ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಬಡ ಕುಟುಂಬಗಳಿಗೆ ಮನೆ ಹಸ್ತಾಂತರ

Source: SOnews | By Staff Correspondent | Published on 23rd January 2021, 11:14 PM | Coastal News | Don't Miss |

ಹೂಡೆ: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ವತಿಯಿಂದ ಎರಡು ಬಡ ಕುಟುಂಬಗಳಿಗೆ ದಾನಿಗಳ ಸಹಾಯದಿಂದ ಮನೆ ನಿರ್ಮಿಸಿ ಹಸ್ತಾಂತರಿಸಲಾಯಿತು.

ಹ್ಯೂಮಾನಿಟೇರಿಯನ್ ರಿಲೀಫ್ ಸೊಸೈಟಿಯ ನಿರ್ದೇಶಕರಾದ ಅಶ್ರಫ್ ಮಂಗಳೂರು ಗುಜ್ಜರ್ ಬೆಟ್ಟಿನ ನಾಲ್ಕನೆ ರಸ್ತೆ ಬಳಿಯ ಮೊದಲ ಮನೆಯ ಕೀಲಿ ಕೈಯನ್ನು 8 ನೇ ವಾರ್ಡಿನ ಪಂಚಾಯತ್ ಸದಸ್ಯರಾದ ಪುರಂದರ, ವತ್ಸಲ, ಡಾ.ಫಹೀಮ್ ಅವರ ಸಮ್ಮುಖದಲ್ಲಿ ಫಲನುಭವಿಯಾದ ನಝೀರ್ ಅವರಿಗೆ ಹಸ್ತಾಂತರಿಸಿದರು.

ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿಯ ನಾಯಕರಾದ ಅಮೀರ್ ಕುದ್ರೋಳಿಯವರು ಎರಡನೇ ಮನೆಯ ಕೀಲಿಕೈ 7 ನೇ ವಾರ್ಡಿನ ಪಂಚಾಯತ್ ಸದಸ್ಯರಾದ ವಿಜಯ್, ಸುಜಾನ ಮತ್ತು ಮಮ್ತಾಝ್ ಅವರ ಸಮ್ಮುಖದಲ್ಲಿ ಫಲನುಭವಿಗೆ ಹಸ್ತಾಂತರಿಸಿದರು.

ಮನೆ ಹಸ್ತಾಂತರಿಸಿ ಮಾತನಾಡಿದ ಎಚ್.ಆರ್.ಎಸ್ ನಿರ್ದೇಶಕ ಅಶ್ರಫ್ ಮಂಗಳೂರು, ಉಳ್ಳವರು ಇಲ್ಲದವರಿಗೆ ಸಹಾಯ ಮಾಡುವುದು ಇಸ್ಲಾಮಿನ ಆದರ್ಶವಾಗಿದೆ. ಇವತ್ತು ಮಾನವೀಯ ಮೌಲ್ಯಗಳು ಕಳೆಗುಂದುವ ಸಮಯದಲ್ಲಿ ಇಂತಹ ಶ್ಲಾಘನಾರ್ಹ ಕಾರ್ಯಗಳು ಮಾನವೀಯತೆ ಜೀವಂತಿಕೆಯ ಸಾಕ್ಷ್ಯ ವಹಿಸುತ್ತದೆ ಎಂದರು.

ಜಮಾಅತೆ ಇಸ್ಲಾಮಿ ಹಿಂದ್ ಮತ್ತು ಎಚ್.ಆರ್.ಎಸ್ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ಎಲ್ಲ ಕಾಲದಲ್ಲೂ ತನ್ನ ಕೈಯಲಾದ ಸಹಾಯ ಮಾಡುತ್ತ ಬಂದಿದೆ. ರಾಜ್ಯದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಅರ್ಥಿಕ ಹೊಡೆತ ಬಿದ್ದಾಗಲೂ ದಾನಿಗಳ ಸಹಾಯದಿಂದ ಇಲ್ಲದವರಿಗೆ ಉಣ ಬಡಿಸುವ ಕೆಲಸ ನಿರ್ವಹಿಸಿದೆ. ಸಂಘಟನೆಗಳು ಮತ್ತಷ್ಟು ಇಂತಹ ಸಮಾಜಮುಖಿ ಕೆಲಸಗಳನ್ನು ನಿರ್ವಹಿಸುವಂತಾಗಲಿ ಎಂದು ಹಾರೈಸಿದರು.

ಇದ್ರಿಸ್ ಹೂಡೆ ಪ್ರಸ್ತಾವಿಕವಾಗಿ ಮಾತನಾಡಿ, ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಬಡವರ ಸಂಕಷ್ಟಗಳಿಗೆ ಹಲವಾರು ವರ್ಷಗಳಿಂದ ನಿರಂತರವಾಗಿ ಸ್ಪಂದಿಸುತ್ತ ಬಂದಿದೆ. ಕೋವಿಡ್ ಸಂದರ್ಭದಲ್ಲಿ ದಾನಿಗಳ ಸಹಕಾರದೊಂದಿಗೆ ವಲಸೆ ಕಾರ್ಮಿಕರಿಗೆ, ಬಡವರಿಗೆ ಆಹಾರ ಮತ್ತು ರೇಷನ್ ಕಿಟ್ ಒದಗಿಸುವ ಕೆಲಸ ನಿರ್ವಹಿಸಿದ್ದೇವೆ. ಸಂಘಟನೆಯು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಸಹಾಯ ಮಾಡಿದೆ. ಅದರೊಂದಿಗೆ ಸೂರಿಲ್ಲದವರಿಗೆ ಸೂರು ಒದಗಿಸುವುದು ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಸಮಾಜ ಸೇವಾ ವಿಭಾಗದ ಒಂದು ಉದ್ದೇಶವೂ ಆಗಿದೆ. ಇದುವರೆಗೆ ದಾನಿಗಳ ಸಹಾಯದೊಂದಿಗೆ ಹನ್ನೊಂದು ಮನೆಗಳನ್ನು ತೋನ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಾತಿ ಮತ ಧರ್ಮದ ಬೇಧವಿಲ್ಲದೆ ನಿರ್ಮಿಸಿ ಹಸ್ತಾಂತರಿಸಲಾಗಿದೆ ಎಂದರು.

ತೋನ್ಸೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ವೆಂಕಟೇಶ್ ಕುಂದರ್ ಮಾತನಾಡಿ ಜಮಾಅತೆ ಇಸ್ಲಾಮಿ ಹಿಂದ್ ಕಾರ್ಯವನ್ನು ಶ್ಲಾಘಿಸಿದರು. ಇನ್ನೂ ಹೆಚ್ಚಿನ ಸೇವೆಗೈಯುವಂತಾಗಲಿಯೆಂದು ಶುಭ ಹಾರೈಸಿದರು.

ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ಘಟಕದ ಅಧ್ಯಕ್ಷರಾದ ಅಬ್ದುಲ್ ಕಾದೀರ್ ,ತೋನ್ಸೆ ಪಂಚಾಯತ್ ಕಾರ್ಯದರ್ಶಿ ದಿನಕರ ಬೆಂಗ್ರೆ, ಮೌ.ಅಸ್ಘರ್ ಕಾಸ್ಮಿ, ಮೌಲನ ಆದಮ್ ಸಾಹೇಬ್, ಪಂಚಾಯತ್ ಸದಸ್ಯೆಯಾದ ಕುಸುಮಾ, ಜಮೀಲಾ, ವೆಲ್ಫೇರ್ ಪಕ್ಷದ ಝೈನುಲ್ಲಾ ಹೂಡೆ, ಎಸ್.. ವಾಸೀಮ್ ಉಪಸ್ಥಿತರಿದ್ದರು.

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...