ಹಿರಿಯ ನಾಗರೀಕರಲ್ಲಿ ಜೀವನ ಪ್ರೀತಿಯನ್ನು ಕಟ್ಟಿಕೊಡುವ ಜವಬ್ದಾರಿ ಯುವಜನರ ಮೇಲಿದೆ: ಅಪರ ಜಿಲ್ಲಾಧಿಕಾರಿ

Source: S.O. News Service | Published on 1st October 2019, 8:10 PM | State News | Don't Miss |

ಶಿವಮೊಗ್ಗ: ಹಿರಿಯ ನಾಗರೀಕರನ್ನು ಪ್ರೀತಿ ಹಾಗೂ ಗೌರವದಿಂದ ಕಂಡು ಅವರಲ್ಲಿ ಜೀವನ ಪ್ರೀತಿಯನ್ನು ಮೂಡಿಸುವ ಮೂಲಕ ಅವರ ವೃದ್ಧಾಪ್ಯದ ದಿನಗಳನ್ನು ನೆಮ್ಮಿದಿಯಿಂದ ಕಳೆಯುವಂತೆ ಮಾಡುವ ಜವಬ್ದಾರಿ ಯುವಜನತೆಯ ಮೇಲಿದೆ ಎಂದು ಅಪರ ಜಿಲ್ಲಾಧಿಕಾರಿ ಅನುರಾಧ ಜಿ ಹೇಳಿದರು.
ನಗರದ ಡಾ. ಬಿ ಆರ್ ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀರ ಸಬಲೀಕರಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ದೇಶದ ಸಂಸ್ಕøತಿಯಲ್ಲಿ ವೃದ್ಧಾಶ್ರಮ ಪದ್ಧತಿಯಿಲ್ಲ. ಆದರೂ ಇಂದಿನ ಮಕ್ಕಳು ತಮ್ಮ ಪೋಷಕರನ್ನು ತೊರೆಯುತ್ತಿರುವುದು ಇಂತಹ ಒಂದು ಪದ್ಧತಿಗೆ ದಾರಿ ಮಾಡಿಕೊಟ್ಟಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಮಕ್ಕಳಿಂದ ಅನ್ಯಾಯ ಹಾಗೂ ಕಿರುಕುಳವಾದಲ್ಲಿ ಉಪವಿಭಾಗಾಧಿಕಾರಿಗಳಿಗೆ ದೂರು ನೀಡುವ ಮೂಲಕ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ವೃದ್ಧರಿಗೆ ಇರುವ ಕಾನೂನನ್ನು ಹಿರಿಯ ನಾಗರೀಕರು ಬಳಕೆ ಮಾಡಿಕೊಳ್ಳಬೇಕು. ಆದರೆ ಸರ್ಕಾರ ಹಾಗೂ ಕಾನೂನು ಎಷ್ಟೇ ಹಿರಿಯ ನಾಗರೀಕರ ಪರವಾಗಿದ್ದರೂ ಸಹ ನ್ಯಾಯಾಲಯದಿಂದ ನ್ಯಾಯಯುತವಾದ ತೀರ್ಪನ್ನು ನೀಡಿ ಆಸ್ತಿ ಹಾಗೂ ಹಣವನ್ನು ತಮ್ಮ ಮಕ್ಕಳಿಂದ ಕೊಡಿಸಬಹುದು. ಆದರೆ ಪ್ರೀತಿಯನ್ನು ಕಾನೂನಾಗಲಿ, ಸರ್ಕಾರದಿಂದಾಗಲಿ ಒದಗಿಸಲು ಸಾಧ್ಯವಿಲ್ಲ ಎಂಬುದನ್ನು ಇಂದಿನ ಯುವಜನತೆ ಅರಿಯುವ ಅಗತ್ಯವಿದೆ ಎಂದು ಅವರು ಹೇಳಿದರು.
ನಿವೃತ್ತ ನೌಕರರ ಸಂಘವು ಹಿರಿಯ ನಾಗರೀಕರಿಗೆ ವಿವಿಧ ಕ್ರೀಡೆ ಹಾಗೂ ಸಾಂಸ್ಕøತಿಕ ಸ್ಪರ್ದೆಗಳನ್ನು ಆಯೋಜಿಸಿ ಅವರಲ್ಲಿ ಸ್ಪೂರ್ತಿ ಹಾಗೂ ಜೀವನ ಪ್ರೀತಿಯನ್ನು ತುಂಬುವ ಕೆಲಸ ಮಾಡಿರುವುದು ಶ್ಲಾಘನೀಯವಾದುದು ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ಮಾತನಾಡಿ ಹಿರಿಯ ನಾಗರೀಕರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಈ ಸಲುವಾಗಿ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಯುವಜನತೆ ಗಮನ ಕೊಡಬೇಕು. ಇದರಿಂದಾಗಿ ಹಿರಿಯರಿಗೆ ತಮ್ಮ ಜೀವನದ ವೃದ್ಧಾಪ್ಯದಲ್ಲಿ ನೆಮ್ಮದಿಯನ್ನು ಕಟ್ಟಿಕೊಡುವ ಕಾರ್ಯವನ್ನು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ನೌಕರರ ಸಂಘದಿಂದ ಆಯೋಜಿಸಿದ್ದ ವಿವಿಧ ಸ್ಪರ್ದೆಗಳಲ್ಲಿ ಪ್ರಥಮ ಸ್ಥಾನ ಪಡೆದ ಹಿರಿಯ ನಾಗರೀಕರಾದ ಸಬ್ಜಾನ, ಗಿಡ್ಡಪ್ಪ ಗೌಡ ಎನ್.ಟಿ, ಬಿ.ಆರ್ ಮಲ್ಲಿಕಾರ್ಜುನ್, ಕಂದಗಲ್ ಬಸವರಾಜಪ್ಪ, ಮಂಜಮ್ಮ .ಬಿ, ಶಶಿಕಲಾ. ಕೆ.ಎಸ್, ಸುನಂದಾ, ಭಾಗಿರಥಿ ಕುಂಬ್ಳೆ, ಹನುಮಂತಪ್ಪ, ಮಂಜುನಾಥ ಶೇಟ್, ಭದ್ರಪ್ಪ ಗೌಡ, ಬೇಗೂರು ನಾಗರಾಜ್, ಸೋಮಶೇಖರಯ್ಯ, ಬಸವರಾಜಪ್ಪ ಕಂದಗಲ್, ಗೀತದಳವಾಯಿ, ಶಂಕರೀ ಬಾಯಿ, ಮಹಮ್ಮದ್ ರುಸುಲ್, ಸತೀಶ್ ಚಂದ್ರ, ಭದ್ರಪ್ಪ ಗೌಡ, ಅಬ್ದುಲ್ ಗಫಾರ್, ತೀರ್ಥಪ್ಪ, ಶಾಂತಮ್ಮ, ಭಾರತಲಕ್ಷ್ಮೀ, ರಾಜಮ್ಮ ಇವರಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್. ಶೇಷಪ್ಪ, ಅಂಗವಿಕಲರ ಕಲ್ಯಾಣಾಧಿಕಾರಿ ಶಿಲ್ಪಾ ಎಂ ದೊಡ್ಡಮನಿ, ರೂಪೇಶ್ ಜಾವಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Read These Next

ಸಂವಿಧಾನದ ಆಶಯವನ್ನು ಎತ್ತಿಹಿಡಿಯುವಲ್ಲಿ ನ್ಯಾಯಾಂಗದ ಪಾತ್ರ ದೊಡ್ಡದು: ಮುಖ್ಯಮಂತ್ರಿ ಸಿದ್ದರಾಮಯ್ಯ

ಭಾರತದ ನ್ಯಾಯಾಂಗವು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಮೂಲಭೂತ ಹಕ್ಕುಗಳಿಗೆ ...

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ವಿದ್ಯಾರ್ಥಿಗಳ ಗೊಂದಲಕ್ಕೆ ತೆರೆ: 5, 8, 9ನೇ ತರಗತಿಗೆ ಬೋರ್ಡ್ ಪರೀಕ್ಷೆ ನಡೆಸಲು ಹೈಕೋರ್ಟ್ ವಿಭಾಗೀಯ ಪೀಠ ಅಸ್ತು!

ಕೋಲಾರ ಕ್ಷೇತ್ರಕ್ಕೆ ಏಪ್ರಿಲ್ 26 ಕ್ಕೆ ಮತದಾನ, ಜೂನ್ 4ಕ್ಕೆ ಫಲಿತಾಂಶ, ತಕ್ಷಣದಿಂದಲೆ ಜಿಲ್ಲೆಯಾದ್ಯಂತ ನೀತಿ ಸಂಹಿತೆ ಜಾರಿ

ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ತಕ್ಷಣದಿಂದಲೆ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...