ಭಟ್ಕಳ ಅಗ್ನಿಶಾಮಕ ದಳದ ಒಡಲೊಳಗೇ ಅನಾಹುತ!

Source: S O News service | By V. D. Bhatkal | Published on 17th September 2019, 1:53 PM | Coastal News | Special Report |

ಭಟ್ಕಳ: ಊರಿಗೆ ಹಿಡಿದ ಬೆಂಕಿ ನಂದಿಸುವ ಕಾರ್ಯ ಮಾಡುತ್ತ ಬಂದಿರುವ ಭಟ್ಕಳ ಅಗ್ನಿಶಾಮಕ ದಳದ ಒಡಲೊಳಗಿನ ಬೆಂಕಿ ಅಷ್ಟು ಸುಲಭವಾಗಿ ಆರುವ ಲಕ್ಷಣ ಕಾಣಿಸುತ್ತಿಲ್ಲ. ಯಾರದ್ದೋ ನೆಲದಲ್ಲಿ ಶೀಟ್ ಹೊಂದಿಸಿಕೊಂಡು ಕಚೇರಿ ಕಟ್ಟಿಕೊಂಡ ಅಗ್ನಿಶಾಮಕ ದಳ ಬಿದ್ದರೂ ಎದ್ದರೂ, ಹೇಳುವವರು ಕೇಳುವವರು ಯಾರೂ ಇಲ್ಲದಂತಹ ಪರಿಸ್ಥಿತಿ. ಇಂದಿಗೂ ಅಗ್ನಿಶಾಮಕ ದಳ ಅತಿಕ್ರಮಣದಾರನಾಗಿಯೇ ಉಳಿದುಕೊಂಡಿದೆ.

ಭಟ್ಕಳ ಸರ್ಪನಕಟ್ಟೆಯಲ್ಲಿ ಇದ್ದ ಅಗ್ನಿಶಾಮಕ ದಳ ಓಲಾಡಿ ಇಲ್ಲಿನ ಸಾಗರರೋಡ್ ಸನಿಹಕ್ಕೆ ಬಂದು 17 ವರ್ಷ ಕಳೆದಿದೆ. ಆರಂಭದ 5 ವರ್ಷದ ಒಳಗೆ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ವರ್ಗಾವಣೆಯಾಗುತ್ತ 2009ರಲ್ಲಿ ಸಾಗರರೋಡ್‍ನಲ್ಲಿಯೇ ತಳವೂರಿ ಮುಂದುವರೆದಿದೆ. ಪ್ರಸ್ತುತ 17 ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ. ತಾಲೂಕಿನ ಅಲ್ಲೆಲ್ಲೋ ಬೆಂಕಿ ಬಿದ್ದ ಕೂಡಲೇ ಗಂಟೆ ಬಾರಿಸುತ್ತ ಓಡಾಡುವ 2

ಭಟ್ಕಳದಲ್ಲಿ ಸರಾಸರಿ 100 ಬೆಂಕಿ ಪ್ರಕರಣಗಳು !
ಭಟ್ಕಳದಲ್ಲಿ ಪ್ರತಿ ವರ್ಷ ಸರಾಸರಿ 100 ಬೆಂಕಿ ಅನಾಹುತ ಘಟನೆಗಳು ಸಂಭವಿಸುತ್ತಿದ್ದು, 2019ರಲ್ಲಿ ಈಗಾಗಲೇ 60 ದಾಟಿದೆ. ಬಹುತೇಕ ಪ್ರಕರಣಗಳಲ್ಲಿ ಹೆಚ್ಚಿನ ಅನಾಹುತವನ್ನು ತಡೆದಿರುವ ಶ್ರೇಯಸ್ಸು ಇಲ್ಲಿನ ಅಗ್ನಿಶಾಮಕ ದಳಕ್ಕೆ ಸಲ್ಲುತ್ತದೆ. ಗುಡ್ಡಕ್ಕೆ ಹಿಡಿಯುವ ಬೆಂಕಿಯಿಂದ, ಅಡುಗೆ ಮನೆಯ ಅನಿಲ ಸೋರಿಕೆಯವರೆಗೆ ಅಗ್ನಿಶಾಮಕ ದಳದ ಅಗತ್ಯ ಇದೆ. ಇತ್ತೀಚಿನ ದಿನಗಳಲ್ಲಿ ಹೆದ್ದಾರಿಯಲ್ಲಿ ಬೆಂಕಿ ಅವಘಡ ಪ್ರಕರಣಗಳು ಹೆಚ್ಚುತ್ತಿದ್ದು, ಅಗ್ನಿಶಾಮಕ ದಳದ ಕೆಲಸ ನಿಂತು ಬಿಟ್ಟರೆ ಅಥವಾ ವ್ಯತ್ಯಯ ಉಂಟಾದರೆ ಗಂಭೀರ ಪರಿಣಾಮ ನಿಶ್ಚಿತವಾಗಿದೆ. 

ಟ್ಯಾಂಕರ್‍ಗಳು 25 ವರ್ಷ ಹಳೆಯದ್ದಾಗಿವೆ. ಭಟ್ಕಳದಲ್ಲಿ ಆಗಷ್ಟೇ ಕೋಮುಗಲಭೆ ಎನ್ನುವುದು ಊರ ತುಂಬ ಬೆಂಕಿ ಉಗುಳುವ ಹೊತ್ತಿಗೆ ಅಂದರೆ 1992 ಹಾಗೂ 1994ರಲ್ಲಿ ಈ ವಾಹನಗಳನ್ನು ಖರೀದಿಸಲಾಗಿತ್ತು. ಆಗಾಗ್ಗೆ ಬಳಿಯುತ್ತಿರುವ ಬಣ್ಣಗಳು ಟ್ಯಾಂಕರ್‍ಗಳಿಗೆ ನಾವಿನ್ಯತೆಯನ್ನು ತಂದು ಕೊಟ್ಟಿವೆ. ಈ ವಾಹನಗಳ ಮೇಲೆ ಹೊದಿಸಲಾಗಿರುವ ತಗಡಿನ ಶೀಟ್‍ಗಳು ಮಳೆಗಾಲದಲ್ಲಿ ಮಾಮೂಲಿ ಎಂಬಂತೆ ಸೋರುತ್ತಿವೆ. ಅಗ್ನಿಶಾಮಕದ ದಳಕ್ಕೇ ನೆಲೆ ಇಲ್ಲದ ಮೇಲೆ ಸಿಬ್ಬಂದಿಗಳಿಗೆ ಕ್ವಾರ್ಟರ್ಸ್ ತಾನೆ ಎಲ್ಲಿಂದ ಬಂದೀತು? ಅವರೆಲ್ಲ ಊರ ನಡುವೆ ದುಬಾರಿ ಎಂದರೂ ಅನಿವಾರ್ಯವಾಗಿ ಬಾಡಿಗೆ ಮನೆ ಹಿಡಿದು ವಾಸಿಸುತ್ತಿದ್ದಾರೆ. ಹೊಸ ಕಟ್ಟಡ ಕಟ್ಟಿಕೊಡಿ ಎಂದು ಕೂಗಿಕೊಳ್ಳುತ್ತ ಬಂದಿರುವ ಅಗ್ನಿಶಾಮಕದ ದಳದ ದನಿ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಅಗ್ನಿಶಾಮಕ ದಳದ ಒಡಲೊಳಗಿನ ಈ ಪರಿಯ ಅನಾಹುತ ಭಟ್ಕಳದ ಜನರಿಗೆ ಎಚ್ಚರಿಕೆಯ ಗಂಟೆಯಾಗಿದೆ. 

 ಜಾಗ ಇನ್ನೂ ಅರಣ್ಯ ಇಲಾಖೆಯದ್ದು:
 ಪ್ರಸ್ತುತ ಇರುವ ಅಗ್ನಿಶಾಮಕ ದಳದ ಕಚೇರಿ ಅರಣ್ಯ ಇಲಾಖೆಗೆ ಸೇರಿದೆ. ಸುಮಾರು 2 ಎಕರೆಯಷ್ಟು ಅರಣ್ಯ ಪ್ರದೇಶವನ್ನು ಅಗ್ನಿಶಾಮಕ

ಭಟ್ಕಳದ ಅಗ್ನಿಶಾಮಕ ದಳದ ಕೆಲಸ, ಅನಿವಾರ್ಯತೆಯ ಅರಿವಿದೆ. ಅಗ್ನಿಶಾಮಕದ ದಳಕ್ಕೆ ನಿವೇಶನ ಮಂಜೂರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆದಿದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ. - ಸುನಿಲ್ ನಾಯ್ಕ, ಶಾಸಕರು, ಭಟ್ಕಳ

ದಳಕ್ಕಾಗಿ ಅತಿಕ್ರಮಣ ಮಾಡಿಕೊಳ್ಳಲಾಗಿದೆ. ಆದರೆ ಈ ಜಾಗವನ್ನು ಅಗ್ನಿಶಾಮಕ ದಳಕ್ಕೆ ಮಂಜೂರಿ ಮಾಡದೇ ಕಾಲ ತಳ್ಳಲಾಗುತ್ತಿದೆ. ಜಾಗ ಮಂಜೂರಾಗದೇ ಅಗ್ನಿಶಾಮಕ ದಳದವರು ಅಲ್ಲಿ ಏನೊಂದೂ ಕಾಮಗಾರಿಯನ್ನೂ ನಡೆಸುವಂತಿಲ್ಲ. ತಲೆಯ ಮೇಲಿನ ಮೇಲ್ಛಾವಣಿ ಕುಸಿದು ಬಿದ್ದ ದಿನ ಅಗ್ನಿಶಾಮಕ ದಳದ ಸಿಬ್ಬಂದಿಗಳು ಇಲ್ಲಿಂದ ಕಾಲು ಕೀಳದೇ ಬೇರೆ ಮಾರ್ಗವಿಲ್ಲ. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೆ ನಮ್ಮಿಂದ ಕಡತಗಳು ಮೇಲಾಧಿಕಾರಿಗಳಿಗೆ ರವಾನೆಯಾಗಿದೆ. ಮಂಜೂರಿಗೊಳಿಸುವ ವಿಷಯ ನಮ್ಮ ಕೈಯಲ್ಲಿ ಇಲ್ಲ ಎನ್ನುತ್ತ ಪ್ರಕರಣದಿಂದ ದೂರ ಇರಲು ಪ್ರಯತ್ನಿಸುತ್ತಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...