೃತಪಟ್ಟಿರಬಹುದು ಎಂದು ಹೇಳಲಾಗುತ್ತಿದೆ.

ಸಾಮೂಹಿಕ ಅಂತ್ಯಕ್ರಿಯೆ

ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಿಗದೇ ಸಾವನ್ನಪ್ಪಿದ 24 ಸೋಂಕಿತರ ಮೃತ ದೇಹಗಳ  ಅಂತ್ಯಕ್ರಿಯೆಯನ್ನು ಸಾಮೂಹಿಕವಾಗಿ ಇಲ್ಲಿನ ಮೆಡಿಕಲ್ ಕಾಲೇಜಿನ ಬಳಿ ಪಿಎಫ್‌ಐ ಕಾರ್ಯಕರ್ತರ ತಂಡ ನೆರವೇರಿಸಿತು. ಮೃತದೇಹಗಳನ್ನು ಕೋವಿಡ್ ಆಸ್ಪತ್ರೆ ಹಾಗೂ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಯಿಂದ ತಂದು ಮೆಡಿಕಲ್ ಕಾಲೇಜಿನ ಬಳಿ ಜಿಲ್ಲಾಡಳಿತ ನಿಗದಿ ಪಡಿಸಿರುವ ಸ್ಥಳದಲ್ಲಿ ಹೂಳಲಾಯಿತು. ಆ್ಯಂಬುಲನ್ಸ್‌ನಲ್ಲಿ ಮೃತ ದೇಹಗಳನ್ನು ತೆಗೆದುಕೊಂಡು ಬಂದ ಸ್ವಯಂ ಸೇವಕರು ಪಿಪಿಇ ಕಿಟ್ ಧರಿಸಿ ಅಂತಿಮ ಸಂಸ್ಕಾರ ನೆರವೇರಿಸಿದರು.

ಮಂದಿ ಸೋಂಕಿತರು ಸಾವನ್ನಪ್ಪಿದ ಘಟನೆಯ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ಚಾಮರಾಜನಗರ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿದರು. ಮಧ್ಯಾಹ್ನ 2 ಗಂಟೆಗೆ ಚಾಮರಾಜನಗರಕ್ಕೆ ಆಗಮಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ನೇರವಾಗಿ ಕೋವಿಡ್ ಆಸ್ಪತ್ರೆಗೆ ತೆರಳಿ ಅಲ್ಲಿನ ವೈದ್ಯಾಧಿಕಾರಿಗಳ ಕೊಠಡಿಯಲ್ಲಿ ವೈದ್ಯರು ಮತ್ತು ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಸ್ಥಳೀಯ ಶಾಸಕ ಸಿ. ಪುಟ್ಟರಂಗಶೆಟ್ಟಿ, ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ, ಮೆಡಿಕಲ್ ಕಾಲೇಜಿನ ಡೀನ್ ಡಾ.ಸಂಜೀವ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ಸೇರಿದಂತೆ ಅನೇಕರು ಇದ್ದರು.

34 ಮಂದಿ ಸಾವನ್ನಪ್ಪಿರುವ ಮಾಹಿತಿ ಇದೆ

ರವಿವಾರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ದು 34 ಮಂದಿ ಎಂದು ಮಾಹಿತಿ ಇದೆ. ಆದರೆ, ಜಿಲ್ಲಾಧಿಕಾರಿಗಳು 24 ಮಂದಿ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸರಕಾರ ಕೂಡಲೇ ತನಿಖೆ ನಡೆಸಬೇಕು, ಸರಕಾರಕ್ಕೆ ತಪ್ಪು ಮಾಹಿತಿ ನೀಡುವ ಇಂತಹ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.

ಸಿ.ಪುಟ್ಟರಂಗಶೆಟ್ಟಿ, ಮಾಜಿ ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ  ಶಾಸಕ

ನನ್ನ ಕ್ಷೇತ್ರದಲ್ಲಿಯ ಮೂವರು ಕೋವಿಡ್ ಆಸ್ಪತ್ರೆಯಲ್ಲಿ ಸತ್ತಿದ್ದಾರೆ ಅಂತ ಮಾಹಿತಿ ಇದೆ. ಆದರೆ ಇವತ್ತು ಜಿಲ್ಲಾಧಿಕಾರಿಗಳು ಆರೋಗ್ಯ ಸಚಿವರಿಗೆ ನೀಡಿರುವ ಸತ್ತವರ ಪಟ್ಟಿಯಲ್ಲಿ ಅವರ ಹೆಸರುಗಳು ಇಲ್ಲ. ಹಾಗಾದರೆ ಅವರು ಏನಾದರು ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ.

ಆರ್. ನರೇಂದ್ರ, ಶಾಸಕ, ಹನೂರು ಕ್ಷೇತ್ರ

ತನಿಖೆಗೆ ಅಸ್ತು ವಿಚಾರಣಾಧಿಕಾರಿಯಾಗಿ ಶಿವಯೋಗಿ ಕಳಸದ ನೇಮಕ

ಬೆಂಗಳೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2ರ ಬೆಳಗ್ಗೆ 9ರಿಂದ ಮೇ 3ರ ಬೆಳಗ್ಗೆ 7 ಗಂಟೆಯ ನಡುವೆ 24 ಮಂದಿ ಕೋವಿಡ್ ಸೋಂಕಿತರು ಸಾವಿಗೆ ತುತ್ತಾಗಿದ್ದು, ಈ ಘಟನೆಯ ಹಿನ್ನೆಲೆಯನ್ನು ಪತ್ತೆ ಮಾಡಿ ಸರಕಾರಕ್ಕೆ ವರದಿ ಸಲ್ಲಿಸಲು ಹಿರಿಯ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರನ್ನು ವಿಚಾರಣಾಧಿಕಾರಿಯಾಗಿ ನೇಮಿಸಿ ಆದೇಶ ಹೊರಡಿಸಿ ಮೂರು ದಿನಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ರವಿವಾರ ರಾತ್ರಿ ಆಕ್ಸಿಜನ್ ಕೊರತೆಯ ಹಿನ್ನೆಲೆಯಲ್ಲಿ

ಟ್ಟು 24 ಕೋವಿಡ್ ಸೋಂಕಿತರ ಸಾವಿಗೆ ಕಾರಣವಾದ ಹಿನ್ನೆಲೆಯನ್ನು ಪತ್ತೆ ಹಚ್ಚಿ ಸರಕಾರಕ್ಕೆ ವರದಿ ಸಲ್ಲಿಸತಕ್ಕದ್ದು ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯಕಾರಿ ಸಮಿತಿ ಸದಸ್ಯ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ್‌ ಆದೇಶ ಹೊರಡಿಸಿದ್ದಾರೆ.

ಸುಧಾಕರ್ ಮೇಲೆ ಬಿಎಸ್‌ವೈ ಗರಂ

ಬೆಂಗಳೂರು: ಚಾಮರಾಜನಗರ ದುರಂತದ ಬಗ್ಗೆ ಮಾಹಿತಿ ಇಲ್ಲದೇ ತಮ್ಮ ಬಳಿಗೆ ಬಂದ ಆರೋಗ್ಯ ಸಚಿವ ಡಾ.ಸುಧಾಕರ್‌ ವಿರುದ್ಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗರಂ ಆದ ಘಟನೆ ಸೋಮವಾರ ಬೆಳಿಗ್ಗೆ ನಡೆಯಿತು.

ದುರಂತದ ಮಾಹಿತಿ ಸಿಗುತ್ತಿದ್ದಂತೆ ಯಡಿಯೂರಪ್ಪ ಚಾಮರಾಜನಗರ ಜಿಲ್ಲಾಧಿಕಾರಿಗಳ ಜತೆ ದೂರವಾಣಿ ಮೂಲಕ ಮಾತನಾಡಿದರು. ಆ ಬಳಿಕ ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸುತ್ತಿದ್ದರು. ಆಗ ಅಲ್ಲಿಗೆ ಬಂದ ಸುಧಾಕರ್ ಬಳಿ, 'ಚಾಮರಾಜನಗರದ ಮಾಹಿತಿ ಏನಿದೆ, ಅಂಕಿ-ಅಂಶ ಕೊಡಿ' ಎಂದು ಕೇಳಿದರು.

ಮಾಹಿತಿ ಇಲ್ಲದೇ ಬಂದಿದ್ದ ಸುಧಾಕರ್ ತಡಬಡಾಯಿಸಿದರು. ಇದರಿಂದ ಬೇಸರಗೊಂಡ ಯಡಿಯೂರಪ್ಪ, 'ಮಾಹಿತಿ ಇಲ್ಲದೇ ಇಲ್ಲಿಗೆ ಬರುವ ಅಗತ್ಯ ಏನಿತ್ತು? ಮೊದಲು ಚಾಮರಾಜನಗಕ್ಕೆ ಹೋಗಿ' ಎಂದು ಸಿಡಿಮಿಡಿಗೊಂಡರು ಎಂದು ಮೂಲಗಳು ತಿಳಿಸಿವೆ. 'ಚಾಮರಾಜನಗರದಲ್ಲಿ ಎಷ್ಟು ಪ್ರಮಾಣದ ಅಮ್ಲಜನಕ ಅಗತ್ಯವಿತ್ತು. ಎಷ್ಟು ಲಭ್ಯವಿದೆ, ಕೊರತೆ ಆಗಲು ಕಾರಣವೇನು ಎಂಬುದರ ಅಂಕಿ-ಅಂಶಗಳನ್ನು ಕೊಡಿ ಎಂದು ಯಡಿಯೂರಪ್ಪ ಕೇಳಿದರು. ದಕ್ಷತೆಯ ಜತೆಗೆ ಸರಿಯಾದ ಮತ್ತು ತಾಜಾ ಮಾಹಿತಿಯನ್ನೂ ಇಟ್ಟುಕೊಂಡಿ ರಬೇಕು. ಎಲ್ಲ ಜಿಲ್ಲೆಗಳ ಮೇಲೂ ನಿಗಾ ಇಟ್ಟು, ಇತಿಮಿತಿಯಲ್ಲಿ ಆಮ್ಲಜನಕ ಪೂರೈಕೆ ಮಾಡಬೇಕು' ಎಂದು ಮುಖ್ಯಮಂತ್ರಿ ಹೇಳಿದರು.

ಇದಕ್ಕೆ ಮೊದಲೇ ಯಡಿಯೂರಪ್ಪ ಅವರು ಚಾಮರಾಜನಗರ ಜಿಲ್ಲಾಧಿಕಾರಿ ರವಿ ಅವರಿಂದ ದೂರವಾಣಿ ಮೂಲಕ ಮಾಹಿತಿ ಪಡೆದಿದ್ದರು. ಅಲ್ಲದೆ, ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅಸಹಕಾರ ನೀಡಿದರು ಎಂಬ ಕಾರಣಕ್ಕೆ ದೂರವಾಣಿ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿ ದ್ದರು.

ಆಕ್ಸಿಜನ್ ಪೂರೈಕೆಯಾಗಿದ್ದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಲೋಪ: ಪ್ರತಾಪ ಸಿಂಹ

ಮೈಸೂರು: ಆಕ್ಸಿಜನ್ ಪೂರೈಕೆ ಯಾಗಿದ್ದರೂ ಪರಿಸ್ಥಿತಿ ನಿಭಾಯಿಸುವಲ್ಲಿ ಲೋಪ, ವಿಳಂಬವಾಗಿ ಇಷ್ಟು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದು ನಿಜಕ್ಕೂ ದುರ್ದೈವದ ಸಂಗತಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ ಅವರು, ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ 24 ಮಂದಿ ಸಾವನ್ನಪ್ಪಿದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಅವರು ಮಾತನಾಡುತ್ತಿದ್ದರು.

ಚಾಮರಾಜನಗರದ ಘಟನೆ ದುರದೃಷ್ಟಕರ. ಬಂಧುಗಳನ್ನು ಕಳೆದುಕೊಂಡವರ ಜೊತೆ ಮೈಸೂರಿಗರಾದ ನಾವು ನಿಲ್ಲುತ್ತೇವೆ. ಇಂತಹ ಘಟನೆ ನಡೆಯಬಾರದಿತ್ತು. ಇದು ಎಚ್ಚರಿಕೆಯ ಗಂಟೆಯಾಗಿ ಸ್ವೀಕರಿಸಬೇಕಿದೆ ಎಂದು ಹೇಳಿದ್ದಾರೆ.

ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯುಂಟಾಗಿದೆ ಎಂದು ನಿನ್ನೆ ಮಾಧ್ಯಮದ ಕೆಲವು ಸ್ನೇಹಿತರು ನನ್ನ ಗಮನಕ್ಕೆ ತಂದಿದ್ದರು. ನಾನು ತಕ್ಷಣ ಅಲ್ಲಿನ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಲು ಯತ್ನಿಸಿದ್ದು, ಅವರು ಸಂಪರ್ಕಕ್ಕೆ ಸಿಗಲಿಲ್ಲ. ನಂತರ ರವಿವಾರ ರಾತ್ರಿ 11:30ರ ಸುಮಾರಿಗೆ ಅವರೇ ಕರೆ ಮಾಡಿದರು. ಬಳಿಕ ಆಕ್ಸಿಜನ್ ಮೇಲ್ವಿಚಾರಣೆ ಮಾಡುವ ಎಡಿಸಿ ನಾಗರಾಜು ಅವರನ್ನು ಕಾನ್ಫರೆನ್ಸ್ ಕಾಲ್‌ನಲ್ಲಿ ಸಂಪರ್ಕಿಸಿ ಅವರು 50 ಸಿಲಿಂಡರ್‌ ಕೊಡಿ ಎಂದು ಕೇಳಿದಾಗ, ರಾತ್ರಿಯೇ 15 ಆಕ್ಸಿಜನ್ ಸಿಲಿಂಡರ್‌ ವ್ಯವಸ್ಥೆ ಮಾಡಿ ಕಳುಹಿಸಿದ್ದೇವೆ. ಇದಕ್ಕೂ ಮೊದಲು ಏಜೆನ್ಸಿಯಿಂದ 50 ಸಿಲಿಂಡರ್ ನೀಡಲಾಗಿತ್ತು. ಬೆಳಗಿನ ಜಾವ ಮತ್ತೆ 60, ಹೀಗೆ ಒಟ್ಟು 145 ಸಿಲಿಂಡರ್‌ಗಳನ್ನು ನೀಡಿದ್ದೇವೆ. ಆದರೂ ಅದನ್ನು ತಕ್ಷಣ ರೋಗಿಗಳಿಗೆ ತಲುಪಿಸುವಲ್ಲಿ ಲೋಪ, ವಿಳಂಬ ಆಗಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿಸಿದರು.

ಇದು ದೋಷಾರೋಪ ಮಾಡುವ ಸಮಯವಲ್ಲ. ಎರಡು ದಿನಗಳ ಹಿಂದೆ ಮೈಸೂರಿನಲ್ಲೂ ಇಂತಹದೇ ಘಟನೆ ಸಂಭವಿಸುವ ಸಾಧ್ಯತೆ ಇತ್ತು. ಆದರೆ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರ ಸಮಯ ಪ್ರಜ್ಞೆಯಿಂದ ತಪ್ಪಿದೆ. ನಾನು ಕೂಡಾ ಜಿಲ್ಲಾಧಿಕಾರಿಗೆ ಕರೆ ಮಾಡಿದ್ದೇನೆ. ಖಾಸಗಿ ಆಸ್ಪತ್ರೆಯವರಿಗೂ ಕರೆ ಮಾಡಿ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದ್ದೆ ಎಂದು ಹೇಳಿದರು.

ಇನ್ನು ಮುಂದೆ ಬೇರೆ ಯಾವುದೇ ಜಿಲ್ಲೆಯಲ್ಲಿ ಇದು ಮರುಕಳಿಸ ಬಾರದು. ಇದಕ್ಕಾಗಿ ಆಯಾ ಜಿಲ್ಲಾಡಳಿತ ಮುಖ್ಯಮಂತ್ರಿ ಅವರಿಗೆ ಆಕ್ಸಿಜನ್ ಬೇಕಾಗಿರುವ ಬಗ್ಗೆ ಮನವರಿಕೆ ಮಾಡಬೇಕು. ಮೈಸೂರಿನಲ್ಲಿ ಏಜೆನ್ಸಿ ಇದೆಯೇ ಹೊರತು ಇಲ್ಲಿ ಆಕ್ಸಿಜನ್ ತಯಾರಿ ಮಾಡುವುದಿಲ್ಲ. ಮೈಸೂರಿಗೆ ಪ್ರತಿದಿನ 44 ಎಂಎಲ್‌ಟಿ ಆಕ್ಸಿಜನ್ ಬೇಕು. ಆದರೆ ನಮಗೆ ಸಿಗುತ್ತಿರುವುದು 22 ಮಾತ್ರ. ಅದರಲ್ಲೇ ನಾವು ಹೊಂದಿಸುತ್ತಿದ್ದೇವೆ ಎಂದು ಪ್ರತಾಪ ಸಿಂಹ ತಿಳಿಸಿದರು.

ಆಕ್ಸಿಜನ್‌ ಸಮಸ್ಯೆಯಿಂದ ಘಟನೆ ನಡೆದಿದ್ದರೆ ಸರಕಾರವೇ ಹೊಣೆ ಹೊರಬೇಕು

ಆಕ್ಸಿಜನ್ ಸಮಸ್ಯೆಯಿಂದ ಈ ಘಟನೆ ನಡೆದಿದ್ದರೆ ಸರಕಾರವೆ ಹೊಣೆ ಹೊರಬೇಕು. ಈ ಘಟನೆಗೆ ಸಚಿವರೇ ತಪ್ಪಿತಸ್ಥರಾಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು. ಅಧಿಕಾರಿಗಳು ತಪ್ಪಿತಸ್ಥರಾಗಿದ್ದರೆ ಅವರು ಹೊಣೆ ಹೊತ್ತುಕೊಳ್ಳಬೇಕು. ಒಂದು ವೇಳೆ ನಾನು ಸಚಿವನಾಗಿ ಇಂತಹ ಘಟನೆ ನನ್ನ ಗಮನಕ್ಕೆ ಬಂದು, ನಾನು ಕ್ರಮ ತೆಗೆದುಕೊಳ್ಳದಿದ್ದರೆ ನಾನೇ ಹೊಣೆ ಹೊರಬೇಕು. ಚಿಕಿತ್ಸೆ ವಿಫಲವಾಗುವುದು ಬೇರೆ, ಮಾನವ ವೈಫಲ್ಯ ಬೇರೆ. ಉದ್ದೇಶ ಪೂರ್ವಕ ನಿರ್ಲಕ್ಷ್ಯವಾಗಿದ್ದರೆ ಅದರ ಹೊಣೆಯನ್ನು ಅವರೇ ಹೊತ್ತುಕೊಳ್ಳಬೇಕು.

ಸಿ.ಟಿ. ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

Read These Next

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಸಂವಿಧಾನ ಮತ್ತು  ಪ್ರಜಾಪ್ರಭುತ್ವ ಉಳಿಸುವುದಕ್ಕೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ರಾಹುಲ್ ಗಾಂಧಿ ಕರೆ

ಮಾಲೂರು : ಈ ಲೋಕಸಭೆ ಚುನಾವಣೆಯು ಎರಡು ಸಿದ್ಧಾಂತಗಳ ನಡುವಿನ ಯುದ್ಧ ಇಂಡಿಯಾ ಬಣ ಒಂದು ಕಡೆ "ಸಂವಿಧಾನಕ್ಕಾಗಿ ಹೋರಾಟ" ನಡೆಸುತ್ತಿದೆ ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

'ಚುನಾವಣಾ ಬಾಂಡ್' ವಿಶ್ವದ ದೊಡ್ಡ ಹಗರಣ; ಬಿಜೆಪಿ ವಿರುದ್ಧ ರಾಹುಲ್‌ ಗಾಂಧಿ ವಾಗ್ದಾಳಿ

ಬಿಜೆಪಿಯ ಚುನಾ ವಣಾ ಬಾಂಡ್ ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದ್ದು, ಗೂಂಡಾಗಳ ರೀತಿಯಲ್ಲಿ ಕೆಲವು ಉದ್ಯಮಿಗಳನ್ನು ಬೆದರಿಸಿ ಹಫ್ತಾ ...

ಗುಂಪಿನಿಂದ ಹತ್ಯೆ, ಗೋರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ತಡೆಯಲು ಕೈಗೊಂಡ ಕ್ರಮಗಳ ಬಗ್ಗೆ ತಿಳಿಸಿ; ರಾಜ್ಯಗಳಿಗೆ ಸುಪ್ರೀಂ ಸೂಚನೆ

ಗುಂಪಿನಿಂದ ಥಳಿಸಿ ಹತ್ಯೆ ಮತ್ತು ಗೋರಕ್ಷಣೆಯ ಹೆಸರಿನಲ್ಲಿ ಹಿಂಸಾಚಾರದ ಘಟನೆಗಳನ್ನು ತಡೆಯಲು ಕೈಗೊಂಡಿರುವ ಕ್ರಮಗಳ ಬಗ್ಗೆ ಆರು ...