ಐಪಿಎಲ್ ಮಿನಿ ವಿಶ್ವಕಪ್ ಇದ್ದಂತೆ: ಗ್ಲೆನ್ ಮ್ಯಾಕ್ಸ್‌ವೆಲ್

Source: PTI | Published on 22nd July 2020, 11:41 PM | Sports News | Don't Miss |

 

 

 


ಮೆಲ್ಬರ್ನ್: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್  ಟೂರ್ನಿಯು ಮಿನಿ ವಿಶ್ವಕಪ್ ಟೂರ್ನಿ ಇದ್ದಂತೆ ಎಂದು ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಗ್ಲೆನ್ ಮ್ಯಾಕ್ಸ್‌ವೆಲ್ ಹೇಳಿದರು.  
ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆ. ಆದ್ದರಿಂದ ಆ ಅವಧಿಯಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸಲು ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು ಯೋಜಿಸಿದೆ. ಕೋವಿಡ್ –19 ಪ್ರಕರಣಗಳು ಕಡಿಮೆ ಸಂಖ್ಯೆಯಲ್ಲಿ ವರದಿಯಾಗಿರುವ ಯುನೈಟೆಡ್ ಅರಬ್‌ ಎಮಿರೆಟ್ಸ್‌ನಲ್ಲಿ ಟೂರ್ನಿ ನಡೆಯುವ ಸಾಧ್ಯತೆ ಹೆಚ್ಚಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮ್ಯಾಕ್ಸ್‌ವೆಲ್, ’ಈ ಟೂರ್ನಿಯಲ್ಲಿ ಬೇರೆ ಬೇರೆ ದೇಶಗಳ ಆಟಗಾರರು ಮುಖಾಮುಖಿಯಾಗುತ್ತಾರೆ. ಆದ್ದರಿಂದ ಬಹುತೇಕ ಎಲ್ಲ ತಂಡಗಳ ಆಟಗಾರರು ಒಂದೇ ವೇದಿಕೆಯಲ್ಲಿರುವಂತೆ ಭಾಸವಾಗುತ್ತದೆ.  ಆದ್ದರಿಂದ ಇದೇನೂ ವಿಶ್ವಕಪ್ ಟೂರ್ನಿಗಿಂತ ಕಡಿಮೆಯೇನಲ್ಲ‘ ಎಂದು ಅಭಿಪ್ರಾಯಪಟ್ಟಿದ್ದಾರೆ.
’ಐಪಿಎಲ್‌ನಲ್ಲಿ ವಿಶ್ವದ ಬೇರೆ ಬೇರೆ ತಂಡಗಳ ಖ್ಯಾತಮಾನ ಆಟಗಾರರು ಸ್ಪರ್ಧಿಸುತ್ತಾರೆ.  ಐಪಿಎಲ್‌ ಎಲ್ಲಿ ನಡೆಯುತ್ತದೆ. ಆಟಗಾರರಿಗೆ ಕ್ವಾರಂಟೈನ್ ಅವಧಿ, ಪ್ರಯಾಣ ಸೌಲಭ್ಯ ಇತ್ಯಾದಿಗಳು ಮೊದಲು ಅಂತಿಮವಾಗಬೇಕು. ಎಲ್ಲವೂ ಸರಿಯಾಗಿ ನಡೆದರೆ ಟೂರ್ನಿಯಲ್ಲಿ ಆಡಲು ಹೋಗದಿರಲು ನನ್ನ ಬಳಿ ಯಾವುದೇ ಕಾರಣ ಇರುವುದಿಲ್ಲ. ನಾನು ಹೋಗುತ್ತೇನೆ‘ ಎಂದು ಫಾಕ್ಸ್‌ ಸ್ಪೋರ್ಟ್ಸ್‌ ವಾಹಿನಿ ಸಂವಾದದಲ್ಲಿ ತಿಳಿಸಿದ್ದಾರೆ.
’ಪ್ರತಿ ವರ್ಷ ಈ ಋತುವಿನಲ್ಲಿ ಮನೆಯಲ್ಲಿ ಕಾಲ ಕಳೆಯಲು ಸಮಯ ಸಿಗುತ್ತಿರಲಿಲ್ಲ. ಆದರೆ ಈ ಬಾರಿ ಅಂತಹ ಅವಕಾಶ ಸಿಕ್ಕಿತು. ಕುಟುಂಬದೊಂದಿಗೆ ಕಾಲ ಕಳೆದಿದ್ದು ಸಂತಸ ತಂದಿದೆ. ಅದರೆ ಇದೇ ಸಂದರ್ಭದಲ್ಲಿ ಕ್ರಿಕೆಟ್ ಟೂರ್ನಿ ಆರಂಭವಾದರೆ ಅದಕ್ಕೂ ಸಿದ್ಧವಾಗಿದ್ದೇನೆ.  ಮಾನಸಿಕವಾಗಿ ಯಾವಾಗಲೂ ಸದೃಢವಾಗಿದ್ದೇನೆ‘ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
’ತವರಿನಲ್ಲಿ ಟಿ20 ವಿಶ್ವಕಪ್ ನಡೆಯುತ್ತದೆಯೆಂದು ಕಾತುರದಿಂದ ನಿರೀಕ್ಷೆ ಮಾಡಿದ್ದೆ. ಆದರೆ ಪರಿಸ್ಥಿತಿ ಹೀಗಿದೆ. ಮುಂದಿನ ಸರಣಿಗೆ ಸಿದ್ಧವಾಗುತ್ತೇನೆ‘ ಎಂದರು.
ಸೆಪ್ಟೆಂಬರ್‌ನಲ್ಲಿ  ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್‌ಗೆ ತೆರಳಲಿದೆ. ಮೂರು ಟಿ20 ಮತ್ತು ಮೂರು ಏಕದಿನ ಪಂದ್ಯಗಳಲ್ಲಿ ಆಡಲಿದೆ

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...