ಇಟಲಿ : ಇಸ್ಲಾಮ್ ಧರ್ಮದೊಂದಿಗೆ ಭಯೋತ್ಪಾದನೆಯನ್ನು ತಳಕು ಹಾಕದಿರಿ-ಪೋಪ್ ಫ್ರಾನ್ಸಿಸ್

Source: S O News service | By Staff Correspondent | Published on 1st August 2016, 5:02 PM | Global News |

 

ಇಟಲಿ, : ಇಸ್ಲಾಮ್ ಧರ್ಮವನ್ನು ಭಯೋತ್ಪಾದನೆ ತಳುಕು ಹಾಕುವುದು ಸರಿಯಲ್ಲ. ಭಯೋತ್ಪಾದನೆ   ಅನ್ಯಾಯ ಮತ್ತು ಹಣದ ಆರಾಧನೆ ಯೆ  ಮುಖ್ಯ ಕಾರಣವಾಗಿದೆ. ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ.

ತಮ್ಮ ಪೋಲಂಡ್ ದೇಶದ ಐದು ದಿನಗಳ ಪ್ರವಾಸ ಮುಗಿಸಿ ರೋಮ್ ಗೆ ಹಿಂದಿರುಗುವ ಹಾದಿಯಲ್ಲಿ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೋಪ್ ಪಶ್ಚಿಮ ಫ್ರಾನ್ಸ್ ನ ಚರ್ಚೊಂದರಲ್ಲಿ ಇತ್ತೀಚೆಗೆ ದಾಳಿಕೋರರು 84 ವರ್ಷದಪಾದ್ರಿಯೊಬ್ಬರನ್ನು ಹತ್ಯೆಗೈದ ಘಟನೆಯ ಬಗ್ಗೆ ಪ್ರತಿಕ್ರಿಯಿಸುತ್ತಾ ‘‘ಎಲ್ಲಾ ಧರ್ಮಗಳಲ್ಲಿಯೂ ಒಂದು ಸಣ್ಣ ಮೂಲಭೂತವಾದಿಗಳ ಗುಂಪಿದೆಎಂದು ನನಗನಿಸುತ್ತದೆ,’’ ಎಂದು ಹೇಳಿದರಲ್ಲದಸೆ ಕ್ರೈಸ್ತ ಧರ್ಮವನ್ನುಉಲ್ಲೇಖಿಸುತ್ತಾ ‘‘ನಮ್ಮಲ್ಲೂ ಇದ್ದಾರೆ,’’ ಎಂದು ಹೇಳಿದರು.

‘‘ನನಗೆ ಇಸ್ಲಾಮಿಕ್ ಹಿಂಸೆಯ ಬಗ್ಗೆ ಮಾತನಾಡಲು ಮನಸ್ಸಿಲ್ಲ. ಇಲ್ಲಿ ಇಟಲಿಯಲ್ಲಿ ಪ್ರತಿ ದಿನ ಸುದ್ದಿ ಪತ್ರಿಕೆಗಳನ್ನು ತೆರೆದಾಗ ಯಾರೋ ತಮ್ಮ ಗೆಳತಿಯನ್ನು, ಮತ್ತಿನ್ಯಾರೋ ತಮ್ಮ ಅತ್ತೆಯನ್ನು ಕೊಂದ ಸುದ್ದಿಗಳಿವೆ,’’ಎಂದರು.

‘‘ನಾನು ಇಸ್ಲಾಮಿಕ್ ಹಿಂಸೆಯ ಬಗ್ಗೆ ಮಾತನಾಡಿದರೆ ಕ್ಯಾಥೋಲಿಕ್ ಹಿಂಸೆಯ ಬಗ್ಗೆಯೂ ಮಾತನಾಡಬೇಕಾಗುತ್ತದೆ. ಎಲ್ಲಾ ಮುಸ್ಲಿಮರು ಹಿಂಸೆಯನ್ನು ಉತ್ತೇಜಿಸುವುದಿಲ್ಲ,’’ ಎಂದು ಪೋಪ್ ವಿವರಿಸಿದರು.

ಉಗ್ರವಾದಕ್ಕೆ ಹಲವು ಕಾರಣಗಳಿವೆಯೆಂದು ಪೋಪ್ ‘‘ಹಣವನ್ನುಆರಾಧಿಸಿದಾಗ ಹಾಗೂ ಮನುಷ್ಯನ ಬದಲು ಹಣವನ್ನು ವಿಶ್ವದ ಆರ್ಥಿಕತೆಯ ಕೇಂದ್ರವನ್ನಾಗಿಸಿದಾಗ ಉಗ್ರವಾದ ಹುಟ್ಟುತ್ತದೆ,’’ಎಂದರು ಪೋಪ್. ಯುರೋಪ್ ದೇಶಗಳಲ್ಲಿ ಯುವಜನತೆಗೆ ಸಾಕಷ್ಟು ಉದ್ಯೋಗಾವಕಾಶಗಳ ಕೊರತೆಯೂಉಗ್ರವಾದಕ್ಕೆ ಒಂದು ಕಾರಣವಾಗಿದೆ, ಎಂದು ಪೋಪ್ ಅಭಿಪ್ರಾಯ ಪಟ್ಟರು.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...