ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಜಗಜೀವನ್‍ರಾಮ್ ಜಯಂತಿ ಆಚರಣೆ

Source: sonews | By Staff Correspondent | Published on 6th April 2020, 9:50 PM | State News |

ಕೆಜಿಎಫ್ :ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಮಾಜಿ ಉಪ ಪ್ರಧಾನಮಂತ್ರಿ ಡಾ|| ಬಾಬು ಜಗಜೀವನರಾಮ್ ರವರ 113ನೇ ಜನ್ಮದಿನಾಚರಣೆಯನ್ನು ಕೆಜಿಎಫ್‍ನ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಭಾನುವಾರದಂದು ಆಚರಿಸಲಾಯಿತು.

ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಬಿ.ಕೆ.ಉಮೇಶ್ ಅವರು ಡಾ|| ಬಾಬು ಜಗಜೀವನರಾಮ್ ರವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಡಾ|| ಬಾಬು ಜಗಜೀವನರಾಮ್ ಅವರ ಆದರ್ಶ, ತತ್ವಗಳನ್ನು ಇಂದಿನ ಸಮಾಜದಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.

ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಬಿ.ಕೆ.ಉಮೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಡಾ|| ಬಾಬು ಜಗಜೀವನರಾಮ್ ರವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಸಹಾಯಕ ಆಡಳಿತಾಧಿಕಾರಿ ಜಿ.ವಿಶ್ವನಾಥ, ಅಪರಾಧ ಎಎಸ್‍ಐ ಎನ್.ಜಿ.ಚೌಡಪ್ಪ, ಗಣಕ ಮೇಲ್ವಿಚಾರಕ ಎನ್.ಆನಂದ್ ಹಾಗೂ ಇಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಜರಿದ್ದರು.

 

ಶಾಖಾಧೀಕ್ಷಕರಾದ ಎ.ನಜೀಮಾಬಾನು, ಪೊಲೀಸ್ ಅಧೀಕ್ಷಕರ ಆಪ್ತ ಸಹಾಯಕಿ ಜಿ.ಮಮತಾ, ಜಿಲ್ಲಾ ಪೊಲೀಸ್ ಕಛೇರಿಯ ಸಿಬ್ಬಂದಿಗಳು ವಿ.ಮಂಜುನಾಥ, ಗೋಪಾಲಕೃಷ್ಣ, ಸಂಗೀತಾ, ಸುದರ್ಶನ್, ನಾರಾಯಣಸ್ವಾಮಿ, ಚಂದ್ರಕುಮಾರ್ ಮತ್ತಿತರರು ಭಾಗವಹಿಸಿದ್ದರು.

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ

Read These Next

ನೋಡಲ್ ಅಧಿಕಾರಿಗಳು ಕ್ಷೇತ್ರ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತು ವಾಸ್ತವ ಪರಿಶೀಲಿಸಿ 

ಕೋಲಾರ ; ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಹೋಬಳಿವಾರು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಈ ಅಧಿಕಾರಿಗಳು ಕ್ಷೇತ್ರ ...