ಭಟ್ಕಳದಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯ ಗೆದ್ದ ಪತ್ರಕರ್ತರು

Source: S.O. News Service | By I.G. Bhatkali | Published on 1st October 2018, 1:34 AM | Coastal News | Sports News | Don't Miss |

ಭಟ್ಕಳ: ಜೆಸಿಐ ಭಟ್ಕಳ ಇವರ ಆಶ್ರಯದಲ್ಲಿ ಇಲ್ಲಿನ ಪೊಲೀಸ್ ಮೈದಾನದಲ್ಲಿ ನಡೆದ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಭಟ್ಕಳ ಪತ್ರಕರ್ತರ ತಂಡ ಗೆದ್ದುಕೊಂಡಿದೆ.

 ರವಿವಾರ ನಡೆದ ಅಂತಿಮ ರೋಚಕ ಪಂದ್ಯದಲ್ಲಿ ಪತ್ರಕರ್ತರ ತಂಡವು ಸೂಪರ್ ಓವರ್‍ನಲ್ಲಿ ಎದುರಾಳಿ ಪೊಲೀಸ್ ತಂಡವನ್ನು ಮಣಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಪೊಲೀಸ್ ತಂಡವು ನಿಗದಿತ 10 ಓವರ್‍ಗಳನ್ನು 45 ಓಟಗಳನ್ನು ಕಲೆ ಹಾಕಿತು. 46 ಓಟಗಳ ಗುರಿಯನ್ನು ಬೆನ್ನತ್ತಿದ್ದ ಪತ್ರಕರ್ತರ ತಂಡವು ಸುಲಭದ ಗೆಲುವಿನತ್ತ ಮುಂದಡಿ ಇಟ್ಟಿತ್ತಾದರೂ ಪೊಲೀಸ್ ತಂಡದ ಉತ್ತಮ ಕ್ಷೇತ್ರ ರಕ್ಷಣೆಯಿಂದಾಗಿ 7 ಆಟಗಾರರು ರನ್ ಔಟ್ ಆಗುವುದರೊಂದಿಗೆ ಪಂದ್ಯ ರೋಚಕ ಘಟ್ಟವನ್ನು ತಲುಪಿತು. ಅಂತಿಮ ಓವರ್‍ನ 6 ಎಸೆತಗಳಲ್ಲಿ ಪತ್ರಕರ್ತರ ತಂಡವು ಗೆಲುವಿಗಾಗಿ 5 ಓಟಗಳನ್ನು ಗಳಿಸಬೇಕಾಗಿತ್ತು. ಆದರೆ ಪತ್ರಕರ್ತರ ತಂಡವು ಕೇವಲ 4 ಓಟವನ್ನು ಗಳಿಸಲು ಶಕ್ತವಾದ ಕಾರಣ ಪಂದ್ಯ ಟೈ ಆಗುವುದರೊಂದಿಗೆ ಸೂಪರ್ ಓವರ್ ಮೊರೆ ಹೋಗಬೇಕಾಯಿತು.

ಸೂಪರ್ ಓವರ್‍ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪತ್ರಕರ್ತರ ತಂಡವು ಕೇವಲ 3 ಓಟಗಳನ್ನು ಕಲೆ ಹಾಕಿ 4 ಓಟಗಳ ಗುರಿಯನ್ನು ನೀಡಿತು. ಪತ್ರಕರ್ತರ ತಂಡದ ಕರಾರುವಾಕ್ ಬೌಲಿಂಗ್‍ನಿಂದ ರನ್ನಿಗಾಗಿ ತಿಣುಕಾಡಿದ ಪೊಲೀಸ್ ತಂಡದ ಆಟಗಾರರು 2 ವಿಕೆಟ್‍ಗಳನ್ನು ಕಳೆದುಕೊಂಡು ಗುರಿ ತಲುಪುವಲ್ಲಿ ವಿಫಲರಾದರು. ಜೆಸಿಐ ಅಧ್ಯಕ್ಷ ಅಬ್ದುಲ್ ಜಬ್ಬಾರ್, ರಮೇಶ್ ಖಾರ್ವಿ, ನಾಗರಾಜ ಶೇಟ್, ಭಟ್ಕಳ ಶಹರ ಠಾಣಾ ಎಸೈ ಕುಸುಮಾಧರ ಮೊದಲಾದವರು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Read These Next

ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ - ಜಿಲ್ಲಾಧಿಕಾರಿ ಜಿ. ಜಗದೀಶ್

ಆಯುಷ್ಮಾನ್ ಆರೋಗ್ಯ ಕಾರ್ಡ್ ಇದ್ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಕೋವಿಡ್-19 ಗೆ ಚಿಕಿತ್ಸೆ - ಜಿಲ್ಲಾಧಿಕಾರಿ ಜಿ. ಜಗದೀಶ್

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ

ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದ ನಿಯೋಗ ಮಹಾರಾಷ್ಟ್ರಕ್ಕೆ ಭೇಟಿ ಕೃಷ್ಣಾ ನದಿ ನೀರು ಬಳಕೆ, ನೆರೆ ನಿಯಂತ್ರಣ ಕುರಿತು ಚರ್ಚೆ