ಐಪಿಎಲ್ ಬೆಟ್ಟಿಂಗ್ : ಹೊನ್ನಾವರದಲ್ಲಿ ಹತ್ತು ಜನರ ಬಂಧನ.

Source: SO News | By Laxmi Tanaya | Published on 12th October 2020, 3:35 PM | Coastal News | Don't Miss |

ಹೊನ್ನಾವರ :  ತಾಲೂಕಿನ ಹಳದಿಪುರ ಸಂತೆ ಮಾರ್ಕೆಟ್ ಬಳಿ ಬೆಟ್ಟಿಂಗ್ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ಭಾನುವಾರ  ದಾಳಿ ನಡೆಸಿದ್ದಾರೆ. 

ದಾಳಿ ವೇಳೆ ಪೊಲೀಸರು ಹತ್ತು ಜನರನ್ನ ಬಂಧಿಸಿದ್ದಾರೆ‌. ರಾಮಾ ಮಾಸ್ತಿ ಗೌಡ, 
ಸುನೀಲ್ ಈಶ್ವರ ಗೌಡ,ಮಹೇಶ್ ರಾಮದಾಸ ನಾಯ್ಕ,  ಕೃಷ್ಣ  ರಾಮ ಗೌಡ, ಕೃಷ್ಣ ಗಣೇಶ ಗೌಡ, ಸಚಿನ್ ರಾಮದಾಸ ನಾಯ್ಕ, ಲಕ್ಷ್ಮೀಶ  ಮಾದೇವ ಗೌಡ, ವಿನಾಯಕ ತಂದ ರಾಮ ಗೌಡಾ, ಶ್ರೀನಿವಾಸ ಯಶವಂತ ಗೌಡ,   ಶ್ರೀಧರ  ಜಟ್ಟಿ ಗೌಡ ಬಂಧಿತರು.

ದಾಳಿ ಸಮಯದಲ್ಲಿ 21030 ರೂ. ನಗದು ಹಾಗೂ  ಬೇರೆಬೇರೆ ಕಂಪನಿಯ 10 ಮೊಬೈಲ್ಗಳನ್ನು ವಶಕ್ಕೆಪಡೆಯಲಾಗಿದೆ.  ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಭಾನುವಾರ ಐಪಿಎಲ್ ಪಂದ್ಯ ನಡೆದಿತ್ತು. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...