ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ ದಿನಾಚರಣೆಯ

Source: so news | By MV Bhatkal | Published on 4th March 2021, 11:52 PM | Coastal News | Don't Miss |

ಭಟ್ಕಳ:ಆರಂಭದಲ್ಲಿ ಜನೌಷಧಿ ಕೇಂದ್ರದ ಔಷಧಗಳನ್ನು ಐಸಿಯೂನಲ್ಲಿ ಇರುವ ರೋಗಿಗಳಿಗೆ ನೀಡಲು ವೈದ್ಯರೆ ಅನುಮಾನ ಪಡುತ್ತಿದ್ದ ಸಂದರ್ಬಗಳಿದ್ದು ಇಂದು ಪ್ರತಿಯೊಂದು ಸಂದರ್ಬದಲ್ಲೂ ಜನೌಷಧಿ ಕೇಂದ್ರವನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸವಿತಾ ಕಾಮತ ಹೇಳಿದರು. 
ಅವರು ಗುರುವಾರ ತಹಸಿಲ್ದಾರ ಕಚೇರಿಯ ಸಭಾಂಗಣದಲ್ಲಿ ಭಟ್ಕಳ ಹೊನ್ನಾವರ ತಾಲೂಕಿನ ಜನೌಷಧಿ ಕೇಂದ್ರದ ಮಾಲಕರ ಒಕ್ಕೂಟದ ವತಿಯಿಂದ ೩ನೇ ವರ್ಷದ ಜನೌಷಧಿ ದಿನಾಚರಣೆಯ ಪರಿಚರ್ಚಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮನುಷ್ಯನ ಖಾಯಿಲೆಗೆ ಅನುಸಾರವಗಿ ಕೆಲವೊಂದು ಔಷಧಗಳು ಒಮ್ಮೆ ಪ್ರಾರಂಭವಾದರೆ ರೋಗಿ ಸಾಯುವವರೆಗೂ ಪ್ರತಿದಿನ ಸೇವಿಸಬೇಕು. ಅಂತಹ ದುಬಾರಿ ಔಷಧಗಳು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಅತಿ ಕಡಿಮೆ ಬೆಲೆಗೆ ಲಭ್ಯವಿದೆ. ಇದು ಬಡರೋಗಿಗಳಿಗೆ ಒಂದು ಸಮಾಧಾನದ ವಿಷಯ. ಮಾನವನೂ ಆದಷ್ಟು ರೋಗಗಳಿಂದ ದೂರವಿರಬೇಕು ನಿಜ ಆದರೆ ರೋಗಗಳ ಬಂದಾಗ ಅದಕ್ಕೆ ಚಿಕಿತ್ಸೆ ಔಷಧ ಪಡೆಯುವದು ಅಷ್ಟೆ ಅನಿವಾರ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಉಪವಿಭಾಗಾಧಿಕಾರಿ ಸಾಜಿದ್ ಅಹ್ಮದ್ ಮುಲ್ಲಾ ಮಾತನಾಡಿ ದೊಡ್ಡ ದೊಡ್ಡ ಖಾಯಿಲೆಗಳಿಗೂ ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಯಲ್ಲಿ ಪರಿಕರಗಳು ಲಭ್ಯವಿರುವದು ಬಡವರು ಚಿಕಿತ್ಸೆ ಪಡೆಯಲು ನೆರವಾಗಿದೆ ಎಂದರು.
ತಹಸೀಲ್ದಾರ ಕಚೇರಿಯ ವಿಜಯಲಕ್ಷಿö್ಮÃ ಮಣಿ, ಜನೌಷಧಿ ಕೇಂದ್ರದ ಜಿ.ಪ್ರ. ಕಾರ್ಯದರ್ಶಿ ಮಹ್ಮದ್ ಹನೀಫ್, ಜನೌಷಧಿ ಕೇಂದ್ರದ ಮಾಲಿಕರಾದ  ಸ್ಕಂದ ಜಿ ನಾಯ್ಕ, ಮೋಹನ ದೇವಾಡಿಗ, ಜಗದೀಶ ಮೊಗೇರ ಇತರರು ಇದ್ದರು. ಶ್ರೀವಲಿ ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

Read These Next

ಕೋವಿಡ್ ಸೋಂಕಿತರು ಮೃತಪಟ್ಟರೇ ಮನಾಪಾಲಿಕೆಯಿಂದ ಅಂತ್ಯಸಂಸ್ಕಾರದ ವೆಚ್ಚ: ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಹಾನಗರ ಪಾಲಿಕೆ ವ್ಯಾಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವೆಚ್ಚವನ್ನು ಮಂಗಳೂರು ...

ಮದುವೆಗೆ 50 ಜ‌ನರಿಗಷ್ಟೆ ಅನುಮತಿ. ನಿಯಮ ಮೀರಿದರೇ ಕ್ರಮ. ಮಂಗಳೂರು ಡಿಸಿ ಮತ್ತು ಪೊಲೀಸ್ ಕಮಿಷನರ್ ಮಾಹಿತಿ.

ಮಂಗಳೂರು : ರಾಜ್ಯ ಸರ್ಕಾರದಿಂದ ಹೊಸ ಕೋವಿಡ್ ಗೈಡ್ ಲೈನ್ಸ್ ಪ್ರಕಟಗೊಳಿಸಿದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ...

ಕಾರವಾರ : ವ್ಯಕ್ತಿ ನಾಪತ್ತೆ

ಬಡಕಲು ದೇಹ, ಗೋದಿ ಮೈ ಬಣ್ಣ, 5.4 ಎತ್ತರÀ, ಇಂಗ್ಲೀಷ ಮತ್ತು ಕನ್ನಡ ಮಾತನಾಡುವ 59 ವರ್ಷ ಪ್ರಾಯದ ಕುಮಟಾದ ಸಾಣಕಲ ಕೇರಿ ನಿವಾಸಿ ಮಹಾಬಲೇಶ್ವರ ...

ಕೋವಿಡ್ ನಿಯಂತ್ರಣಕ್ಕೆ ಕಠಿಣ ನಿರ್ಬಂಧಗಳ ಹೊಸ ಮಾರ್ಗಸೂಚಿ ಜಿಲ್ಲೆಯಲ್ಲಿ ಯಥಾವತ್ ಅನುಷ್ಠಾನ- ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ದೇಶದಲ್ಲಿ ಕೋವಿಡ್ 2ನೇ ಅಲೆ ಹೆಚ್ಚುತ್ತಿರುವುದರಿಂದ ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ...

ಕೋವಿಡ್ ಸೋಂಕಿತರು ಮೃತಪಟ್ಟರೇ ಮನಾಪಾಲಿಕೆಯಿಂದ ಅಂತ್ಯಸಂಸ್ಕಾರದ ವೆಚ್ಚ: ಶಾಸಕ ವೇದವ್ಯಾಸ ಕಾಮತ್.

ಮಂಗಳೂರು : ಮಹಾನಗರ ಪಾಲಿಕೆ ವ್ಯಾಾಪ್ತಿಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರದ ವೆಚ್ಚವನ್ನು ಮಂಗಳೂರು ...