ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್ ಜಾಲಿರೈಡ್

Source: sonews | By Staff Correspondent | Published on 28th October 2020, 7:25 PM | State News |

ಶ್ರೀನಿವಾಸಪುರ: ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೊಟ್ಟಮೊದಲ ಬಾರಿಗೆ ಹೆಲಿಕಾಪ್ಟರ್ ಜಾಲಿರೈಡ್ ಈಡಿಎಸ್ ಅವಿಯೇಶನ್ ವತಿಯಿಂದ ಆಯೋಜಿಸಲಾಗಿದೆ.

ಗ್ರಾಮೀಣ ಪ್ರದೇಶ ದಲ್ಲಿ ಬಹಳಷ್ಟು ಜನರಿಗೆ ನಾವು ಆಕಾಶದಲ್ಲಿ ಸುತ್ತಾಡಬೇಕು ಅನ್ನೋ ಆಸೆ ಇರುತ್ತದೆ ಆದರೆ ಅವರ ಅನುಕೂಲಗಳಿಗೆ ತಕ್ಕಂತೆ ಅವರು ವಿಮಾನಯಾನವನ್ನು ಪ್ರಯಾಣಿಸುವದಾಗಲಿ ಹೆಲಿಕ್ಯಾಪ್ಟರ್ ಪ್ರಯಾಣ ಮಾಡಲು ಆಗಿರುವುದಿಲ್ಲ.

ಹಳ್ಳಿಗಾಡಿನ ಪ್ರದೇಶಗಳಲ್ಲಿನ ಆಕಾಶದಲ್ಲಿ ಹಾರಾಡುವ ಆಸೆಯನ್ನು ನೆರವೇರಿಸಲು  ಸಂಕೀರ್ತ್ ರವರು  ಮೂಲತಹ ಶ್ರೀನಿವಾಸಪುರ ತಾಲ್ಲೂಕಿನವರಾಗಿದ್ದು ಈಡಿಎಸ್ ಆವಿಯೇಶನ್  ಸಮಸ್ಯೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ ನಮ್ಮ ತಾಲೂಕಿನ ಜನರ ಆಸೆಯನ್ನು ನೆರವೇರಿಸಬೇಕೆಂಬ ಉದ್ದೇಶದಿಂದ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

ದಿನಾಂಕ 31 ಅಕ್ಟೋಬರ್ 2020 ಹಾಗೂ ಹಾಗೂ 1 ನವಂಬರ್ 2020 ಶ್ರೀನಿವಾಸಪುರ ತಾಲ್ಲೂಕಿನ ಮ್ಯಾಂಗೋ ವ್ಯಾಲಿ ಪಬ್ಲಿಕ್ ಶಾಲೆಯಲ್ಲಿ ಹೆಲಿಕ್ಯಾಪ್ಟರ್ ಜಾಲಿ ರೈಡ್ ಆಯೋಜನೆ ಮಾಡಲಾಗಿದೆ.

ಈಗಾಗಲೇ ಜಾಲಿರೈಡ್ ಟಿಕೆಟ್ ಬುಕ್ಕಿಂಗ್ ನಡೆಯುತ್ತಿದ್ದು ಆಸಕ್ತರು ಈ ಕೂಡಲೇ ಬುಕಿಂಗ್ ಮಾಡಿಕೊಳ್ಳಿ ಎಂದು ತಿಳಿಸಿದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತ ಜಾರಿಗೆ ತರುತ್ತೇವೆ : ಗೃಹ ಸಚಿವ ಬೊಮ್ಮಾಯಿ.

ಕಾರವಾರ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಖಂಡಿತವಾಗಿ ಜಾರಿಗೆ ತರುತ್ತೇವೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರ ಗೆಲುವಿಗೆ ಬಿಜೆಪಿ ಬದ್ಧ; ಕೈಗಾರಿಕಾ ಮಂತ್ರಿ ಜಗದೀಶ ಶೆಟ್ಟರ್

ಶಿರಸಿ: ಗ್ರಾಮ ಪಂಚಾಯಿತಿ ಚುನಾವಣೆ ನಮ್ಮ ಕಾರ್ಯಕರ್ತರ ಚುನಾವಣೆಯಾಗಿದೆ. ಕಾರ್ಯಕರ್ತರನ್ನು ನಾಯಕರನ್ನಾಗಿ ಮಾಡುವುದು ನಮ್ಮ ...