ಜಾರಕಿಹೊಳಿಯನ್ನು ಸಿಡಿ ಜಾಲದಲ್ಲಿ ಸಿಲುಕಿಸಲು ವರ್ಷದಿಂದಲೇ ನಡೆದಿತ್ತು ತಯಾರಿ..!

Source: UNI | By MV Bhatkal | Published on 4th March 2021, 7:40 PM | State News | Don't Miss |

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನದ ನಂತರ ಪ್ರಭಾವಿ ನಾಯಕರನ್ನು ಹಣಿಯುವ ತಂತ್ರಗಾರಿಕೆ ಶುರುವಾಗಿತ್ತು. ಒಂದು ವರ್ಷದ ಹಿಂದೆಯೇ ಈ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು..! ಪ್ರಸ್ತುತ ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಬಹಿರಂಗಗೊಂಡಿರುವ ಬಗ್ಗೆ ದಿನಕ್ಕೊಂದು ಮಾಹಿತಿ ಹರಿದಾಡುತ್ತಿದ್ದು, ಇದನ್ನು ವ್ಯವಸ್ಥಿತವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಡಲು ಎಲ್ಲ ರೀತಿಯ ಕಾರ್ಯತಂತ್ರ ರೂಪಿಸಲಾಗಿತ್ತು ಎನ್ನಲಾಗಿದೆ.
ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಹಾಗೂ ರಮೇಶ್ ಜಾರಕಿಹೊಳಿ ನಡುವೆ ಯಾವಾಗ ಪರಿಚಯವಾಗಿತ್ತು ಮತ್ತು ಅವರ ನಡುವೆ ಸಾಮಾಜಿಕ ಜಾಲತಾಣದಲ್ಲೇ ಸಂಭಾಷಣೆ ನಡೆದು ಅದು ಸರಸದವರೆಗೂ ಮುಂದುವರೆದ ಬಗ್ಗೆ ಹಲವಾರು ಮಾಹಿತಿಗಳು ಈಗ ಬಿಚ್ಚಿಕೊಳ್ಳುತ್ತಿವೆ.
ಮೂಲಗಳ ಪ್ರಕಾರ, ಇದರ ಹಿಂದೆ ಒಂದು ತಂಡ ಕಾರ್ಯನಿರ್ವಹಿಸಿದ್ದು, ರಮೇಶ್ ಜಾರಕಿಹೊಳಿ ಅವರು ಸಚಿವರಾಗಿ ಅಕಾರ ವಹಿಸಿಕೊಂಡ ನಂತರದಲ್ಲಿಯೇ ಅವರನ್ನು ಖೆಡ್ಡಕ್ಕೆ ಬೀಳಿಸಲು ವ್ಯವಸ್ಥಿತ ಸಂಚು ಶುರುವಾಗಿತ್ತು ಎಂದು ಹೇಳಲಾಗಿದೆ.ಕಳೆದ ಆರು ತಿಂಗಳ ಹಿಂದೆಯೇ ಈ ಸಿಡಿ ಸಿದ್ಧವಾಗಿತ್ತು ಮತ್ತು ದೃಶ್ಯದಲ್ಲಿ ಕಾಣುವ ಯುವತಿಯು ಕೂಡ ಸದ್ಯ ದೇಶದಲ್ಲೇ ಇಲ್ಲ ಎಂಬ ಮಾಹಿತಿ ಕೂಡ ಹರಿದಾಡುತ್ತಿದೆ. ಇದರ ಹಿಂದೆಯೂ ಆ ತಂಡದ್ದೇ ಕರಾಮತ್ತು ನಡೆದಿದೆ ಎಂದು ಹೇಳಲಾಗುತ್ತಿದೆ.
ಸಿಡಿ ಬಿಡುಗಡೆ ಕುರಿತಂತೆ ಸಮಯ-ಸಂದರ್ಭಗಳನ್ನು ಕಲೆ ಹಾಕಿ ಅವೇಶನಕ್ಕಾಗಿಯೇ ಕಾಯಲಾಗುತ್ತಿತ್ತು. ಯಾವುದೇ ರೀತಿ ಅನುಮಾನ ಬಾರದಂತೆ ಮತ್ತು ಎಲ್ಲಿಯೂ ಕೂಡ ಇದು ಲೀಕ್ ಆಗದಂತೆ ಅತ್ಯಂತ ಎಚ್ಚರಿಕೆಯಿಂದ ಕಣ್ಗಾವಲಿಡಲಾಗಿತ್ತು ಎಂದು ಕೂಡ ತಿಳಿದುಬಂದಿದೆ.
ಒಟ್ಟಾರೆ ಇದು ವ್ಯವಸ್ಥಿತವಾಗಿ ನಡೆದ ಕಾರ್ಯಾಚರಣೆಯಾಗಿದೆ ಎನ್ನಲಾಗಿದ್ದು, ಇತ್ತೀಚೆಗೆ ಇದರ ಬಗ್ಗೆ ಮಾಹಿತಿ ಪಡೆದಿದ್ದ ರಮೇಶ್ ಜಾರಕಿಹೊಳಿ ಅವರು ಎಚ್ಚೆತ್ತುಕೊಂಡಿದ್ದರು. ಆದರೆ, ಅದಕ್ಕೆ ಆಸ್ಪದ ಕೊಡದೆ ವಿದೇಶದಿಂದ ಯು ಟೂಬ್‍ನಲ್ಲಿ ಮೊದಲು ವಿಡಿಯೋ ಅಪ್‍ಲೋಡ್ ಮಾಡಲಾಗಿದೆ. ಇದು ಈಗ ಬಹಿರಂಗಗೊಂಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಟ್ಟಾರೆ ಪ್ರಭಾವಿಯನ್ನು ಖೆಡ್ಡಾಕ್ಕೆ ಕೆಡವಲು ಯುವತಿಯನ್ನು ಬಳಸಿಕೊಂಡಿರಬಹುದು ಎಂಬ ಶಂಕೆ ಕೂಡ ವ್ಯಕ್ತವಾಗಿದೆ. ಆದರೆ, ದೂರಿನಲ್ಲಿ ತಿಳಿಸಿರುವ ಮಾಹಿತಿ ಪ್ರಕಾರ, ಉದ್ಯೋಗ ಅರಸಿ ಬಂದಿದ್ದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಸ್ತುತ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆ ಪರವಾಗಿ ದೂರು ನೀಡಿರುವ ದಿನೇಶ್ ಏನೆಲ್ಲ ಮಾಹಿತಿ ನೀಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ ಮತ್ತು ಪೊಲೀಸರು ಎಫ್‍ಐಆರ್ ದಾಖಲಿಸುತ್ತಾರಾ, ಯಾವ ತನಿಖಾ ಸಂಸ್ಥೆಗೆ ಇದನ್ನು ವಹಿಸಲಾಗುತ್ತದೆ ಎಂಬುದು ಕೂಡ ಸಾರ್ವಜನಿಕ ವಲಯದಲ್ಲಿ ಕುತೂಹಲ ಕೆರಳಿಸಿದೆ.

Read These Next

ಕೋವಿಡ್ ನಿಯಂತ್ರಣಕ್ಕೆ ಪ್ರಥಮ ಆದ್ಯತೆ. ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್ ನಿಯಂತ್ರಣದ ಕರ್ತವ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ...

ಜಿಲ್ಲೆಯ ಮದುವೆ ಹಾಗೂ ಇತರೆ ಸಮಾರಂಭಗಳ ಆಯೋಜನೆಗೆ ಪಾಸ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಧಾರವಾಡ : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ...

ಖಾಸಗಿ ಆಸ್ಪತ್ರೆಗಳು ಶೇ.50 ಹಾಸಿಗೆ ಸರ್ಕಾರಿ ಕೋಟಾ ಮೀಸಲಿಡಬೇಕು: ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್

ಶಿವಮೊಗ್ಗ : ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ಶೇ.50ರಷ್ಟು ಹಾಸಿಗೆಗಳನ್ನು ಸರ್ಕಾರಿ ಕೋಟಾದ ...

ಧಾರವಾಡ ಮಾರುಕಟ್ಟೆ ಪ್ರದೇಶ, ಜನನಿಬಿಡ ಪ್ರದೇಶಗಳಲ್ಲಿ ಸಂಚರಿಸಿ, ಉಚಿತ ಮಾಸ್ಕ್ ವಿತರಿಸಿ, ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಆಯುಕ್ತರು.

ಧಾರವಾಡ : ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಂದ ಸಾರ್ವಜನಿಕರು ಸುರಕ್ಷಿತವಾಗಿರಲು, ಆರೋಗ್ಯ ...

ಕೋವಿಡ್ ನಿಯಂತ್ರಣಕ್ಕೆ ಪ್ರಥಮ ಆದ್ಯತೆ. ಆಕ್ಸಿಜನ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಬಾರದು : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಧಾರವಾಡ : ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೋವಿಡ್ ನಿಯಂತ್ರಣದ ಕರ್ತವ್ಯಕ್ಕೆ ಪ್ರಥಮ ಆದ್ಯತೆ ನೀಡಬೇಕು. ...

ಜಿಲ್ಲೆಯ ಮದುವೆ ಹಾಗೂ ಇತರೆ ಸಮಾರಂಭಗಳ ಆಯೋಜನೆಗೆ ಪಾಸ್ ಕಡ್ಡಾಯ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ್

ಧಾರವಾಡ : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡುವಿಕೆ ಉಲ್ಬಣವಾಗಿದ್ದು, ನಿಯಂತ್ರಣ ಕಾರ್ಯ ಅತ್ಯವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ...