ಮಗುಚಿ ಬಿದ್ದ ಟಿಪ್ಪರ್ ; ಚಾಲಕ ಸಹಿತ ಇಬ್ಬರು ಮೃತ್ಯು

Source: VB News | Published on 8th August 2020, 12:39 AM | Coastal News | Don't Miss |

 

 


ಕಾರ್ಕಳ : ಕಾರ್ಕಳ ತಾಲೂಕಿನ ಪಳ್ಳಿ-ನಿಂಜೂರಿನಲ್ಲಿ ನಡೆದ ಭೀಕರ ಅಪಘಾತವೊಂದರಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಇಂದು ಸಂಜೆ ನಡೆದಿದೆ.
ನೀರಿನ ಹೊಂಡಕ್ಕೆ ಟಿಪ್ಪರ್ ಮಗುಚಿ ಬಿದ್ದ ಪರಿಣಾಮ ಚಾಲಕ ಸಹಿತ ಇಬ್ಬರು ಸಾವನ್ನಪ್ಪಿದ್ದಾರೆ. ಟಿಪ್ಪರ್ ಚಾಲಕ ಕಾರ್ಕಳ ಗಣಿತನಗರದ ನಿವಾಸಿ ಅರುಣ್‌ ಕುಮಾರ್ (40) ಮತ್ತು ಲಾರಿಯಲ್ಲಿದ್ದ ಮತ್ತೋರ್ವ ಕಿಶೋರ್ (18) ಮೃತಪಟ್ಟಿದ್ದಾರೆ.
ಸಂಜೆ ವೇಳೆ ಮಣ್ಣು ತರಲೆಂದು ತೆರಳಿದ್ದ ಟಿಪ್ಪರ್ ನಿಂಜೂರು ಗ್ರಾಮದ ಮದಗ ಎಂಬಲ್ಲಿ ರಸ್ತೆಯಿಂದ ಪಕ್ಕಕ್ಕೆ ಸರಿದಿದೆ. ಈ ವೇಳೆ ನಿಯಂತ್ರಣ ತಪ್ಪಿ ನೀರು ತುಂಬಿದ ಮದಗಕ್ಕೆ ಮಗುಚಿ ಬಿದ್ದಿದೆ. ಟಿಪ್ಪರ್ ಒಳಗಿದ್ದ ಇಬ್ಬರಿಗೂ ಹೊರಬರಲಾಗದೇ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Read These Next

2020 ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಸಂಯೋಜನೆವಾರು ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ

ವಿದ್ಯಾರ್ಥಿಗಳು “Online” ಮೂಲಕ ಸಲ್ಲಿಸಿದ ಎಲ್ಲಾ ದಾಖಲೆಗಳನ್ನು (ಮೂಲ ದಾಖಲೆಗಳ ಜೊತೆಯಲ್ಲಿ) ಪರಿಶೀಲನೆಗಾಗಿ ತಾವು ಅಧ್ಯಯನ ...