ಭಾನುವಾರ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಬ್ರಿಜೇಶ್ ಪಟೇಲ್

Source: ANI | Published on 6th September 2020, 12:12 AM | Sports News | Don't Miss |

 

ದುಬೈ: ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟಿ-20 ಟೂರ್ನಿಯ ವೇಳಾಪಟ್ಟಿಯನ್ನು ನಾಳೆ ಅಂದರೆ ಭಾನುವಾರ ಬಿಡುಗಡೆ ಮಾಡಲಾಗುತ್ತದೆ ಎಂದು ಐಪಿಎಲ್ ಚೇರ್ಮನ್ ಬ್ರಿಜೇಶ್ ಪಟೇಲ್  ಹೇಳಿದ್ದಾರೆ.
ಈ ಕುರಿತಂತೆ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ಅವರು, ಐಪಿಎಲ್ ಟೂರ್ನಿ ಆರಂಭಕ್ಕೆ ಬೇಕಾದ ಎಲ್ಲ ರೀತಿಯ ತಯಾರಿ ಪೂರ್ಣಗೊಂಡಿದ್ದು, ನಾಳೆ ಅಧಿಕೃತವಾಗಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 
ಹಾಲಿ ವರ್ಷದ ಐಪಿಎಲ್ ಟೂರ್ನಿಯು ಸೆಪ್ಟಂಬರ್ 19ರಿಂದ ಆರಂಭವಾಗಿ ನವೆಂಬರ್ 10ರ ತನಕ ಯುಎಇಯ ದುಬೈ, ಅಬುಧಾಬಿ ಹಾಗೂ ಶಾರ್ಜಾಗಳಲ್ಲಿ ನಡೆಯಲಿದೆ. 53 ದಿನಗಳ ಕಾಲ ನಡೆಯಲಿರುವ ಐಪಿಎಲ್‌ ಟೂರ್ನಿಯು ಸೆ.19 ರಂದು ಪ್ರಾರಂಭವಾಗಿ ನ.10ರಂದು ಕೊನೆಗೊಳ್ಳಲಿದೆ.   ತಮ್ಮ ನೆಚ್ಚಿನ ತಂಡಗಳು ಯಾವ ದಿನದಂದು ಆಡುತ್ತವೆ ಎಂದು ನೋಡಲು ಕ್ರಿಕೆಟ್ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಭಾರತದಲ್ಲಿ ಆಯೋಜನೆಯಾಗಬೇಕಿದ್ದ ಐಪಿಎಲ್ ಟೂರ್ನಿ ಕೊರೋನಾ ಸಾಂಕ್ರಾಮಿಕದಿಂದಾಗಿ ಯುಎಇಗೆ ಶಿಫ್ಟ್ ಆಗಿತ್ತು. ಈಗಾಗಲೇ ಎಲ್ಲ ತಂಡಗಳು ಯುಎಇನಲ್ಲಿ ಬೀಡುಬಿಟ್ಟಿದ್ದು, ಟೂರ್ನಿಗೆ ತಯಾರಿ ನಡೆಸುತ್ತಿವೆ. ಏತನ್ಮಧ್ಯೆ ಐಪಿಎಲ್ ತಂಡಗಳಲ್ಲಿನ ಸಿಬ್ಬಂದಿಗಳು ಮತ್ತು ಆಟಗಾರರು ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ಫ್ರಾಂಚೈಸಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅದಾಗ್ಯೂ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಆಟಗಾರರು ಮತ್ತು ಸಿಬ್ಬಂದಿಗಳ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ.

Read These Next

ಕಾರವಾರ: 61ನೇ ನ್ಯಾಶನಲ್ ರೋಲರ್ ಹಾಕಿ ಚಾಂಪಿಯನ್ ಶಿಪ್. ಒಂದು ಬೆಳ್ಳಿ, ಎರಡು ಕಂಚು‌ ಗಳಿಸಿದ ಕರ್ನಾಟಕ.

ಡಿಸೆಂಬರ್ 11ರಿಂದ ಚಂಡಿಗಡನಲ್ಲಿ ನಡೆಯುತ್ತಿರುವ 61ನೇ ರಾಷ್ಟ್ರೀಯ ರೋಲರ್ ಹಾಕಿ ಚಾಂಪಿಯನ್ ಶಿಫ್‌ಲ್ಲಿ ಕರ್ನಾಟಕ ತಂಡ ಗಮನಾರ್ಹ ಸಾಧನೆ ...

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಟಿ20 ವಿಶ್ವಕಪ್: ಭಾರತೀಯರಿಗೆ ದೀಪಾವಳಿ ಗಿಫ್ಟ್: ಕೊಹ್ಲಿ ಅದ್ಭುತ ಆಟ; ಪಾಕ್ ವಿರುದ್ಧ ಭಾರತಕ್ಕೆ ವಿರೋಚಿತ ಗೆಲುವು!

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಕೆಲ ಪಂದ್ಯಗಳಲ್ಲಿ ಕೊಹ್ಲಿ ಓಪನರ್ ಆಗಿ ಆಡಬಹುದು; ಆದರೆ ಟಿ20 ವಿಶ್ವಕಪ್ ನಲ್ಲಿ ಮಾತ್ರ ರಾಹುಲ್ ಓಪನರ್: ರೋಹಿತ್

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...