ಕಾರವಾರ : ನಗರಸಭೆ ಸಾಮಾನ್ಯ ಸಭೆಯಲ್ಲಿ ದೇವನಾಗರಿ ಲಿಪಿಯಲ್ಲಿ ನಾಮಫಲಕ ಹಾಕಲು ಠರಾವು.

Source: SO News | By Laxmi Tanaya | Published on 30th June 2022, 10:43 PM | Coastal News |

ಕಾರವಾರ : ವಿವಾದಕ್ಕೆ ಕಾರಣವಾಗಿದ್ದ ಕಾರವಾರ ನಗರಸಭೆಯ ಹಿಂದಿ ನಾಮಫಲಕದ ಬಗ್ಗೆ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀವೃ ಚರ್ಚೆ ನಡೆಯಿತು.

ಈ ಹಿಂದೆ ಹಾಕಿದ್ದ ಕೊಂಕಣಿಗರ ದೇವನಾಗರಿ ಲಿಫಿಗೆ ಮಸಿ ಬಳಿದಿರುವುದಕ್ಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಸಂಘಟನೆ ಹೆಸರಲ್ಲಿ ಕಾರವಾರದವರಲ್ಲದ ಹೊರಗಿನ ವ್ಯಕ್ತಿಗಳು ಗೊಂದಲ ಸೃಷ್ಟಿಸಿ ಇಲ್ಲಿನ ಜನರಲ್ಲಿ ಒಡಕು ಮುಡಿಸುತ್ತಿದ್ದಾರೆ ಎಂದು ಸಭೆಯಲ್ಲಿ ಕೆಲ ಸದಸ್ಯರು ಆರೋಪಿಸಿದರು.

ನಗರಸಭೆಯ ಯಾವ ಸದಸ್ಯರ ಅಭಿಪ್ರಾಯ ಪಡೆಯದೇ ಬೋರ್ಡ್ ಅಳವಡಿಸುವುದು ಸರಿಯಲ್ಲ. ವಿವಾದಕ್ಕೆ ಆಯುಕ್ತರು ಮತ್ತು ಅಧ್ಯಕ್ಷರೇ ಕಾರಣ ಎಂಬ ಆರೋಪವನ್ನ. ಸದಸ್ಯ ಗಣಪತಿ ನಾಯ್ಕ ಮಾಡಿದರು. ಇದಕ್ಕೆ ಉತ್ತರಿಸಿದ ಆಯುಕ್ತರಾದ ಆರ್ ಪಿ‌ ನಾಯ್ಕ ಅಧ್ಯಕ್ಷರ ಒಪ್ಪಿಗೆ ಪಡೆದೇ ಬೋರ್ಡ್ ಹಾಕಲಾಗಿದೆ ಎಂದರು.

ಕಾರವಾರದಲ್ಲಿ ಎಲ್ಲಾ ಜಾತಿ ಜನರು ಸೌಹಾರ್ಧತೆಯಿಂದಿದ್ದಾರೆ. ಹೀಗಾಗಿ ಭಾಷಾ ವಿಚಾರದಲ್ಲಿ ಮತ್ತೆ ಗಲಾಟೆಯಾಗೋದು ಬೇಡ. ನಾಮಫಲಕ ದೇವನಾಗರಿ ಲಿಫಿಯಲ್ಲಿರಬೇಕೆಂದು ಕೊಂಕಣಿ ಸಂಘಟನೆಗಳು ಮನವಿ ನೀಡಿದೆ. ಹೀಗಾಗಿ ಅಭಿಪ್ರಾಯ ನೀಡುವಂತೆ ಅಧ್ಯಕ್ಷ ರಾದ ನಿತಿನ್ ಪಿಕಳೆ ಹೇಳಿದಾಗ ಕೆಲ ಸದಸ್ಯರು ಎದ್ದು ನಿಂತು ಸ್ಥಳೀಯರಿಗೆ ಅನುಕೂಲವಾಗಲು ಕೊಂಕಣಿ ಸಾಮ್ಯತೆಯಲ್ಲಿ ಬರುವ ಹಾಗೆ ಬೋರ್ಡ್ ಬರೆಸುವಂತೆ ತಿಳಿಸಿದರು.

ಹೀಗಾಗಿ ಸಭೆಯಲ್ಲಿ ಒಮ್ಮತದ ಅಭಿಪ್ರಾಯದಂತೆ ದೇವನಾಗರಿ ಲಿಪಿಯಲ್ಲಿ ಬೋರ್ಡ್ ಬರೆಸುವಂತೆ ಠರಾವು ಮಾಡಲಾಯಿತು. ಕೊನೆಗೆ ಸರ್ಕಾರಕ್ಕೆ ಠರಾವು ಪ್ರತಿ ಕಳಿಸಿ ಅನುಮತಿ ಪಡೆಯಬೇಕೆಂದು ‌ತಿಳಿಸಲಾಯಿತು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...