ಕಾಯ್ಕಿಣಿ ವಿ.ಎಸ್.ಎಸ್. ನಿರ್ದೇಶಕರ ಚುನಾವಣೆ: ಮಾಜಿ ಶಾಸಕ ಮಂಕಾಳ ವೈದ್ಯ ಸಹಿತ 11ಮಂದಿ ಹಾಲಿ ಸೊಸೈಟಿ ನಿರ್ದೇಶಕ ಮಂಡಳಿ ಪುನರ್ ಆಯ್ಕೆ'

Source: so news | Published on 17th February 2020, 6:39 AM | Coastal News | Don't Miss |

ಭಟ್ಕಳ: ಈ‌ ಹಿಂದೆ ನಿಗದಿ ಯಂತೆ ನಡೆಯಬೇಕಿದ್ದ 
ವ್ಯವಸಾಯ ಸೇವಾ ಸಹಕಾರಿ ಸಂಘ ಕಾಯ್ಕಿಣಿಯ ಚುನಾವಣೆಯ ಗದ್ದಲ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಾದ ಮುಂದುಡಲ್ಪಟ್ಟಿದ್ದ ಚುನಾವಣೆ ಭಾನುವಾರದಂದು ನಡೆದಿದ್ದು, ಭಾರಿ ಕುತೂಹಲ ತಲುಪಿದ್ದ ಚುನಾವಣೆಯಲ್ಲಿ ಸೊಸೈಟಿಯ ಹಾಲಿ ಆಡಳಿತ ಮಂಡಳಿಯಲ್ಲಿರುವ ಎಲ್ಲಾ 12 ಸದಸ್ಯರು ಮರು ಆಯ್ಕೆಯಾಗುವ ಮೂಲಕ ಶಾಸಕ ಸುನೀಲ‌ ನಾಯ್ಕ ಗುಂಪಿಗೆ ತೀವ್ರ ಹಿನ್ನೆಡೆಯಾಗಿದೆ.

ತಾಲೂಕಿನ ಕಾಯ್ಕಿಣಿ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯು ಈ ಹಿಂದೆಯೇ ನಿಗದಿಯಾಗಿದ್ದರೂ ಕೂಡಾ ಮಾಜಿ ಶಾಸಕ ಮಂಕಾಳ ವೈದ್ಯ ಹಾಗೂ ಹಾಲಿ ಶಾಸಕ ಸುನಿಲ್ ನಾಯ್ಕ ಅವರ ರಾಜಕೀಯ ಆಟದಿಂದಾಗಿ ಚುನಾವಣೆಯೇ ಮುಂದೂಡಲ್ಪಟ್ಟಿತ್ತಲ್ಲದೇ ಚುನಾವಣಾಧಿಕಾರಿಯನ್ನು ಅಮಾನತ್ತು ಗೊಳಿಸಲಾಗಿತ್ತು. ಫೆ.16ರಂದು ನಡೆದ ಚುನಾವಣೆಯು ಅತ್ಯಂತ ತುರುಸಿನಿಂದ ನಡೆದಿದ್ದು ಸಹಕಾರಿ ಸಂಘದ ಚುನಾವಣೆಯಲ್ಲಿ ಶಾಸಕರು ಸ್ವತಹ ನಿಂತು ನಿರ್ವಹಿಸಿದ್ದರು. ಮತದಾನವಾಗುವ ತನಕವೂ ನಿಂತ ಶಾಸಕರ ಗುಂಪಿಗೆ ಒಂದೇ ಒಂದು ಸ್ಥಾನವೂ ದೊರಕದೇ ಇರುವುದು ತೀವ್ರ ಹಿನ್ನೆಡೆಯಾಗಿದೆ.
ಚುನಾವಣೆಯಲ್ಲಿ ಹಾಲಿ ನಿಕಟಪೂರ್ವ ಅಧ್ಯಕ್ಷ ಈಶ್ವರ ಬಿಳಿಯಾ ನಾಯ್ಕ, ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಮಂಕಾಳ ಎಸ್. ವೈದ್ಯ, ಚಂದ್ರಕಾಂತ ಕುಪ್ಪಯ್ಯ ನಾಯ್ಕ, ದೀಪಕ್ ದುರ್ಗಪ್ಪ ನಾಯ್ಕ, ಪ್ರಕಾಶ ಅಣ್ಣಪ್ಪ ನಾಯ್ಕ, ಮಂಜುನಾಥ ದುರ್ಗಯ್ಯ ದೇವಡಿಗ, ಕೃಷ್ಣ ನಾರಾಯಣ ಮೊಗೇರ, ಮಂಜುನಾಥ ಬಡ್ಕ ಗೊಂಡ, ಗೋವಿಂದ ಮಾಧವ ನಾಯ್ಕ, ಮಾದೇವ ಸುಕ್ರಯ್ಯ ದೇವಡಿಗ, ಗೌರಿ ಕುಪ್ಪ ದೇವಡಿಗ, ನೇತ್ರಾವತಿ ನಾಗಪ್ಪ ನಾಯ್ಕ ಆಯ್ಕೆಯಾಗುವುದರ ಮೂಲಕ ಈ ಹಿಂದಿನ ಆಡಳಿತ ಮಂಡಳಿಯೇ ಮತ್ತೆ ಐದು ವರ್ಷಗಳ ಕಾಲ ಆಡಳಿತ ನಡೆಸುವಂತಾಗಿದೆ. 

ಶಾಸಕ ಸುನೀಲ ನಾಯ್ಕ‌ ವಿರುದ್ದ ಮೊದಲ ಬಾರಿಗೆ ಗುಡುಗಿದ ಮಾಜಿ ಶಾಸಕ ಮಂಕಾಳ‌ ವೈದ್ಯ ಅವರ ಅಭಿಮಾನಿಗಳೊಂದಿಗೆ ಚುನಾವಣಾ ಸ್ಥಳದಿಂದ ಮನೆಯ ತನಕ ನಡೆದುಕೊಂಡೆ ಸಿಡಿಮದ್ದು ಪ್ರದರ್ಶನದೊಂದಿಗೆ ಸಂಭ್ರಮಿಸಿ ಮೆರವಣಿಗೆಯಲ್ಲಿ ಸಾಗಿದರು. ಯಾವುದೇ ವಿಧಾನಸಭಾ ಚುನಾವಣೆಗೂ ಕಡಿಮೆಯಿಲ್ಲ ಎಂಬಂತೆ ಕಾಯ್ಕಿಣಿ ಸೊಸೈಟಿ ಚುನಾವಣೆ ನಡೆದಿರುವುದು ಸತ್ಯ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...