ಯುಎಇಯಲ್ಲಿ ಐಪಿಎಲ್ ಆಯೋಜನೆ: ಬ್ರಿಜೇಶ್ ಪಟೇಲ್ ಹೇಳಿದ್ದೇನು?

Source: PTI | Published on 22nd July 2020, 8:26 PM | Sports News | Don't Miss |

ನವದೆಹಲಿ: ಟ್ವೆಂಟಿ–20 ವಿಶ್ವಕಪ್ ಟೂರ್ನಿ ಮುಂದೂಡಿಕೆಯಾದ ಬೆನ್ನಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಯೋಜನೆಗೆ ಹಾದಿ ಸುಗಮವಾಗಿದ್ದು, ಈ ಸಂಬಂಧ ಚಟುವಟಿಕೆಗಳು ಗರಿಗೆದರಿವೆ.
ಹೌದು.. ಈ ಬಗ್ಗೆ ಸ್ವತಃ ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಮಾಹಿತಿ ನೀಡಿದ್ದು. ಯುನೈಟೆಡ್ ಅರಬ್‌ ಎಮಿರೇಟ್ಸ್ (ಯುಎಇ)ನಲ್ಲಿ ಐಪಿಎಲ್ ಟೂರ್ನಿಯನ್ನು ಆಯೋಜಿಸುವುದು ಬಹುತೇಕ ಖಚಿತವಾಗಿದೆ.  ಕೋವಿಡ್ –19 ವೈರಸ್ ಸಾಂಕ್ರಾಮಿಕ ಭಾರತದಲ್ಲಿ ಹೆಚ್ಚಾಗುತ್ತಿರುವುದರಿಂದ ಟೂರ್ನಿಯನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐ ಗಂಭೀರ ಚಿತ್ತ ಹರಿಸಿದೆ.  ಇದರೊಂದಿಗೆ ಭಾರತದಲ್ಲಿ ಚುಟುಕು ಟೂರ್ನಿ ನಡೆಸುವ ಊಹಾಪೋಹಗಳಿಗೂ ತೆರೆಬಿದ್ದಿದೆ. 
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬ್ರಿಜೇಶ್ ಪಟೇಲ್ ಅವರು, ಪೂರ್ಣಪ್ರಮಾಣದ ವೇಳಾಪಟ್ಟಿಯೊಂದಿಗೆ ಅಕ್ಟೋಬರ್–ನವೆಂಬರ್ ನಲ್ಲಿ ಟೂರ್ನಿ ನಡೆಯಲಿದೆ. ಇನ್ನು ಹತ್ತು ದಿನಗಳೊಳಗೆ ಐಪಿಎಲ್ ಸಮಿತಿಯ ಸರ್ವಸದಸ್ಯರ ಸಭೆ ನಡೆಯಲಿದೆ. ಅದರಲ್ಲಿ ಅಂತಿಮ ವೇಳಾಪಟ್ಟಿಯ ಕುರಿತು ನಿರ್ಧರಿಸಲಾಗುವುದು. ಒಟ್ಟು 60 ಪಂದ್ಯಗಳನ್ನು ನಡೆಸಲಾಗುವುದು ಎಂದು ಬ್ರಿಜೇಶ್ ಪಟೇಲ್ ತಿಳಿಸಿದ್ದಾರೆ.
'ಅಲ್ಲಿ (ಯುಎಇ) ಅಥವಾ ಇಲ್ಲಿ (ಭಾರತ) ಎಲ್ಲಿಯಾದರೂ ಪ್ರೇಕ್ಷಕರಿಲ್ಲದ ಕ್ರೀಡಾಂಗಣದಲ್ಲಿಯೇ ಪಂದ್ಯಗಳು ನಡೆಯಬೇಕು. ಆದ್ದರಿಂದ  ಆಯೋಜಕರ ಕಾರ್ಯಾಚರಣೆಗೆ ಹೆಚ್ಚು ಒತ್ತಡವಿರುವುದಿಲ್ಲ. ಅತ್ಯಗತ್ಯವಾದ ಸಿಬ್ಬಂದಿ, ತಂಡಗಳ ಪ್ರಯಾಣ ಮತ್ತಿತರ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ ಎಂದು ಬ್ರಿಜೇಶ್ ಪಟೇಲ್ ಹೇಳಿದ್ದಾರೆ.
ಇನ್ನು ಸಭೆಯಲ್ಲಿ ಐಪಿಎಲ್ ಆಯೋಜನೆ ಸಂಬಂಧ ಎಸ್ಒಪಿ ಸಿದ್ಧಪಡಿಸುವಿಕೆ, ಒಂದು ವೇಳೆ ಟೂರ್ನಿಯಿಂದ ನಿರೀಕ್ಷಿತ ಆದಾಯ ಬಾರದೇ ಹೋದರೆ ಆಗ ಬಿಸಿಸಿಐ ತಂಡಗಳಿಗೆ ನಷ್ಟ ಪರಿಹಾರ ನೀಡುತ್ತದೆಯೇ..? ಐಪಿಎಲ್ ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ಸ್ ವರ್ಚುವಲ್ ಕಮೆಂಟ್ರಿ ಮಾತ್ರ ನೀಡುತ್ತದೆಯೇ? ಅಥವಾ ದಕ್ಷಿಣ ಆಫ್ರಿಕಾದಲ್ಲಿ ನಡೆದ 3ಟಿಸಿ ಟೂರ್ನಿಗೆ ಭಾರತದ ಆಕಾಶ್ ಚೋಪ್ರಾ, ದೀಪ್ ದಾಸ್‌ ಪ್ತಾ ಮತ್ತು ಇರ್ಫಾನ್ ಪಠಾಣ್ ಮನೆಯಿಂದಲೇ ಕಮೆಂಟ್ರಿ ನೀಡಿದ್ದರು. ಇಂತಹ ಸಾಧ್ಯತೆಗಳಿವೆಯೇ ಎಂಬಿತ್ಯಾದಿ ಅಂಶಗಳು ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.
ಇದೇ ವಿಚಾರವಾಗಿ ಮಾತನಾಡಿರುವ ಐಪಿಎಲ್ ತಂಡದ ಮಾಲೀಕರೊಬ್ಬರು, 'ನಮ್ಮ ಆಟಗಾರರಿಗೆ ಕನಿಷ್ಠ 3–4 ವಾರಗಳ ಪೂರ್ವ ಸಿದ್ಧತೆ ತರಬೇತಿ ಬೇಕು. ಬಿಸಿಸಿಐ ಖಚಿತವಾದ ದಿನಾಂಕವನ್ನು ಪ್ರಕಟಿಸಿದ ಮೇಲೆ ಎಲ್ಲವನ್ನೂ ಸಿದ್ಧತೆ ಮಡಿಕೊಳ್ಳುತ್ತೇವೆ. ಯುಎಇಯಲ್ಲಿ  ಐಪಿಎಲ್ ಆಯೋಜನೆಯಾಗುವುದು ಬಹುತೇಕ ಎನ್ನಲಾಗುತ್ತಿದೆ. ಅದಕ್ಕೂ ನಾವು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ.
ಒಂದೊಮ್ಮೆ ಯುಎಇಯಲ್ಲಿ ಟೂರ್ನಿ ನಡೆದರೆ, ವಿದೇಶಿ ಆಟಗಾರರು ನೇರ ಅಲ್ಲಿಗೇ ಹೋಗಲಿದ್ದಾರೆ. ಅದರಿಂದ ಹೆಚ್ಚು ಅನುಕೂಲವೆನ್ನಲಾಗುತ್ತಿದೆ. ನವೆಂಬರ್ ನಲ್ಲಿ ಐಪಿಎಲ್ ಮುಗಿದ ನಂತರ ಭಾರತ ತಂಡದ ಆಟಗಾರರು ಅಲ್ಲಿಂದಲೇ ನೇರವಾಗಿ ಆಸ್ಟ್ರೇಲಿಯಾದಲ್ಲಿ ನಡೆಯುವ ಟೆಸ್ಟ್ ಸರಣಿಗೆ ತೆರಳಬಹುದು. ಐಪಿಎಲ್‌ನಲ್ಲಿ ಇಲ್ಲದ ಮತ್ತು ಟೆಸ್ಟ್ ತಂಡದ ಆಟಗಾರರಾದ ಚೇತೇಶ್ವರ್ ಪೂಜಾರ, ಹನುಮವಿಹಾರಿ ಮತ್ತಿತರರು ಇದೇ ಸಂದರ್ಭದಲ್ಲಿ ಅಹಮದಾಬಾದ್ ನ ಮೊಟೇರಾ ಕ್ರೀಡಾಂಗಣದಲ್ಲಿ ಪೂರ್ವಸಿದ್ಧತಾ ಶಿಬಿರದಲ್ಲಿ ತಾಲೀಮು ನಡೆಸುವ ಸಾಧ್ಯತೆ ಇದೆ.
ಆಸ್ಟ್ರೇಲಿಯಾದಲ್ಲಿ  ಅಕ್ಟೋಬರ್ ನಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಟೂರ್ನಿಯನ್ನು ಸೋಮವಾರದ ಐಸಿಸಿ ಸಭೆಯಲ್ಲಿ ಮುಂದೂಡಲು ತೀರ್ಮಾನಿಸಲಾಯಿತು. 

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...