ಅವನಿಗೆ ನನ್ನ ಮದ್ವೆ ಆಗಬೇಕಂತೆ! ಗ್ಯಾಂಗ್ ಸ್ಟರ್ ನಿಂದ ತನ್ನ ಕುಟುಂಬವನ್ನು ರಕ್ಷಿಸಿ: 13ರ ಬಾಲಕಿಯಿಂದ ಪ್ರಧಾನಿಗೆ ಪತ್ರ

Source: uni | Published on 10th September 2020, 12:19 AM | National News |


 
ತಿರುವನಂತಪುರಂ: 13 ವರ್ಷದ ಬಾಲಕಿ ವಿದ್ಯಾರ್ಥಿನಿಯೊಬ್ಬಳು ಪ್ರಧಾನಿ ನರೇಂದ್ರ ಮೋದಿಗೆ ತನ್ನ ಕುಟುಂಬವನ್ನು ರಕ್ಷಿಸಲು ಸಹಾಯ ಕೋರಿ ಪತ್ರವೊಂದನ್ನು ಬರೆದಿದ್ದಾಳೆ.
ಬಾಲಕಿಯು ತನ್ನ ತಂದೆಗೆ ಬೆದರಿಕೆ ಹಾಕುತ್ತಿರುವ ದರೋಡೆಕೋರ(ಗ್ಯಾಂಗ್ ಸ್ಟರ್) ಒಬ್ಬನ  ಆಡಿಯೊ ಕ್ಲಿಪ್ ಅನ್ನು ಸಹ ಪ್ರಕಟಿಸಿದ್ದಾಳೆ.
ಹೋಲಿ ಏಂಜಲ್ಸ್ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ, ಗೌರಿ ನಂದನಾ ಎಂಬ ಬಾಲಕಿಯೇ ಪ್ರಧಾನಿ ಮೋದಿಯ ಸಹಾಯ ಕೇಳಿ ಪತ್ರ ಬರೆದ ಬಾಲಕಿಯಾಗಿದ್ದಾಳೆ. 
ನಗರದಲ್ಲಿರುವ ಪೆಟ್ಟಾ ಪ್ರದೇಶದ ಶಂಕರ್  ನೇತೃತ್ವದ ಕ್ರಿಮಿನಲ್ ಗ್ಯಾಂಗ್‌ ನೊಂದಿಗೆ ನಾನು ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಉನ್ನತ ಪೋಲೀಸ್ ಅಧಿಕಾರಿಗಳು ತಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಲು ನಿರಾಕರಿಸುತ್ತಿರುವುದಾಗಿ ಬಾಲಕಿ ಪತ್ರದಲ್ಲಿ ಉಲ್ಲೇಖಿಸಿದ್ದಾಳೆ. ಇದೀಗ  ಬಾಲಕಿಗೆ ಶಂಕರ್ ತನ್ನನ್ನು ಮದುವೆಯಾಗಬೇಕೆಂದು ಒತ್ತಾಯಿಸುತ್ತಿರುವುದಾಗಿ ಮೂಲಗಳು ಹೇಳಿದೆ. 
ಅಲ್ಲದೆ ಕಾರ್ಗಿಲ್ ಯುದ್ಧದಲ್ಲಿ ಸೇವೆ ಸಲ್ಲಿಸಿದ್ದ ತನ್ನ ತಂದೆಯನ್ನು ಈ ಹಿಂದೆ ಹಲವಾರು ನಕಲಿ ಪ್ರಕರಣಗಳಲ್ಲಿ ಬಂಧಿಸಲಾಗಿತ್ತು  ಈ ಹಿಂದೆ ಗ್ಯಾಂಗ್ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ತಮ್ಮ ಪ್ರಭಾವವನ್ನು ಬಳಸಿ ಭೂ ಮಾಫಿಯಾ ಜತೆಗೂ ಸಂಪರ್ಕ ಹೊಂದಿತ್ತು ಎಂದು ಬರೆದಿರುವುದಾಗಿ ಮೂಲಗಳು ಹೇಳಿದೆ

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...