ವಿಜ್ಞಾನಿಗಳ ಅಧ್ಯಯನ ಕರಾವಳಿಯಲ್ಲಿ ಕಣ್ಮರೆಯಾಗಲಿದೆ ಚಿಪ್ಪೆಕಲ್ಲು

Source: S O News Service | By SahilOnline Staff | Published on 13th February 2020, 8:35 PM | Coastal News |

ಕಾರವಾರ: ಕರಾವಳಿಯಲ್ಲಿ ಒಂದು ಕಾಲದಲ್ಲಿ ಯಥೇಚ್ಛವಾಗಿ ಸಿಗುತ್ತಿದ್ದ ಚಿಪ್ಪೆಕಲ್ಲು ಇದೀಗ ಅಳಿವಿನಂಚಿನಲ್ಲಿದೆ. ಆಹಾರವಾಗಿ ಬಳಸುತ್ತಿರುವ ಚಿಪ್ಪು ಪ್ರಭೇದಕ್ಕೆ ಸೇರಿದ ಜಲಚರವೊಂದು ಇನ್ನು ಕೆಲವೇ ವಷರ್Àಗಳಲ್ಲಿ ಕರ್ನಾಟಕ ಕರಾವಳಿಯಿದ ಸಂಪೂರ್ಣವಾಗಿ ಕಣ್ಮರೆಯಾಗುವ ಆತಂಕ ಎದುರಾಗಿದೆ.

ಸುಸ್ಥಿರ ಅಭಿವೃದ್ಧಿಗಾಗಿ ಸಮುದ್ರ, ಸಾಗರ ಹಾಗೂ ಸಾಗರಸಂಪನ್ಮೂಲ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆ ಕುರಿತಂತೆ ಮೀನುಗಾರಿಕಾ ತಜ್ಞರು ನಡೆಸಿರುವ ಅಧ್ಯಯನ ಕರಾವಳಿ ಪ್ರದೇಶದಲ್ಲಿ ಸಮುದ್ರಕ್ಕೆ ಹೊಂದಿಕೊಂಡಂತೆ ನದಿಯ ತಳಭಾಗದಲ್ಲಿ ಚಿಪ್ಪೆಕಲ್ಲು ಸಂತತಿ ಅಳವಿನಂಚಿನತ್ತ ಸಾಗುತ್ತಿರುವುದನ್ನು ಪತ್ತೆ ಮಾಡಿದ್ದು, ವಾರ್ಷಿಕ ಅದರ ಲಭ್ಯತೆಯ ಪ್ರಮಾಣ ಶೇ 71ರಷ್ಟು ಕುಸಿದಿರುವುದಾಗಿ ವರದಿಯಲ್ಲಿ ತಿಳಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ 10 ವಷರ್Àಗಳ ಹಿಂದೆ ವಾರ್ಷಿಕವಾಗಿ ಸುಮಾರು 13,000 ಟನ್ ಚಿಪ್ಪೆಕಲ್ಲು ಸಿಗುತ್ತಿದ್ದರೆ, ಇದೀಗ ಪ್ರಮಾಣ ವಾರ್ಷಿಕವಾಗಿ 2,000 ಟನ್‍ಗೆ ಇಳಿದಿದೆ.

ಜೀವನಾಧಾರ ಕುಸಿತ: ಸಾವಿರಾರು ಕುಟುಂಬಗಳಿಗೆ ಚಿಪ್ಪೆಕಲ್ಲು ಜೀವನಾಧಾರವಾಗಿತ್ತು. ಇದೀಗ ಹೆಚ್ಚಿನ ಕುಟುಂಬಗಳು ಈ ಕಾಯಕವನ್ನು ಕೈಬಿಟ್ಟಿವೆ. ನೂರಕ್ಕೆ 40- 50 ರೂಪಾಯಿಯಲ್ಲಿ ಸಿಗುತ್ತಿದ್ದ ಚಿಪ್ಪೆಕಲ್ಲಿನ ಬೆಲೆ ಇದೀಗ 100ಕ್ಕೆ 200 ರೂ.ಗೇರಿದೆ. ಪ್ರಸ್ತುತ ಮಂಗಳೂರು ಹಾಗೂ ಆಸುಪಾಸಿನ ಮೀನು ಮಾರುಕಟ್ಟೆಗಳಿಗೆ ಕೇರಳದ ಚಿಪ್ಪೆಕಲ್ಲು ಬರುತ್ತಿದೆ. ಇನ್ನೊಂದೆಡೆ ಚಿಪ್ಪೆಕಲ್ಲು ಚಿಪ್ಪು ಸುಣ್ಣ ತಯಾರಿಕೆಗೆ ಬಳಕೆಯಾಗುತ್ತಿತ್ತು. ಇದೀಗ ಚಿಪ್ಪೆಕಲ್ಲಿನ ಚಿಪ್ಪು ಸಿಗದ ಕಾರಣ ಚಿಪ್ಪಿನಿಂದ ಸುಣ್ಣ ತಯಾರಿ ಉದ್ಯಮ ಬಹುತೇಕ ಸ್ಥಗಿತಗೊಂಡಿದೆ.

ಕುಸಿತದ ಪ್ರಮಾಣ: ಅಂಕಿ-ಅಂಶದ ಪ್ರಕಾರ ಕರಾವಳಿಯಲ್ಲಿ 2012ರಲ್ಲಿ 12,462 ಟನ್‍ವರೆಗೆ ಸಿಕ್ಕಿದ್ದ ಚಿಪ್ಪೆಕಲ್ಲು 2013ರಲ್ಲಿ 7,361 ಟನ್, 2014ರಲ್ಲಿ 6,681 ಟನ್ ಹಾಗೂ 2019ರಲ್ಲಿ 2000 ಟನ್‍ಗೆ ಕುಸಿದಿದೆ.

ಜಲ ಮಾಲಿನ್ಯ ಕಾರಣ: ಮಾಲಿನ್ಯ ರಹಿತ, ಉಪ್ಪಿನಂಶ ಸಮತೋಲಿತ ಪ್ರಮಾಣದಲ್ಲಿ ಇರುವ ನೀರು ಮರುವಾಯಿಯ ಬೆಳವಣಿಗೆಗೆ ಪೂರಕ. ಆದರೆ ಪ್ರಸ್ತುತ ಸಮುದ್ರ ಹಾಗೂ ನದಿನೀರು ಮಲಿನವಾಗುತ್ತಿರುವುದು ಮುಖ್ಯ ಕಾರಣವೆಂದು ಮೀನುಗಾರಿಕಾ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
 

Read These Next

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಹೊನ್ನಾವರ ಠಾಣೆಯ ಪೊಲೀಸರು

ಸಿದ್ದಾಪುರದಲ್ಲಿ 203.2 ಮಿ.ಮೀ ಮಳೆ 

ಕಾರವಾರ: ಕಳೆದ 24 ಗಂಟೆ ಅವಧಿಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಿದ್ದ ಮಳೆಯ ಪ್ರಮಾಣ: ಅಂಕೋಲಾದಲ್ಲಿ 43.6 ಮಿ.ಮೀ, ಭಟ್ಕಳ 12.0 ಮಿ.ಮೀ, ...

ಪ.ವರ್ಗದ ಫಲಾನುಭವಿಗಳಿಂದ ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ      

ಕಾರವಾರ: ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಠ ವರ್ಗದ ಫಲಾನುಭವಿಗಳು ಗುಡಿ ಮತ್ತು ಅತೀ ಸೂಕ್ಷ್ಮ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಆಸಕ್ತಿ ...